Monday, January 19 2026 | 09:23:34 AM
Breaking News

Tag Archives: Draupadi Murmu

ಭಾರತದ ರಾಷ್ಟ್ರಪತಿ ಒಡಿಶಾದ ರಾಯರಂಗಪುರದಲ್ಲಿ # ಸ್ಕಿಲ್ ದ ನೇಶನ್ ಎ.ಐ. ಸವಾಲಿಗೆ ಚಾಲನೆ ನೀಡಿದರು ಮತ್ತು ಇಗ್ನೋ ಪ್ರಾದೇಶಿಕ ಕೇಂದ್ರ ಹಾಗು ಕೌಶಲ್ಯ ಕೇಂದ್ರವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು (ಜನವರಿ 1, 2026) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಎಂ.ಎಸ್.ಡಿ.ಇ.ಯ “ಸೋರ್” (ಎಸ್.ಒ.ಎ.ಆರ್.)  (ಎ.ಐ. ಸಿದ್ಧತೆಗಾಗಿ ಕೌಶಲ್ಯ) ಉಪಕ್ರಮದ ಅಡಿಯಲ್ಲಿ #SkilltheNation (ಸ್ಕಿಲ್ ದ ನೇಶನ್ ) ಸವಾಲನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರು ಒಡಿಶಾದ ರೈರಂಗಪುರದಲ್ಲಿಇಗ್ನೋ ( IGNOU)  ಪ್ರಾದೇಶಿಕ ಕೇಂದ್ರ ಮತ್ತು ಕೌಶಲ್ಯ ಕೇಂದ್ರವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಕೃತಕ …

Read More »

ಭಾರತದ ರಾಷ್ಟ್ರಪತಿ ಅವರು ‘ಜನಕೇಂದ್ರೀಯ ರಾಷ್ಟ್ರೀಯ ಭದ್ರತೆ: ವಿಕಸಿತ ಭಾರತ ನಿರ್ಮಾಣದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ’ ಎಂಬ ವಿಷಯದ ಕುರಿತು ಐಬಿ ಶತಮಾನೋತ್ಸವ ದತ್ತಿ ಉಪನ್ಯಾಸವನ್ನು ಉದ್ದೇಶಿಸಿ ಮಾತನಾಡಿದರು

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಡಿಸೆಂಬರ್ 23, 2025) ನವದೆಹಲಿಯಲ್ಲಿ ‘ಜನಕೇಂದ್ರೀಯ ರಾಷ್ಟ್ರೀಯ ಭದ್ರತೆ: ವಿಕಸಿತ ಭಾರತ ನಿರ್ಮಾಣದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ’ ಎಂಬ ವಿಷಯದ ಕುರಿತು ಆಯೋಜಿಸಲಾಗಿದ್ದ ‘ಐಬಿ ಶತಮಾನೋತ್ಸವ ದತ್ತಿ ಉಪನ್ಯಾಸ’ವನ್ನು (IB Centenary Endowment Lecture) ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, “ಸ್ವಾತಂತ್ರ್ಯದ ನಂತರ ಭಾರತದ ಜನರಿಗೆ ಭದ್ರತೆಯನ್ನು ಒದಗಿಸುವಲ್ಲಿ ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಐಬಿ …

Read More »

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರಪತಿ ಭವನದಲ್ಲಿ 24 ಖ್ಯಾತ ವಿಜ್ಞಾನಿಗಳಿಗೆ ‘ರಾಷ್ಟ್ರೀಯ ವಿಜ್ಞಾನ ಪುರಸ್ಕಾರ 2025 ಪ್ರದಾನ

ರಾಷ್ಟ್ರಪತಿ ಭವನದಲ್ಲಿಂದು ಎರಡನೇ “ರಾಷ್ಟ್ರೀಯ ವಿಜ್ಞಾನ ಪುರಸ್ಕಾರ” ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ “ರಾಷ್ಟ್ರೀಯ ವಿಜ್ಞಾನ ರತ್ನ ಪುರಸ್ಕಾರ 2025” ಅನ್ನು ಖ್ಯಾತ ಖಗೋಳ ಭೌತಶಾಸ್ತ್ರಜ್ಞ ಪ್ರೊ. ಜಯಂತ್ ವಿಷ್ಣು ನಾರ್ಲಿಕರ್ ಅವರಿಗೆ ಮರಣೋತ್ತರವಾಗಿ ನೀಡಲಾಯಿತು, ಆದರೆ ಭಾರತದ ಬಹು ಚರ್ಚಿತ “ಪರ್ಪಲ್ ರೆವಲ್ಯೂಷನ್” ಮತ್ತು ಲ್ಯಾವೆಂಡರ್ ಉದ್ಯಮಶೀಲತೆಗೆ ಶಕ್ತಿ ತುಂಬಿದ ಉದ್ಯಮಶೀಲ ವಿಜ್ಞಾನ ತಂಡವು “ರಾಷ್ಟ್ರೀಯ ವಿಜ್ಞಾನ ತಂಡ ಪುರಸ್ಕಾರ 2025” ಅಥವಾ ವಿಜ್ಞಾನ …

Read More »

ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತ್ರಿ (ವಿಬಿ – ಜಿ ರಾಮ್ ಜಿ) ಮಸೂದೆ 2025ಗೆ ರಾಷ್ಟ್ರಪತಿ ಅಂಕಿತ

ಗ್ರಾಮೀಣ ಉದ್ಯೋಗ ನೀತಿಯಲ್ಲಿ ಮಹತ್ವದ ಮೈಲಿಗಲ್ಲು ತರುವ ಪರಿವರ್ತನಾತ್ಮಕ ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತ್ರಿ (ವಿಬಿ – ಜಿ ರಾಮ್ ಜಿ) ಮಸೂದೆ 2025ಕ್ಕೆ ಭಾರತದ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಈ ಕಾಯ್ದೆ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ವೇತನ ಸಹಿತ ಉದ್ಯೋಗಖಾತ್ರಿಯನ್ನು ಖಚಿತಪಡಿಸುತ್ತದೆ ಮತ್ತು ಸಬಲೀಕರಣವನ್ನು ಉತ್ತೇಜಿಸುತ್ತದೆ. ಎಲ್ಲರನ್ನೊಳಗೊಂಡ ಪ್ರಗತಿ, ಅಭಿವೃದ್ಧಿ ಉಪಕ್ರಮಗಳ ಸಮನ್ವಯತೆ ಮತ್ತು ಗರಿಷ್ಠ …

Read More »

2023 ಮತ್ತು 2024ರ ರಾಷ್ಟ್ರೀಯ ಕರಕುಶಲ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಭಾರತದ ರಾಷ್ಟ್ರಪತಿ

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (2025ರ ಡಿಸೆಂಬರ್ 9) ನವದೆಹಲಿಯಲ್ಲಿ 2023 ಮತ್ತು 2024 ರ ರಾಷ್ಟ್ರೀಯ ಕರಕುಶಲ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಕಲೆ ನಮ್ಮ ಭೂತಕಾಲದ ನೆನಪುಗಳು, ವರ್ತಮಾನದ ಅನುಭವಗಳು ಮತ್ತು ಭವಿಷ್ಯದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಪ್ರಾಚೀನ ಕಾಲದಿಂದಲೂ ಮಾನವರು ಚಿತ್ರಕಲೆ ಅಥವಾ ಶಿಲ್ಪಕಲೆಯ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕಲೆ ಜನರನ್ನು ಸಂಸ್ಕೃತಿಯೊಂದಿಗೆ ಬೆಸೆಯುತ್ತದೆ, …

Read More »

2025ನೇ ಸಾಲಿನ ವಿಶೇಷಚೇತನ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನ ಮಾಡಿದ ಭಾರತದ ರಾಷ್ಟ್ರಪತಿ

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು (2025 ಡಿಸೆಂಬರ್ 3) ನವದೆಹಲಿಯಲ್ಲಿಂದು ಅಂತಾರಾಷ್ಟ್ರೀಯ ವಿಶೇಷಚೇತನರ ದಿನದ ಸಂದರ್ಭದಲ್ಲಿ 2025ನೇ ಸಾಲಿನ ರಾಷ್ಟ್ರೀಯ ವಿಶೇಷಚೇತನರ ಸಬಲೀಕರಣ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ರಾಷ್ಟ್ರಪತಿ, ದಿವ್ಯಾಂಗರು ಸಮಾನತೆಗೆ ಅರ್ಹರು ಎಂದು ಹೇಳಿದರು.ಸಮಾಜ ಮತ್ತು ದೇಶದ ಅಭಿವೃದ್ಧಿಯ ಪಯಣದಲ್ಲಿ ಅವರ ಸಮಾನ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು ದಾನದ ವಿಷಯಕ್ಕಿಂತ ಹೆಚ್ಚಾಗಿ ಎಲ್ಲಾ ಪಾಲುದಾರರ ಆದ್ಯ ಕರ್ತವ್ಯವಾಗಿದೆ. ದಿವ್ಯಾಂಗರ ಸಮಾನ ಪಾಲ್ಹೊಳ್ಳುವಿಕೆಯಿಂದ ಮಾತ್ರ …

Read More »

ಭಾರತದ ರಾಷ್ಟ್ರಪತಿ ಅವರು ಆರನೇ ʻರಾಷ್ಟ್ರೀಯ ಜಲ ಪ್ರಶಸ್ತಿʼಗಳು ಮತ್ತು ʻಜಲ ಸಂಚಾಯ್-ಜನ ಭಾಗೀದಾರಿ ಪ್ರಶಸ್ತಿʼಗಳನ್ನು ಪ್ರದಾನ ಮಾಡಿದರು

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ನವೆಂಬರ್ 18, 2025) ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಆರನೇ ‘ರಾಷ್ಟ್ರೀಯ ಜಲ ಪ್ರಶಸ್ತಿ’ಗಳು ಮತ್ತು ‘ಜಲ ಸಂಚಾಯ್-ಜನ ಭಾಗೀದಾರಿ ಪ್ರಶಸ್ತಿ’ಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು, ಮಾನವ ನಾಗರಿಕತೆಯ ಕಥೆಯು ನದಿ ಕಣಿವೆಗಳಲ್ಲಿ, ಸಮುದ್ರ ತೀರಗಳಲ್ಲಿ ಮತ್ತು ವಿವಿಧ ಜಲಮೂಲಗಳ ಸುತ್ತಲೂ ನೆಲೆಸಿದ ಗುಂಪುಗಳ ಕಥೆಯೇ ಆಗಿದೆ ಎಂದು ಹೇಳಿದರು. ನಮ್ಮ ಸಂಪ್ರದಾಯದಲ್ಲಿ, ನದಿಗಳು, ಸರೋವರಗಳು …

Read More »

2025ರ ಜೂನ್ 27ರಂದು ‘ಎಂಎಸ್ ಎಂಇ’ ದಿನದ ಅಧ್ಯಕ್ಷತೆ ವಹಿಸಲಿರುವ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2025ರ ಜೂನ್ 27ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ‘ಎಂಎಸ್ಎಂಇ ದಿನ 2025- ಉದ್ಯಮಿ ಭಾರತ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಶ್ರೀ ಮನೋಜ್ …

Read More »

2025ರ ಗಣರಾಜ್ಯೋತ್ಸವದ ಮುನ್ನಾದಿನದಂದು ರಾಷ್ಟ್ರವನ್ನುದ್ದೇಶಿಸಿ ಭಾರತದ ಘನತೆವೆತ್ತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಭಾಷಣ

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ! ಈ ಐತಿಹಾಸಿಕ ಸಂದರ್ಭದಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡಲು ನನಗೆ ಸಂತೋಷವಾಗಿದೆ. ಗಣರಾಜ್ಯೋತ್ಸವದ ಮುನ್ನಾದಿನದಂದು, ನಾನು ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ! 75 ವರ್ಷಗಳ ಹಿಂದೆ ಇದೇ ಜನವರಿ 26ರಂದು ನಮ್ಮ ಸಂಸ್ಥಾಪಕ ದಾಖಲೆಯಾದ ಭಾರತದ ಸಂವಿಧಾನ ಜಾರಿಗೆ ಬಂದಿತು. ಸಂವಿಧಾನ ರಚನಾ ಸಭೆಯು ಸುಮಾರು ಮೂರು ವರ್ಷಗಳ ಚರ್ಚೆಯ ನಂತರ, 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಿತು. ಆ ದಿನವನ್ನು, ಅಂದರೆ, ನವೆಂಬರ್ …

Read More »