Thursday, December 11 2025 | 10:37:30 PM
Breaking News

Tag Archives: improving

ರಾಷ್ಟ್ರೀಯ ಆರೋಗ್ಯ ಮಿಷನ್ (2021-24) ಅಡಿಯಲ್ಲಿ ಸಾಧನೆಗಳಿಗೆ ಸಂಪುಟದ ಅನುಮೋದನೆ: ಭಾರತದ ಸಾರ್ವಜನಿಕ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಒಂದು ಮೈಲಿಗಲ್ಲು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ  2021-22, 2022-23 ಮತ್ತು 2023-24ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್.ಎಚ್.ಎಂ.) ಅಡಿಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ವಿವರಿಸಲಾಯಿತು. ತಾಯಂದಿರ ಮರಣ ಪ್ರಮಾಣ, ಶಿಶು ಮರಣ ಪ್ರಮಾಣ, 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣದಲ್ಲಾಗಿರುವ ತ್ವರಿತ ಇಳಿಕೆ ಮತ್ತು ಒಟ್ಟು ಫಲವತ್ತತೆ ದರ ಮತ್ತು ಟಿಬಿ, ಮಲೇರಿಯಾ, ಕಾಲಾ-ಅಜರ್, ಡೆಂಗ್ಯೂ, ಕ್ಷಯ, ಕುಷ್ಠರೋಗ, ವೈರಲ್ ಹೆಪಟೈಟಿಸ್ ಮುಂತಾದ ವಿವಿಧ ರೋಗಗಳ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆಗಿರುವ ಪ್ರಗತಿ ಹಾಗು ರಾಷ್ಟ್ರೀಯ ಕುಡಗೋಲು ಕೋಶ ರಕ್ತಹೀನತೆ ನಿರ್ಮೂಲನಾ ಮಿಷನ್ ನಂತಹ ಹೊಸ ಉಪಕ್ರಮಗಳಿಗೆ ಸಂಬಂಧಿಸಿದಂತೆ ಆಗಿರುವ ಪ್ರಗತಿಯ ಬಗ್ಗೆಯೂ ಸಂಪುಟಕ್ಕೆ ವಿವರಿಸಲಾಯಿತು. ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಮಾನವ ಸಂಪನ್ಮೂಲವನ್ನು ವಿಸ್ತರಿಸುವಲ್ಲಿ, ನಿರ್ಣಾಯಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಆರೋಗ್ಯ ತುರ್ತುಸ್ಥಿತಿಗಳಿಗೆ ಸಮಗ್ರ ಪ್ರತಿಕ್ರಿಯೆಯನ್ನು ಬೆಳೆಸುವಲ್ಲಿ, ನಿರಂತರ ಪ್ರಯತ್ನಗಳ ಮೂಲಕ ಭಾರತದ ಸಾರ್ವಜನಿಕ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸಲು ಗಮನಾರ್ಹವಾಗಿ ಕೊಡುಗೆ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ, ಎನ್ಎಚ್ಎಂ ತಾಯಿ ಮತ್ತು ಮಕ್ಕಳ ಆರೋಗ್ಯ , ರೋಗ ನಿರ್ಮೂಲನೆ ಮತ್ತು ಆರೋಗ್ಯ ಮೂಲಸೌಕರ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ. ಮಿಷನ್ನಿನ  ಪ್ರಯತ್ನಗಳು ಭಾರತದ ಆರೋಗ್ಯ ಸುಧಾರಣೆಗಳಿಗೆ, ವಿಶೇಷವಾಗಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ವಿಶೇಷ ಕೊಡುಗೆ ನೀಡಿವೆ ಮತ್ತು ದೇಶಾದ್ಯಂತ ಹೆಚ್ಚು ಪ್ರವೇಶಿಸಬಹುದಾದ (ಎಲ್ಲರಿಗೂ ಲಭ್ಯವಾಗಬಹುದಾದ) ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆರೋಗ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದಲ್ಲಿ ಆಗಿರುವ ಗಮನಾರ್ಹ ಹೆಚ್ಚಳವು ಎನ್ಎಚ್ಎಂನ ಪ್ರಮುಖ ಸಾಧನೆಯಾಗಿದೆ. 2021-22ರ ಹಣಕಾಸು ವರ್ಷದಲ್ಲಿ, ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು (ಜಿಡಿಎಂಒಗಳು), ತಜ್ಞರು, ಸ್ಟಾಫ್ ನರ್ಸ್ಗಳು, …

Read More »