Saturday, January 03 2026 | 12:20:37 PM
Breaking News

Tag Archives: INS Vaghshir

ಮುಂಚೂಣಿ ಯುದ್ಧ ನೌಕೆಗಳಾದ ಐ ಎನ್ ಎಸ್ ಸೂರತ್, ಐ ಎನ್ ಎಸ್ ನೀಲಗಿರಿ ಮತ್ತು ಐ ಎನ್ ಎಸ್ ವಘ್ ಶೀರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈಯ ನೌಕಾ ಹಡಗುಕಟ್ಟೆಯಲ್ಲಿ ಮೂರು ಮುಂಚೂಣಿ ನೌಕಾ ಯುದ್ಧ ನೌಕೆಗಳಾದ ಐಎನ್ಎಸ್ ಸೂರತ್, ಐಎನ್ಎಸ್ ನೀಲಗಿರಿ ಮತ್ತು ಐಎನ್ಎಸ್ ವಘ್ ಶೀರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಬಳಿಕ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಜನವರಿ 15 ಅನ್ನು ಸೇನಾ ದಿನವಾಗಿ ಆಚರಿಸಲಾಗುತ್ತದೆ ಮತ್ತು ರಾಷ್ಟ್ರದ ಸುರಕ್ಷತೆ ಹಾಗು ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಪ್ರತಿಯೊಬ್ಬ ಧೈರ್ಯಶಾಲಿ ಯೋಧನಿಗೆ ನಮಸ್ಕರಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಎಲ್ಲ ವೀರ ಯೋಧರನ್ನು ಅಭಿನಂದಿಸಿದರು. ಇಂದು ಭಾರತದ ಕಡಲ ಪರಂಪರೆ, ನೌಕಾಪಡೆಯ ಭವ್ಯ ಇತಿಹಾಸ ಮತ್ತು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ದೊಡ್ಡ ದಿನವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ, ಛತ್ರಪತಿ ಶಿವಾಜಿ ಮಹಾರಾಜ್ ಅವರು ಭಾರತದ ನೌಕಾಪಡೆಗೆ ಹೊಸ ಶಕ್ತಿ ಮತ್ತು ದೂರದೃಷ್ಟಿಯನ್ನು ನೀಡಿದರು ಎಂದರು. ಶಿವಾಜಿ ಮಹಾರಾಜರ ಭೂಮಿಯಲ್ಲಿ 21ನೇ ಶತಮಾನದ ಭಾರತದ ನೌಕಾಪಡೆಯನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇಂದು ಪ್ರಮುಖ ಹೆಜ್ಜೆ ಇಟ್ಟಿದೆ ಎಂದರು. “ಇದೇ ಮೊದಲ ಬಾರಿಗೆ ವಿಧ್ವಂಸಕ ನೌಕೆ, ಯುದ್ಧನೌಕೆ ಮತ್ತು ಜಲಾಂತರ್ಗಾಮಿ ನೌಕೆಯ ತ್ರಿ-ಕಾರ್ಯಾರಂಭ ಮಾಡಲಾಗುತ್ತಿದೆ” ಎಂದು ಪ್ರಧಾನಿ ಒತ್ತಿ ಹೇಳಿದರು. ಎಲ್ಲಾ ಮೂರು ಮುಂಚೂಣಿ ನೌಕೆಗಳನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ಸಾಧನೆಗಾಗಿ ಅವರು ಭಾರತೀಯ ನೌಕಾಪಡೆ, ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಪಾಲುದಾರರು ಮತ್ತು ಭಾರತದ ನಾಗರಿಕರನ್ನು ಅಭಿನಂದಿಸಿದರು. “ಇಂದಿನ ಕಾರ್ಯಕ್ರಮವು ನಮ್ಮ ಭವ್ಯ ಪರಂಪರೆಯನ್ನು ನಮ್ಮ ಭವಿಷ್ಯದ ಆಕಾಂಕ್ಷೆಗಳೊಂದಿಗೆ ಸಂಪರ್ಕಿಸುತ್ತದೆ” ಎಂದು ಶ್ರೀ ಮೋದಿ ಉದ್ಗರಿಸಿದರು. ಭಾರತವು ದೀರ್ಘ ಸಮುದ್ರಯಾನ, ವಾಣಿಜ್ಯ, ನೌಕಾ ರಕ್ಷಣೆ ಮತ್ತು ಹಡಗು ಉದ್ಯಮಕ್ಕೆ ಸಂಬಂಧಿಸಿದ ಶ್ರೀಮಂತ ಇತಿಹಾಸವನ್ನು ಹೊಂದಿದೆ ಎಂದು ಅವರು ಹೇಳಿದರು. ಈ ಶ್ರೀಮಂತ ಇತಿಹಾಸವನ್ನು ಉಲ್ಲೇಖಿಸಿದ  ಅವರು, ಇಂದಿನ ಭಾರತವು ವಿಶ್ವದ ಪ್ರಮುಖ ಕಡಲ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದರು. ಇಂದು ಕಾರ್ಯಾರಂಭ ಮಾಡಲಾದ ನೌಕೆಗಳು ಅದರ ಒಂದು ನೋಟವನ್ನು ಪ್ರದರ್ಶಿಸಿವೆ ಎಂದೂ ಅವರು ಹೇಳಿದರು. ಚೋಳ ರಾಜವಂಶದ ಕಡಲ ಪರಾಕ್ರಮಕ್ಕೆ ಸಮರ್ಪಿತವಾದ ಐಎನ್ ಎಸ್ ನೀಲಗಿರಿ ಮತ್ತು ಸೂರತ್ ಯುದ್ಧನೌಕೆ ಸೇರಿದಂತೆ ಹೊಸ ನೌಕೆಗಳ ಆರಂಭವನ್ನು ಪ್ರಧಾನಿ ಉಲ್ಲೇಖಿಸಿದರು, ಇದು ಗುಜರಾತ್ ನ ಬಂದರುಗಳು ಭಾರತವನ್ನು ಪಶ್ಚಿಮ ಏಷ್ಯಾದೊಂದಿಗೆ ಸಂಪರ್ಕಿಸಿದ ಯುಗವನ್ನು ನೆನಪಿಸುತ್ತದೆ. ಕೆಲವು ವರ್ಷಗಳ ಹಿಂದೆ ಮೊದಲ ಜಲಾಂತರ್ಗಾಮಿ ನೌಕೆ ಕಲ್ವರಿಯನ್ನು ನಿಯೋಜಿಸಿದ ನಂತರ ಪಿ 75 ವರ್ಗದಲ್ಲಿ ಆರನೇ ವಗ್ಶೀರ್ ಜಲಾಂತರ್ಗಾಮಿ ನೌಕೆಯನ್ನು ನಿಯೋಜಿಸಿದ್ದನ್ನು ಅವರು ಉಲ್ಲೇಖಿಸಿದರು. ಈ ಹೊಸ ಗಡಿನಾಡಿನ ರಕ್ಷಣಾ ವೇದಿಕೆಗಳು ಭಾರತದ ಭದ್ರತೆ ಮತ್ತು ಪ್ರಗತಿ ಎರಡನ್ನೂ ಹೆಚ್ಚಿಸುತ್ತವೆ ಎಂದು ಪ್ರಧಾನಿ ವಿವರಿಸಿದರು. “ಭಾರತವು ಇಂದು ಜಾಗತಿಕವಾಗಿ, ವಿಶೇಷವಾಗಿ ಜಾಗತಿಕ ದಕ್ಷಿಣದಲ್ಲಿ ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಪಾಲುದಾರನಾಗಿ ಗುರುತಿಸಲ್ಪಟ್ಟಿದೆ” ಎಂದು ಪ್ರಧಾನಿ ಉದ್ಗರಿಸಿದರು. ಭಾರತವು ಅಭಿವೃದ್ಧಿಯ ಮನೋಭಾವದಿಂದ ಕಾರ್ಯನಿರ್ವಹಿಸುತ್ತದೆಯೇ ಹೊರತು ವಿಸ್ತರಣಾವಾದದಿಂದಲ್ಲ ಎಂದು ಅವರು ಒತ್ತಿ ಹೇಳಿದರು. ಮುಕ್ತ, ಸುರಕ್ಷಿತ, ಅಂತರ್ಗತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶವನ್ನು ಭಾರತ ಸದಾ ಬೆಂಬಲಿಸುತ್ತದೆ ಎಂದು ಅವರು ಹೇಳಿದರು. ಕರಾವಳಿ ರಾಷ್ಟ್ರಗಳ ಅಭಿವೃದ್ಧಿಯ ವಿಷಯಕ್ಕೆ ಬಂದಾಗ, ಭಾರತವು ಸಾಗರ್ (ಈ ಪ್ರದೇಶದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ) ಮಂತ್ರವನ್ನು ಪರಿಚಯಿಸಿತು ಮತ್ತು ಈ ದೃಷ್ಟಿಕೋನದೊಂದಿಗೆ ಮುಂದುವರಿಯಿತು ಎಂಬುದರತ್ತ  ಅವರು ಬೆಟ್ಟು ಮಾಡಿದರು. “ಒಂದು ಭೂಮಿ, …

Read More »