ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ಗ್ರಾಮೀಣ ಭಾರತ ಮಹೋತ್ಸವ 2025 ಅನ್ನು ಉದ್ಘಾಟಿಸಿದರು. ವಿಕಸಿತ ಭಾರತ 2024 ಗಾಗಿ ಸ್ಥಿತಿಸ್ಥಾಪಕ ಗ್ರಾಮೀಣ ಭಾರತವನ್ನು ನಿರ್ಮಿಸುವುದು ಮಹೋತ್ಸವದ ವಿಷಯವಾಗಿದೆ. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ನೆರೆದಿದ್ದ ಎಲ್ಲ ಜನರಿಗೆ 2025ರ ಶುಭಾಶಯ ಕೋರಿದರು. ವರ್ಷದ ಆರಂಭದಲ್ಲಿ ಗ್ರಾಮೀಣ ಭಾರತ ಮಹೋತ್ಸವದ ಭವ್ಯ ಸಂಘಟನೆಯು ಭಾರತದ ಅಭಿವೃದ್ಧಿಯ ಪಯಣದ ಒಂದು ಇಣುಕುನೋಟವನ್ನು ನೀಡುತ್ತಿದೆ ಮತ್ತು …
Read More »ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿಗಳಿಂದ ಗೌರವ ನಮನ
ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದರು. ಅವರು ಮಹಿಳಾ ಸಬಲೀಕರಣದ ಆಶಾಕಿರಣ; ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯ ಆದ್ಯ ಪ್ರವರ್ತರು ಎಂದು ಶ್ರೀ ಮೋದಿ ಅವರು ಶ್ಲಾಘಿಸಿದ್ದಾರೆ. ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ: “ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು. ಅವರು ಮಹಿಳಾ ಸಬಲೀಕರಣದ ಆಶಾಕಿರಣ ಹಾಗೂ ಶಿಕ್ಷಣ ಮತ್ತು ಸಾಮಾಜಿಕ …
Read More »ರಾಣಿ ವೇಲು ನಾಚ್ಚಿಯಾರ್ ಅವರ ಜನ್ಮ ದಿನದ ಅಂಗವಾಗಿ ಪ್ರಧಾನಮಂತ್ರಿಗಳಿಂದ ಅವರ ಸ್ಮರಣೆ
ರಾಣಿ ವೇಲು ನಾಚ್ಚಿಯಾರ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಚ್ಚಿಯಾರ್ ಅವರನ್ನು ಧೈರ್ಯಶಾಲಿ ಮಹಿಳೆ ಎಂದು ಸ್ಮರಿಸಿದ್ದಾರೆ. ಅಪ್ರತಿಮ ಶೌರ್ಯ ಮತ್ತು ತಂತ್ರಗಾರಿಕಾ ಕೌಶಲ್ಯದೊಂದಿಗೆ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಅವರು ವೀರೋಚಿತ ಹೋರಾಟ ನಡೆಸಿದರು ಎಂದು ಶ್ರೀ ಮೋದಿ ಅವರು ಬಣ್ಣಿಸಿದ್ದಾರೆ. ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ: “ಧೈರ್ಯಶಾಲಿ ರಾಣಿ ವೇಲು ನಾಚ್ಚಿಯಾರ್ ಅವರ ಜನ್ಮದಿನದಂದು ಅವರ ಸ್ಮರಣೆ! …
Read More »ದೆಹಲಿಯಲ್ಲಿ ಇಂದು ಉದ್ಘಾಟನೆಯಾಗುತ್ತಿರುವ ಯೋಜನೆಗಳು ಅಲ್ಲಿನ ಜನರನ್ನು ಸಬಲಗೊಳಿಸುವ ನಮ್ಮ ಬದ್ಧತೆಯ ಪ್ರತಿಬಿಂಬ: ಪ್ರಧಾನಮಂತ್ರಿ
ದೆಹಲಿಯಲ್ಲಿಂದು ಉದ್ಘಾಟನೆಯಾಗುತ್ತಿರುವ ಯೋಜನೆಗಳು ಅಲ್ಲಿನ ಜನರನ್ನು ಸಬಲಗೊಳಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ: “ದೆಹಲಿಯ ಜನರಿಗೆ ಉತ್ತಮ ಅವಕಾಶಗಳು ಮತ್ತು ಉತ್ತಮ ಜೀವನ ಗುಣಮಟ್ಟ ನೀಡುವ ಮೂಲಕ ಅವರನ್ನು ಸಬಲಗೊಳಿಸುವ ನಮ್ಮ ಅಚಲ ಬದ್ಧತೆಯು ಇಂದು ಉದ್ಘಾಟನೆಯಾಗುತ್ತಿರುವ ಯೋಜನೆಗಳಲ್ಲಿ ಪ್ರತಿಫಲಿತವಾಗಿದೆ!” भारत : 1885 से 1950 (इतिहास पर एक दृष्टि) …
Read More »ಜನವರಿ 3 ರಂದು ದೆಹಲಿಯಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
‘ಎಲ್ಲರಿಗೂ ವಸತಿ’ ಎಂಬ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜನವರಿ 3 ರಂದು ಮಧ್ಯಾಹ್ನ 12:10ರ ಸುಮಾರಿಗೆ ದೆಹಲಿಯ ಅಶೋಕ್ ವಿಹಾರ್ ನ ಸ್ವಾಭಿಮಾನ್ ಅಪಾರ್ಟ್ ಮೆಂಟ್ ನಲ್ಲಿ ಕೊಳೆಗೇರಿ ಪುನರ್ವಸತಿ ಯೋಜನೆಯಡಿ ಝುಗ್ಗಿ ಜೋಪ್ರಿ (ಜೆಜೆ) ಕ್ಲಸ್ಟರ್ ಗಳ ನಿವಾಸಿಗಳಿಗಾಗಿ ಹೊಸದಾಗಿ ನಿರ್ಮಿಸಲಾದ ಫ್ಲ್ಯಾಟ್ ಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಮಧ್ಯಾಹ್ನ 12:45 ಕ್ಕೆ ಅವರು ದೆಹಲಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು …
Read More »ದೂರದ ಪ್ರದೇಶಗಳಲ್ಲಿ ಮತ್ತು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ
ಸಂಪರ್ಕ ರಹಿತ ದೂರದ ಪ್ರದೇಶಗಳಲ್ಲಿ ಮತ್ತು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ಲಾಘಿಸಿದರು. ಎಕ್ಸ್ ತಾಣದಲ್ಲಿನ ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ ಅವರ ಸಂದೇಶಕ್ಕೆ ಸ್ಪಂದಿಸಿ ಪ್ರತಿಕ್ರಿಯಿಸುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಬರೆದಿದ್ದಾರೆ: “ದೂರದ ಪ್ರದೇಶಗಳಲ್ಲಿ ಮತ್ತು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ …
Read More »ಸಣ್ಣ ಉದ್ಯಮಗಳ ಸಬಲೀಕರಣ ಮತ್ತು ಇ-ಕಾಮರ್ಸ್ ನಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಒ ಎನ್ ಡಿ ಸಿ ಕೊಡುಗೆ ಅಪಾರ: ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಸಣ್ಣ ಉದ್ಯಮಗಳನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ಇ-ಕಾಮರ್ಸ್ ನಲ್ಲಿ ಕ್ರಾಂತಿಕಾರಕ ಬದಲಾವಣೆ ತರುವಲ್ಲಿ ಡಿಜಿಟಲ್ ಕಾಮರ್ಸ್ ಗಾಗಿ ಓಪನ್ ನೆಟ್ ವರ್ಕ್ ನ ಕೊಡುಗೆಯನ್ನು ಎತ್ತಿ ತೋರಿಸಿ, ಬೆಳವಣಿಗೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. Xನಲ್ಲಿ ಶ್ರೀ ಪಿಯೂಷ್ ಗೋಯಲ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು: “ಒ ಎನ್ ಡಿ ಸಿ ಸಣ್ಣ …
Read More »2025ನೇ ಹೊಸ ವರ್ಷಕ್ಕೆ ಪ್ರತಿಯೊಬ್ಬರಿಗೂ ಶುಭಾಶಯ ತಿಳಿಸಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶದ ಎಲ್ಲಾ ನಾಗರಿಕರಿಗೂ 2025ನೇ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು, “2025ನೇ ಹೊಸ ವರ್ಷದ ಶುಭಾಶಯಗಳು! ಈ ವರ್ಷ ಎಲ್ಲರಿಗೂ ಹೊಸ ಅವಕಾಶಗಳು, ಯಶಸ್ಸು ಮತ್ತು ಅನಂತ ಸಂತೋಷವನ್ನು ತರಲಿ. ಪ್ರತಿಯೊಬ್ಬರಿಗೂ ಅದ್ಭುತವಾದ ಆರೋಗ್ಯ ಮತ್ತು ಸಮೃದ್ಧಿಯ ಆಶೀರ್ವಾದ ಸಿಗಲಿ.” ಎಂದು ಆಶಯ ವ್ಯಕ್ತಪಡಿಸಿದ್ದಾರೆ. भारत : 1885 से 1950 (इतिहास …
Read More »ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 29.12.2024 ರಂದು ಮಾಡಿದ ‘ಮನ್ ಕಿ ಬಾತ್’ – 117ನೇ ಸಂಚಿಕೆಯ ಕನ್ನಡ ಅವತರಣಿಕೆ
ನನ್ನ ಪ್ರಿಯ ದೇಶವಾಸಿಗಳಿಗೆ ನಮಸ್ಕಾರ. 2025 ಇನ್ನೇನು ಬಂದೆ ಬಿಟ್ಟಿತು, ನವ ಸಂವತ್ಸರ ಬಾಗಿಲು ತಟ್ಟುತ್ತಿದೆ. 2025ರ ಜನವರಿ 26 ರಂದು ನಮ್ಮ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ತುಂಬುತ್ತವೆ. ನಮಗೆಲ್ಲರಿಗೂ ಇದು ಹೆಮ್ಮೆಯ ವಿಷಯ. ನಮ್ಮ ಸಂವಿಧಾನ ನಿರ್ಮಾತೃಗಳು ನಮಗೆ ಒಪ್ಪಿಸಿದ ಸಂವಿಧಾನವು ಎಲ್ಲಾ ಕಾಲದಲ್ಲು ಪ್ರಸ್ತುತವಾಗಿದೆ. ಸಂವಿಧಾನ ನಮಗೆ ದಿಕ್ಸೂಚಿಯಾಗಿದೆ, ಮಾರ್ಗದರ್ಶಕನಾಗಿದೆ. ಭಾರತದ ಸಂವಿಧಾನದಿಂದಾಗಿಯೇ ಇಂದು ನಾನು ಇಲ್ಲಿದ್ದೇನೆ, ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಈ ವರ್ಷ, ನವೆಂಬರ್ 26 …
Read More »ಮಾಜಿ ಪ್ರಧಾನಮಂತ್ರಿ ಡಾ.ಮನಮೋಹ್ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿವಾಸದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದರು. “ಅವರು ನಮ್ಮ ದೇಶಕ್ಕೆ ನೀಡಿರುವ ಕೊಡುಗೆಯನ್ನು ಭಾರತ ಎಂದೆಂದಿಗೂ ಸ್ಮರಿಸುತ್ತದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು. ಪ್ರಧಾನಮಂತ್ರಿ ಅವರು ಸಾಮಾಜಿಕ ಜಾಲತಾಣ ನಲ್ಲಿ ಹೀಗೆ ಹೇಳಿದ್ದಾರೆ. “ಡಾ.ಮನಮೋಹನ್ ಸಿಂಗ್ ಅವರಿಗೆ ಅವರ ನಿವಾಸದಲ್ಲಿ ಗೌರವ ನಮನ ಸಲ್ಲಿಸಿದೆನು. ಅವರು ನಮ್ಮ ರಾಷ್ಟ್ರಕ್ಕೆ ನೀಡಿರುವ ಕೊಡುಗೆ …
Read More »
Matribhumi Samachar Kannad