ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ! ಈ ಐತಿಹಾಸಿಕ ಸಂದರ್ಭದಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡಲು ನನಗೆ ಸಂತೋಷವಾಗಿದೆ. ಗಣರಾಜ್ಯೋತ್ಸವದ ಮುನ್ನಾದಿನದಂದು, ನಾನು ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ! 75 ವರ್ಷಗಳ ಹಿಂದೆ ಇದೇ ಜನವರಿ 26ರಂದು ನಮ್ಮ ಸಂಸ್ಥಾಪಕ ದಾಖಲೆಯಾದ ಭಾರತದ ಸಂವಿಧಾನ ಜಾರಿಗೆ ಬಂದಿತು. ಸಂವಿಧಾನ ರಚನಾ ಸಭೆಯು ಸುಮಾರು ಮೂರು ವರ್ಷಗಳ ಚರ್ಚೆಯ ನಂತರ, 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಿತು. ಆ ದಿನವನ್ನು, ಅಂದರೆ, ನವೆಂಬರ್ …
Read More »ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಮಹಾಕುಂಭದ ವ್ಯವಸ್ಥೆಗಳು ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದರು, ಇದು ರಾಷ್ಟ್ರ ಮತ್ತು ರೈಲ್ವೆ ಎರಡಕ್ಕೂ ಐತಿಹಾಸಿಕ ಘಟನೆಯಾಗಿದೆ
ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ತಮ್ಮ ಎರಡು ದಿನಗಳ ಪ್ರಯಾಗರಾಜ್ ಭೇಟಿ ಸಂದರ್ಭದಲ್ಲಿ, ಮಹಾಕುಂಭ 2025ರ ಸಂದರ್ಭದಲ್ಲಿ ಸಂಗಮ ಪ್ರದೇಶದಲ್ಲಿರುವ ಮೇಳ ಶಿಬಿರಗಳನ್ನು ಪರಿಶೀಲಿಸಿದರು. ಪ್ರಯಾಗರಾಜ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ರೀ ಹಿಮಾಂಶು ಬಡೋನಿ ಹಾಗೂ ಇತರೆ ಅಧಿಕಾರಿಗಳು ಪರಿಶೀಲನೆಯ ಸಮಯದಲ್ಲಿ ಹಾಜರಿದ್ದರು. ಮಹಾಕುಂಭ 2025ಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಸಂಗಮ ಪ್ರದೇಶದಲ್ಲಿ ಸ್ಥಾಪಿಸಲಾದ ಮೇಳ ಶಿಬಿರವನ್ನು ಕೇಂದ್ರ ಸಚಿವರು …
Read More »ಮುಂಚೂಣಿ ಯುದ್ಧ ನೌಕೆಗಳಾದ ಐ ಎನ್ ಎಸ್ ಸೂರತ್, ಐ ಎನ್ ಎಸ್ ನೀಲಗಿರಿ ಮತ್ತು ಐ ಎನ್ ಎಸ್ ವಘ್ ಶೀರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈಯ ನೌಕಾ ಹಡಗುಕಟ್ಟೆಯಲ್ಲಿ ಮೂರು ಮುಂಚೂಣಿ ನೌಕಾ ಯುದ್ಧ ನೌಕೆಗಳಾದ ಐಎನ್ಎಸ್ ಸೂರತ್, ಐಎನ್ಎಸ್ ನೀಲಗಿರಿ ಮತ್ತು ಐಎನ್ಎಸ್ ವಘ್ ಶೀರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಬಳಿಕ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಜನವರಿ 15 ಅನ್ನು ಸೇನಾ ದಿನವಾಗಿ ಆಚರಿಸಲಾಗುತ್ತದೆ ಮತ್ತು ರಾಷ್ಟ್ರದ ಸುರಕ್ಷತೆ ಹಾಗು ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಪ್ರತಿಯೊಬ್ಬ ಧೈರ್ಯಶಾಲಿ ಯೋಧನಿಗೆ ನಮಸ್ಕರಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಎಲ್ಲ ವೀರ ಯೋಧರನ್ನು ಅಭಿನಂದಿಸಿದರು. ಇಂದು ಭಾರತದ ಕಡಲ ಪರಂಪರೆ, ನೌಕಾಪಡೆಯ ಭವ್ಯ ಇತಿಹಾಸ ಮತ್ತು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ದೊಡ್ಡ ದಿನವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ, ಛತ್ರಪತಿ ಶಿವಾಜಿ ಮಹಾರಾಜ್ ಅವರು ಭಾರತದ ನೌಕಾಪಡೆಗೆ ಹೊಸ ಶಕ್ತಿ ಮತ್ತು ದೂರದೃಷ್ಟಿಯನ್ನು ನೀಡಿದರು ಎಂದರು. ಶಿವಾಜಿ ಮಹಾರಾಜರ ಭೂಮಿಯಲ್ಲಿ 21ನೇ ಶತಮಾನದ ಭಾರತದ ನೌಕಾಪಡೆಯನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇಂದು ಪ್ರಮುಖ ಹೆಜ್ಜೆ ಇಟ್ಟಿದೆ ಎಂದರು. “ಇದೇ ಮೊದಲ ಬಾರಿಗೆ ವಿಧ್ವಂಸಕ ನೌಕೆ, ಯುದ್ಧನೌಕೆ ಮತ್ತು ಜಲಾಂತರ್ಗಾಮಿ ನೌಕೆಯ ತ್ರಿ-ಕಾರ್ಯಾರಂಭ ಮಾಡಲಾಗುತ್ತಿದೆ” ಎಂದು ಪ್ರಧಾನಿ ಒತ್ತಿ ಹೇಳಿದರು. ಎಲ್ಲಾ ಮೂರು ಮುಂಚೂಣಿ ನೌಕೆಗಳನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ಸಾಧನೆಗಾಗಿ ಅವರು ಭಾರತೀಯ ನೌಕಾಪಡೆ, ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಪಾಲುದಾರರು ಮತ್ತು ಭಾರತದ ನಾಗರಿಕರನ್ನು ಅಭಿನಂದಿಸಿದರು. “ಇಂದಿನ ಕಾರ್ಯಕ್ರಮವು ನಮ್ಮ ಭವ್ಯ ಪರಂಪರೆಯನ್ನು ನಮ್ಮ ಭವಿಷ್ಯದ ಆಕಾಂಕ್ಷೆಗಳೊಂದಿಗೆ ಸಂಪರ್ಕಿಸುತ್ತದೆ” ಎಂದು ಶ್ರೀ ಮೋದಿ ಉದ್ಗರಿಸಿದರು. ಭಾರತವು ದೀರ್ಘ ಸಮುದ್ರಯಾನ, ವಾಣಿಜ್ಯ, ನೌಕಾ ರಕ್ಷಣೆ ಮತ್ತು ಹಡಗು ಉದ್ಯಮಕ್ಕೆ ಸಂಬಂಧಿಸಿದ ಶ್ರೀಮಂತ ಇತಿಹಾಸವನ್ನು ಹೊಂದಿದೆ ಎಂದು ಅವರು ಹೇಳಿದರು. ಈ ಶ್ರೀಮಂತ ಇತಿಹಾಸವನ್ನು ಉಲ್ಲೇಖಿಸಿದ ಅವರು, ಇಂದಿನ ಭಾರತವು ವಿಶ್ವದ ಪ್ರಮುಖ ಕಡಲ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದರು. ಇಂದು ಕಾರ್ಯಾರಂಭ ಮಾಡಲಾದ ನೌಕೆಗಳು ಅದರ ಒಂದು ನೋಟವನ್ನು ಪ್ರದರ್ಶಿಸಿವೆ ಎಂದೂ ಅವರು ಹೇಳಿದರು. ಚೋಳ ರಾಜವಂಶದ ಕಡಲ ಪರಾಕ್ರಮಕ್ಕೆ ಸಮರ್ಪಿತವಾದ ಐಎನ್ ಎಸ್ ನೀಲಗಿರಿ ಮತ್ತು ಸೂರತ್ ಯುದ್ಧನೌಕೆ ಸೇರಿದಂತೆ ಹೊಸ ನೌಕೆಗಳ ಆರಂಭವನ್ನು ಪ್ರಧಾನಿ ಉಲ್ಲೇಖಿಸಿದರು, ಇದು ಗುಜರಾತ್ ನ ಬಂದರುಗಳು ಭಾರತವನ್ನು ಪಶ್ಚಿಮ ಏಷ್ಯಾದೊಂದಿಗೆ ಸಂಪರ್ಕಿಸಿದ ಯುಗವನ್ನು ನೆನಪಿಸುತ್ತದೆ. ಕೆಲವು ವರ್ಷಗಳ ಹಿಂದೆ ಮೊದಲ ಜಲಾಂತರ್ಗಾಮಿ ನೌಕೆ ಕಲ್ವರಿಯನ್ನು ನಿಯೋಜಿಸಿದ ನಂತರ ಪಿ 75 ವರ್ಗದಲ್ಲಿ ಆರನೇ ವಗ್ಶೀರ್ ಜಲಾಂತರ್ಗಾಮಿ ನೌಕೆಯನ್ನು ನಿಯೋಜಿಸಿದ್ದನ್ನು ಅವರು ಉಲ್ಲೇಖಿಸಿದರು. ಈ ಹೊಸ ಗಡಿನಾಡಿನ ರಕ್ಷಣಾ ವೇದಿಕೆಗಳು ಭಾರತದ ಭದ್ರತೆ ಮತ್ತು ಪ್ರಗತಿ ಎರಡನ್ನೂ ಹೆಚ್ಚಿಸುತ್ತವೆ ಎಂದು ಪ್ರಧಾನಿ ವಿವರಿಸಿದರು. “ಭಾರತವು ಇಂದು ಜಾಗತಿಕವಾಗಿ, ವಿಶೇಷವಾಗಿ ಜಾಗತಿಕ ದಕ್ಷಿಣದಲ್ಲಿ ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಪಾಲುದಾರನಾಗಿ ಗುರುತಿಸಲ್ಪಟ್ಟಿದೆ” ಎಂದು ಪ್ರಧಾನಿ ಉದ್ಗರಿಸಿದರು. ಭಾರತವು ಅಭಿವೃದ್ಧಿಯ ಮನೋಭಾವದಿಂದ ಕಾರ್ಯನಿರ್ವಹಿಸುತ್ತದೆಯೇ ಹೊರತು ವಿಸ್ತರಣಾವಾದದಿಂದಲ್ಲ ಎಂದು ಅವರು ಒತ್ತಿ ಹೇಳಿದರು. ಮುಕ್ತ, ಸುರಕ್ಷಿತ, ಅಂತರ್ಗತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶವನ್ನು ಭಾರತ ಸದಾ ಬೆಂಬಲಿಸುತ್ತದೆ ಎಂದು ಅವರು ಹೇಳಿದರು. ಕರಾವಳಿ ರಾಷ್ಟ್ರಗಳ ಅಭಿವೃದ್ಧಿಯ ವಿಷಯಕ್ಕೆ ಬಂದಾಗ, ಭಾರತವು ಸಾಗರ್ (ಈ ಪ್ರದೇಶದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ) ಮಂತ್ರವನ್ನು ಪರಿಚಯಿಸಿತು ಮತ್ತು ಈ ದೃಷ್ಟಿಕೋನದೊಂದಿಗೆ ಮುಂದುವರಿಯಿತು ಎಂಬುದರತ್ತ ಅವರು ಬೆಟ್ಟು ಮಾಡಿದರು. “ಒಂದು ಭೂಮಿ, …
Read More »ರಾಷ್ಟ್ರಪತಿ ಅವರಿಂದ ಅತ್ಯಾಧುನಿಕ ರೋಗಪತ್ತೆ ಸೌಲಭ್ಯಗಳಾದ- ಸುಧಾರಿತ 3ಟಿ ಎಂ ಆರ್ ಐ ಸ್ಕ್ಯಾನರ್ ಮತ್ತು ಡಿ ಎಸ್ ಎ ಸಿಸ್ಟಮ್ ರಾಷ್ಟ್ರಕ್ಕೆ ಸಮರ್ಪಣೆ
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ (ನಿಮ್ಹಾನ್ಸ್) 2025ರ ಜನವರಿ 3ರಂದು ತನ್ನ ಸುವರ್ಣ ಮಹೋತ್ಸವವನ್ನು ಸಮಾವೇಶ ಸಭಾಂಗಣದಲ್ಲಿ ಆಚರಿಸಿಕೊಳ್ಳಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ನಿಮ್ಹಾನ್ಸ್ ಐದು ದಶಕಗಳ ಗಮನಾರ್ಹ ಸೇವೆಯನ್ನು ಸ್ಮರಿಸುತ್ತಿರುವುದರಿಂದ, ಇದು ಸಂಸ್ಥೆಯ ಬದ್ಧತೆ, ನಾವೀನ್ಯತೆ ಮತ್ತು ಶ್ರೇಷ್ಠತೆಯ ದೃಢವಾದ ಅನ್ವೇಷಣೆಯಿಂದ ಕೂಡಿರುವ ಅದರ ಪಯಣವನ್ನು ಪ್ರತಿಬಿಂಬಿಸುತ್ತದೆ. ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಲಿದ್ದಾರೆ. …
Read More »ಡಿಸೆಂಬರ್ 25, ಬುಧವಾರದಂದು ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಸಮ್ಮೇಳನದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 10000 M-PACS ಗಳು, ಡೈರಿ ಮತ್ತು ಮೀನುಗಾರಿಕಾ ಸಹಕಾರ ಸಂಘಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 10,000 ಕ್ಕೂ ಹೆಚ್ಚು ಹೊಸದಾಗಿ ಸ್ಥಾಪಿಸಲಾದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು (M-PACS), ಡೈರಿ ಮತ್ತು ಮೀನುಗಾರಿಕೆ ಸಹಕಾರಿ ಸಂಸ್ಥೆಗಳನ್ನು ಬುಧವಾರ, ಡಿಸೆಂಬರ್ 25 ರಂದು ನವದೆಹಲಿಯ ಪುಸಾದ ICAR ಕನ್ವೆನ್ಷನ್ ಸೆಂಟರ್‌ನಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸಹಕಾರಿಗಳ ರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ. ಶ್ರೀ ಅಮಿತ್ ಶಾ ಅವರು ಹೊಸದಾಗಿ ರಚನೆಯಾದ ಸಹಕಾರ ಸಂಘಗಳಿಗೆ ನೋಂದಣಿ ಪ್ರಮಾಣಪತ್ರಗಳು, ರುಪೇ …
Read More »ವಿಜಯ್ ದಿನದ ಸಂದರ್ಭದಲ್ಲಿ 1971ರ ಯುದ್ಧದಲ್ಲಿ ಹುತಾತ್ಮ ವೀರರಿಗೆ ಗೌರವ ಸಲ್ಲಿಸಿ ರಾಷ್ಟ್ರವನ್ನು ಮುನ್ನಡೆಸಿದ ರಾಷ್ಟ್ರಪತಿ; ಯೋಧರ ಅಂತಿಮ ತ್ಯಾಗ ರಾಷ್ಟ್ರದ ಹೆಮ್ಮೆ ಮತ್ತು ಸ್ಫೂರ್ತಿಗೆ ಮೂಲ: ಶ್ರೀಮತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವಿಜಯ್ ದಿನದ ಅಂಗವಾಗಿ 1971ರ ಯುದ್ಧದ ವೀರ ಸೈನಿಕರಿಗೆ ಗೌರವ ಸಲ್ಲಿಸುವ ಮೂಲಕ ರಾಷ್ಟ್ರವನ್ನು ಮುನ್ನಡೆಸಿದರು. ಪ್ರತಿ ವರ್ಷ ಡಿಸೆಂಬರ್ 16 ರಂದು ಪಾಕಿಸ್ತಾನದ ವಿರುದ್ಧ ಭಾರತದ ಐತಿಹಾಸಿಕ ವಿಜಯದ ಸ್ಮರಣಾರ್ಥವಾಗಿ ವಿಜಯ್ ದಿನವನ್ನು ಆಚರಿಸಲಾಗುತ್ತದೆ. ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ X ನಲ್ಲಿ ರಾಷ್ಟ್ರಪತಿಗಳು, ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ನೀಡುವ ಮತ್ತು ರಾಷ್ಟ್ರೀಯ ಹೆಮ್ಮೆಯ ಮೂಲವಾಗಿ ಉಳಿಯುವ ಧೈರ್ಯಶಾಲಿಗಳ ಅಂತಿಮ ತ್ಯಾಗವನ್ನು …
Read More »
Matribhumi Samachar Kannad