ಬೆಲ್ಜಿಯಂನ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀ ಬರ್ಟ್ ದೆ ವೇವರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಭಾರತ-ಬೆಲ್ಜಿಯಂ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಹಾಗೂ ಜಾಗತಿಕ ವಿಷಯಗಳಲ್ಲಿ ಸಹಯೋಗವನ್ನು ಹೆಚ್ಚಿಸಲು ಒಟ್ಟಾಗಿ ಕಾರ್ಯನಿರ್ವಹಿಸುವ ವಿಶ್ವಾಸವನ್ನು ಶ್ರೀ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿದ್ದಾರೆ. ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ: “ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ @Bart_DeWever ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಭಾರತ-ಬೆಲ್ಜಿಯಂ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಮತ್ತು ಜಾಗತಿಕ …
Read More »ಗ್ರ್ಯಾಮಿ ಪ್ರಶಸ್ತಿ ಗೆದ್ದ ಸಂಗೀತಗಾರ್ತಿ ಚಂದ್ರಿಕಾ ಟಂಡನ್ ರವರಿಗೆ ಪ್ರಧಾನಮಂತ್ರಿಯಿಂದ ಅಭಿನಂದನೆ
ತ್ರಿವೇಣಿ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿ ಪಡೆದ ಸಂಗೀತಗಾರ್ತಿ ಚಂದ್ರಿಕಾ ಟಂಡನ್ ಅವರನ್ನು ಪ್ರಧಾನಮಂತ್ರಿಯವರು ಇಂದು ಅಭಿನಂದಿಸಿದ್ದಾರೆ. ಭಾರತೀಯ ಸಂಸ್ಕೃತಿಯ ಬಗ್ಗೆ ಅವರಿಗಿರುವ ಉತ್ಸಾಹ ಹಾಗೂ ಉದ್ಯಮಿಯಾಗಿ, ಲೋಕೋಪಕಾರಿ ಮತ್ತು ಸಂಗೀತಗಾರರಾಗಿ ಚಂದ್ರಿಕಾ ಟಂಡನ್ ಅವರ ಸಾಧನೆಗಳನ್ನು ಪ್ರಧಾನಿಯವರು ಶ್ಲಾಘಿಸಿದ್ದಾರೆ. Xನಲ್ಲಿ ಪೋಸ್ಟ್ ಮಾಡಿ, ಪ್ರಧಾನಿಯವರು: “ತ್ರಿವೇಣಿ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿ ಗೆದ್ದ @chandrikatandon ಅವರಿಗೆ ಅಭಿನಂದನೆಗಳು. ಉದ್ಯಮಿಯಾಗಿ, ಲೋಕೋಪಕಾರಿಯಾಗಿ ಮತ್ತು ಸಂಗೀತಗಾರರಾಗಿ ಅವರ ಸಾಧನೆಗಳ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ! …
Read More »ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ ಜಯಂತಿ ಹಿನ್ನೆಲೆಯಲ್ಲಿ ಗೌರವ ಸಮರ್ಪಿಸಿದ ಪ್ರಧಾನಮಂತ್ರಿ
ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ಸಮರ್ಪಣೆ ಮಾಡಿದರು. ಈ ಸಂಬಂಧ ಪ್ರಧಾನಮಂತ್ರಿಗಳು ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿದ್ದು: “ಭಾರತ ಮಾತೆಯ ಶ್ರಮಜೀವಿ ಸುಪುತ್ರ ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ ಜಯಂತಿ ಸಂದರ್ಭದಲ್ಲಿ ದೇಶದ ಕೋಟಿ ಕೋಟಿ ಜನರ ಪರವಾಗಿ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಸ್ವಾತಂತ್ರ್ಯ ಚಳವಳಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದ ಈ ಮಹಾನ್ ನಾಯಕ ವಿದೇಶಿ …
Read More »ಭುವನೇಶ್ವರದಲ್ಲಿ ‘ಉತ್ಕರ್ಷ್ ಒಡಿಶಾ- ಮೇಕ್ ಇನ್ ಒಡಿಶಾ ಸಮಾವೇಶ- 2025’ ಅನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಡಿಶಾದ ಭುವನೇಶ್ವರದಲ್ಲಿ “ಉತ್ಕರ್ಷ್ ಒಡಿಶಾ – ಮೇಕ್ ಇನ್ ಒಡಿಶಾ ಸಮಾವೇಶ- 2025” ಹಾಗೂ ಮೇಕ್ ಇನ್ ಒಡಿಶಾ ಪ್ರದರ್ಶನ ಮೇಳವನ್ನು ಉದ್ಘಾಟಿಸಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು, “2025ರ ಜನವರಿ ತಿಂಗಳಲ್ಲೇ ಒಡಿಶಾಗೆ ಇದು ತಮ್ಮ ಎರಡನೇ ಭೇಟಿಯಾಗಿದೆʼʼ ಎಂದು ಹೇಳುವ ಮೂಲಕ ʼಪ್ರವಾಸಿ ಭಾರತೀಯ ದಿವಸ್ 2025ʼ ಕಾರ್ಯಕ್ರಮವನ್ನು ಉದ್ಘಾಟಿಸಲು ತಾವು ಇದೇ ತಿಂಗಳು ಭೇಟಿ …
Read More »ಗಣರಾಜ್ಯೋತ್ಸವದಂದು ಎಲ್ಲರಿಗೂ ಶುಭ ಕೋರಿದ ಪ್ರಧಾನಮಂತ್ರಿ
ಗಣರಾಜ್ಯೋತ್ಸವದ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ನಾವು ಗಣರಾಜ್ಯವಾಗಿ 75 ಅದ್ಭುತ ವರ್ಷಗಳನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು. ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪ್ರತ್ಯೇಕ ಪೋಸ್ಟ್ ಗಳಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ: “ಗಣರಾಜ್ಯೋತ್ಸವದ ಶುಭಾಶಯಗಳು. ಇಂದು, ನಾವು ಗಣರಾಜ್ಯದ 75 ಅದ್ಭುತ ವರ್ಷಗಳನ್ನು ಆಚರಿಸುತ್ತೇವೆ. ನಮ್ಮ ಸಂವಿಧಾನವನ್ನು ರಚಿಸಿದ ಮತ್ತು ನಮ್ಮ ಪ್ರಯಾಣವು ಪ್ರಜಾಪ್ರಭುತ್ವ, ಘನತೆ ಮತ್ತು ಏಕತೆಯಲ್ಲಿ ಬೇರೂರಿದೆ …
Read More »ಪ್ರಧಾನಮಂತ್ರಿ ಗತಿಶಕ್ತಿ ನೇತೃತ್ವದ ನೆಟ್ ವರ್ಕ್ ಯೋಜನಾ ಗುಂಪಿನ 86ನೇ ಸಭೆ ಬಹು ಮಾದರಿ ಸಂಪರ್ಕಕ್ಕಾಗಿ ನಾಲ್ಕು ರೈಲು ಮತ್ತು ರಸ್ತೆ ಯೋಜನೆಗಳನ್ನು ಮೌಲ್ಯಮಾಪನ ಮಾಡಿತು
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಜಂಟಿ ಕಾರ್ಯದರ್ಶಿ ಶ್ರೀ ಇ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ನೆಟ್ ವರ್ಕ್ ಯೋಜನಾ ಗುಂಪಿನ (ಎನ್ ಪಿ ಜಿ) 86ನೇ ಸಭೆ, ಪಿಎಂ ಗತಿಶಕ್ತಿಯ ತತ್ವಗಳಿಗೆ ಅನುಗುಣವಾಗಿ ನಾಲ್ಕು ಯೋಜನೆಗಳನ್ನು (2 ರೈಲ್ವೆ ಮತ್ತು 2 ಹೆದ್ದಾರಿ ಅಭಿವೃದ್ಧಿ ಯೋಜನೆಗಳು) ಮೌಲ್ಯಮಾಪನ ಮಾಡಿತು. ರಸ್ತೆ ಮತ್ತು ರೈಲು ವಲಯಗಳಲ್ಲಿನ ಮೂಲಸೌಕರ್ಯ ಯೋಜನೆಗಳನ್ನು ಮೌಲ್ಯಮಾಪನ ಮಾಡಲು 2025ರ ಜನವರಿ 24 …
Read More »ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎನ್ ಸಿ ಸಿ ಕೆಡೆಟ್ ಗಳು, ಎನ್ ಎಸ್ ಎಸ್ ಸ್ವಯಂಸೇವಕರು, ಬುಡಕಟ್ಟು ಅತಿಥಿಗಳು ಮತ್ತು ಸ್ತಬ್ಧಚಿತ್ರ ಕಲಾವಿದರೊಂದಿಗೆ ಸಂವಾದ ನಡೆಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ (2025ರ ಜನವರಿ 24) ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಮುಂಬರುವ ಗಣರಾಜ್ಯೋತ್ಸವದ ಮೆರವಣಿಗೆಯ ಭಾಗವಾಗಲಿರುವ ಎನ್ ಸಿ ಸಿ ಕೆಡೆಟ್ ಗಳು, ಎನ್ ಎಸ್ ಎಸ್ ಸ್ವಯಂಸೇವಕರು, ಬುಡಕಟ್ಟು ಅತಿಥಿಗಳು ಮತ್ತು ಸ್ತಬ್ಧಚಿತ್ರ ಕಲಾವಿದರೊಂದಿಗೆ ಸಂವಾದ ನಡೆಸಿದರು. ಸಂವಾದದ ಸಮಯದಲ್ಲಿ, ಅನೇಕ ಭಾಗವಹಿಸುವವರು ಪ್ರಧಾನಿಯನ್ನು ವೈಯಕ್ತಿಕವಾಗಿ ಭೇಟಿಯಾದ ಸಂತಸವನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರಧಾನಮಂತ್ರಿ “ಇದು ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯನ್ನು ಪ್ರದರ್ಶಿಸುತ್ತದೆ” …
Read More »ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಯ ಇಂಗ್ಲಿಷ್ ಅವತರಣಿಕೆ
ಗೌರವಾನ್ವಿತ ಅಧ್ಯಕ್ಷರು ಮತ್ತು ನನ್ನ ಸಹೋದರ ಪ್ರಬೋವೊ ಸುಬಿಯಾಂಟೊ, ಎರಡೂ ದೇಶಗಳ ಪ್ರತಿನಿಧಿಗಳು, ಮಾಧ್ಯಮದ ಸ್ನೇಹಿತರೇ, ನಮಸ್ಕಾರ! ಭಾರತದ ಮೊದಲ ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ನಮ್ಮ ಮುಖ್ಯ ಅತಿಥಿಯಾಗಿತ್ತು. ಮತ್ತು ನಾವು ನಮ್ಮ 75 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಮತ್ತೊಮ್ಮೆ, ಇಂಡೋನೇಷ್ಯಾ ಈ ಮಹತ್ವದ ಸಂದರ್ಭದ ಭಾಗವಾಗಲು ಗೌರವಯುತವಾಗಿ ಒಪ್ಪಿಕೊಂಡಿದೆ ಎಂಬುದು ನಮಗೆ ಬಹಳ ಹೆಮ್ಮೆಯ ವಿಷಯವಾಗಿದೆ. ಈ ಸಂದರ್ಭದಲ್ಲಿ ನಾನು ಅಧ್ಯಕ್ಷ ಪ್ರಬೋವೊ ಅವರನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಸ್ನೇಹಿತರೇ, 2018ರಲ್ಲಿ ನಾನು ಇಂಡೋನೇಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ನಾವು ನಮ್ಮ ಪಾಲುದಾರಿಕೆಯನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯತ್ತ ಕೊಂಡೊಯ್ದಿದ್ದೇವೆ. ಇಂದು, ನಾವು ಅಧ್ಯಕ್ಷ ಪ್ರಬೋವೊ ಅವರೊಂದಿಗೆ ಪರಸ್ಪರ ಸಹಕಾರದ ವಿವಿಧ ಅಂಶಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ನಮ್ಮ ಸಹಕಾರವನ್ನು ಬಲಪಡಿಸಲು, ರಕ್ಷಣಾ ಉತ್ಪಾದನೆ ಮತ್ತು ಪೂರೈಕೆ ಸರಪಳಿ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ನಾವು ನಿರ್ಧರಿಸಿದ್ದೇವೆ. ನಾವು ಕಡಲ ಭದ್ರತೆ, ಸೈಬರ್ ಭದ್ರತೆ, ಭಯೋತ್ಪಾದನೆ ನಿಗ್ರಹ ಮತ್ತು ಮೂಲಭೂತವಾದ ನಿಗ್ರಹದಲ್ಲಿ ಸಹಕಾರಕ್ಕೆ ಒತ್ತು ನೀಡಿದ್ದೇವೆ. ಕಡಲ ಸುರಕ್ಷತೆ ಮತ್ತು ಭದ್ರತೆ ಕುರಿತ ಇಂದು ಅಂಕಿತ ಹಾಕಲಾದ ಒಪ್ಪಂದವು ಅಪರಾಧ ತಡೆ, ಶೋಧ ಮತ್ತು ಪಾರುಗಾಣಿಕಾ/ಪರಿಹಾರ-ರಕ್ಷಣಾ ಕಾರ್ಯಾಚರಣೆ ಹಾಗು ಸಾಮರ್ಥ್ಯ ವರ್ಧನೆ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಬಲಪಡಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ದ್ವಿಪಕ್ಷೀಯ ವ್ಯಾಪಾರವು ವೇಗವಾಗಿ ಬೆಳೆದಿದೆ ಮತ್ತು ಕಳೆದ ವರ್ಷ ಇದು 30 ಬಿಲಿಯನ್ ಡಾಲರ್ ದಾಟಿದೆ. ಇದನ್ನು ಇನ್ನೂ ಒಂದು ಹೆಜ್ಜೆ ಮುಂದೆ ಕೊಂಡೊಯ್ಯಲು, ಮಾರುಕಟ್ಟೆ ಪ್ರವೇಶ ಮತ್ತು ವ್ಯಾಪಾರ ಬುಟ್ಟಿಯನ್ನು ವೈವಿಧ್ಯಮಯಗೊಳಿಸುವ ಬಗ್ಗೆಯೂ ನಾವು ಚರ್ಚೆ ನಡೆಸಿದ್ದೇವೆ. ಈ ಪ್ರಯತ್ನಗಳಲ್ಲಿ ಖಾಸಗಿ ವಲಯವೂ ಸಮಾನ ಪಾಲುದಾರನಾಗಿದೆ. ಇಂದು ನಡೆದ ಸಿಇಒ ಫೋರಂ ಸಭೆ ಮತ್ತು ಖಾಸಗಿ ವಲಯದಲ್ಲಿ ಅಂತಿಮಗೊಳಿಸಲಾದ ಒಪ್ಪಂದಗಳನ್ನು ನಾವು ಸ್ವಾಗತಿಸುತ್ತೇವೆ. ಫಿನ್ ಟೆಕ್, ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾವು ನಿರ್ಧರಿಸಿದ್ದೇವೆ. ಆರೋಗ್ಯ ಮತ್ತು ಆಹಾರ ಭದ್ರತೆ ಕ್ಷೇತ್ರಗಳಲ್ಲಿ, ಭಾರತವು ಮಧ್ಯಾಹ್ನದ ಊಟ ಯೋಜನೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಕಲಿತದ್ದನ್ನು ಮತ್ತು ಅನುಭವವನ್ನು ಇಂಡೋನೇಷ್ಯಾದೊಂದಿಗೆ ಹಂಚಿಕೊಳ್ಳುತ್ತಿದೆ. ಇಂಧನ, ನಿರ್ಣಾಯಕ ಖನಿಜಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಸ್ಟೆಮ್ ಶಿಕ್ಷಣ ಕ್ಷೇತ್ರಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಎರಡೂ ದೇಶಗಳ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಜಂಟಿ ಸಮರಾಭ್ಯಾಸ ನಡೆಸಲು ಒಗ್ಗೂಡಬೇಕು. ಸ್ನೇಹಿತರೇ, ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧವು ಸಾವಿರಾರು ವರ್ಷಗಳಷ್ಟು ಹಳೆಯದು. ರಾಮಾಯಣ ಮತ್ತು ಮಹಾಭಾರತದಿಂದ ಸ್ಫೂರ್ತಿ ಪಡೆದ ಕಥೆಗಳು ಮತ್ತು ‘ಬಲಿ ಜಾತ್ರೆ’ ನಮ್ಮ ಎರಡು ಮಹಾನ್ ರಾಷ್ಟ್ರಗಳ ನಡುವಿನ ಹಳೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳಿಗೆ ಜೀವಂತ ಸಾಕ್ಷಿಗಳಾಗಿವೆ. ಬೌದ್ಧ ಬೊರೊಬುದೂರ್ ದೇವಾಲಯದ ನಂತರ, ಭಾರತವು ಈಗ ಪ್ರಂಬನನ್ ಹಿಂದೂ ದೇವಾಲಯದ ಸಂರಕ್ಷಣಾ ಪ್ರಯತ್ನಗಳಿಗೆ ಕೊಡುಗೆ ನೀಡಲಿದೆ ಎಂಬುದು ನನಗೆ ತುಂಬಾ ಸಂತೋಷದ ಸಂಗತಿಯಾಗಿದೆ. …
Read More »ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಇಂದು, ಹೆಣ್ಣು ಮಗುವನ್ನು ಸಬಲೀಕರಣಗೊಳಿಸಿ, ಆಕೆಗೆ ವ್ಯಾಪಕವಾದ ಅವಕಾಶಗಳನ್ನು ನೀಡುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ: ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಇಂದು, ಹೆಣ್ಣು ಮಗುವನ್ನು ಸಬಲೀಕರಣಗೊಳಿಸಿ, ಆಕೆಗೆ ವಿಸ್ತೃತ ಶ್ರೇಣಿಯ ಅವಕಾಶಗಳನ್ನು ನೀಡುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. Xನ ಒಂದು ಥ್ರೆಡ್ ಪೋಸ್ಟ್ ನಲ್ಲಿ ಶ್ರೀ ಮೋದಿಯವರು: “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಇಂದು, ಹೆಣ್ಣು ಮಗುವನ್ನು ಸಬಲೀಕರಣಗೊಳಿಸಿ, ಆಕೆಗೆ ವ್ಯಾಪಕವಾದ ಅವಕಾಶಗಳನ್ನು ನೀಡುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳ ಸಾಧನೆಗಳ ಬಗ್ಗೆ ಭಾರತ …
Read More »ಐರ್ಲೆಂಡ್ ಪ್ರಧಾನಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಶ್ರೀ ಮೈಕೆಲ್ ಮಾರ್ಟಿನ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐರ್ಲೆಂಡ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಶ್ರೀ ಮೈಕೆಲ್ ಮಾರ್ಟಿನ್ ಅವರನ್ನು ಅಭಿನಂದಿಸಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ. “ಐರ್ಲೆಂಡ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ @MichealMartinTD ಅವರಿಗೆ ಅಭಿನಂದನೆಗಳು. ಹಂಚಿಕೆಯ ಮೌಲ್ಯಗಳ ಭದ್ರ ಬುನಾದಿ ಮತ್ತು ಜನರ ನಡುವಿನ ಆಳವಾದ ಸಂಪರ್ಕವನ್ನು ಆಧರಿಸಿದ ನಮ್ಮ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಒಗ್ಗೂಡಿ ಕೆಲಸ …
Read More »
Matribhumi Samachar Kannad