ಪರಿಚಯ ವೇವ್ಸ್ 2025 “ರೀಲ್ ಮೇಕಿಂಗ್” ಚಾಲೆಂಜ್ ಒಂದು ಅನನ್ಯ ಸ್ಪರ್ಧೆಯಾಗಿದ್ದು, ಇದು ರಚನೆಕಾರರು ಮತ್ತು ಉತ್ಸಾಹಿಗಳಿಗೆ ಮೆಟಾ ಉಪಕರಣಗಳನ್ನು ಬಳಸಿಕೊಂಡು 30-90 ಸೆಕೆಂಡುಗಳಲ್ಲಿ ಫಿಲ್ಮ್ ಫಾರ್ಮ್ಯಾಟ್ ಮೂಲಕ ತಮ್ಮ ಕಥೆ ಹೇಳುವ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಭಾಗಿತ್ವದಲ್ಲಿ ಭಾರತದ ಇಂಟೆರ್ ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಯೋಜಿಸಿರುವ ಈ ಸವಾಲಿಗೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫೆಬ್ರವರಿ 5, 2025 ರವರೆಗೆ ಭಾರತ …
Read More »ವೇವ್ಸ್ 2025ರಲ್ಲಿ ನಡೆಯುವ ಭಾರತದಲ್ಲಿ ಸೃಜನಶೀಲ ಸವಾಲು ಆವೃತ್ತಿ – 1ರಲ್ಲಿ ಶಿಕ್ಷಣವು ಗೇಮಿಂಗ್ ಅನ್ನು ಎದುರುಗೊಳ್ಳಲಿದೆ
ನಿಮ್ಮ ನಗರದ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್.ಡಿ.ಜಿ) ಪ್ರಗತಿಯ ಬಗ್ಗೆ ನಿಮಗೆ ಆಳವಾದ ಜ್ಞಾನವಿದ್ದರೆ, ರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಲ್ಪಡುವ ಅವಕಾಶ ಇಲ್ಲಿದೆ. ವಿಶ್ವ ದೃಶ್ಯ ಶ್ರವಣ ಮತ್ತು ಮನೋರಂಜನಾ ಶೃಂಗಸಭೆ (ವೇವ್ಸ್) 2025 ತಮ್ಮ ನಗರದ ಸುಸ್ಥಿರತೆಯ ಪ್ರಯತ್ನಗಳು, ಸವಾಲುಗಳು ಮತ್ತು ಸಾಧನೆಗಳನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಗಳಿಗೆ ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ‘ಸಿಟಿ ಕ್ವೆಸ್ಟ್: ಶೇಡ್ಸ್ ಆಫ್ ಭಾರತ್’ ಎಂಬ ನವೀನ ಶೈಕ್ಷಣಿಕ ಆಟವು ವೇವ್ಸ್ 2025ರ ಅಡಿಯಲ್ಲಿ ನಡೆಯುತ್ತಿರುವ ‘ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್’ನ ಪ್ರಮುಖ ಅಂಶವಾಗಿದೆ. ಈ ಆಕರ್ಷಕ ಆಟವನ್ನು ಸುಸ್ಥಿರ ಅಭಿವೃದ್ಧಿ ಗುರಿಗಳ(ಎಸ್.ಡಿ.ಗಳು)ನ್ನು ಗುರಿಯಾಗಿಸುವ ಮೂಲಕ ನಗರ ಅಭಿವೃದ್ಧಿಯ ಮಾಪನಗಳನ್ನು ಆಟ ಆಡುವ ಮೂಲಕ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಯುವಕರಿಗೆ ಶಿಕ್ಷಣ ನೀಡಲು ಮತ್ತು ಪ್ರೇರೇಪಿಸಲು ವಿನ್ಯಾಸಗೊಳಿಸಲಾಗಿದೆ. ಇದು ಬಾಲ್ಯದ ಟ್ರಂಪ್ ಕಾರ್ಡ್ ಆಟದ ಸಂತೋಷವನ್ನು ಮೆಲುಕು ಹಾಕುವಾಗ ದೇಶಾದ್ಯಂತ 56 ನಗರಗಳ ಸಾಮರ್ಥ್ಯ ಮತ್ತು ಸವಾಲುಗಳನ್ನು ಸಹ ಪರಿಶೋಧಿಸುತ್ತದೆ. ಈ ವೇದಿಕೆಯು ಸುಸ್ಥಿರ ಭವಿಷ್ಯದತ್ತ ಗಮನಾರ್ಹ ದಾಪುಗಾಲು ಹಾಕುತ್ತಿರುವ ನಗರಗಳನ್ನು ಪ್ರಮುಖವಾಗಿ ಗುರುತಿಸಲು ಸ್ಥಳ ಒದಗಿಸುತ್ತದೆ. ನಗರ ಸುಸ್ಥಿರತೆಯ ಚಾಂಪಿಯನ್ ಆಗಿ ಎದ್ದು ಕಾಣಿರಿ ಮತ್ತು ನಗರದ ಎಸ್.ಡಿ.ಜಿ ಪ್ರಯಾಣದ ಬಗ್ಗೆ ನಿಮ್ಮ ಜ್ಞಾನವನ್ನು ಪ್ರದರ್ಶಿಸಲು ಅವಕಾಶವನ್ನು ಪಡೆಯಿರಿ, ಮೇ 1-4, 2025 ರಂದು ಮುಂಬೈನಲ್ಲಿ ನಡೆಯುವ ವೇವ್ಸ್ 2025 ರಲ್ಲಿ ವಿಜೇತರನ್ನು ಸನ್ಮಾನಿಸಲಾಗುತ್ತದೆ. ಆಟದ ಕುರಿತು ಸಿಟಿ ಕ್ವೆಸ್ಟ್ ಆಟವು ಸಿಂಗಲ್-ಪ್ಲೇಯರ್ ಸ್ವರೂಪದಲ್ಲಿ ತೊಡಗಿಸಿಕೊಳ್ಳುತ್ತದೆ, ಅಲ್ಲಿ ಆಟಗಾರರು ಸಿಟಿ ಕಾರ್ಡ್‌ಗಳ ಡೆಕ್ ಬಳಸಿ ಕಂಪ್ಯೂಟರ್ ಎದುರಾಳಿಯ ವಿರುದ್ಧ ಸ್ಪರ್ಧಿಸುತ್ತಾರೆ. ಪ್ರತಿ ಕಾರ್ಡ್ ಆರು ನಿಯತಾಂಕಗಳನ್ನು ಒಳಗೊಂಡಿರುತ್ತದೆ, ಇದು ಆಟಗಾರರಿಗೆ ಹಸಿವು ಸೂಚ್ಯಂಕ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ ಮತ್ತು ಲಿಂಗ ಸಮಾನತೆಯಂತಹ ವಿವಿಧ ಅಂಕಿಅಂಶಗಳ ಆಧಾರದ ಮೇಲೆ ನಗರಗಳನ್ನು ಹೋಲಿಸಲು ಅನುವು ಮಾಡಿಕೊಡುತ್ತದೆ. ಇದು 15 ಸುಸ್ಥಿರ ಅಭಿವೃದ್ಧಿ ಗುರಿಗಳ ಜಾಡು ಪತ್ತೆ ಮಾಡುತ್ತದೆ ಮತ್ತು ನೀತಿ ಆಯೋಗದ ನಗರ ಸೂಚ್ಯಂಕ (2021) ಬಳಸಿಕೊಂಡು 56 ನಗರಗಳಲ್ಲಿ ಅಗ್ರ ಶ್ರೆಯಾಂಕದ 6 ಎಸ್.ಡಿ.ಜಿಗಳನ್ನು ಬಳಸುತ್ತದೆ. ಸಂವಾದಾತ್ಮಕ ಆಟದ ಮೂಲಕ, ಇದು 56 ಭಾರತೀಯ ನಗರಗಳ ಅಭಿವೃದ್ಧಿ ಸವಾಲುಗಳು ಮತ್ತು ಸಾಧನೆಗಳ ಬಗ್ಗೆ ಆಟಗಾರರಿಗೆ ಶಿಕ್ಷಣ ನೀಡುತ್ತದೆ, ಸುಸ್ಥಿರ ಅಭ್ಯಾಸಗಳ ಪ್ರಭಾವವನ್ನು ಒತ್ತಿ ಹೇಳುತ್ತದೆ. ಸಂವಾದಾತ್ಮಕವಾಗಿ ಆಟ ಆಡಲು ಅವಕಾಶ ನೀಡಲಿದ್ದು, ಇದು ಆಟಗಾರರಿಗೆ ಶಿಕ್ಷಣ ನೀಡುತ್ತದೆ. ಆಟಗಾರರು ಸಿಟಿ ಕ್ವೆಸ್ಟ್ ಮೂಲಕ ಪ್ರತಿಯೊಂದು ನಗರದ ಗುಣಲಕ್ಷಣಗಳನ್ನು ಅನ್ವೇಷಿಸುವಾಗ, …
Read More »ಭಾರತ ಮತ್ತು ಇತರ 20 ದೇಶಗಳ ಭಾಗವಹಿಸುವಿಕೆಯೊಂದಿಗೆ ವೇವ್ಸ್ 2025 “ರೀಲ್ ಮೇಕಿಂಗ್”ಸವಾಲಿಗಾಗಿ 3,300ಕ್ಕೂ ಹೆಚ್ಚು ನಮೂದುಗಳನ್ನು ಸ್ವೀಕರಿಸಲಾಗಿದೆ
ವರ್ಲ್ಡ್ ಆಡಿಯೋ ವಿಷುಯಲ್ & ಎಂಟರ್‌ಟೈನ್‌ಮೆಂಟ್ ಶೃಂಗಸಭೆ (ವೇವ್ಸ್) 2025ರಲ್ಲಿ “ರೀಲ್ ಮೇಕಿಂಗ್” ಚಾಲೆಂಜ್ ಭಾರತ ಮತ್ತು 20 ದೇಶಗಳಿಂದ 3,379 ನೋಂದಣಿಗಳೊಂದಿಗೆ ಅಗಾಧ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಕ್ರಿಯೇಟ್ ಇನ್ ಇಂಡಿಯಾ ವೇವ್ಸ್ 2025ರ ಅಡಿಯಲ್ಲಿ ಪ್ರಮುಖ ಉಪಕ್ರಮವಾಗಿ ಪ್ರಾರಂಭಿಸಲಾದ ಸ್ಪರ್ಧೆಯು ಮಾಧ್ಯಮ ಮತ್ತು ಮನರಂಜನೆಗಾಗಿ ಜಾಗತಿಕ ಕೇಂದ್ರವಾಗಿ ಭಾರತದ ಬೆಳೆಯುತ್ತಿರುವ ಪ್ರಭಾವವನ್ನು ಎತ್ತಿ ತೋರಿಸುತ್ತದೆ ಮತ್ತು ದೇಶದ ವೇಗವಾಗಿ ವಿಸ್ತರಿಸುತ್ತಿರುವ ಡಿಜಿಟಲ್ ಕ್ರಿಯೇಟರ್ ಆರ್ಥಿಕತೆಯನ್ನು ಪ್ರತಿಬಿಂಬಿಸುತ್ತದೆ. ಇದು ಭಾರತ ಸರ್ಕಾರದ “ಕ್ರಿಯೇಟ್ ಇನ್ ಇಂಡಿಯಾ” …
Read More »ನೇರ ಪ್ರಸಾರಗಳಲ್ಲಿನ ತಪ್ಪು ಮಾಹಿತಿಯನ್ನು ನಿಭಾಯಿಸಲು ಎಐ-ಚಾಲಿತ ಪರಿಹಾರಗಳನ್ನು ಅನಾವರಣಗೊಳಿಸಲಿರುವ ವೇವ್ಸ್- 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಸಹಯೋಗದೊಂದಿಗೆ ಟ್ರೂತ್ ಟೆಲ್ ಹ್ಯಾಕಥಾನ್ ಚಾಲೆಂಜ್ ಅನ್ನು ಘೋಷಿಸಿದೆ. ಈ ಹ್ಯಾಕಥಾನ್ ಮೊದಲ ವರ್ಲ್ಡ್ ಆಡಿಯೋ ವಿಷುಯಲ್ ಮತ್ತು ಎಂಟರ್‌ಟೈನ್‌ಮೆಂಟ್ ಶೃಂಗಸಭೆ (WAVES) 2025 ರ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ (ಸಿಐಸಿ) ಸೀಸನ್ 1 ರ ಭಾಗವಾಗಿದೆ. ಈ ಸವಾಲು ನೇರ ಪ್ರಸಾರದಲ್ಲಿನ ತಪ್ಪು ಮಾಹಿತಿಯನ್ನು ನಿಭಾಯಿಸಲು ಎಐ- ಚಾಲಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು …
Read More »
Matribhumi Samachar Kannad