रविवार, नवंबर 24 2024 | 11:34:53 AM
Breaking News
Home / Choose Language / kannada / ಕರ್ಟೈನ್ ರೈಸರ್ – ಐ ಎಫ್‌ ಎಫ್‌ ಐ 2024 ಕುರಿತ ಮಾಧ್ಯಮ ಪ್ರಕಟಣೆ

ಕರ್ಟೈನ್ ರೈಸರ್ – ಐ ಎಫ್‌ ಎಫ್‌ ಐ 2024 ಕುರಿತ ಮಾಧ್ಯಮ ಪ್ರಕಟಣೆ

Follow us on:

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ ಎಫ್‌ ಎಫ್‌ ಐ) 55ನೇ ಆವೃತ್ತಿಯು 2024ರ ನವೆಂಬರ್ 20 ರಿಂದ 28 ರವರೆಗೆ ಸುಂದರ ರಾಜ್ಯವಾದ ಗೋವಾದಲ್ಲಿ ನಡೆಯಲಿದೆ. ಈ ವರ್ಷದ ಉತ್ಸವವು ವೈವಿಧ್ಯಮಯ ನಿರೂಪಣೆಗಳು, ನವೀನ ಧ್ವನಿಗಳು ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವ ಸಿನಿಮೀಯ ಸಂಭ್ರಮಾಚರಣೆಯನ್ನು ಖಾತ್ರಿಪಡಿಸುತ್ತದೆ.

ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಗೋವಾದಲ್ಲಿ ಕರ್ಟನ್ ರೈಸರ್ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಗೋವಾ 55 ನೇ ಆವೃತ್ತಿಯ ಐ ಎಫ್‌ ಎಫ್‌ ಐ ಅನ್ನು ಆಯೋಜಿಸಲು ಸಿದ್ಧವಾಗಿದೆ ಮತ್ತು ಈ ಮಹಾನ್‌ ಸಿನಿಮೋತ್ಸವಕ್ಕೆ ಪ್ರತಿನಿಧಿಗಳನ್ನು ಸ್ವಾಗತಿಸಲು ಸಿದ್ಧವಾಗಿದೆ. ಉತ್ಸವದಲ್ಲಿ 81 ದೇಶಗಳ 180 ಅಂತಾರಾಷ್ಟ್ರೀಯ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನೀಡಿದರು. ಎಲ್ಲಾ ಪ್ರತಿನಿಧಿಗಳಿಗೆ ಸ್ಥಳಗಳಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಉಚಿತ ಸಾರಿಗೆ ಸೌಲಭ್ಯವನ್ನು ಏರ್ಪಡಿಸಲಾಗುವುದು. ಸ್ಥಳೀಯ ಪ್ರತಿಭೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುವ 14 ಚಲನಚಿತ್ರಗಳನ್ನು ಪ್ರದರ್ಶಿಸುವ ಗೋವಾದ ಚಲನಚಿತ್ರಗಳ ವಿಶೇಷ ವಿಭಾಗವಿರುತ್ತದೆ ಎಂದು ಶ್ರೀ ಸಾವಂತ್ ಹೇಳಿದರು. ಐ ಎಫ್‌ ಎಫ್‌ ಐ ಪರೇಡ್ ಮಾರ್ಗದಲ್ಲಿ ‘ಸ್ಕೈ ಲ್ಯಾಂಟರ್ನ್’ (ಆಕಾಶ ಬುಟ್ಟಿ) ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ ಮತ್ತು ಭಾಗವಹಿಸುವವರಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ. ನವೆಂಬರ್ 22 ರಂದು ಇ ಎಸ್‌ ಜಿ ಕಚೇರಿಯಿಂದ ಕಲಾ ಅಕಾಡೆಮಿವರೆಗೆ ಐ ಎಫ್‌ ಎಫ್‌ ಐ ಪರೇಡ್ ಆಯೋಜಿಸಲಾಗಿದೆ ಎಂದು ಶ್ರೀ ಸಾವಂತ್ ತಿಳಿಸಿದರು.

ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಗೋವಾದ ಎಂಟರ್‌ಟೈನ್‌ಮೆಂಟ್ ಸೊಸೈಟಿಯ ಉಪಾಧ್ಯಕ್ಷೆ ದೇಲಿಯಾಲಾ ಲೋಬೋ, ಉತ್ಸವವನ್ನು ಪರಿಸರ ಸ್ನೇಹಿಯಾಗಿ ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೆ ಪ್ರವೇಶಿಸಲು ಸಾಧ್ಯವಾಗುವಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಎನ್‌ ಎಫ್‌ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪೃಥುಲ್ ಕುಮಾರ್ ಮಾತನಾಡಿ, ಈ ವರ್ಷ 6500 ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ ಕಳೆದ ವರ್ಷಕ್ಕಿಂತ 25 ಪ್ರತಿಶತದಷ್ಟು ಹೆಚ್ಚಳವಾಗಿದೆ. ಚಿತ್ರಪ್ರೇಮಿಗಳಿಗೆ ಉತ್ಸವವನ್ನು ಹೆಚ್ಚು ಲಭ್ಯಗೊಳಿಸಲು, ಈ ವರ್ಷ ಇನ್ನೂ 6 ಪರದೆಗಳು ಮತ್ತು ಶೇಕಡಾ 45 ರಷ್ಟು ಹೆಚ್ಚಿನ ಸ್ಕ್ರೀನಿಂಗ್ ಥಿಯೇಟರ್‌ ಗಳು ಲಭ್ಯವಾಗಲಿವೆ. ಚಿತ್ರೋತ್ಸವದಲ್ಲಿ ಚಿತ್ರರಂಗದ ಖ್ಯಾತನಾಮರು ಭಾಗವಹಿಸಲಿದ್ದಾರೆ ಎಂದು ಶ್ರೀ ಕುಮಾರ್ ಹೇಳಿದರು. ಜನರ ಭಾಗವಹಿಸುವಿಕೆ ಮತ್ತು ಒಟ್ಟಾರೆ ಅನುಭವದ ಗುಣಮಟ್ಟದ ದೃಷ್ಟಿಯಿಂದ ಈ ವರ್ಷ ಉತ್ಸವವು ಹೊಸ ಎತ್ತರವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ಎನ್‌ ಎಫ್‌ ಡಿ ಸಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಶ್ರೀ ಕುಮಾರ್ ತಿಳಿಸಿದರು. ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಅವರು ಉತ್ಸವದ ಸಿದ್ಧತೆಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯವರ ಸಮರ್ಥ ಮಾರ್ಗದರ್ಶನದಲ್ಲಿ ಸಂಘಟಿತ ಕ್ರಮ ಮತ್ತು ಸಮಯೋಚಿತವಾಗಿ ವಿವಿಧ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಎಲ್ಲಾ ಭಾಗೀದಾರರನ್ನು ಒಟ್ಟುಗೂಡಿಸಲು ಉತ್ಸವವು ಪ್ರಯತ್ನಿಸುತ್ತದೆ ಎಂದು ಶ್ರೀ ಕುಮಾರ್ ಹೇಳಿದರು.

ಚಲನಚಿತ್ರೋದ್ಯಮದ ವಿವಿಧ ಅಂಶಗಳ ಆಳವಾದ ತಿಳುವಳಿಕೆಯೊಂದಿಗೆ ಚಲನಚಿತ್ರ ವ್ಯವಹಾರದ ಎಲ್ಲಾ ಕ್ಷೇತ್ರಗಳಿಗೆ ಪತ್ರಕರ್ತರನ್ನು ಪರಿಚಯಿಸಲು ಮಾಧ್ಯಮ ಪ್ರವಾಸವನ್ನು ಆಯೋಜಿಸಲಾಗುವುದು ಎಂದು ಶ್ರೀ ಕುಮಾರ್ ತಿಳಿಸಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ವೃಂದಾ ದೇಸಾಯಿ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪಿಐಬಿ ಮಹಾನಿರ್ದೇಶಕರಾದ ಶ್ರೀಮತಿ ಸ್ಮಿತಾ ವತ್ಸ್ ಶರ್ಮಾ ಮತ್ತು ಪಿಐಬಿ ಮತ್ತು ಇ ಎಸ್‌ ಜಿ ಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಐ ಎಫ್‌ ಎಫ್‌ ಐ 2024ರ ಮುಖ್ಯಾಂಶಗಳನ್ನು ಮಾಧ್ಯಮಗಳಿಗೆ ವಿವರಿಸಲಾಯಿತು. ಅವು ಈ ಕೆಳಕಂಡಂತಿವೆ:

  • ಐ ಎಫ್‌ ಎಫ್‌ ಐ 2024 ಯುವ ಚಲನಚಿತ್ರ ನಿರ್ಮಾತೃಗಳ ಮೇಲೆ ಕೇಂದ್ರೀಕರಿಸಿದೆ ಮತ್ತು ಸಿ ಎಂ ಒ ಟಿ ವಿಭಾಗದಲ್ಲಿ ಕಳೆದ ವರ್ಷ ಸ್ವೀಕರಿಸಿದ 550 ಸಲ್ಲಿಕೆಗಳಿಗೆ ಹೋಲಿಸಿದರೆ ಈ ಬಾರಿ ದಾಖಲೆಯ 1032 ಸಲ್ಲಿಕೆಗಳನ್ನು ಸ್ವೀಕರಿಸಲಾಗಿದೆ.
  • ವಾರ್ತಾ ಮತ್ತು ಪ್ರಸಾರ ಸಚಿವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ, ಐ ಎಫ್‌ ಎಫ್‌ ಐ 2024 ಯುವ ಚಲನಚಿತ್ರ ನಿರ್ಮಾತೃಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. “ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ” ಉಪಕ್ರಮವನ್ನು 100 ಯುವ ಪ್ರತಿಭೆಗಳನ್ನು ಬೆಂಬಲಿಸಲು ವಿಸ್ತರಿಸಲಾಗಿದೆ (ಹಿಂದಿನ ಆವೃತ್ತಿಯಲ್ಲಿ 75 ಇತ್ತು), ದೇಶಾದ್ಯಂತದ ಯುವ ಚಲನಚಿತ್ರ ವಿದ್ಯಾರ್ಥಿಗಳನ್ನು ಭಾಗವಹಿಸಲು ಆಹ್ವಾನಿಸಲಾಗಿದೆ.
  • ಉದಯೋನ್ಮುಖ ಪ್ರತಿಭೆಗಳನ್ನು ಗೌರವಿಸಲು ಹೊಸ ಅತ್ಯುತ್ತಮ ಚೊಚ್ಚಲ ಭಾರತೀಯ ನಿರ್ದೇಶಕ ಪ್ರಶಸ್ತಿಯನ್ನು ಪರಿಚಯಿಸಲಾಗಿದೆ, ಕ್ಯುರೇಟೆಡ್ ಮಾಸ್ಟರ್‌ಕ್ಲಾಸ್‌ ಗಳು, ಪ್ಯಾನಲ್ ಚರ್ಚೆಗಳು ಮತ್ತು ಯುವ ರಚನೆಕಾರರಿಗಾಗಿ ವಿನ್ಯಾಸಗೊಳಿಸಲಾದ ಚಲನಚಿತ್ರ ಪ್ರದರ್ಶನಗಳು ಇರುತ್ತವೆ. ಹೆಚ್ಚುವರಿಯಾಗಿ, ಮನರಂಜನಾ ವಲಯ IFFiesta ಸಂಗೀತ, ನೃತ್ಯ ಮತ್ತು ಸಂವಾದಾತ್ಮಕ ಅನುಭವಗಳ ಮೂಲಕ ಯುವಜನರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
  • ಐ ಎಫ್‌ ಎಫ್‌ ಐ 2024 101 ದೇಶಗಳಿಂದ ದಾಖಲೆಯ 1,676 ಸಲ್ಲಿಕೆಗಳನ್ನು ಸ್ವೀಕರಿಸಿದೆ, ಇದು ಉತ್ಸವದ ಬೆಳೆಯುತ್ತಿರುವ ಅಂತಾರಾಷ್ಟ್ರೀಯ ಸ್ಥಾನಮಾನಕ್ಕೆ ಸಾಕ್ಷಿಯಾಗಿದೆ. ಐ ಎಫ್‌ ಎಫ್‌ ಐ 2024 16 ವಿಶ್ವ ಪ್ರೀಮಿಯರ್‌ ಗಳು, 3 ಅಂತಾರಾಷ್ಟ್ರೀಯ ಪ್ರೀಮಿಯರ್‌ ಗಳು, 43 ಏಷ್ಯನ್ ಪ್ರೀಮಿಯರ್‌ ಗಳು ಮತ್ತು 109 ಭಾರತೀಯ ಪ್ರೀಮಿಯರ್‌ ಗಳು ಸೇರಿದಂತೆ 81 ದೇಶಗಳಿಂದ 180+ ಅಂತಾರಾಷ್ಟ್ರೀಯ ಚಲನಚಿತ್ರಗಳನ್ನು ಪ್ರಸ್ತುತಪಡಿಸುತ್ತದೆ. ಜಾಗತಿಕ ಸರ್ಕ್ಯೂಟ್‌ ನಿಂದ ಪ್ರಸಿದ್ಧ ಮತ್ತು ಪ್ರಶಸ್ತಿ ವಿಜೇತ ಚಲನಚಿತ್ರಗಳ ಆಯ್ಕೆಯೊಂದಿಗೆ, ಈ ವರ್ಷದ ಉತ್ಸವವು ಪ್ರೇಕ್ಷಕರ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರಲು ಸಿದ್ಧವಾಗಿದೆ.
  • ಆಸ್ಟ್ರೇಲಿಯಾ ಫೋಕಸ್ ದೇಶವಾಗಿದ್ದು, ಮೀಸಲಾದ ಚಲನಚಿತ್ರ ಪ್ಯಾಕೇಜ್ ಅನ್ನು ಪ್ರದರ್ಶಿಸುತ್ತದೆ ಮತ್ತು ಸ್ಕ್ರೀನ್ ಆಸ್ಟ್ರೇಲಿಯಾ ಮತ್ತು ಎನ್‌ ಎಫ್‌ ಡಿ ಸಿ ನಡುವಿನ ತಿಳುವಳಿಕೆ ಒಪ್ಪಂದದ ಮೂಲಕ ಭಾರತದೊಂದಿಗೆ ಸಹಯೋಗವನ್ನು ಉತ್ತೇಜಿಸುತ್ತದೆ. ಈ ಉತ್ಸವವು ಮೈಕೆಲ್ ಗ್ರೇಸಿ ಅವರ ಆಸ್ಟ್ರೇಲಿಯನ್ ಚಿತ್ರ ಬೆಟರ್ ಮ್ಯಾನ್‌ ನೊಂದಿಗೆ ಆರಂಭವಾಗುತ್ತದೆ, ಇದು ಅಪ್ರತಿಮ ಬ್ರಿಟಿಷ್ ಪಾಪ್‌ಸ್ಟಾರ್ ರಾಬಿ ವಿಲಿಯಮ್ಸ್ ಅವರ ಜೀವನದ ನೋಟವನ್ನು ನೀಡುತ್ತದೆ.
  • ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಆಸ್ಟ್ರೇಲಿಯಾದ ಪ್ರಸಿದ್ಧ ಮತ್ತು ಪ್ರಶಸ್ತಿ ಪುರಸ್ಕೃತ ನಿರ್ದೇಶಕ ‘ಫಿಲಿಪ್ ನೋಯ್ಸ್’ ಅವರಿಗೆ ನೀಡಲಾಗುವುದು, ಅವರ ಅಸಾಧಾರಣ ಕಥಾಹಂದರ ಮತ್ತು ಸಸ್ಪೆನ್ಸ್, ಸಾಂಸ್ಕೃತಿಕವಾಗಿ ಪ್ರತಿಧ್ವನಿಸುವ ಚಲನಚಿತ್ರಗಳನ್ನು ನಿರ್ಮಿಸುವಲ್ಲಿನ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದೆ. ನೋಯ್ಸ್ ಅವರ ಚಿತ್ರಗಳ ಸರಣಿಯು ಪೇಟ್ರಿಯಾಟ್ ಗೇಮ್ಸ್, ಕ್ಲಿಯರ್ ಅಂಡ್ ಪ್ರೆಸೆಂಟ್ ಡೇಂಜರ್, ಸಾಲ್ಟ್, ದಿ ಸೇಂಟ್, ದಿ ಬೋನ್ ಕಲೆಕ್ಟರ್ ಮತ್ತು ಇನ್ನೂ ಅನೇಕ ಸಾಂಪ್ರದಾಯಿಕ ಚಲನಚಿತ್ರಗಳನ್ನು ಒಳಗೊಂಡಿದೆ. ಹ್ಯಾರಿಸನ್ ಫೋರ್ಡ್, ನಿಕೋಲ್ ಕಿಡ್ಮನ್, ಏಂಜಲೀನಾ ಜೋಲೀ, ಡೆನ್ಜೆಲ್ ವಾಷಿಂಗ್ಟನ್ ಮತ್ತು ಮೈಕೆಲ್ ಕೇನ್ ಅವರಂತಹ ಪ್ರಸಿದ್ಧ ನಟರೊಂದಿಗಿನ ಅವರ ಸಹಯೋಗವು ಸಿನಿಮಾದ ಮೇಲೆ ಅವರ ಪ್ರಭಾವವನ್ನು ಒತ್ತಿಹೇಳುತ್ತದೆ.
  • ಅಂತಾರಾಷ್ಟ್ರೀಯ ಸ್ಪರ್ಧೆಯ ವಿಭಾಗದಲ್ಲಿ 15 ಚಲನಚಿತ್ರಗಳು (12 ಅಂತಾರಾಷ್ಟ್ರೀಯ ಮತ್ತು 3 ಭಾರತೀಯ) ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ, ಗೋಲ್ಡನ್ ಪೀಕಾಕ್ ಮತ್ತು ರೂ 40 ಲಕ್ಷ ನಗದು ಬಹುಮಾನಕ್ಕಾಗಿ ಸ್ಪರ್ಧಿಸಲಿವೆ. ಅತ್ಯುತ್ತಮ ಚಲನಚಿತ್ರದ ಹೊರತಾಗಿ, ತೀರ್ಪುಗಾರರು ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ವಿಶೇಷ ತೀರ್ಪುಗಾರರ ಪ್ರಶಸ್ತಿ ವಿಭಾಗಗಳಲ್ಲಿ ವಿಜೇತರನ್ನು ನಿರ್ಧರಿಸುತ್ತಾರೆ.
  • ಅತ್ಯುತ್ತಮ ಚಲನಚಿತ್ರ ಚೊಚ್ಚಲ ನಿರ್ದೇಶಕ ಪ್ರಶಸ್ತಿ ವಿಭಾಗದಲ್ಲಿ, 5 ಅಂತಾರಾಷ್ಟ್ರೀಯ ಮತ್ತು 2 ಭಾರತೀಯ ಚಲನಚಿತ್ರಗಳು ಸಿಲ್ವರ್ ಪೀಕಾಕ್, 10 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಪ್ರಮಾಣಪತ್ರಕ್ಕಾಗಿ ಸ್ಪರ್ಧಿಸಲಿವೆ.
  • ಖ್ಯಾತ ಭಾರತೀಯ ಚಲನಚಿತ್ರ ನಿರ್ಮಾಪಕರಾದ ಶ್ರೀ ಅಶುತೋಷ್ ಗೋವಾರಿಕರ್ (ಅಧ್ಯಕ್ಷರು) ಅಂತಾರಾಷ್ಟ್ರೀಯ ತೀರ್ಪುಗಾರರ ಮುಖ್ಯಸ್ಥರಾಗಿರುತ್ತಾರೆ. ಪ್ರಸಿದ್ಧ ಸಿಂಗಾಪುರದ ಪ್ರಸಿದ್ದ ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕ ಆಂಥೋನಿ ಚೆನ್, ಗೌರವಾನ್ವಿತ ಯುಕೆ ನಿರ್ಮಾಪಕ ಎಲಿಜಬೆತ್ ಕಾರ್ಲ್ಸೆನ್, ಏಷ್ಯಾ ಮೂಲದ ಪ್ರಸಿದ್ಧ ನಿರ್ಮಾಪಕ ಫ್ರಾನ್ ಬೋರ್ಜಿಯಾ ಮತ್ತು ಹೆಸರಾಂತ ಆಸ್ಟ್ರೇಲಿಯಾದ ಚಲನಚಿತ್ರ ಸಂಕಲನಕಾರ ಜಿಲ್ ಬಿಲ್ಕಾಕ್ ಅವರನ್ನು ತೀರ್ಪುಗಾರ ಮಂಡಳಿಯು ಒಳಗೊಂಡಿದೆ.
  • ಭಾರತೀಯ ಪನೋರಮಾ ವಿಭಾಗವು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯನ್ನು ಪ್ರತಿನಿಧಿಸುವ 25 ಫೀಚರ್ ಮತ್ತು 20 ನಾನ್‌ ಫೀಚರ್‌ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ಈ ವಿಭಾಗವು ರಣದೀಪ್ ಹೂಡಾ ನಿರ್ದೇಶಿಸಿದ ಉದ್ಘಾಟನಾ ಫೀಚರ್ ಚಲನಚಿತ್ರ, ಸ್ವಾತಂತ್ರ್ಯ ವೀರ್ ಸಾವರ್ಕರ್ (ಹಿಂದಿ) ಮತ್ತು ಉದ್ಘಾಟನಾ ನಾನ್-ಫೀಚರ್ ಚಲನಚಿತ್ರ, ಘರ್ ಜೈಸಾ ಕುಚ್ (ಲಡಾಖಿ) ಒಳಗೊಂಡಿದೆ.
  • ಹೊಸ ಪ್ರಶಸ್ತಿ “ಅತ್ಯುತ್ತಮ ಭಾರತೀಯ ಚೊಚ್ಚಲ ನಿರ್ದೇಶಕ” ದೇಶಾದ್ಯಂತ ಯುವ ಚಲನಚಿತ್ರ ನಿರ್ಮಾಣ ಪ್ರತಿಭೆಯನ್ನು ಗುರುತಿಸಲು ಸ್ಥಾಪಿಸಲಾಗಿದೆ, ಇದು ‘ಯುವ ಚಲನಚಿತ್ರ ನಿರ್ಮಾತೃಗಳು’ ಮೇಲೆ ಕೇಂದ್ರೀಕರಿಸಿದ ಐ ಎಫ್‌ ಎಫ್‌ ನ ವಿಷಯದೊಂದಿಗೆ ಸಂಯೋಜಿಸಲ್ಪಟ್ಟಿದೆ. ಒಟ್ಟು 102 ಚಿತ್ರಗಳ ಸಲ್ಲಿಕೆಯಿಂದ 5 ಚಿತ್ರಗಳು ಈ ಪ್ರಶಸ್ತಿಗೆ ಸ್ಪರ್ಧಿಸಲಿವೆ. ಬಹುಮಾನವು ಪ್ರಮಾಣ ಪತ್ರ ಮತ್ತು 5 ಲಕ್ಷ ರೂ.ನಗದು ಹೊಂದಿದ್ದು ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
  • ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿಯು ಕಳೆದ ವರ್ಷದ 32 ಕ್ಕೆ ಹೋಲಿಸಿದರೆ ಈ ವರ್ಷ 46 ಸಲ್ಲಿಕೆಗಳನ್ನು ಸ್ವೀಕರಿಸಿದೆ. ವಿಜೇತ ಸರಣಿಗೆ ಪ್ರಶಸ್ತಿ ಮೊತ್ತವಾಗಿ 10 ಲಕ್ಷ ನಗದು ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು, ಅದನ್ನು ಸಮಾರೋಪ ಸಮಾರಂಭದಲ್ಲಿ ಪ್ರಕಟಿಸಲಾಗುವುದು.
  • ಶತಮಾನೋತ್ಸವ ಆಚರಣೆ: ಐ ಎಫ್‌ ಎಫ್‌ ಐ 2024 ಭಾರತೀಯ ಚಿತ್ರರಂಗದ ದಂತಕಥೆಗಳಾದ ರಾಜ್ ಕಪೂರ್, ಮೊಹಮ್ಮದ್ ರಫಿ, ತಪನ್ ಸಿನ್ಹಾ ಮತ್ತು ಅಕ್ಕಿನೇನಿ ನಾಗೇಶ್ವರ ರಾವ್ ಅವರಿಗೆ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳಲ್ಲಿ ವಿಶೇಷ ಧ್ವನಿ-ದೃಶ್ಯ ಪ್ರದರ್ಶನಗಳು, IFFiestaದ ತಲ್ಲೀನಗೊಳಿಸುವ ಪ್ರದರ್ಶನಗಳು ಮತ್ತು ಇಂಡಿಯಾ ಪೋಸ್ಟ್‌ನಿಂದ ಮೈ ಸ್ಟಾಂಪ್‌ ಸರಣಿಯ ಬಿಡುಗಡೆ ಇರುತ್ತದೆ. ಸರ್ಕಾರದ ರಾಷ್ಟ್ರೀಯ ಚಲನಚಿತ್ರ ಹೆರಿಟೇಜ್ ಮಿಷನ್ (NFHM) ಅಡಿಯಲ್ಲಿ ಎನ್‌ ಎಫ್‌ ಡಿ ಸಿ-ಎನ್‌ ಎಫ್‌ ಎ ಐ ನಿಂದ ಮರುಸ್ಥಾಪಿಸಲ್ಪಟ್ಟ ಈ ಪ್ರತಿ ದಿಗ್ಗಜರ ಶ್ರೇಷ್ಠ ಚಲನಚಿತ್ರವನ್ನು ಐ ಎಫ್‌ ಎಫ್‌ ಐ ನಲ್ಲಿ ಪ್ರದರ್ಶಿಸಲಾಗುತ್ತದೆ, ಇದರಲ್ಲಿ ರಾಜ್ ಕಪೂರ್ ಅವರ ಆವಾರಾ, ಅಕ್ಕಿನೇನಿ ನಾಗೇಶ್ವರ ರಾವ್ ಅವರ ದೇವದಾಸು (1953), ಮೊಹಮ್ಮದ್ ರಫಿ ಅವರ ಹಮ್ ದೋನೋ ಮತ್ತು ತಪನ್ ಸಿನ್ಹಾ ಅವರ ಹಾರ್ಮೋನಿಯಂ ಇರುತ್ತವೆ.
  • ನಾಲ್ಕು ಹೊಸ ಅಂತರಾಷ್ಟ್ರೀಯ ಪ್ರೋಗ್ರಾಮಿಂಗ್ ವಿಭಾಗಗಳು ರೈಸಿಂಗ್ ಸ್ಟಾರ್ಸ್ (ಉದಯೋನ್ಮುಖ ನಿರ್ದೇಶಕರನ್ನು ಆಚರಿಸುವುದು), ಮಿಷನ್ ಲೈಫ್ (ಪರಿಸರ ಪ್ರಜ್ಞೆಯ ಸಿನಿಮಾ), ಆಸ್ಟ್ರೇಲಿಯಾ: ಕಂಟ್ರಿ ಆಫ್ ಫೋಕಸ್ ಮತ್ತು ಟ್ರೀಟಿ ಕಂಟ್ರಿ ಪ್ಯಾಕೇಜ್, ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ ನಿಂದ ಸಂಗ್ರಹಿಸಲಾದ ಆಯ್ಕೆಗಳನ್ನು ಒಳಗೊಂಡಿವೆ.
  • ಐ ಎಫ್‌ ಎಫ್‌ ಐ 2024 ಮಹಿಳೆಯರಿಂದ ನಿರ್ದೇಶಿಸಲ್ಪಟ್ಟ 47 ಚಲನಚಿತ್ರಗಳು ಮತ್ತು ಯುವ ಮತ್ತು ಚೊಚ್ಚಲ ಚಲನಚಿತ್ರ ನಿರ್ಮಾತೃಗಳ 66 ಚಿತ್ರಗಳನ್ನು ಪ್ರದರ್ಶಿಸುತ್ತದೆ. ಇದು ಕಡಿಮೆ ಪ್ರಾತಿನಿಧಿಕ ಧ್ವನಿಗಳನ್ನು ವರ್ಧಿಸುವ ಉತ್ಸವದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವುಮೆನ್ ಇನ್ ಸಿನಿಮಾ ವಿಭಾಗವು ಉದಯೋನ್ಮುಖ ಪ್ರತಿಭೆಗಳು ಮತ್ತು ಮಹಿಳಾ ಚಲನಚಿತ್ರ ನಿರ್ಮಾಪಕರ ಮಹತ್ವದ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ.
  • ಐನಾಕ್ಸ್ ಮಡಗಾಂವ್‌ ನ 4 ಚಿತ್ರಮಂದಿರಗಳು ಮತ್ತು ಐನಾಕ್ಸ್ ಪೊಂಡಾದಲ್ಲಿ 2 ಚಿತ್ರಮಂದಿರಗಳು ಒಳಗೊಂಡಂತೆ 6 ಹೆಚ್ಚುವರಿ ಚಿತ್ರಮಂದಿರಗಳು ಪ್ರದರ್ಶನಕ್ಕಾಗಿ ಲಭ್ಯವಿರುತ್ತವೆ. ಉತ್ಸವದಲ್ಲಿ 5 ಸ್ಥಳಗಳಲ್ಲಿ 270 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ – ಐನಾಕ್ಸ್ ಪಣಜಿ(4), ಮ್ಯಾಕ್ವಿನೆಜ್ ಪ್ಯಾಲೇಸ್ (1), ಐನಾಕ್ಸ್ ಪೊರ್ವೊರಿಮ್ (4), ಐನಾಕ್ಸ್ ಮಡಗಾಂವ್ (4), ಐನಾಕ್ಸ್ ಪೊಂಡಾ (2) ಮತ್ತು ಝಡ್ ಸ್ಕ್ವೇರ್ ಸಾಮ್ರಾಟ್ ಅಶೋಕ್ (2) ಗಳಲ್ಲಿ ಪ್ರದರ್ಶನಗಳು ಇರುತ್ತವೆ. ಹೆಚ್ಚುವರಿಯಾಗಿ 5 ಪಿಕ್ಚರ್ ಟೈಮ್ ಗಾಳಿ ತುಂಬಿ ನಿರ್ಮಿಸುವ ಚಿತ್ರಮಂದಿರಗಳನ್ನು ಪ್ರದರ್ಶನಕ್ಕಾಗಿ ಗೋವಾದಾದ್ಯಂತ ಹಾಕಲಾಗುತ್ತಿದೆ.
  • ಸಿಎಂಒಟಿ ಉಪಕ್ರಮವು ಈ ವರ್ಷ 1,032 ನಮೂದುಗಳೊಂದಿಗೆ ದಾಖಲೆಯ ಭಾಗವಹಿಸುವಿಕೆಯನ್ನು ಪಡೆದುಕೊಂಡಿದೆ, ಇದು 2023ಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಈ ಕಾರ್ಯಕ್ರಮವು 13 ಚಲನಚಿತ್ರ ನಿರ್ಮಾಣ ಕೌಶಲ್ಯಗಳಲ್ಲಿ ಯುವ ಪ್ರತಿಭೆಗಳನ್ನು ಉತ್ತೇಜಿಸುತ್ತದೆ ಮತ್ತು ಮೊದಲ ಬಾರಿಗೆ, 100 ಮಂದಿ ಭಾಗವಹಿಸುವವರನ್ನು ಆಯ್ಕೆ ಮಾಡಲಾಗುವುದು, ಇದು ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರಿಗೆ ವಿಶಿಷ್ಟ ವೇದಿಕೆಯನ್ನು ಒದಗಿಸುತ್ತದೆ.
  • ಮಾಸ್ಟರ್‌ಕ್ಲಾಸ್‌ ಗಳು, ಪ್ಯಾನೆಲ್‌ ಚರ್ಚೆಗಳು ಮತ್ತು ಉದ್ಯಮದ ಭಾಗವಹಿಸುವಿಕೆ: ಎಆರ್ ರೆಹಮಾನ್, ಪ್ರಸೂನ್ ಜೋಷಿ, ಶಬಾನಾ ಅಜ್ಮಿ, ಮಣಿರತ್ನಂ, ವಿಧು ವಿನೋದ್ ಚೋಪ್ರಾ ಮತ್ತು ಫಿಲಿಪ್ ನೋಯ್ಸ್ ಮತ್ತು ಜಾನ್ ಸೀಲ್ ಅವರಂತಹ ಅಂತರರಾಷ್ಟ್ರೀಯ ಅತಿಥಿಗಳ ನೇತೃತ್ವದಲ್ಲಿ ಕಲಾ ಅಕಾಡೆಮಿಯಲ್ಲಿ 25+ ಮಾಸ್ಟರ್‌ಕ್ಲಾಸ್‌ ಗಳು ಮತ್ತು ಪ್ಯಾನಲ್ ಚರ್ಚೆಗಳನ್ನು ಚಲನಚಿತ್ರ ಅಭಿಮಾನಿಗಳು ಎದುರುನೋಡಬಹುದು. ಭಾಗವಹಿಸುವವರು ಧ್ವನಿ ವಿನ್ಯಾಸ, ಡಿಜಿಟಲ್ ಯುಗದಲ್ಲಿ ನಟನೆ ಮತ್ತು ಚಲನಚಿತ್ರ ನಿರ್ಮಾಣದ ಭವಿಷ್ಯದ ಒಳನೋಟಗಳನ್ನು ಪಡೆಯುತ್ತಾರೆ.
  • ಫಿಲ್ಮ್ ಬಜಾರ್ 2024: ದಕ್ಷಿಣ ಏಷ್ಯಾದ ಅತಿದೊಡ್ಡ ಚಲನಚಿತ್ರ ಮಾರುಕಟ್ಟೆ: ಫಿಲ್ಮ್ ಬಜಾರ್‌ನ 18 ನೇ ಆವೃತ್ತಿಯು ಇನ್ನೂ ದೊಡ್ಡದಾಗಿದೆ, 350+ ಚಲನಚಿತ್ರ ಯೋಜನೆಗಳು ಚಲನಚಿತ್ರ ಮಾರುಕಟ್ಟೆಯ ವಿವಿಧ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿವೆ. ‘ಮಾರ್ಚೆ ಡು ಕೇನ್ಸ್’ನ ಮಾಜಿ ಮಾರುಕಟ್ಟೆ ಮುಖ್ಯಸ್ಥ ಶ್ರೀ ಜೆರೋಮ್ ಪಿಲ್ಲಾರ್ಡ್ ಅವರು ಫಿಲ್ಮ್ ಬಜಾರ್‌ ನ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜ್ಞಾನ ಸರಣಿಯು ಚಲನಚಿತ್ರ ನಿರ್ಮಾಣ, ವಿತರಣೆ ಮತ್ತು ಅಂತರರಾಷ್ಟ್ರೀಯ ಸಹಯೋಗದ ಕುರಿತು ಅಧಿವೇಶನಗಳು ಮತ್ತು ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ. 2007 ರಲ್ಲಿ ಪ್ರಾರಂಭವಾದಾಗಿನಿಂದ, ಫಿಲ್ಮ್ ಬಜಾರ್ ದಕ್ಷಿಣ ಏಷ್ಯಾದ ಅತಿದೊಡ್ಡ ಮತ್ತು ಅತ್ಯಂತ ಅಗತ್ಯವಾದ ಚಲನಚಿತ್ರ ಮಾರುಕಟ್ಟೆಯಾಗಿದೆ. ಈ ವರ್ಷ ಮಂಟಪಗಳು ಮತ್ತು ಪ್ರದರ್ಶನಗಳನ್ನು ವಾಟರ್ ಫ್ರಂಟ್ ವಾಯುವಿಹಾರದ ಉದ್ದಕ್ಕೂ ಸ್ಥಾಪಿಸಲಾಗುವುದು ಮತ್ತು ವಿವಿಧ ದೇಶಗಳು ಮತ್ತು ರಾಜ್ಯಗಳು, ಚಲನಚಿತ್ರ ಉದ್ಯಮ, ಟೆಕ್ ಮತ್ತು ವಿ ಎಫ್‌ ಎಕ್ಸ್ ಉದ್ಯಮ, ಇತ್ಯಾದಿಗಳ ಅಗಾಧ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಪೆವಿಲಿಯನ್‌ಗಳಲ್ಲಿ ಉತ್ತಮ ಉದ್ಯಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಫಿಕ್ಕಿ ಜೊತೆಗಿನ ಪಾಲುದಾರಿಕೆಯ ಮೂಲಕ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವರ್ಷದ ಫಿಲ್ಮ್ ಬಜಾರ್‌ ನಲ್ಲಿ ಮುಕ್ತ ‘ಖರೀದಿದಾರರು-ಮಾರಾಟಗಾರರ’ ಸಭೆಯನ್ನು ಸಹ ಆಯೋಜಿಸಲಾಗುವುದು, ಅಲ್ಲಿ ಚಲನಚಿತ್ರ ನಿರ್ಮಾಪಕರು ಸಹಯೋಗಿಗಳನ್ನು ಭೇಟಿ ಮಾಡಬಹುದು.
  • ‘IFFiesta’ ಸಾಂಸ್ಕೃತಿಕ ಉತ್ಸವಗಳೊಂದಿಗೆ ಸಂವಾದಾತ್ಮಕ ಅನುಭವ: ಐ ಎಫ್‌ ಎಫ್‌ ಐ 2024 ಮೊದಲನೇ IFFiesta ಅನ್ನು ಆಯೋಜಿಸುತ್ತಿದೆ, ಇದು ಚಲನಚಿತ್ರ, ಸಂಗೀತ, ನೃತ್ಯ, ಆಹಾರ, ಕಲೆ ಮತ್ತು ಸಂವಾದಾತ್ಮಕ ಅನುಭವಗಳ ಮೂಲಕ ಉತ್ಸವದ ಸಾಂಸ್ಕೃತಿಕ ಕಂಪನ್ನು ಹೆಚ್ಚಿಸುತ್ತದೆ. ಇದು ಝೊಮಾಟೊದಿಂದ ನಡೆಸಲ್ಪಡುತ್ತದೆ – IFFiesta ನಲ್ಲಿ ಕ್ಯುರೇಟೆಡ್ ಲೈವ್ ಪ್ರದರ್ಶನ, ಆಹಾರ ಮತ್ತು ಮೋಜಿನ ವಲಯಕ್ಕಾಗಿ ವಿಶೇಷ ವಲಯ. ಕಲಾ ಅಕಾಡೆಮಿ ಮತ್ತು ಸುತ್ತಮುತ್ತಲಿನ ಮನರಂಜನಾ ರಂಗವು ಯುವಜನರಿಗೆ ಕೇಂದ್ರೀಕೃತವಾಗಿರುತ್ತದೆ. ಇದು ಭಾರತೀಯ ಚಿತ್ರರಂಗದ ಪ್ರಯಾಣದ ಪ್ರದರ್ಶನವನ್ನು ಹೊಂದಿರುತ್ತದೆ. ನವೆಂಬರ್ 22 ರಂದು IFFiesta ನ ಭಾಗವಾಗಿ ‘ಜರ್ನಿ ಆಫ್ ಇಂಡಿಯನ್ ಸಿನಿಮಾ’ ಸುತ್ತ ಕಾರ್ನಿವಲ್ ಪರೇಡ್ ಆಯೋಜಿಸಲಾಗಿದೆ.
  • ಪ್ರವೇಶಿಸುವಿಕೆ ಮತ್ತು ಒಳಗೊಳ್ಳುವಿಕೆ: ಐ ಎಫ್‌ ಎಫ್‌ ಐ ಇತಿಹಾಸದಲ್ಲಿ ಮೊದಲ ಬಾರಿಗೆ, 55ನೇ ಐ ಎಫ್‌ ಎಫ್‌ ಐ ಪ್ರವೇಶಿಸಲು ಸುಲಭವಾದ ಕಾರ್ಯಕ್ರಮ ಆಗಿರುತ್ತದೆ. ಚಲನಚಿತ್ರೋತ್ಸವವು ಎಲ್ಲಾ ಸಿನಿಮಾ ಪ್ರೇಮಿಗಳಿಗೆ, ವಿಶೇಷವಾಗಿ ವಿಕಲಚೇತನ ವ್ಯಕ್ತಿಗಳು ಸೇರಿದಂತೆ ಕಡಿಮೆ ಚಲನಶೀಲತೆ ಹೊಂದಿರುವವರಿಗೆ ಸುಲಭ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು, ʼಸ್ವಯಂʼ ಸಂಸ್ಥೆಯನ್ನು ಪಾಲುದಾರ ಎಂದು ಗೊತ್ತುಪಡಿಸಲಾಗಿದೆ. ಐ ಎಫ್‌ ಎಫ್‌ ಐ 2024 ಎಲ್ಲಾ ಸ್ಥಳಗಳನ್ನು ಭೌತಿಕವಾಗಿ ಪ್ರವೇಶಿಸುವಂತೆ ಮಾಡುವುದು, ವಿಕಲಚೇತನರ ಬಗ್ಗೆ ಸ್ವಯಂಸೇವಕರನ್ನು ಸಂವೇದನಾಶೀಲಗೊಳಿಸುವುದು ಸೇರಿದಂತೆ ಒಳಗೊಳ್ಳುವಿಕೆಗೆ ಬದ್ಧವಾಗಿದೆ. ಐ ಎಫ್‌ ಎಫ್‌ ಐ ನಲ್ಲಿ ಚಲನಚಿತ್ರಗಳು, ಕಾರ್ಯಕ್ರಮಗಳು ಮತ್ತು ಈವೆಂಟ್‌ ಗಳು ಆಡಿಯೋ ವಿವರಣೆ ಮತ್ತು ಸಂಕೇತ ಭಾಷೆಯ ಅರ್ಥವಿವರಣೆ ಹೊಂದಿರುತ್ತವೆ, ಮೊಬೈಲ್ ಅಪ್ಲಿಕೇಶನ್‌ ಬಳಕೆಯ ಮೂಲಕ ಪ್ರವೇಶವನ್ನು ಖಾತ್ರಿಪಡಿಸುವಂತಹ ಪ್ರವೇಶ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಲ್ಪಟ್ಟಿವೆ, ಇವು ಗೌರವಾನ್ವಿತ ಪ್ರಧಾನಮಂತ್ರಿಯವರು ನೀಡಿದ “ಸಬ್ಕಾ ಸಾಥ್, ಸಬ್ಕಾ ವಿಕಾಸ್” ದೃಷ್ಟಿಕೋನವನ್ನು ಒಳಗೊಂಡಿವೆ.
मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಮೈ ಭಾರತ್ ಪ್ಲಾಟ್‌ಫಾರ್ಮ್‌ ನಲ್ಲಿ ವಿಕಸಿತ ಭಾರತ್ ಚಾಲೆಂಜ್ ಅನ್ನು ಪ್ರಾರಂಭಿಸಲು; ರಾಷ್ಟ್ರವ್ಯಾಪಿ ಡಿಜಿಟಲ್ ರಸಪ್ರಶ್ನೆ ಆರಂಭವಾಗಲಿದೆ

ಮುಂದಿನ ವರ್ಷ ಜನವರಿ 11 ಮತ್ತು 12 ರಂದು ರಾಷ್ಟ್ರೀಯ ಯುವಜನೋತ್ಸವದಲ್ಲಿ ‘ವಿಕಸಿತ ಭಾರತ್ ಯುವ ನಾಯಕರ ಸಂವಾದ’ ನಡೆಯಲಿದೆ …