ಪ.ಜಾ/ಪ.ಪಂಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಭಾರತ ಸರ್ಕಾರದ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಸಾರ್ವಜನಿಕ ಖರೀದಿ ನೀತಿಯಡಿಯಲ್ಲಿ ಪ.ಜಾ/ಪ.ಪಂ ಎಂಎಸ್ ಇ ಗಳಿಂದ ಶೇ.4ರಷ್ಟು ಕಡ್ಡಾಯ ಖರೀದಿಯನ್ನು ಪೂರೈಸಲು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂ ಎಸ್ ಎಂ ಇ) ಸಚಿವಾಲಯವು ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಬ್ (ಎನ್ ಎಸ್ ಎಸ್ ಎಚ್) ಯೋಜನೆಯನ್ನು ಜಾರಿಗೊಳಿದೆ. ಈ ಯೋಜನೆಯು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು; ಮಾರುಕಟ್ಟೆ ಸಂಪರ್ಕ ಕಾರ್ಯಕ್ರಮಗಳು, ವಿಶೇಷ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮಗಳ ಸಂಘಟನೆ, ಕಾರ್ಯಾಗಾರಗಳು/ಜಾಗೃತಿ ಕಾರ್ಯಕ್ರಮಗಳು, ಸ್ಥಾವರ ಮತ್ತು ಯಂತ್ರೋಪಕರಣಗಳು/ ಉಪಕರಣಗಳ ಖರೀದಿಗೆ ಸಬ್ಸಿಡಿ, ಒಂದೇ ಕಡೆ ನೋಂದಣಿ ಯೋಜನೆಯಡಿ ನೋಂದಣಿಗೆ ಹಣಕಾಸಿನ ನೆರವು, ಸರ್ಕಾರಿ ಉತ್ತೇಜಿತ ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ನೋಂದಣಿಗೆ ಇತ್ಯಾದಿಗಳನ್ನು ಒಳಗೊಂಡಂತೆ ಎಲ್ಲಾ ಬಗೆಯ ನೆರವನ್ನು ನೀಡಲು ಹಲವು ಉಪಕ್ರಮಗಳನ್ನು ಕೈಗೊಂಡಿದೆ.
ಎನ್ ಎಸ್ ಎಸ್ ಎಚ್ ಯೋಜನೆಯ ‘ವಿಶೇಷ ಮಾರುಕಟ್ಟೆ ಸಹಾಯ ಯೋಜನೆ (ಎಸ್ ಎಂಎಎಸ್)’ ಘಟಕದ ಅಡಿಯಲ್ಲಿ ಪ.ಜಾ/ಪ.ಪಂ ಉದ್ಯಮಿಗಳು ಸಾರ್ವಜನಿಕ ಖರೀದಿಯಲ್ಲಿ ಭಾಗವಹಿಸಲು ತಮ್ಮ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ಅಭಿವೃದ್ಧಿಪಡಿಸಲು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡಲಾಗಿದೆ. ಕಳೆದ ಐದು ವರ್ಷಗಳಲ್ಲಿ 36.41 ಕೋಟಿ ರೂಪಾಯಿ ವೆಚ್ಚದಲ್ಲಿ 3,929 ಪ.ಜಾ/ಪ.ಪಂ ಉದ್ಯಮಿಗಳಿಗೆ ದೇಶದಲ್ಲಿ ದೇಶೀಯ ಪ್ರದರ್ಶನಗಳಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡಲಾಗಿದೆ.
ಎನ್ ಎಸ್ ಎಸ್ ಎಚ್ ಯೋಜನೆಯಡಿ ಲಭ್ಯವಿರುವ ವಿವಿಧ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು, ದೇಶದ ವಿವಿಧ ಸ್ಥಳಗಳಲ್ಲಿ ಸಮಾವೇಶಗಳು, ವಿಶೇಷ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮಗಳು (ಎಸ್ ವಿ ಡಿ ಪಿ ಗಳು) ಮತ್ತು ಜಾಗೃತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಈ ಯೋಜನೆಯು ವ್ಯಾಪಕ ಪ್ರಸಾರಕ್ಕಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸಕ್ರಿಯವಾಗಿ ಬಳಸುತ್ತದೆ, ವಿಶೇಷವಾಗಿ ನಿರ್ದಿಷ್ಟ ವರ್ಗದವರ ಮೇಲೆ ಗಮನ ಕೇಂದ್ರೀಕರಿಸುತ್ತದೆ.
ಈ ಮಾಹಿತಿಯನ್ನು ಅತಿ ಸಣ್ಣ, ಸಣ್ಣ ಮತ್ತು ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವರಾದ (ಸುಶ್ರೀ ಶೋಭಾ ಕರಂದ್ಲಾಜೆ) ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
‘गांधी जी की राजनीतिक यात्रा के कुछ पन्ने’ पुस्तक के बारे में जानने के लिए लिंक पर क्लिक करें :
https://matribhumisamachar.com/2025/12/10/86283/
आप इस ई-बुक को पढ़ने के लिए निम्न लिंक पर भी क्लिक कर सकते हैं:
https://www.amazon.in/dp/B0FTMKHGV6
यह भी पढ़ें : 1857 का स्वातंत्र्य समर : कारण से परिणाम तक
Matribhumi Samachar Kannad

