ಸಶಸ್ತ್ರ ಪಡೆಗಳ ಧ್ವಜ ದಿನದ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರಧಾನಮಂತ್ರಿ ಅವರು ತಮ್ಮ ಹೃದಯಾಂತರಾಳದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಸಶಸ್ತ್ರ ಪಡೆಗಳ ಸಿಬ್ಬಂದಿಯ ಶಿಸ್ತು, ಸಂಕಲ್ಪ ಮತ್ತು ಅದಮ್ಯ ಮನೋಭಾವವು ರಾಷ್ಟ್ರವನ್ನು ರಕ್ಷಿಸುತ್ತದೆ ಮತ್ತು ಅದರ ಜನರನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು. ಅವರ ಬದ್ಧತೆಯು ಕರ್ತವ್ಯ, ಶಿಸ್ತು ಮತ್ತು ರಾಷ್ಟ್ರದ ಬಗೆಗಿನ ಭಕ್ತಿಯ ಜ್ವಲಂತ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸೇವೆಯ ಗೌರವಾರ್ಥವಾಗಿ ಪ್ರತಿಯೊಬ್ಬರೂ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ನಿಧಿಗೆ ದೇಣಿಗೆ ನೀಡುವಂತೆ ಪ್ರಧಾನಮಂತ್ರಿಯವರು ಮನವಿ ಮಾಡಿದರು.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
“ಸಶಸ್ತ್ರ ಪಡೆಗಳ ಧ್ವಜ ದಿನದಂದು, ನಮ್ಮ ರಾಷ್ಟ್ರವನ್ನು ಅಚಲ ಧೈರ್ಯದಿಂದ ರಕ್ಷಿಸುವ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರಿಗೆ ನಮ್ಮ ಮನದಾಳದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಅವರ ಶಿಸ್ತು, ಸಂಕಲ್ಪ ಮತ್ತು ಮನೋಭಾವವು ನಮ್ಮ ಜನರನ್ನು ರಕ್ಷಿಸುತ್ತದೆ ಮತ್ತು ನಮ್ಮ ರಾಷ್ಟ್ರವನ್ನು ಬಲಪಡಿಸುತ್ತದೆ. ಅವರ ಬದ್ಧತೆಯು ನಮ್ಮ ರಾಷ್ಟ್ರದ ಮೇಲಿನ ಕರ್ತವ್ಯ, ಶಿಸ್ತು ಮತ್ತು ಭಕ್ತಿಯ ಪ್ರಬಲ ಉದಾಹರಣೆಯಾಗಿದೆ. ಸಶಸ್ತ್ರ ಪಡೆಗಳ ಧ್ವಜ ದಿನದ ನಿಧಿಗೂ ಕೊಡುಗೆ ನೀಡೋಣ.”
‘गांधी जी की राजनीतिक यात्रा के कुछ पन्ने’ पुस्तक के बारे में जानने के लिए लिंक पर क्लिक करें :
https://matribhumisamachar.com/2025/12/10/86283/
आप इस ई-बुक को पढ़ने के लिए निम्न लिंक पर भी क्लिक कर सकते हैं:
https://www.amazon.in/dp/B0FTMKHGV6
यह भी पढ़ें : 1857 का स्वातंत्र्य समर : कारण से परिणाम तक
Matribhumi Samachar Kannad

