Thursday, December 25 2025 | 01:35:09 PM
Breaking News

Matribhumi Samachar

ಪೂಜ್ಯ ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪೂಜ್ಯ ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು.  ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ರೀತಿ ತಿಳಿಸಿದ್ದಾರೆ ; “पूज्य संत श्री सेवालाल महाराज जी की जयंती पर उन्हें मेरा शत-शत नमन! उन्होंने अपना पूरा जीवन गरीबों और वंचितों के कल्याण के लिए समर्पित कर दिया। अपनी …

Read More »

ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಡಾ. ಟೋನಿ ನಾಡರ್ ಅವರ ಆಳ ಅರಿವಿಗೆ ಪ್ರಧಾನಮಂತ್ರಿ ಶ್ಲಾಘನೆ

ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಡಾ. ಟೋನಿ ನಾಡರ್ ಅವರ ಆಳವಾದ ಜ್ಞಾನ ಮತ್ತು ಒಲವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಪ್ರಧಾನಮಂತ್ರಿ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ: “ಡಾ. ಟೋನಿ ನಾಡರ್ ಅವರೊಂದಿಗೆ ಕೆಲವು ದಿನಗಳ ಹಿಂದೆ ನಾನು ಉತ್ತಮ ಸಂವಾದ ನಡೆಸಿದೆ. ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಅವರ ಜ್ಞಾನ ಮತ್ತು ಒಲವು ನಿಜಕ್ಕೂ ಶ್ಲಾಘನೀಯ.”

Read More »

ಪರೀಕ್ಷಾ ಸಮಯದಲ್ಲಿ ಸಕಾರಾತ್ಮಕತೆಯೇ ಪರೀಕ್ಷಾ ಯೋಧರಿಗೆ ಪರಮ ಮಿತ್ರ : ಪ್ರಧಾನಮಂತ್ರಿ

ಪರೀಕ್ಷಾ ತಯಾರಿಯ ಸಮಯದಲ್ಲಿ  ಧನಾತ್ಮಕತೆಯು ವಿದ್ಯಾರ್ಥಿಗಳಿಗೆ ನಿರ್ಣಾಯಕ ಸ್ನೇಹಿತ ಎಂದು ಅದರ ಪ್ರಾಮುಖ್ಯತೆಯ ಬಗ್ಗೆ ಒತ್ತಿಹೇಳುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆಯ ‘ಪರೀಕ್ಷಾ ಪೇ ಚರ್ಚಾ’ ಸಂಚಿಕೆಯನ್ನು ಎಲ್ಲರೂ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ಮೈಗೌವ್ ಇಂಡಿಯಾದ ಎಕ್ಸ್ ಪೋಸ್ಟ್ ಗೆ  ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ: “ಪರೀಕ್ಷಾ ಸಮಯದಲ್ಲಿ #ExamWarriors ಗಳಿಗೆ ಸಕಾರಾತ್ಮಕತೆಯೇ ಪರಮ ಮಿತ್ರ.  ನಾಳಿನ ‘ಪರೀಕ್ಷಾ ಪೇ ಚರ್ಚಾ’ ಸಂಚಿಕೆಯು ಈ ವಿಷಯದ …

Read More »

ಭಾರತ – ಅಮೆರಿಕ ಜಂಟಿ ಪತ್ರಿಕಾಗೋಷ್ಠಿಯ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪತ್ರಿಕಾ ಹೇಳಿಕೆ

ಘನತೆವೆತ್ತ ಅಧ್ಯಕ್ಷ ಟ್ರಂಪ್ ಅವರೇ, ಎರಡೂ ದೇಶಗಳ ಪ್ರತಿನಿಧಿಗಳೇ, ಮಾಧ್ಯಮ ಮಿತ್ರರೇ, ನಮಸ್ಕಾರ! ಮೊದಲಿಗೆ, ನನ್ನ ಆತ್ಮೀಯ ಸ್ನೇಹಿತ, ಅಧ್ಯಕ್ಷ ಟ್ರಂಪ್ ಅವರು ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ನಾನು ಹೃದಯಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ತಮ್ಮ ನಾಯಕತ್ವದ ಮೂಲಕ, ಅಧ್ಯಕ್ಷ ಟ್ರಂಪ್ ಅವರು ಭಾರತ-ಯುಎಸ್ ಸಂಬಂಧವನ್ನು ಪೋಷಿಸಿದ್ದಾರೆ ಮತ್ತು ಪುನರುಜ್ಜೀವನಗೊಳಿಸಿದ್ದಾರೆ. ಅವರ ಮೊದಲ ಅವಧಿಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡುವಾಗ ಎಂತಹ ಉತ್ಸಾಹ ಇತ್ತೋ; ಅದೇ ಉತ್ಸಾಹ, …

Read More »

2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಪ್ರಧಾನಮಂತ್ರಿ ಅವರಿಂದ ನಮನ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಇಂದು ಗೌರವ ನಮನ ಸಲ್ಲಿಸಿದರು. ಎಕ್ಸ್ ಪೋಸ್ಟ್‌ನಲ್ಲಿ, ಅವರು ಹೀಗೆ ಬರೆದಿದ್ದಾರೆ: “ಪುಲ್ವಾಮಾದಲ್ಲಿ 2019ರಲ್ಲಿ ಹುತಾತ್ಮರಾದ ಧೈರ್ಯಶಾಲಿ ವೀರರಿಗೆ ನಮನಗಳು. ಮುಂದಿನ ಪೀಳಿಗೆಗಳು ಅವರ ತ್ಯಾಗ ಮತ್ತು ರಾಷ್ಟ್ರಕ್ಕಾಗಿ ಅವರು ಸಲ್ಲಿಸಿದ ಅಚಲ ಸಮರ್ಪಣೆಯನ್ನು ಎಂದಿಗೂ ಮರೆಯುವುದಿಲ್ಲ.”   भारत : 1885 से 1950 (इतिहास पर एक दृष्टि) व/या …

Read More »

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಥೈಲ್ಯಾಂಡ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಥೈಲ್ಯಾಂಡ್‌ನಲ್ಲಿ ಆಯೋಜಿಸಲಾದ  ಸಂವಾದ ಕಾರ್ಯಕ್ರಮದ ಸಂದರ್ಭದಲ್ಲಿ ವಿಡಿಯೋ ಸಂದೇಶದ ಮೂಲಕ ತಮ್ಮ ಹೇಳಿಕೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಥೈಲ್ಯಾಂಡ್‌ನಲ್ಲಿ ಸಂವಾದ ಆವೃತ್ತಿಯಲ್ಲಿ ಭಾಗಿಯಾಗುತ್ತಿರುವುದು ತಮಗೆ ಗೌರವ ತಂದಿದೆ, ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ್ದಕ್ಕಾಗಿ ಭಾರತ, ಜಪಾನ್ ಮತ್ತು ಥೈಲ್ಯಾಂಡ್‌ನ ಪ್ರತಿಷ್ಠಿತ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಶ್ಲಾಘಿಸಿದರು. ಹಾಗೂ ಭಾಗವಹಿಸಿದ ಎಲ್ಲರಿಗೂ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು. ಪ್ರಧಾನಿ ಅವರು ಈ ಅವಕಾಶವನ್ನು …

Read More »

ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಭಾರತದ ರಾಷ್ಟ್ರಪತಿ

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಫೆಬ್ರವರಿ 14, 2025) ಬೆಂಗಳೂರಿನಲ್ಲಿ ನಡೆದ ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಭಾರತದ ನಾರಿ ಶಕ್ತಿಯು ಮಹತ್ವಾಕಾಂಕ್ಷೆ, ಸಾಧನೆ ಮತ್ತು ಕೊಡುಗೆ ನೀಡಲು ಸಿದ್ದಗೊಳ್ಳುತ್ತಿದೆ ಎಂದರು. ಅದು ವಿಜ್ಞಾನ, ಕ್ರೀಡೆ, ರಾಜಕೀಯ, ಕಲೆ ಅಥವಾ ಸಂಸ್ಕೃತಿಯಾಗಿರಲಿ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ತಲೆ ಎತ್ತಿ ಮುಂದೆ ಸಾಗುತ್ತಿದ್ದಾರೆ. ಅವರು ತಮ್ಮ ಕುಟುಂಬ, ಸಂಸ್ಥೆಗಳು ಮತ್ತು ದೇಶ ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. ಮಾನಸಿಕ ಸ್ಥೈರ್ಯ-ಶಕ್ತಿಯಿಲ್ಲದೆ ಅಡೆತಡೆಗಳನ್ನು ಮುರಿಯಲು ಮತ್ತು ಸ್ಟೀರಿಯೊಟೈಪ್ ಗಳಿಗೆ  ಸವಾಲೆಸೆಯಲು  ಸಾಧ್ಯವಿಲ್ಲ. ಪ್ರತಿಯೊಬ್ಬ ಮಹಿಳೆಯೂ ಧೈರ್ಯವನ್ನು ಒಟ್ಟುಗೂಡಿಸಬೇಕು, ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ತನ್ನ ಕನಸುಗಳನ್ನು ಸಾಧಿಸಲು ಎಲ್ಲಾ ಶಕ್ತಿ ಮತ್ತು ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಪ್ರತಿಯೊಬ್ಬರೂ ತಮ್ಮ ಗುರಿ ಸಾಧನೆಯತ್ತ  ಇಡುವ ಪ್ರತಿಯೊಂದು ಸಣ್ಣ ಹೆಜ್ಜೆಯೂ ಅಭಿವೃದ್ಧಿ ಹೊಂದಿದ ಭಾರತದತ್ತ ಒಂದು ಹೆಜ್ಜೆಯಾಗುತ್ತದೆ ಎಂದು ಅವರು ಹೇಳಿದರು. ನಾವು ತಾಂತ್ರಿಕ ಅಸ್ತವ್ಯಸ್ತಗಳ  ಯುಗದಲ್ಲಿದ್ದೇವೆ ಎಂದು ರಾಷ್ಟ್ರಪತಿ  ನುಡಿದರು. ತಂತ್ರಜ್ಞಾನದ ಪ್ರಗತಿಯು ನಮಗೆ ಕೆಲವು ರೀತಿಯಲ್ಲಿ ಉತ್ತಮ ಗುಣಮಟ್ಟದ ಜೀವನವನ್ನು ನೀಡಿದೆ. ಅಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ, ನಮ್ಮ ಮಾನವೀಯ ಮೌಲ್ಯಗಳು ಹಾಗೇ ಉಳಿಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ವಾಸ್ತವವಾಗಿ, ಸಹಾನುಭೂತಿ, ಪ್ರೀತಿ ಮತ್ತು ಏಕತೆಯ ಮಾನವೀಯ ಮೌಲ್ಯಗಳನ್ನು ಉತ್ತೇಜಿಸಲು ಪ್ರತಿಯೊಬ್ಬ ಮನುಷ್ಯನು ಪ್ರಜ್ಞಾಪೂರ್ವಕವಾಗಿ ಹೆಚ್ಚುವರಿ ಪ್ರಯತ್ನವನ್ನು ಮಾಡಬೇಕಾಗಿದೆ. ಇಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗುತ್ತದೆ. ಮಹಿಳೆಯರಿಗೆ ಸಹಾನುಭೂತಿಯ ಮೂಲಕ ಮುನ್ನಡೆಸುವ ವಿಶೇಷ ಸಾಮರ್ಥ್ಯವಿದೆ. ಅವರು ವ್ಯಕ್ತಿಯನ್ನು ಮೀರಿ ನೋಡುವ ಮತ್ತು ಜಾಗತಿಕ ಮಟ್ಟದಲ್ಲಿ ಕುಟುಂಬಗಳು, ಸಮುದಾಯಗಳು ಮತ್ತು ಸಂಬಂಧಗಳ ಯೋಗಕ್ಷೇಮಕ್ಕಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ  ಎಲ್ಲಾ ಮಹಿಳೆಯರು, ತಮ್ಮ ಜೀವನವನ್ನು ಮತ್ತು ತಮ್ಮ ಸುತ್ತಲಿನವರ ಜೀವನವನ್ನು ಹೆಚ್ಚು ಸುಂದರ ಮತ್ತು ಶಾಂತಿಯುತವಾಗಿಸಲು ಅನ್ವಯಿಸಬಹುದಾದ ಆಧ್ಯಾತ್ಮಿಕ ತತ್ವಗಳನ್ನು ಮೈಗೂಡಿಸಿಕೊಳ್ಳುತ್ತಾರೆ  ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಆರ್ಟ್ ಆಫ್ ಲಿವಿಂಗ್,  ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದರು. ನಮ್ಮ ಮಕ್ಕಳ ಶಿಕ್ಷಣಕ್ಕಿಂತ ಮಾನವೀಯತೆಯ ಕ್ಷೇತ್ರದಲ್ಲಿ ಬೇರೆ ಯಾವ  ದೊಡ್ಡ ಹೂಡಿಕೆಯೂ  ಇಲ್ಲ ಎಂದು ಅವರು ಹೇಳಿದರು. ಸರಿಯಾದ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ, ಅನೇಕ ಮಕ್ಕಳು ನಮ್ಮ ರಾಷ್ಟ್ರದ ಪ್ರಯಾಣದಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು ಎಂದ ಅವರು  ಹವಾಮಾನ ಬದಲಾವಣೆಯಂತಹ ಜಾಗತಿಕ ಸವಾಲುಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಅವರು ಎಲ್ಲರನ್ನೂ ಒತ್ತಾಯಿಸಿದರು.

Read More »

ಪರೀಕ್ಷಾ ಪೇ ಚರ್ಚಾ 2025ರ ಮೊದಲ ಸಂಚಿಕೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು

ಫೆಬ್ರವರಿ 10, 2025 ರಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಸುಂದರ್ ನರ್ಸರಿಯಲ್ಲಿ 8ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ (ಪಿಪಿಸಿ)ಯ ಮೊದಲ ಸಂಚಿಕೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಅನೌಪಚಾರಿಕ ಆದರೆ ಅನುಭವ ಹಂಚಿಕೊಳ್ಳುವ ಒಳನೋಟವುಳ್ಳ ಅಧಿವೇಶನದಲ್ಲಿ, ಪ್ರಧಾನಮಂತ್ರಿ ಅವರು ದೇಶಾದ್ಯಂತದ ವಿದ್ಯಾರ್ಥಿಗಳೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಹಾಜರಿದ್ದ 36 ವಿದ್ಯಾರ್ಥಿಗಳು ಪೌಷ್ಟಿಕಾಂಶ ಮತ್ತು ಸ್ವಾಸ್ಥ್ಯದ ಬಗ್ಗೆ ಅಮೂಲ್ಯವಾದ ಪಾಠಗಳನ್ನು ಕಲಿತರು; ಒತ್ತಡವನ್ನು ಕರಗತ ಮಾಡಿಕೊಳ್ಳುವುದು; …

Read More »

ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕರು ಪ್ರಧಾನಮಂತ್ರಿ ಅವರನ್ನು ಭೇಟಿಯಾದರು

ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಶ್ರೀಮತಿ ತುಳಸಿ ಗಬ್ಬಾರ್ಡ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಶ್ರೀಮತಿ ಗಬ್ಬಾರ್ಡ್ ಅವರೊಂದಿಗಿನ ತಮ್ಮ ಹಿಂದಿನ ಸಂವಾದವನ್ನು ಪ್ರಧಾನಮಂತ್ರಿ ಅವರು ಪ್ರೀತಿಯಿಂದ ಸ್ಮರಿಸಿದರು. ದ್ವಿಪಕ್ಷೀಯ ಗುಪ್ತಚರ ಸಹಕಾರವನ್ನು ಹೆಚ್ಚಿಸುವುದು, ವಿಶೇಷವಾಗಿ ಭಯೋತ್ಪಾದನೆ ನಿಗ್ರಹ, ಸೈಬರ್ ಭದ್ರತೆ, ಹೊರಹೊಮ್ಮು ತ್ತಿರುವ ಬೆದರಿಕೆಗಳು ಮತ್ತು ಕಾರ್ಯತಂತ್ರದ ಗುಪ್ತಚರ ಮಾಹಿತಿ ಹಂಚಿಕೆಯ ಕುರಿತು ಅವರ ಚರ್ಚೆಗಳು ಸ್ಪರ್ಶಿಸಿದವು. ಅವರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ …

Read More »

ವಿಶ್ವ ಬಾನುಲಿ ದಿನದ ಅಂಗವಾಗಿ ಸರ್ವರಿಗೂ ಶುಭಾಶಯ ಕೋರಿದ ಪ್ರಧಾನಮಂತ್ರಿ

ವಿಶ್ವ ಬಾನುಲಿ ದಿನದ ಅಂಗವಾಗಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ಈ ತಿಂಗಳ 23ರಂದು ನಿಗದಿಯಾಗಿರುವ ಮಾಸಿಕ ಕಾರ್ಯಕ್ರಮ “ಮನ್ ಕಿ ಬಾತ್‌”ಗಾಗಿ  ಜನರು ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುವಂತೆ ಅವರು ಎಲ್ಲರಿಗೂ ಆಹ್ವಾನ ನೀಡಿದ್ದಾರೆ. ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ: “ವಿಶ್ವ ಬಾನುಲಿ ದಿನದ ಶುಭಾಶಯಗಳು! ಮಾಹಿತಿ ಒದಗಿಸುತ್ತಾ, ಸ್ಫೂರ್ತಿಯ ಸೆಲೆಯಾಗಿ ಮತ್ತು ಜನರನ್ನು …

Read More »