ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ 76ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದ ಫ್ರಾನ್ಸ್ ಅಧ್ಯಕ್ಷ ಘನತೆವೆತ್ತ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಐರ್ಲೆಂಡ್ ಪ್ರಧಾನಮಂತ್ರಿ ಘನತೆವೆತ್ತ ಮೈಕೆಲ್ ಮಾರ್ಟಿನ್ ಅವರಿಗೆ ಧನ್ಯವಾದ ಅರ್ಪಿಸಿದರು. ಈ ಸಂಬಂಧ ಎಕ್ಸ್ ಖಾತೆಯಲ್ಲಿ ಫ್ರಾನ್ಸ್ ಅಧ್ಯಕ್ಷರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ನರೇಂದ್ರ ಮೋದಿ ಹೀಗೆ ಹೇಳಿದರು: “ನನ್ನ ಆತ್ಮೀಯ ಸ್ನೇಹಿತ, ಅಧ್ಯಕ್ಷ @EmmanuelMacron, ಭಾರತದ 76ನೇ ಗಣರಾಜ್ಯೋತ್ಸವದಂದು ನಿಮ್ಮ ಪ್ರೀತಿಯ ಶುಭಾಶಯಗಳನ್ನು …
Read More »ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಗಣರಾಜ್ಯೋತ್ಸವ 2025 ಪರೇಡ್ ಸ್ತಬ್ಧಚಿತ್ರವು ತಾಯಿಯ ಆರೈಕೆ, ಜೀವನ ಚಕ್ರ ನಿರಂತರತೆ ಮತ್ತು ಮಹಿಳಾ ನಾಯಕತ್ವವನ್ನು ಚಿತ್ರಿಸುತ್ತದೆ
ಗಣರಾಜ್ಯೋತ್ಸವ 2025ರ ಮೆರವಣಿಗೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸ್ತಬ್ಧಚಿತ್ರವು ಸಚಿವಾಲಯದ ಯೋಜನೆಗಳು ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯ ಜೀವನ ಚಕ್ರದ ಮುಂದುವರಿಕೆ ವಿಧಾನವನ್ನು ಸುಂದರವಾಗಿ ಚಿತ್ರಿಸಿದೆ. ಪ್ರದರ್ಶನದ ಹೃದಯಭಾಗದಲ್ಲಿ ತಾಯಿಯೊಬ್ಬಳು ತನ್ನ ಹೆಣ್ಣು ಮಗುವನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತಿದ್ದಳು, ಇದು ಮಗುವಿನ ಮೊದಲ ಶಿಕ್ಷಕಿಯಾಗಿ ತನ್ನ ಪಾತ್ರವನ್ನು ಸಂಕೇತಿಸುತ್ತದೆ. ಸ್ತಬ್ಧಚಿತ್ರವು ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಹಾಲಿನ ರೋಮಾಂಚಕ ಪ್ರದರ್ಶನಗಳನ್ನು ಒಳಗೊಂಡಿತ್ತು, ಇದು ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡುವ …
Read More »ನವದೆಹಲಿಯ ಕರ್ತವ್ಯ ಪಥದಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆಗೆ ಸಾಕ್ಷಿಯಾದ ಪಂಚಾಯತ್ ಪ್ರತಿನಿಧಿಗಳು
76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೇಶಾದ್ಯಂತದ ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತ್ತು ಅವರ ಪತ್ನಿಯರು 575ಕ್ಕೂ ಹೆಚ್ಚು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು, ಅವರು ಗ್ರಾಮೀಣ ಭಾರತದ ನಾಡಿಮಿಡಿತ ಸಂಕೇತಿಸುವ ಭವ್ಯ ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಿದರು. ಅವರಲ್ಲಿ, ಸುಮಾರು 40%ರಷ್ಟು ಮಹಿಳೆಯರು ಭಾಗವಹಿಸಿದ್ದರು, ಇದು ಲಿಂಗ-ಸಮಾನತೆಯ ಆಡಳಿತ ನೀಡುವ ಕಡೆಗಿನ ಗಮನಾರ್ಹ ಪ್ರಗತಿಗೆ ಉದಾಹರಣೆಯಾಗಿದೆ. ತಳಮಟ್ಟದ ಪ್ರಜಾಪ್ರಭುತ್ವವನ್ನು ಗೌರವಿಸುವ ಪ್ರಯತ್ನದಲ್ಲಿ, ಪಂಚಾಯತ್ ರಾಜ್ ಸಚಿವಾಲಯವು 2025 ಜನವರಿ 25ರಂದು ನವದೆಹಲಿಯಲ್ಲಿ …
Read More »ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು 76ನೇ ಗಣರಾಜ್ಯೋತ್ಸವದ ಮೆರವಣಿಗೆಗಾಗಿ ‘ಮನ್ ಕಿ ಬಾತ್’ ವಿಶೇಷ ಆಹ್ವಾನಿತರೊಂದಿಗೆ ಸಂವಾದ ನಡೆಸಿದರು
ಕೇಂದ್ರ ವಾರ್ತಾ ಮತ್ತು ಪ್ರಸಾರ, ರೈಲ್ವೆ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ವಿಶೇಷ ಆಹ್ವಾನಿತರೊಂದಿಗೆ ಸಂವಾದ ನಡೆಸಿದರು. ಭಾರತದ ಸಾರ್ವಜನಿಕ ಸೇವಾ ಪ್ರಸಾರಕದ ರೆಡಿಯೊ ವಿಭಾಗವಾದ ಆಕಾಶವಾಣಿ ಅವರನ್ನು ಆಕಾಶವಾಣಿ ಭವನದಲ್ಲಿರುವ ತನ್ನ ನವದೆಹಲಿ ಕಚೇರಿಗೆ ಆಹ್ವಾನಿಸಿತು. ಆಕಾಶವಾಣಿ: ಬದಲಾವಣೆಯ ಅಪ್ರತಿಮ ವೀರರ ಸಂಭ್ರಮ ಪ್ರಧಾನಮಂತ್ರಿ ಶ್ರೀ …
Read More »ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ 2025 ಜನವರಿ 27-28ರ ವರೆಗೆ ಓಮನ್‌ಗೆ ಭೇಟಿ ನೀಡಲಿದ್ದಾರೆ
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು 11ನೇ ಜಂಟಿ ಆಯೋಗದ ಸಭೆ(ಜೆಸಿಎಂ)ಯಲ್ಲಿ ಭಾಗವಹಿಸಲು ಓಮನ್‌ನ ಮಸ್ಕತ್‌ಗೆ ಭೇಟಿ ನೀಡಲಿದ್ದಾರೆ. 2025 ಜನವರಿ 27-28ರ ವರೆಗೆ ನಡೆಯಲಿರುವ ಈ ಸಭೆಯಲ್ಲಿ ಓಮನ್ ಸುಲ್ತಾನ ಮತ್ತು ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಉತ್ತೇಜನ ಖಾತೆ ಸಚಿವರಾದ ಕೈಸ್ ಬಿನ್ ಮೊಹಮ್ಮದ್ ಬಿನ್ ಮೂಸಾ ಅಲ್-ಯೂಸೆಫ್ ಅವರೊಂದಿಗೆ ಗೋಯಲ್ ಭಾಗವಹಿಸಲಿದ್ದಾರೆ. ನಮ್ಮ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾದ ಓಮನ್ …
Read More »ಗಣರಾಜ್ಯೋತ್ಸವದಂದು ಎಲ್ಲರಿಗೂ ಶುಭ ಕೋರಿದ ಪ್ರಧಾನಮಂತ್ರಿ
ಗಣರಾಜ್ಯೋತ್ಸವದ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ನಾವು ಗಣರಾಜ್ಯವಾಗಿ 75 ಅದ್ಭುತ ವರ್ಷಗಳನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು. ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪ್ರತ್ಯೇಕ ಪೋಸ್ಟ್ ಗಳಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ: “ಗಣರಾಜ್ಯೋತ್ಸವದ ಶುಭಾಶಯಗಳು. ಇಂದು, ನಾವು ಗಣರಾಜ್ಯದ 75 ಅದ್ಭುತ ವರ್ಷಗಳನ್ನು ಆಚರಿಸುತ್ತೇವೆ. ನಮ್ಮ ಸಂವಿಧಾನವನ್ನು ರಚಿಸಿದ ಮತ್ತು ನಮ್ಮ ಪ್ರಯಾಣವು ಪ್ರಜಾಪ್ರಭುತ್ವ, ಘನತೆ ಮತ್ತು ಏಕತೆಯಲ್ಲಿ ಬೇರೂರಿದೆ …
Read More »ಭಾರತದ 76ನೇ ಗಣರಾಜ್ಯೋತ್ಸವದ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ
ಭಾರತದ 76ನೇ ಗಣರಾಜ್ಯೋತ್ಸವದ ಶುಭಾಶಯಗಳು ಮತ್ತು ಶುಭಸಂದೇಶಗಳಿಗಾಗಿ ವಿಶ್ವ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಧನ್ಯವಾದಗಳನ್ನು ತಿಳಿಸಿದರು. ನೇಪಾಳದ ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿಯವರು ಈ ರೀತಿ ಹೇಳಿದರು: “ಪ್ರಧಾನಮಂತ್ರಿ @kpsharmaoli, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ಭಾರತವು ತನ್ನ ಗಣರಾಜ್ಯಕ್ಕೆ 75 ವರ್ಷಗಳನ್ನು ಪೂರೈಸುತ್ತಿರುವಾಗ, ನಮ್ಮ ಎರಡು ರಾಷ್ಟ್ರಗಳ ಪ್ರಜೆಗಳ ನಡುವಿನ ಸ್ನೇಹದ ಐತಿಹಾಸಿಕ ಬಂಧಗಳನ್ನು ನಾವು ಆಳವಾಗಿ ಪಾಲಿಸುತ್ತೇವೆ ಮತ್ತು …
Read More »76ನೇ ಗಣರಾಜ್ಯೋತ್ಸವ ಆಚರಣೆಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾದ ಮೈ ಭಾರತ್ ಯುವ ಸ್ವಯಂಸೇವಕರು ಮತ್ತು ಪ್ರಮುಖ ಕ್ರೀಡಾಪಟುಗಳೊಂದಿಗೆ ಕೇಂದ್ರ ಸಚಿವರಾದ ಡಾ.ಮನ್ಸುಖ್ ಮಾಂಡವಿಯಾ ಆತಿಥ್ಯ ವಹಿಸಿದರು
76ನೇ ಗಣರಾಜ್ಯೋತ್ಸವದ ಸ್ಮರಣೀಯ ಮುನ್ನ, ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ.ಮನ್ಸುಖ್ ಮಾಂಡವಿಯಾ ಅವರು ಇಂದು ನವದೆಹಲಿಯಲ್ಲಿ ಮೈ ಭಾರತ್ ಯುವ ಸ್ವಯಂಸೇವಕರು, ಅವರ ಕುಟುಂಬಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳಿಗೆ ಆತಿಥ್ಯ ನೀಡಿದರು. ಒಟ್ಟು 200 ಮೈ ಭಾರತ್ ಸ್ವಯಂಸೇವಕರು ಮತ್ತು ಅವರ ಕುಟುಂಬಗಳು ಮತ್ತು 160 ಪ್ರಸಿದ್ಧ ಕ್ರೀಡಾಪಟುಗಳನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದ್ದು, ರಾಷ್ಟ್ರ ನಿರ್ಮಾಣ ಮತ್ತು ಕ್ರೀಡೆಯಲ್ಲಿ ಅವರ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಲಾಗಿದೆ. ಸಭಿಕರನ್ನುದ್ದೇಶಿಸಿ …
Read More »ಜೀವನ ರಕ್ಷಾಪದಕ ಸರಣಿ ಪ್ರಶಸ್ತಿಗಳು-2024 ರನ್ನು ಪ್ರದಾನ ಮಾಡಲು ಮಾಡಿರುವ ಆಯ್ಕೆಯನ್ನು ಅನುಮೋದಿಸಿದ ರಾಷ್ಟ್ರಪತಿ
ಸರ್ವೋತ್ತಮ ಜೀವನ ರಕ್ಷಾಪದಕ 17 ಮಂದಿಗೆ, ಉತ್ತಮ ಜೀವನ ರಕ್ಷಾ ಪದಕ 09 ಮಂದಿಗೆ ಮತ್ತು 23 ಜನರಿಗೆ ಜೀವನ ರಕ್ಷಾ ಪದಕ ಸೇರಿದಂತೆ ಒಟ್ಟಾರೆ 49 ವ್ಯಕ್ತಿಗಳಿಗೆ 2024 ರ ಜೀವನ ರಕ್ಷಾ ಪದಕ ಸರಣಿ ಪ್ರಶಸ್ತಿಗಳನ್ನು ( ಹಾಗೂ ಇವುಗಳಲ್ಲಿ ಆರು ಪ್ರಶಸ್ತಿ ಪುರಸ್ಕೃತರಿಗೆ ಮರಣೋತ್ತರ ಪ್ರಶಸ್ತಿ ) ಪ್ರದಾನ ಮಾಡಲು ಭಾರತದ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ವಿವಿಧ ಜೀವನ ರಕ್ಷಾ ಪದಕ ಪುರಸ್ಕೃತರ ವಿವರಗಳು ಕೆಳಕಂಡಂತಿವೆ:- …
Read More »2025ನೇ ಸಾಲಿನ ಪದ್ಮ ಪ್ರಶಸ್ತಿಗಳು ಪ್ರಕಟ
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಅಂದರೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀಗಳನ್ನು ಮೂರು ವರ್ಗಗಳಲ್ಲಿ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಗಳನ್ನು ವಿವಿಧ ವಿಭಾಗಗಳು/ ಕ್ಷೇತ್ರಗಳಲ್ಲಿ ಚಟುವಟಿಕೆಗಳನ್ನು ಅಂದರೆ ಕಲೆ, ಸಾಮಾಜಿಕ ಸೇವೆ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಉದ್ಯಮ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಇತ್ಯಾದಿಗಳಲ್ಲಿ ನೀಡಲಾಗುವುದು. ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಅಸಾಧಾರಣ ಮತ್ತು ಅತ್ಯುನ್ನತ ಸೇವೆಗಾಗಿ ನೀಡಲಾಗುವುದು …
Read More »
Matribhumi Samachar Kannad