Saturday, December 27 2025 | 07:32:42 PM
Breaking News

National

“‘ವಿಕಸಿತ ಭಾರತ: ಜಿ ರಾಮ್ ಜಿ’ ಯೋಜನೆಯು ನರೇಗಾ (MGNREGA) ಯೋಜನೆಗಿಂತ ಒಂದು ಹೆಜ್ಜೆ ಮುಂದಿನ ಆಲೋಚನೆಯಾಗಿದೆ.” — ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ‘ವಿಕಸಿತ ಭಾರತ: ಜಿ ರಾಮ್ ಜಿ’ (Viksit Bharat: G Ram G) ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ. ಈ ಮೂಲಕ, ಸದರಿ ವಿಧೇಯಕವು ಈಗ ಅಧಿಕೃತವಾಗಿ ಕಾನೂನಾಗಿ ಮಾರ್ಪಟ್ಟಿದೆ. ರಾಷ್ಟ್ರಪತಿಯವರ ಅನುಮೋದನೆಯ ಬೆನ್ನಲ್ಲೇ, ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ‘ವಿಕಸಿತ ಭಾರತ: ಜಿ ರಾಮ್ ಜಿ ಕಾಯ್ದೆ’ಯ ವಿವರಗಳನ್ನು ನೀಡಲು …

Read More »

ವಿಕಸಿತ ಭಾರತ ಜಿ ರಾಮ್ ಜಿ ಮಸೂದೆ ಕುರಿತು ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾನ್ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದು, ಅದರಲ್ಲಿ ವಿಕಸಿತ ಭಾರತ ಜಿ ರಾಮ್ ಜಿ ಮಸೂದೆಯ ಉದ್ದೇಶಗಳನ್ನು ವಿವರಿಸಲಾಗಿದೆ. ಲೇಖನವು, ಉದ್ಯೋಗ ಭರವಸೆಯನ್ನು ಬಲಪಡಿಸುವುದು, ಸ್ಥಳೀಯ ಯೋಜನೆಗಳನ್ನು ಅಳವಡಿಸುವುದು, ಕಾರ್ಮಿಕರ ಭದ್ರತೆ ಮತ್ತು ಕೃಷಿ ಉತ್ಪಾದಕತೆ ನಡುವಿನ ಸಮತೋಲನ ಸಾಧಿಸುವುದು, ವಿವಿಧ ಯೋಜನೆಗಳನ್ನು ಸಮನ್ವಯಗೊಳಿಸುವುದು, ಮುಂಚೂಣಿ ಕಾರ್ಯಕರ್ತರ ಸಾಮರ್ಥ್ಯವನ್ನು ಬಲಪಡಿಸುವುದು ಮತ್ತು ಆಡಳಿತವನ್ನು ಆಧುನೀಕರಿಸುವುದರ ಮೂಲಕ …

Read More »

ಸಶಸ್ತ್ರ ಸೀಮಾ ಬಲದ ಸಂಸ್ಥಾಪನಾ ದಿನದಂದು ಸಿಬ್ಬಂದಿಗೆ ಶುಭ ಕೋರಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಶಸ್ತ್ರ ಸೀಮಾ ಬಲದ ಸಂಸ್ಥಾಪನಾ ದಿನದಂದು ಅದರೊಂದಿಗೆ ಸಂಬಂಧ ಹೊಂದಿರುವ ಎಲ್ಲ ಸಿಬ್ಬಂದಿಗೆ ಶುಭಾಶಯ ಕೋರಿದ್ದಾರೆ. ಎಸ್.ಎಸ್.ಬಿ.ಯ ಅಚಲ ಸಮರ್ಪಣಾ ಭಾವ ಸೇವೆಯ ಅತ್ಯುನ್ನತ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರ ಕರ್ತವ್ಯ ಪ್ರಜ್ಞೆ ದೇಶದ ಸುರಕ್ಷೆಯ ಬಲವಾದ ಆಧಾರಸ್ತಂಭವಾಗಿ ಉಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಸವಾಲಿನ ಭೂಪ್ರದೇಶಗಳಿಂದ ಹಿಡಿದು ನಿರ್ಭರಿತ ಕಾರ್ಯಾಚರಣೆಯ ಪರಿಸ್ಥಿತಿಗಳವರೆಗೆ, ಎಸ್.ಎಸ್.ಬಿ. ಸದಾ ಜಾಗರೂಕತೆಯಿಂದ ನಿಂತಿದೆ …

Read More »

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಚೌಧರಿ ಚರಣ್ ಸಿಂಗ್ ಕಿಸಾನ್ ಸಮ್ಮಾನ್ ಸಮಾರಂಭದಲ್ಲಿ ಭಾಗವಹಿಸಿದರು

ನವದೆಹಲಿಯ ಪಿ.ಹೆಚ್‌.ಡಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಲ್ಲಿ’ಕಿಸಾನ್ ಟ್ರಸ್ಟ್’ ವತಿಯಿಂದ ಆಯೋಜಿಸಲಾಗಿದ್ದ ‘ಚೌಧರಿ ಚರಣ್ ಸಿಂಗ್ ಕಿಸಾನ್ ಸಮ್ಮಾನ್’ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಪುಸ್ತಕವೊಂದನ್ನು ಬಿಡುಗಡೆ ಮಾಡಿದ್ದಲ್ಲದೆ, ಕೃಷಿ ಕ್ಷೇತ್ರದಲ್ಲಿನ ಅಭೂತಪೂರ್ವ ಕೊಡುಗೆಗಾಗಿ ಪ್ರಗತಿಪರ ರೈತರನ್ನು ಮತ್ತು ವಿವಿಧ ಸಂಸ್ಥೆಗಳನ್ನು ಸನ್ಮಾನಿಸಿ ಗೌರವಿಸಿದರು. …

Read More »

ಹದಿನೆಂಟನೇ ಲೋಕಸಭೆಯ ಆರನೇ ಅಧಿವೇಶನ ಮುಕ್ತಾಯ

ಡಿಸೆಂಬರ್ 1, 2025 ರಂದು ಪ್ರಾರಂಭವಾದ ಹದಿನೆಂಟನೇ ಲೋಕಸಭೆಯ ಆರನೇ ಅಧಿವೇಶನವು ಇಂದು ಮುಕ್ತಾಯವಾಯಿತು. ಈ ಸಂಬಂಧವಾಗಿ ಮಾಹಿತಿ ನೀಡಿದ ಲೋಕಸಭಾ ಅಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರು, ಅಧಿವೇಶನದ ಅವಧಿಯಲ್ಲಿ 15 ಕಲಾಪಗಳು ನಡೆದವು ಎಂದು ತಿಳಿಸಿದರು. ಈ ಅಧಿವೇಶನದ ಒಟ್ಟು ಕಲಾಪದ ಅವಧಿ 92 ಗಂಟೆ 25 ನಿಮಿಷಗಳಾಗಿತ್ತು. ಅಧಿವೇಶನದ ಅವಧಿಯಲ್ಲಿ ಸದನದ ಕಾರ್ಯದಕ್ಷತೆಯು ಶೇಕಡಾ 111 ರಷ್ಟಿತ್ತು ಎಂದು ಶ್ರೀ ಬಿರ್ಲಾ ಅವರು ತಿಳಿಸಿದರು. ಅಧಿವೇಶನದ …

Read More »

ಹಡಗುಗಳು ಮತ್ತು ಬಂದರು ಸೌಲಭ್ಯಗಳ ಭದ್ರತೆಗಾಗಿ ಮೀಸಲಾದ ಬಂದರು ಭದ್ರತಾ ಬ್ಯೂರೋ (ಬಿಒಪಿಎಸ್) ರಚನೆಗಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ​​​​​​​ ಶ್ರೀ ಅಮಿತ್ ಶಾ ಸಭೆ ನಡೆಸಿದರುರು

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹಡಗುಗಳು ಮತ್ತು ಬಂದರು ಸೌಲಭ್ಯಗಳ ಭದ್ರತೆಗಾಗಿ ಮೀಸಲಾದ ಬಂದರು ಭದ್ರತಾ ಬ್ಯೂರೋ (ಬಿಒಪಿಎಸ್) ರಚನೆಗಾಗಿ ಸಭೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವರು ಮತ್ತು ನಾಗರಿಕ ವಿಮಾನಯಾನ ಸಚಿವರು ಭಾಗವಹಿಸಿದ್ದರು. ಸಭೆಯಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ದೇಶಾದ್ಯಂತ ಬಲಿಷ್ಠ ಬಂದರು ಭದ್ರತಾ …

Read More »

ಸಾಂಪ್ರದಾಯಿಕ ಔಷಧದ ಕುರಿತಾದ ಎರಡನೇ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಶೃಂಗಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ ಮಾಡಲಿದ್ದಾರೆ

ಡಿಸೆಂಬರ್ 19, 2025 ರಂದು ಸಂಜೆ 4:30 ಕ್ಕೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿರುವ ಎರಡನೇ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು ಜಾಗತಿಕ, ವಿಜ್ಞಾನ ಆಧಾರಿತ ಮತ್ತು ಜನ-ಕೇಂದ್ರಿತ ಸಾಂಪ್ರದಾಯಿಕ ಔಷಧ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಭಾರತದ ಬೆಳೆಯುತ್ತಿರುವ ನಾಯಕತ್ವ ಮತ್ತು ಪ್ರವರ್ತಕ ಉಪಕ್ರಮಗಳನ್ನು ಪ್ರದರ್ಶಿಸುತ್ತದೆ. ಪ್ರಧಾನಮಂತ್ರಿ …

Read More »

ಭಾರತೀಯ ರೈಲ್ವೆಯಿಂದ ಹಳಿಗಳ ವೇಗ ಸಾಮರ್ಥ್ಯ ಹೆಚ್ಚಳ; ಈಗ ಶೇ. 79ರಷ್ಟು ರೈಲ್ವೆ ಜಾಲವು 110 ಕಿಮೀ ಮತ್ತು ಅದಕ್ಕಿಂತ ಹೆಚ್ಚಿನ ವೇಗಕ್ಕೆ ಸಜ್ಜು

ಕಳೆದ 11 ವರ್ಷಗಳಲ್ಲಿ ಭಾರತೀಯ ರೈಲ್ವೆಯ ಹಳಿಗಳ ವೇಗದ ಸಾಮರ್ಥ್ಯವನ್ನು ಹೆಚ್ಚಿಸಲು ಹಳಿಗಳ ಮೇಲ್ದರ್ಜೆಗೇರಿಸುವಿಕೆ ಮತ್ತು ಸುಧಾರಣಾ ಕಾರ್ಯಗಳನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಲಾಗಿದೆ. ಹಳಿಗಳ ಮೇಲ್ದರ್ಜೆಗೇರಿಸುವ ಕ್ರಮಗಳಲ್ಲಿ 60 ಕೆಜಿ ತೂಕದ ರೈಲು ಹಳಿಗಳ ಬಳಕೆ, ಅಗಲವಾದ ತಳದ ಕಾಂಕ್ರೀಟ್ ಸ್ಲೀಪರ್‌ ಗಳು, ದಪ್ಪವಾದ ವೆಬ್ ಸ್ವಿಚ್‌ ಗಳು, ಉದ್ದನೆಯ ರೈಲ್ ಪ್ಯಾನಲ್‌ ಗಳು, H ಬೀಮ್ ಸ್ಲೀಪರ್‌ ಗಳು, ಆಧುನಿಕ ಹಳಿ ನವೀಕರಣ ಮತ್ತು ನಿರ್ವಹಣಾ ಯಂತ್ರಗಳ ಬಳಕೆ, …

Read More »

ಕಳೆದ ಹತ್ತು ವರ್ಷಗಳಲ್ಲಿ ಭಾರತವು 2,361 ಮೆಗಾವ್ಯಾಟ್ ಜೈವಿಕ ಇಂಧನ ಸಾಮರ್ಥ್ಯ, 228 ಮೆಗಾವ್ಯಾಟ್ ತ್ಯಾಜ್ಯದಿಂದ ಇಂಧನ ಉತ್ಪಾದನೆ ಸಾಮರ್ಥ್ಯ ಮತ್ತು 2.88 ಲಕ್ಷ ಜೈವಿಕ ಅನಿಲ ಸ್ಥಾವರಗಳನ್ನು ತನ್ನ ಇಂಧನ ಉತ್ಪಾದನೆಗೆ ಸೇರ್ಪಡೆ ಮಾಡಿದೆ

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು 2022-23ರಿಂದ 2025.26ರ ಅವಧಿಗೆ 998 ಕೋಟಿ ರೂ.ಗಳ ಆಯವ್ಯಯ ಅನುದಾನದೊಂದಿಗೆ 02.11.2022 ರಂದು ಅಧಿಸೂಚಿಸಲಾದ ʻರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮʼ (ಎನ್‌ಬಿಪಿ)ಹಂತ -1ರ ಅಡಿಯಲ್ಲಿ ದೇಶದಲ್ಲಿ ಜೈವಿಕ ಇಂಧನ ಯೋಜನೆಗಳ ಸ್ಥಾಪನೆಯನ್ನು ಬೆಂಬಲಿಸುತ್ತದೆ. ಈ ನಿಟ್ಟಿನಲ್ಲಿ ಒದಗಿಸಲಾದ ʻಕೇಂದ್ರ ಹಣಕಾಸು ನೆರವುʼ(ಸಿಎಫ್ಎ) ವಿವರಗಳನ್ನು ಅನುಬಂಧ-I ರಲ್ಲಿ ನೀಡಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ, ಸರ್ಕಾರವು ವಿವಿಧ ಯೋಜನೆಗಳ ಮೂಲಕ ಜೈವಿಕ ಇಂಧನ ಯೋಜನೆಗಳನ್ನು ಬೆಂಬಲಿಸುತ್ತಿದೆ. ಇವುಗಳಲ್ಲಿ …

Read More »

ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮೀಜಿಯವರ 1066ನೇ ಜಯಂತಿಯ ಆಚರಣೆಗೆ ಭಾರತದ ರಾಷ್ಟ್ರಪತಿ ಅವರು ಚಾಲನೆ ನೀಡಿದರು

ಕರ್ನಾಟಕದ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಇಂದು (ಡಿಸೆಂಬರ್ 16, 2025) ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮೀಜಿಯವರ 1066ನೇ ಜಯಂತಿ ಆಚರಣೆಗೆ ಭಾರತದ ಸನ್ಮಾನ್ಯ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ, ಯುಗಯುಗಾಂತರಗಳಿಂದ  ಸಂತರು ತಮ್ಮ ಜ್ಞಾನ ಮತ್ತು ಕರುಣೆಯ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ ಎಂದು ಹೇಳಿದರು. ನಿಜವಾದ ಶ್ರೇಷ್ಠತೆ, ಅಧಿಕಾರ ಅಥವಾ ಸಂಪತ್ತಿನಲ್ಲಿಲ್ಲ ಬದಲಿಗೆ ತ್ಯಾಗ, ಸೇವೆ ಮತ್ತು ಆಧ್ಯಾತ್ಮಿಕ …

Read More »