ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜೂನ್ 27, 2025) ನವದೆಹಲಿಯಲ್ಲಿ ನಡೆದ `ಎಂಎಸ್ಎಂಇ ದಿನಾಚರಣೆ’ಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕಮ ಉದ್ದೇಶಿಸಿ ಮಾತನಾಡಿದ ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ) ದೇಶದ ಆರ್ಥಿಕತೆಯ ಬಲವಾದ ಆಧಾರಸ್ತಂಭಗಳಾಗಿವೆ ಎಂದು ಹೇಳಿದರು. ಈ ಉದ್ಯಮಗಳು ʻಜಿಡಿಪಿʼಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಮತ್ತು ತಳಮಟ್ಟದಲ್ಲಿ ನಾವೀನ್ಯತೆ ಉತ್ತೇಜಿಸುತ್ತವೆ. ದೃಢ ʻಎಂಎಸ್ಎಂಇʼ ಪರಿಸರ ವ್ಯವಸ್ಥೆ ದೇಶದ ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ …
Read More »ಯುವಕರನ್ನು ತೊಡಗಿಸಿಕೊಳ್ಳಲು ಮತ್ತು ಅನುಭವ ಹೆಚ್ಚಿಸಲು ʻಮೈ ಭಾರತ್ ಪೋರ್ಟಲ್ʼ ಜೊತೆ ʻವಾಟ್ಸ್ಆಪ್ ಚಾಟ್ ಬಾಟ್ʼ ಸಂಯೋಜನೆ ಪ್ರಾರಂಭಿಸಿದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ
ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಡಿಜಿಟಲ್ ತೊಡಗಿಸಿಕೊಳ್ಳುವಿಕೆ ಹೆಚ್ಚಿಸಲು ಮತ್ತು ಭಾರತದ ಯುವಕರಿಗೆ ಸೇವೆಗಳ ಪ್ರವೇಶ ಸುಗಮಗೊಳಿಸಲು ಪ್ರಗತಿಪರ ಉಪಕ್ರಮ ಕೈಗೊಂಡಿದ್ದು, ʻಮೈ ಭಾರತ್ʼ ಪೋರ್ಟಲ್ (https://mybharat.gov.in) ಜೊತೆ ʻವಾಟ್ಸ್ಆಪ್ʼ ಸಂಯೋಜನೆಯನ್ನು ಪ್ರಾರಂಭಿಸಿದೆ. ʻವಾಟ್ಸ್ಆಪ್ ಚಾಟ್ಬಾಟ್ʼ ಈಗ ʻಮೈ ಭಾರತ್ʼ ಪೋರ್ಟಲ್ ನಲ್ಲಿ ಲಭ್ಯವಾಗಿದ್ದು, ವಾಟ್ಸ್ಆಪ್ (7289001515) ಮೂಲಕ ನೇರವಾಗಿ ಪ್ರವೇಶಿಸಬಹುದು. ಇದು ಬಳಕೆದಾರರಿಗೆ ವೇದಿಕೆಯೊಂದಿಗೆ ಸಂವಹನ ನಡೆಸಲು ಸುಗಮ, ನೈಜ-ಸಮಯದ ಮತ್ತು ಬಳಕೆದಾರ ಸ್ನೇಹಿ ಮಾರ್ಗ ಒದಗಿಸುತ್ತದೆ. …
Read More »ಸಂವಿಧಾನ ಹತ್ಯಾ ದಿವಸ್ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ರಕ್ಷಕರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ
ದೇಶದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾದ ತುರ್ತು ಪರಿಸ್ಥಿತಿ ಹೇರಿಕೆಗೆ ಐವತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಪ್ರಜಾಪ್ರಭುತ್ವ ರಕ್ಷಣೆಗೆ ದೃಢವಾಗಿ ನಿಂತ ಅಸಂಖ್ಯಾತ ಭಾರತೀಯರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ್ದಾರೆ. ಸಾಂವಿಧಾನಿಕ ಮೌಲ್ಯಗಳ ಮೇಲಿನ ಗಂಭೀರ ದಾಳಿಯನ್ನು ನೆನಪಿಸಿಕೊಂಡ ಪ್ರಧಾನಿ, ಜೂನ್ 25 ಅನ್ನು ಸಂವಿಧಾನ ಹತ್ಯಾ ದಿವಸ್ ಎಂದು ಆಚರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದ, ಪತ್ರಿಕಾ ಸ್ವಾತಂತ್ರ್ಯವನ್ನು …
Read More »ಭಾರತದ ಆಹಾರ ಸಂಸ್ಕರಣೆ ಕ್ಷೇತ್ರ ಹಲವು ವರ್ಷಗಳಿಂದ ಹೇಗೆ ಗಮನಾರ್ಹ ಪರಿವರ್ತನೆ ಹೊಂದಿದೆ ಎಂದು ಉಲ್ಲೇಖಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಭಾರತದ ಆಹಾರ ಸಂಸ್ಕರಣೆ ಕ್ಷೇತ್ರ, ಕ್ರಿಯಾತ್ಮಕ ವಿಧಾನದೊಂದಿಗೆ ಗ್ರಾಮೀಣ ಉದ್ಯಮಿಗಳನ್ನು ಸಬಲಗೊಳಿಸುವುದರ ಜೊತೆಗೆ ಹಲವು ವರ್ಷಗಳಿಂದ ಹೇಗೆ ಗಮನಾರ್ಹ ಪರಿವರ್ತನೆ ಹೊಂದಿದೆ ಎಂದು ಉಲ್ಲೇಖಿಸುವ ಲೇಖನವನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡುತ್ತ, ಪ್ರಧಾನಮಂತ್ರಿಗಳು ಹೀಗೆ ಹೇಳಿದ್ದಾರೆ: “ಕೇಂದ್ರ ಸಚಿವರಾದ ಶ್ರೀ @iChiragPaswan ಅವರು ಭಾರತದ ಆಹಾರ ಸಂಸ್ಕರಣೆ ಕ್ಷೇತ್ರ, ಕ್ರಿಯಾತ್ಮಕ ವಿಧಾನದೊಂದಿಗೆ …
Read More »ಸಾಫ್ಟ್‌ವೇರ್ ಅಪ್ಲಿಕೇಶನ್‌ನ ಉನ್ನತೀಕರಣಕ್ಕಾಗಿ (ಸುಧಾರಿತ ಅಂಚೆ ತಂತ್ರಜ್ಞಾನ 2.O) 24 ಮತ್ತು 25 ಜೂನ್ 2025 (ಮಂಗಳವಾರ ಮತ್ತು ಬುಧವಾರ) ಅಂಚೆ ಕಚೇರಿಗಳು ಕಾರ್ಯನಿರ್ವಹಿಸುವುದಿಲ್ಲ
ದಿನಾಂಕ 26.06.2025 ರಂದು ನಿಗದಿಪಡಿಸಲಾದ ಸಾಫ್ಟ್‌ವೇರ್ ಅನುಷ್ಠಾನಕ್ಕಾಗಿ ಈ ಕೆಳಗೆ ತಿಳಿಸಲಾದ ಅಂಚೆ ಕಚೇರಿಗಳಲ್ಲಿ ಮತ್ತು ಸಂಬಂಧಿತ ಉಪ/ಶಾಖೆ ಅಂಚೆ ಕಚೇರಿಗಳಲ್ಲಿ ದಿನಾಂಕ 24 ಮತ್ತು 25 ಜೂನ್ 2025 (ಮಂಗಳವಾರ ಮತ್ತು ಬುಧವಾರ) ರಂದು ಸಾರ್ವಜನಿಕರಿಗೆ ಅಂಚೆ ಸೇವೆಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಎಚ್‌ಎಎಲ್ ಮುಖ್ಯ ಅಂಚೆ ಕಚೇರಿ ಜಾಲಹಳ್ಳಿ ಮುಖ್ಯ ಅಂಚೆ ಕಚೇರಿ ಬಸವನಗುಡಿ ಮುಖ್ಯ ಅಂಚೆ ಕಚೇರಿ ಗ್ರಾಹಕರಿಗೆ ಸೇವೆಯ ದಕ್ಷತೆ, ರಕ್ಷಣೆ ಹಾಗೂ ಗುಣಮಟ್ಟ ಹೆಚ್ಚಿಸಲು …
Read More »ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತ ಮತ್ತು ಪ್ರಪಂಚದಾದ್ಯಂತ ಇರುವ ಜನರಿಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳನ್ನು ತಿಳಿಸಿದರು. ಈ ವರ್ಷವು 11ನೇ ಬಾರಿಗೆ ಜೂನ್ 21ರಂದು ಜಗತ್ತು ಒಟ್ಟಾಗಿ ಸೇರಿ ಯೋಗವನ್ನು ಸಾಮೂಹಿಕವಾಗಿ ಅಭ್ಯಾಸ …
Read More »ಸಂಬಲ್ ಪುರದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಶ್ರೀ ಧರ್ಮೇಂದ್ರ ಪ್ರಧಾನ್
ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ಬೆಳಿಗ್ಗೆ ಒಡಿಶಾದ ಸಂಬಲ್ಪುರದ ಮಾ ಸಮಲೇಶ್ವರಿ ದೇವಾಲಯ ಸಂಕೀರ್ಣದ ನದಿ ದಂಡೆಯ ಬಳಿ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಡೆದ ಯೋಗ ಅಧಿವೇಶನದಲ್ಲಿ ಭಾಗವಹಿಸಿದರು. ಅಧಿಕಾರಿಗಳು, ಗಣ್ಯರು ಮತ್ತು ಸಂಬಲ್ಪುರದ ನಿವಾಸಿಗಳು ಅವರೊಂದಿಗೆ ಅಧಿವೇಶನದಲ್ಲಿ ಭಾಗವಹಿಸಿದರು. ಯೋಗವು ಕಾಲಾತೀತ ಮತ್ತು ಸಮಗ್ರ ವಿಧಾನವಾಗಿದ್ದು, ಯೋಗವು ಜಗತ್ತಿಗೆ ಭಾರತದ ಕೊಡುಗೆಯಾಗಿದೆ ಎಂದು ಶ್ರೀ ಧರ್ಮೇಂದ್ರ ಪ್ರಧಾನ್ ತಮ್ಮ ಸಂದೇಶದಲ್ಲಿ ತಿಳಿಸಿದರು. ಯೋಗವನ್ನು ಜಾಗತಿಕ ಸಾಮೂಹಿಕ ಆಂದೋಲನ ಮತ್ತು ಜಾಗತಿಕ ಸಾಮರಸ್ಯ ಮತ್ತು ಶಾಂತಿಯ ಸಾಧನವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಿರಂತರ ಪ್ರಯತ್ನಕ್ಕಾಗಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಎಲ್ಲರೂ, ವಿಶೇಷವಾಗಿ ಯುವ ಪೀಳಿಗೆ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು ಶ್ರೀ ಪ್ರಧಾನ್ ಒತ್ತಾಯಿಸಿದರು. ಶಿಕ್ಷಣ ಸಚಿವಾಲಯವು ದಿಲ್ಲಿ ವಿಶ್ವವಿದ್ಯಾಲಯದ ಸಮಾವೇಶ ಕೇಂದ್ರ ಮತ್ತು ಇತರ ಮೂರು ಪ್ರತಿಷ್ಠಿತ ಸ್ಥಳಗಳಾದ ಬಿಹಾರದ ಬೋಧ್ ಗಯಾದ ಮಹಾಬೋಧಿ ದೇವಾಲಯ; ಕರ್ನಾಟಕದ ಮೈಸೂರು ಅರಮನೆ; ಮತ್ತು ಕರ್ನಾಟಕದ ಸೋಮನಾಥಪುರದ ಸೋಮನಾಥಪುರ ದೇವಾಲಯ ಆವರಣದಲ್ಲಿ ಸಾಮೂಹಿಕ ಯೋಗ ಸತ್ರ/ಅಧಿವೇಶನಗಳನ್ನು ಆಯೋಜಿಸಿತ್ತು. ದಿಲ್ಲಿ ವಿಶ್ವವಿದ್ಯಾಲಯದಲ್ಲಿ, ಶಿಕ್ಷಣ ಸಚಿವಾಲಯದ (ಡಿ.ಒ.ಎಚ್.ಇ.-DoHE) ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ. ವಿನೀತ್ ಜೋಶಿ; ಡಿ.ಒ.ಎಚ್.ಇ.ಯ ಸಹಾಯಕ ಕಾರ್ಯದರ್ಶಿ ಶ್ರೀ ಸುನಿಲ್ ಕುಮಾರ್ ಬರ್ನ್ವಾಲ್, ದಿಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಯೋಗೇಶ್ ಸಿಂಗ್; ಅಧ್ಯಾಪಕರು, ಸಿಬ್ಬಂದಿ, ಸಚಿವಾಲಯದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಯೋಗ ಅಧಿವೇಶನದಲ್ಲಿ ಭಾಗವಹಿಸಿದ್ದರು. ಬೋಧ್ ಗಯಾದಲ್ಲಿ, ಈ ಕಾರ್ಯಕ್ರಮವನ್ನು ದಕ್ಷಿಣ ಬಿಹಾರದ ಕೇಂದ್ರೀಯ ವಿಶ್ವವಿದ್ಯಾಲಯ, ಐಐಎಂ ಬೋಧ್ ಗಯಾ ಮತ್ತು ರಾಜ್ಯ/ಜಿಲ್ಲಾ ಆಡಳಿತ ಜಂಟಿಯಾಗಿ ಆಯೋಜಿಸಿದ್ದವು. ಮೈಸೂರಿನಲ್ಲಿ, ಇದನ್ನು ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ, ಮೈಸೂರು ಮತ್ತು ರಾಜ್ಯ/ಜಿಲ್ಲಾ ಆಡಳಿತ ಜಂಟಿಯಾಗಿ ಆಯೋಜಿಸಿದ್ದವು ಮತ್ತು ಸೋಮನಾಥಪುರದಲ್ಲಿ, ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮತ್ತು ರಾಜ್ಯ/ಜಿಲ್ಲಾ ಆಡಳಿತ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಈ ಸ್ಥಳಗಳಲ್ಲಿ, ಸಚಿವಾಲಯ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಜನಸಾಮಾನ್ಯರು ಯೋಗ ಅಧಿವೇಶನಗಳಲ್ಲಿ ಭಾಗವಹಿಸಿದರು.
Read More »11ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತ ಮತ್ತು ವಿಶ್ವದಾದ್ಯಂತದ ಜನರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದರು ಮತ್ತು ಯೋಗ ಅಧಿವೇಶನದಲ್ಲಿ ಭಾಗವಹಿಸಿದರು. “ಹನ್ನೊಂದು ವರ್ಷಗಳ ನಂತರ, ಯೋಗವು ಪ್ರಪಂಚದಾದ್ಯಂತ ಕೋಟ್ಯಂತರ ಜನರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ” ಎಂದು ಅವರು ಹೇಳಿದರು. ದೃಷ್ಟಿ ಕಳೆದುಕೊಂಡವರು (ದಿವ್ಯಾಂಗರು) ಬ್ರೈಲ್ ಲಿಪಿಯಲ್ಲಿ ಯೋಗ ಗ್ರಂಥಗಳನ್ನು ಓದುವುದನ್ನು …
Read More »ಪ್ರಧಾನಮಂತ್ರಿ ಅವರು ಭಾರತದ ಯುವಜನತೆಯ ಅಭಿವೃದ್ದಿಗಾಗಿ ಸಂಶೋಧನೆ ಮತ್ತು ನಾವೀನ್ಯತೆಯ ಪರಿಸರವನ್ನು ಸುಧಾರಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ
ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯವು ಬಹಿರಂಗ ಪಡಿಸಿದ 2026ರ ಶ್ರೇಯಾಂಕಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಸ್ವಾಗತಿಸಿದರು. ಇದು ಜಾಗತಿಕ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಭಾರತದ ಯುವಜನತೆಯ ಅಭಿವೃದ್ದಿಗಾಗಿ ಸಂಶೋಧನೆ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಗಳನ್ನು ಮತ್ತಷ್ಟು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರ X ಕುರಿತಾದ ಪೋಸ್ಟ್ ಗೆ ಪ್ರತಿಕ್ರಿಯಿಸಿದ …
Read More »ಒಂದು ರಾಷ್ಟ್ರ, ಒಂದು ಸಮಯ – ಸಮಯ ಸಾರ್ವಭೌಮತ್ವದ ಕಡೆಗೆ ಭಾರತದ ಪಯಣ: ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು
ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು, “ಒಂದು ರಾಷ್ಟ್ರ, ಒಂದು ಸಮಯ” ಎಂಬ ದೂರದೃಷ್ಟಿಯ ಧ್ಯೇಯವಾಕ್ಯದ ಅಡಿಯಲ್ಲಿ, ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ‘ಸಮಯ ಪ್ರಸರಣ’ (Time Dissemination) ಕುರಿತು ಒಂದು ಮಹತ್ವದ ದುಂಡುಮೇಜಿನ ಸಮ್ಮೇಳನವನ್ನು ಆಯೋಜಿಸಿತು. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಗ್ರಾಹಕ ವ್ಯವಹಾರಗಳ ಇಲಾಖೆಯು CSIR-NPL ಮತ್ತು ISRO ಸಹಯೋಗದೊಂದಿಗೆ …
Read More »
Matribhumi Samachar Kannad