ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಭಾರತದ ಆಹಾರ ಸಂಸ್ಕರಣೆ ಕ್ಷೇತ್ರ, ಕ್ರಿಯಾತ್ಮಕ ವಿಧಾನದೊಂದಿಗೆ ಗ್ರಾಮೀಣ ಉದ್ಯಮಿಗಳನ್ನು ಸಬಲಗೊಳಿಸುವುದರ ಜೊತೆಗೆ ಹಲವು ವರ್ಷಗಳಿಂದ ಹೇಗೆ ಗಮನಾರ್ಹ ಪರಿವರ್ತನೆ ಹೊಂದಿದೆ ಎಂದು ಉಲ್ಲೇಖಿಸುವ ಲೇಖನವನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡುತ್ತ, ಪ್ರಧಾನಮಂತ್ರಿಗಳು ಹೀಗೆ ಹೇಳಿದ್ದಾರೆ: “ಕೇಂದ್ರ ಸಚಿವರಾದ ಶ್ರೀ @iChiragPaswan ಅವರು ಭಾರತದ ಆಹಾರ ಸಂಸ್ಕರಣೆ ಕ್ಷೇತ್ರ, ಕ್ರಿಯಾತ್ಮಕ ವಿಧಾನದೊಂದಿಗೆ …
Read More »ಸಾಫ್ಟ್‌ವೇರ್ ಅಪ್ಲಿಕೇಶನ್‌ನ ಉನ್ನತೀಕರಣಕ್ಕಾಗಿ (ಸುಧಾರಿತ ಅಂಚೆ ತಂತ್ರಜ್ಞಾನ 2.O) 24 ಮತ್ತು 25 ಜೂನ್ 2025 (ಮಂಗಳವಾರ ಮತ್ತು ಬುಧವಾರ) ಅಂಚೆ ಕಚೇರಿಗಳು ಕಾರ್ಯನಿರ್ವಹಿಸುವುದಿಲ್ಲ
ದಿನಾಂಕ 26.06.2025 ರಂದು ನಿಗದಿಪಡಿಸಲಾದ ಸಾಫ್ಟ್‌ವೇರ್ ಅನುಷ್ಠಾನಕ್ಕಾಗಿ ಈ ಕೆಳಗೆ ತಿಳಿಸಲಾದ ಅಂಚೆ ಕಚೇರಿಗಳಲ್ಲಿ ಮತ್ತು ಸಂಬಂಧಿತ ಉಪ/ಶಾಖೆ ಅಂಚೆ ಕಚೇರಿಗಳಲ್ಲಿ ದಿನಾಂಕ 24 ಮತ್ತು 25 ಜೂನ್ 2025 (ಮಂಗಳವಾರ ಮತ್ತು ಬುಧವಾರ) ರಂದು ಸಾರ್ವಜನಿಕರಿಗೆ ಅಂಚೆ ಸೇವೆಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಎಚ್‌ಎಎಲ್ ಮುಖ್ಯ ಅಂಚೆ ಕಚೇರಿ ಜಾಲಹಳ್ಳಿ ಮುಖ್ಯ ಅಂಚೆ ಕಚೇರಿ ಬಸವನಗುಡಿ ಮುಖ್ಯ ಅಂಚೆ ಕಚೇರಿ ಗ್ರಾಹಕರಿಗೆ ಸೇವೆಯ ದಕ್ಷತೆ, ರಕ್ಷಣೆ ಹಾಗೂ ಗುಣಮಟ್ಟ ಹೆಚ್ಚಿಸಲು …
Read More »ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತ ಮತ್ತು ಪ್ರಪಂಚದಾದ್ಯಂತ ಇರುವ ಜನರಿಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳನ್ನು ತಿಳಿಸಿದರು. ಈ ವರ್ಷವು 11ನೇ ಬಾರಿಗೆ ಜೂನ್ 21ರಂದು ಜಗತ್ತು ಒಟ್ಟಾಗಿ ಸೇರಿ ಯೋಗವನ್ನು ಸಾಮೂಹಿಕವಾಗಿ ಅಭ್ಯಾಸ …
Read More »ಸಂಬಲ್ ಪುರದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಶ್ರೀ ಧರ್ಮೇಂದ್ರ ಪ್ರಧಾನ್
ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ಬೆಳಿಗ್ಗೆ ಒಡಿಶಾದ ಸಂಬಲ್ಪುರದ ಮಾ ಸಮಲೇಶ್ವರಿ ದೇವಾಲಯ ಸಂಕೀರ್ಣದ ನದಿ ದಂಡೆಯ ಬಳಿ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಡೆದ ಯೋಗ ಅಧಿವೇಶನದಲ್ಲಿ ಭಾಗವಹಿಸಿದರು. ಅಧಿಕಾರಿಗಳು, ಗಣ್ಯರು ಮತ್ತು ಸಂಬಲ್ಪುರದ ನಿವಾಸಿಗಳು ಅವರೊಂದಿಗೆ ಅಧಿವೇಶನದಲ್ಲಿ ಭಾಗವಹಿಸಿದರು. ಯೋಗವು ಕಾಲಾತೀತ ಮತ್ತು ಸಮಗ್ರ ವಿಧಾನವಾಗಿದ್ದು, ಯೋಗವು ಜಗತ್ತಿಗೆ ಭಾರತದ ಕೊಡುಗೆಯಾಗಿದೆ ಎಂದು ಶ್ರೀ ಧರ್ಮೇಂದ್ರ ಪ್ರಧಾನ್ ತಮ್ಮ ಸಂದೇಶದಲ್ಲಿ ತಿಳಿಸಿದರು. ಯೋಗವನ್ನು ಜಾಗತಿಕ ಸಾಮೂಹಿಕ ಆಂದೋಲನ ಮತ್ತು ಜಾಗತಿಕ ಸಾಮರಸ್ಯ ಮತ್ತು ಶಾಂತಿಯ ಸಾಧನವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಿರಂತರ ಪ್ರಯತ್ನಕ್ಕಾಗಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಎಲ್ಲರೂ, ವಿಶೇಷವಾಗಿ ಯುವ ಪೀಳಿಗೆ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು ಶ್ರೀ ಪ್ರಧಾನ್ ಒತ್ತಾಯಿಸಿದರು. ಶಿಕ್ಷಣ ಸಚಿವಾಲಯವು ದಿಲ್ಲಿ ವಿಶ್ವವಿದ್ಯಾಲಯದ ಸಮಾವೇಶ ಕೇಂದ್ರ ಮತ್ತು ಇತರ ಮೂರು ಪ್ರತಿಷ್ಠಿತ ಸ್ಥಳಗಳಾದ ಬಿಹಾರದ ಬೋಧ್ ಗಯಾದ ಮಹಾಬೋಧಿ ದೇವಾಲಯ; ಕರ್ನಾಟಕದ ಮೈಸೂರು ಅರಮನೆ; ಮತ್ತು ಕರ್ನಾಟಕದ ಸೋಮನಾಥಪುರದ ಸೋಮನಾಥಪುರ ದೇವಾಲಯ ಆವರಣದಲ್ಲಿ ಸಾಮೂಹಿಕ ಯೋಗ ಸತ್ರ/ಅಧಿವೇಶನಗಳನ್ನು ಆಯೋಜಿಸಿತ್ತು. ದಿಲ್ಲಿ ವಿಶ್ವವಿದ್ಯಾಲಯದಲ್ಲಿ, ಶಿಕ್ಷಣ ಸಚಿವಾಲಯದ (ಡಿ.ಒ.ಎಚ್.ಇ.-DoHE) ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ. ವಿನೀತ್ ಜೋಶಿ; ಡಿ.ಒ.ಎಚ್.ಇ.ಯ ಸಹಾಯಕ ಕಾರ್ಯದರ್ಶಿ ಶ್ರೀ ಸುನಿಲ್ ಕುಮಾರ್ ಬರ್ನ್ವಾಲ್, ದಿಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಯೋಗೇಶ್ ಸಿಂಗ್; ಅಧ್ಯಾಪಕರು, ಸಿಬ್ಬಂದಿ, ಸಚಿವಾಲಯದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಯೋಗ ಅಧಿವೇಶನದಲ್ಲಿ ಭಾಗವಹಿಸಿದ್ದರು. ಬೋಧ್ ಗಯಾದಲ್ಲಿ, ಈ ಕಾರ್ಯಕ್ರಮವನ್ನು ದಕ್ಷಿಣ ಬಿಹಾರದ ಕೇಂದ್ರೀಯ ವಿಶ್ವವಿದ್ಯಾಲಯ, ಐಐಎಂ ಬೋಧ್ ಗಯಾ ಮತ್ತು ರಾಜ್ಯ/ಜಿಲ್ಲಾ ಆಡಳಿತ ಜಂಟಿಯಾಗಿ ಆಯೋಜಿಸಿದ್ದವು. ಮೈಸೂರಿನಲ್ಲಿ, ಇದನ್ನು ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ, ಮೈಸೂರು ಮತ್ತು ರಾಜ್ಯ/ಜಿಲ್ಲಾ ಆಡಳಿತ ಜಂಟಿಯಾಗಿ ಆಯೋಜಿಸಿದ್ದವು ಮತ್ತು ಸೋಮನಾಥಪುರದಲ್ಲಿ, ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮತ್ತು ರಾಜ್ಯ/ಜಿಲ್ಲಾ ಆಡಳಿತ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಈ ಸ್ಥಳಗಳಲ್ಲಿ, ಸಚಿವಾಲಯ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಜನಸಾಮಾನ್ಯರು ಯೋಗ ಅಧಿವೇಶನಗಳಲ್ಲಿ ಭಾಗವಹಿಸಿದರು.
Read More »11ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತ ಮತ್ತು ವಿಶ್ವದಾದ್ಯಂತದ ಜನರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದರು ಮತ್ತು ಯೋಗ ಅಧಿವೇಶನದಲ್ಲಿ ಭಾಗವಹಿಸಿದರು. “ಹನ್ನೊಂದು ವರ್ಷಗಳ ನಂತರ, ಯೋಗವು ಪ್ರಪಂಚದಾದ್ಯಂತ ಕೋಟ್ಯಂತರ ಜನರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ” ಎಂದು ಅವರು ಹೇಳಿದರು. ದೃಷ್ಟಿ ಕಳೆದುಕೊಂಡವರು (ದಿವ್ಯಾಂಗರು) ಬ್ರೈಲ್ ಲಿಪಿಯಲ್ಲಿ ಯೋಗ ಗ್ರಂಥಗಳನ್ನು ಓದುವುದನ್ನು …
Read More »ಪ್ರಧಾನಮಂತ್ರಿ ಅವರು ಭಾರತದ ಯುವಜನತೆಯ ಅಭಿವೃದ್ದಿಗಾಗಿ ಸಂಶೋಧನೆ ಮತ್ತು ನಾವೀನ್ಯತೆಯ ಪರಿಸರವನ್ನು ಸುಧಾರಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ
ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯವು ಬಹಿರಂಗ ಪಡಿಸಿದ 2026ರ ಶ್ರೇಯಾಂಕಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಸ್ವಾಗತಿಸಿದರು. ಇದು ಜಾಗತಿಕ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಭಾರತದ ಯುವಜನತೆಯ ಅಭಿವೃದ್ದಿಗಾಗಿ ಸಂಶೋಧನೆ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಗಳನ್ನು ಮತ್ತಷ್ಟು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರ X ಕುರಿತಾದ ಪೋಸ್ಟ್ ಗೆ ಪ್ರತಿಕ್ರಿಯಿಸಿದ …
Read More »ಒಂದು ರಾಷ್ಟ್ರ, ಒಂದು ಸಮಯ – ಸಮಯ ಸಾರ್ವಭೌಮತ್ವದ ಕಡೆಗೆ ಭಾರತದ ಪಯಣ: ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು
ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು, “ಒಂದು ರಾಷ್ಟ್ರ, ಒಂದು ಸಮಯ” ಎಂಬ ದೂರದೃಷ್ಟಿಯ ಧ್ಯೇಯವಾಕ್ಯದ ಅಡಿಯಲ್ಲಿ, ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ‘ಸಮಯ ಪ್ರಸರಣ’ (Time Dissemination) ಕುರಿತು ಒಂದು ಮಹತ್ವದ ದುಂಡುಮೇಜಿನ ಸಮ್ಮೇಳನವನ್ನು ಆಯೋಜಿಸಿತು. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಗ್ರಾಹಕ ವ್ಯವಹಾರಗಳ ಇಲಾಖೆಯು CSIR-NPL ಮತ್ತು ISRO ಸಹಯೋಗದೊಂದಿಗೆ …
Read More »ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತ ಸರ್ಕಾರವು ಪ್ರಕೃತಿ ವಿಕೋಪಗಳು ಮತ್ತು ವಿಪತ್ತುಗಳ ಸಮಯದಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಜೊತೆಯಾಗಿ ನಿಂತಿದೆ
2023ರ ಪ್ರವಾಹ, ಭೂಕುಸಿತ, ಮೇಘಸ್ಫೋಟದ ನಂತರ ಹಿಮಾಚಲ ಪ್ರದೇಶ ರಾಜ್ಯಕ್ಕೆ ಚೇತರಿಕೆ ಮತ್ತು ಪುನರ್ ನಿರ್ಮಾಣ ಯೋಜನೆಗೆ ಒಟ್ಟು 2006.40 ಕೋಟಿ ರೂ.ಗಳನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಅನುಮೋದಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್.ಡಿ.ಆರ್.ಎಫ್) ಅಡಿಯಲ್ಲಿ ಚೇತರಿಕೆ ಮತ್ತು ಪುನರ್ನಿರ್ಮಾಣ ನಿಧಿ ವಿಭಾಗದಿಂದ ರಾಜ್ಯಕ್ಕೆ ಆರ್ಥಿಕ ಸಹಾಯದ ಪ್ರಸ್ತಾವನೆಯನ್ನು ಹಣಕಾಸು ಸಚಿವರು, ಕೃಷಿ ಸಚಿವರು ಮತ್ತು …
Read More »ದೇಶದಲ್ಲಿ ಸ್ವಾವಲಂಬನೆ ಬಲಗೊಳಿಸುವಲ್ಲಿ ಭಾರತದ ಯುವಶಕ್ತಿ ನೇತೃತ್ವದ ತಂತ್ರಜ್ಞಾನ ನಾವಿನ್ಯತೆಗೆ ಪ್ರಧಾನಮಂತ್ರಿ ಮೆಚ್ಚುಗೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಂತ್ರಜ್ಞಾನವನ್ನು ಮುಂದುವರಿಸುವಲ್ಲಿ ಮತ್ತು ದೇಶದ ಸ್ವಾವಲಂಬನೆಯನ್ನು ಮುನ್ನಡೆಸುವಲ್ಲಿ ಭಾರತದ ಯುವ ನಾವಿನ್ಯಕಾರರ ಪ್ರಮುಖ ಪಾತ್ರವನ್ನು ಶ್ಲಾಘಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ, ಡಿಜಿಟಲ್ ಇಂಡಿಯಾ ಉಪಕ್ರಮವು ನಾವಿನ್ಯತೆಯ ಸಮರ್ಪಕ ಬಳಕೆಯ ಮೂಲಕ ಯುವಜನರನ್ನು ಸಬಲಗೊಳಿಸುತ್ತಾ ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಿದೆ. ಕಳೆದ 11 ವರ್ಷಗಳಲ್ಲಿ ತಂತ್ರಜ್ಞಾನದ ಶಕ್ತಿಯ ಸಮರ್ಪಕ ಬಳಕೆಯಿಂದಾಗಿ ಭಾರತದ ಜನರಿಗೆ ಅಸಂಖ್ಯಾತ ಅನುಕೂಲಗಳುಂಟಾಗಿದೆ ಎಂದು ಶ್ರೀ ಮೋದಿ …
Read More »ಹೆಚ್ಚುತ್ತಿರುವ ಸ್ಥೂಲಕಾಯದ ಸಮಸ್ಯೆಯನ್ನು ಕಡಿಮೆ ಮಾಡಲು ದೇಶಾದ್ಯಂತ ಉಪಕ್ರಮಕ್ಕೆ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಚಾಲನೆ
ಆರೋಗ್ಯಕರ ಸಮಾಜವು ಬಲವಾದ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ಅಡಿಪಾಯ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಒತ್ತಿ ಹೇಳಿದ್ದಾರೆ. ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಇಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಯೋಜಿಸಿದ್ದ ವಿಶ್ವ ಆಹಾರ ಸುರಕ್ಷತಾ ದಿನದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸಚಿವರು, ತೈಲದಲ್ಲಿ ಕರಿದ ಆಹಾರಗಳ ಸೇವನೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡಲು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಯನ್ನು ನೆನಪಿಸಿಕೊಂಡರು. ಎಚ್ಚರಿಕೆಯಿಂದ ತಿನ್ನುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಶ್ರೀ ನಡ್ಡಾ, ಜನರು ತಮ್ಮ ಕ್ಯಾಲೋರಿ ಸೇವನೆಯ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಮತೋಲಿತ ಆಹಾರ ಸೇವನೆಯ ಪದ್ಧತಿಯನ್ನು ಕಾಪಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಇತ್ತೀಚಿನ ಅಧ್ಯಯನವನ್ನು ಉಲ್ಲೇಖಿಸಿದ ಅವರು, ಇದು 2008 ಮತ್ತು 2020ರ ನಡುವೆ ಭಾರತದಲ್ಲಿ ಬೊಜ್ಜು ಪ್ರಮಾಣವು ನಗರ ಪ್ರದೇಶಗಳಲ್ಲಿ 39.6% ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 23.1%ಕ್ಕೆ ಏರಿದೆ ಎಂಬುದನ್ನು ಬಹಿರಂಗಪಡಿಸಿದೆ. ಈಗಲೇ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, 2050ರ ವೇಳೆಗೆ ಭಾರತದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಬೊಜ್ಜು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಜಾಗೃತಿ ಅಭಿಯಾನದ ಭಾಗವಾಗಿ, ಸಚಿವರು “ಈಟ್ ರೈಟ್ ಆಕ್ಟಿವಿಟಿ ಪುಸ್ತಕ”ವನ್ನು ಬಿಡುಗಡೆ ಮಾಡಿದರು, ಇದನ್ನು ಶಿಕ್ಷಣ ಇಲಾಖೆಯ ಮೂಲಕ ಶಾಲಾ ಮಕ್ಕಳಿಗೆ ಮತ್ತು ರೈಲ್ವೆ ಮಂಡಳಿಯಿಂದ ಪ್ರಯಾಣಿಕರಿಗೆ ವಿತರಿಸಲಾಗುವುದು. ಶ್ರೀ ನಡ್ಡಾ ಅವರು ನವೀನ ವರ್ತನೆ ಬದಲಾವಣೆ ತಂತ್ರವನ್ನು ಅಂದರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ಎಫ್‌ಎಸ್‌ಎಸ್‌ಎಐ ಅಭಿವೃದ್ಧಿಪಡಿಸಿದ ಶಾಲೆಗಳು, ಕೆಲಸದ ಸ್ಥಳಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಕ್ಕರೆ ಮತ್ತು ತೈಲ ಬೋರ್ಡ್ ಗಳ ವ್ಯಾಪಕ ಪ್ರಚಾರವನ್ನು ಶ್ಲಾಘಿಸಿದರು, ಇದು ಪ್ರಬಲ ದೃಶ್ಯ ಪ್ರಚಾರ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ, ದೈನಂದಿನ ಆಹಾರ ಪದಾರ್ಥಗಳಲ್ಲಿ ಅಡಗಿರುವ ಸಕ್ಕರೆ ಮತ್ತು ಕೊಬ್ಬಿನ ಬಗ್ಗೆ ಸ್ಪಷ್ಟ, ಸಂಬಂಧಿತ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಎನ್‌ಸಿಇಆರ್‌ಟಿ ಶಾಲಾ ಪಠ್ಯಕ್ರಮದಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಒಂದು …
Read More »
Matribhumi Samachar Kannad