Monday, January 26 2026 | 12:04:49 PM
Breaking News

Regional

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಗುಜರಾತಿನ ನೆಲಗಡಲೆ ಹೊಲಗಳಲ್ಲಿ ರೈತರನ್ನು ಭೇಟಿಯಾದರು

ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಗುಜರಾತ್ ಭೇಟಿಯ ಸಂದರ್ಭದಲ್ಲಿ ನೆಲಗಡಲೆ ಬೆಳೆಗಾರರನ್ನು ಭೇಟಿ ಮಾಡಿದರು. ಜುನಾಗಢದ ಮಾಣೆಕ್ವಾಡಾ ಗ್ರಾಮದಲ್ಲಿ ನೆಲಗಡಲೆ ಹೊಲಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಿದರು. ಕೇಂದ್ರ ಸಚಿವರು ರೈತರೊಂದಿಗೆ ಹೊಲದಲ್ಲಿ ನೆಲಗಡಲೆ ಬೆಳೆಗಳ ಕಳೆ ತೆಗೆಯುವ ಮತ್ತು ಜಮೀನು ಒಪ್ಪಗೊಳಿಸುವ ಕಾರ್ಯದಲ್ಲಿ ಭಾಗವಹಿಸಿದರು. ಸಂವಾದದ ಸಮಯದಲ್ಲಿ, ಶ್ರೀ ಚೌಹಾಣ್ ಅವರು …

Read More »

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ರೂ. 40 ಕೋಟಿ ಮೌಲ್ಯದ 4 ಕೆಜಿಗೂ ಹೆಚ್ಚು ಕೊಕೇನ್ ಅನ್ನು ಡಿ.ಆರ್.ಐ. ವಶಪಡಿಸಿಕೊಂಡಿದೆ; ಒಬ್ಬರನ್ನು ಬಂಧಿಸಲಾಗಿದೆ

ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿ.ಆರ್.ಐ) ಬೆಂಗಳೂರು ವಲಯ ಘಟಕದ ಅಧಿಕಾರಿಗಳು ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸುತ್ತಾ, 18.07.2025ರ ಮುಂಜಾನೆ ದೋಹಾದಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ಪುರುಷ ಪ್ರಯಾಣಿಕನನ್ನು ತಡೆದರು. ಪ್ರಯಾಣಿಕನ ಸಾಮಾನುವಸ್ತುಗಳನ್ನು ಅವರು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಪ್ರಯಾಣಿಕರು ಅಸಾಧಾರಣವಾಗಿ ಭಾರದ ಎರಡು ಸೂಪರ್ ಹೀರೋ ಕಾಮಿಕ್ಸ್/ ನಿಯತಕಾಲಿಕ ಪುಸ್ತಕಗಳನ್ನು ಅಸಹಜ ರೀತಿಯಲ್ಲಿ ಹೊತ್ತೊಯ್ಯುತ್ತಿರುವುದು ಕಂಡುಬಂತು. ನಿಯತಕಾಲಿಕೆಗಳ ಮುಖಪುಟದಲ್ಲಿ ಮರೆಮಾಡಲಾಗಿರುವ ಬಿಳಿ ಪುಡಿಯನ್ನು ಅಧಿಕಾರಿಗಳು ಎಚ್ಚರಿಕೆಯಿಂದ …

Read More »

ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ರಾಜಸ್ಥಾನದಲ್ಲಿ 435 ಮೆಗಾವ್ಯಾಟ್ ಸೌರ ಸ್ಥಾವರಕ್ಕೆ ಹಸಿರು ನಿಶಾನೆ ತೋರಿದರು, ಇದು ವೇಗ ಮತ್ತು ಸುಸ್ಥಿರತೆಯ ಮಾದರಿ ಎಂದು ಬಣ್ಣಿಸಿದರು

ರಾಜಸ್ಥಾನವು ಶುದ್ಧ ಇಂಧನದ ಜಾಗತಿಕ ಕೇಂದ್ರವಾಗಿ ಪರಿವರ್ತನೆಯಾಗುತ್ತಿರುವುದನ್ನು ಒತ್ತಿಹೇಳುತ್ತಾ, ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ರಾಜ್ಯವು ಈಗ ಭರವಸೆ, ಇಂಧನ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯ ದೀಪವಾಗಿದೆ ಎಂದು ಹೇಳಿದರು. ಝೆಲೆಸ್ಟ್ರಾ ಇಂಡಿಯಾ ಅಭಿವೃದ್ಧಿಪಡಿಸಿದ 435 ಮೆಗಾವ್ಯಾಟ್ ಗೋರ್ಬಿಯಾ ಸೌರ ವಿದ್ಯುತ್ ಯೋಜನೆಯನ್ನು ಸಚಿವರು ಇಂದು ರಾಜಸ್ಥಾನದಲ್ಲಿ ಉದ್ಘಾಟಿಸಿದರು. ದೂರದೃಷ್ಟಿಯ ನಾಯಕತ್ವ ಮತ್ತು ಪ್ರಾಮಾಣಿಕ ಉದ್ದೇಶದ ಮೂಲಕ ಏನು ಸಾಧ್ಯ ಎಂಬುದಕ್ಕೆ ಗೋರ್ಬಿಯಾ ಯೋಜನೆ …

Read More »

ಜುಲೈ 18ರಂದು ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 18ರಂದು ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11:30 ರ ಸುಮಾರಿಗೆ ಬಿಹಾರದ ಮೋತಿಹರಿಯಲ್ಲಿ 7,200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಅವರು ಶಿಲಾನ್ಯಾಸ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಗೆ ದುರ್ಗಾಪುರದಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ 5000 ಕೋಟಿ ರೂ.ಗೂ ಅಧಿಕ …

Read More »

ಚಲ್ಲಘಟ್ಟ ಗೇಟ್‌ನಲ್ಲಿ ರಸ್ತೆ ಕೆಳ ಸೇತುವೆಯ ಉದ್ಘಾಟನೆ ಮತ್ತು ರಾಮೋಹಳ್ಳಿ ಗೇಟ್‌ನ ರಸ್ತೆ ಕೆಳ ಸೇತುವೆಗೆ ಶಂಕುಸ್ಥಾಪನೆಯನ್ನು ಶ್ರೀ ವಿ. ಸೋಮಣ್ಣ ಅವರು ನೆರವೇರಿಸಿದರು

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಇಂದು ಬೆಂಗಳೂರು-ಮೈಸೂರು ರೈಲ್ವೆ ಮಾರ್ಗದ ಕೆಂಗೇರಿ-ಹೆಜ್ಜಾಲ ಭಾಗದಲ್ಲಿ ಬರುವ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 16 (ರಾಮೋಹಳ್ಳಿ ಗೇಟ್)ಕ್ಕೆ ಬದಲಾಗಿ ರಸ್ತೆ ಕೆಳ ಸೇತುವೆಯ (RUB) ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು ಮತ್ತು ಲೆವೆಲ್ ಕ್ರಾಸಿಂಗ್ ಸಂಖ್ಯೆ ಗೇಟ್ ಸಂಖ್ಯೆ 15ರ (ಚಲ್ಲಘಟ್ಟ ಗೇಟ್) ಬದಲಾಗಿ ನಿರ್ಮಿಸಲಾದ ರಸ್ತೆ ಕೆಳ ಸೇತುವೆಯನ್ನು ಉದ್ಘಾಟಿಸಿದರು. ಈ ಯೋಜನೆಗಳಿಂದ  ಈ ಪ್ರದೇಶದಲ್ಲಿ ಸುಗಮ ಸಂಚಾರ ಮತ್ತು ರಸ್ತೆ …

Read More »

ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ‘ಭಾರತದ ಮರಾಠಾ ಮಿಲಿಟರಿ ಭೂದೃಶ್ಯಗಳು’ ಶಾಸನವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪ್ರತಿಷ್ಠಿತ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಭಾರತದ ಮರಾಠಾ ಮಿಲಿಟರಿ ಭೂದೃಶ್ಯಗಳನ್ನು ಸೇರ್ಪಡೆಗೊಳಿಸಿರುವುದಕ್ಕೆ ಅಪಾರ ಹೆಮ್ಮೆ ಮತ್ತು ಸಂತೋಷ ವ್ಯಕ್ತಪಡಿಸಿದ್ದಾರೆ. ಕೆತ್ತಲಾದ ಪರಂಪರೆಯು 12 ಭವ್ಯವಾದ ಕೋಟೆಗಳನ್ನು ಒಳಗೊಂಡಿದೆ – 11 ಮಹಾರಾಷ್ಟ್ರ ಮತ್ತು 1 ತಮಿಳುನಾಡಿನಲ್ಲಿದೆ ಎಂದು ಅವರು ಗಮನಿಸಿದರು. ಮರಾಠಾ ಸಾಮ್ರಾಜ್ಯದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, “ನಾವು ಭವ್ಯವಾದ ಮರಾಠಾ ಸಾಮ್ರಾಜ್ಯದ ಬಗ್ಗೆ ಮಾತನಾಡುವಾಗ, ನಾವು ಅದನ್ನು …

Read More »

ವಿಕಸಿತ ಭಾರತದಲ್ಲಿ ಯುವ ಉದ್ಯೋಗಿಗಳ ಪಾತ್ರ ದೊಡ್ಡದು: ಸುಶ್ರೀ ಶೋಭಾ ಕರಂದ್ಲಾಜೆ

ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂ ಎಸ್ ಎಂ ಇ), ಕಾರ್ಮಿಕ ಹಾಗು ಉದ್ಯೋಗ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನಲ್ಲಿ ಆಯೋಜಿಸಿದ್ದ 16ನೇ ರೋಜ್ ಗಾರ್ ಮೇಳವನ್ನು ಉದ್ಘಾಟಿಸಿ,  ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಈ ವೇಳೆ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಆಶುತೋಷ್ ಮಾಥುರ್ ಮತ್ತು ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಚಿವರಾದ ಸುಶ್ರೀ …

Read More »

ಮಧ್ಯಪ್ರದೇಶದಲ್ಲಿ ಪ್ರಸಾರಕ್ಕೆ ಉತ್ತೇಜನ: ಕೇಂದ್ರ ಸರ್ಕಾರವು ಪ್ರಸಾರ ಮೂಲಸೌಕರ್ಯ ಮತ್ತು ಜಾಲ ಅಭಿವೃದ್ಧಿ (ಬಿ ಐ ಎನ್ ಡಿ) ಯೋಜನೆಯಡಿ ಉಜ್ಜಯಿನಿಯಲ್ಲಿ ಆಕಾಶವಾಣಿ ಕೇಂದ್ರವನ್ನು ಸ್ಥಾಪಿಸಲಿದೆ

ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರನ್ನು ನವದೆಹಲಿಯ ತಮ್ಮ ನಿವಾಸದಲ್ಲಿ ಭೇಟಿಯಾದರು. ಮಧ್ಯಪ್ರದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಮತ್ತು ಭವಿಷ್ಯದ ಅಭಿವೃದ್ಧಿ ಉಪಕ್ರಮಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಸಭೆ ಕೇಂದ್ರೀಕರಿಸಿದರು. ಮಾಧ್ಯಮ ಸಂಪರ್ಕ, ಸಾರ್ವಜನಿಕ ಸಂವಹನ ಮತ್ತು ಪ್ರಸಾರ ಮೂಲಸೌಕರ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಯೋಗವನ್ನು …

Read More »

ತಮಿಳುನಾಡಿನಲ್ಲಿ 1,853 ಕೋಟಿ ರೂ. ವೆಚ್ಚದಲ್ಲಿ ಪರಮಕುಡಿ-ರಾಮನಾಥಪುರಂ ವಿಭಾಗದ (ಎನ್‌ ಎಚ್‌ 87) ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಪುಟ ಅನುಮೋದನೆ

ತಮಿಳುನಾಡಿನಲ್ಲಿ ಪರಮಕುಡಿ – ರಾಮನಾಥಪುರಂ ವಿಭಾಗದ (46.7 ಕಿ.ಮೀ) ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯನ್ನು ಹೈಬ್ರಿಡ್ ಆನ್ಯುಯಿಟಿ ಮೋಡ್ (ಎಚ್‌ ಎ ಎಂ) ನಲ್ಲಿ ಅಭಿವೃದ್ಧಿಪಡಿಸಲಾಗುವುದು, ಇದರ ಒಟ್ಟು ಬಂಡವಾಳ ವೆಚ್ಚ 1,853 ಕೋಟಿ ರೂ. ಪ್ರಸ್ತುತ, ಮಧುರೈ, ಪರಮಕುಡಿ, ರಾಮನಾಥಪುರಂ, ಮಂಟಪಂ, ರಾಮೇಶ್ವರಂ ಮತ್ತು ಧನುಷ್ಕೋಡಿ ನಡುವಿನ ಸಂಪರ್ಕವು ಅಸ್ತಿತ್ವದಲ್ಲಿರುವ ದ್ವಿಪಥ ರಾಷ್ಟ್ರೀಯ ಹೆದ್ದಾರಿ 87 (ಎನ್‌ ಎಚ್-87) ಮತ್ತು …

Read More »

ಉತ್ತರ ಪ್ರದೇಶದ ಆಗ್ರಾದ ಸಿಂಗ್ನಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರದ (ಸಿಐಪಿ) ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಉತ್ತರ ಪ್ರದೇಶದ ಆಗ್ರಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರದ (ಸಿಐಪಿ) ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ (ಸಿ.ಎಸ್.ಎ.ಆರ್ ಸಿ.) ಸ್ಥಾಪಿಸುವ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಪ್ರಸ್ತಾವನೆಗೆ ತನ್ನ ಅನುಮೋದನೆ ನೀಡಿದೆ. ಆಲೂಗಡ್ಡೆ ಮತ್ತು ಗೆಣಸು ಉತ್ಪಾದಕತೆ, ಕಟಾವು ನಂತರದ ನಿರ್ವಹಣೆ ಮತ್ತು ಮೌಲ್ಯವರ್ಧನೆ ಸುಧಾರಿಸುವ ಮೂಲಕ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆ, ರೈತರ …

Read More »