ಸಾಮಾಜಿಕ ಮಾಧ್ಯಮ ಮತ್ತು ನಕಲಿ ಸುದ್ದಿಗಳಿಗೆ ಸಂಬಂಧಿಸಿದಂತೆ ಎತ್ತಲಾಗಿರುವ ವಿಷಯವು ತುಂಬಾ ಗಂಭೀರವಾದುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಲೋಕಸಭೆಗೆ ತಿಳಿಸಿದರು. ನಕಲಿ ಸುದ್ದಿಗಳು ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದು ಅವರು ಹೇಳಿದರು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು, ತಪ್ಪು ಮಾಹಿತಿ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಡೀಪ್‌ಫೇಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಸಾಮಾಜಿಕ ಮಾಧ್ಯಮವನ್ನು …
Read More »ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಕಾಶಿ ತಮಿಳು ಸಂಗಮಮ್ 4.0 ಅನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಮಾತನಾಡಿದರು
ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಕಾಶಿ ಮತ್ತು ತಮಿಳುನಾಡು ನಡುವಿನ ಶಾಶ್ವತ ಸಾಂಸ್ಕೃತಿಕ ಬಾಂಧವ್ಯವನ್ನು ಆಚರಿಸುವ ಕಾಶಿ ತಮಿಳು ಸಂಗಮಮ್ ನ ನಾಲ್ಕನೇ ಆವೃತ್ತಿಯ ಸಂದರ್ಭದಲ್ಲಿ ವಿಶೇಷ ವೀಡಿಯೊ ಸಂದೇಶವನ್ನು ನೀಡಿದರು. 2022ರಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕಾಶಿ ತಮಿಳು ಸಂಗಮಮ್ ಅನ್ನು ಪ್ರಾರಂಭಿಸಿದಾಗಿನಿಂದ, ಈ ಉಪಕ್ರಮವು ಗಂಗಾ ಸಂಸ್ಕೃತಿ ಮತ್ತು ಕಾವೇರಿಯ ಸಂಪ್ರದಾಯಗಳನ್ನು ಒಟ್ಟುಗೂಡಿಸುವ ಪ್ರಮುಖ ರಾಷ್ಟ್ರೀಯ ವೇದಿಕೆಯಾಗಿ ಬೆಳೆದಿದೆ, ಇದು ಉತ್ತರ ಮತ್ತು ದಕ್ಷಿಣದ …
Read More »ಡಿಇಎಚ್ ಉಪಕ್ರಮದಡಿಯಲ್ಲಿ ಸರ್ಕಾರವು ದಕ್ಷಿಣ ಕನ್ನಡವನ್ನು ಜಿಲ್ಲಾ ರಫ್ತು ಕೇಂದ್ರವೆಂದು ಘೋಷಿಸಿದೆ
ಕೇಂದ್ರ ಸರ್ಕಾರವು ಜಿಲ್ಲಾ ರಫ್ತು ಕೇಂದ್ರಗಳು (ಡಿಇಎಚ್) ಉಪಕ್ರಮದ ಅಡಿಯಲ್ಲಿ ದಕ್ಷಿಣ ಕನ್ನಡವನ್ನು ಜಿಲ್ಲಾ ರಫ್ತು ಕೇಂದ್ರವಾಗಿ ಗೊತ್ತುಪಡಿಸಿದೆ, ಸಮುದ್ರಾಹಾರ ಮತ್ತು ಗೋಡಂಬಿಯನ್ನು ಸಂಭಾವ್ಯ ರಫ್ತು ಉತ್ಪನ್ನಗಳಾಗಿ ಸೇರಿಸಲಾಗಿದೆ. ಈ ಮಾನ್ಯತೆಯು ಜಿಲ್ಲೆಯ ಬಲವಾದ ರಫ್ತು ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಮತ್ತು ದೇಶಾದ್ಯಂತ ಸಮತೋಲಿತ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ನಡೆಯುತ್ತಿರುವ ಪ್ರಯತ್ನಗಳಿಗೆ ಅನುಗುಣವಾಗಿದೆ. ಈ ಉಪಕ್ರಮದ ಅಡಿಯಲ್ಲಿ ಗುರುತಿಸಲಾದ ಗಮನ ಕ್ಷೇತ್ರಗಳು ಸ್ಥಳೀಯ ಉದ್ಯಮವನ್ನು ಮತ್ತಷ್ಟು ಬಲಪಡಿಸುವ, ಮೌಲ್ಯವರ್ಧಿತ …
Read More »ಸಂಚಾರ್ ಸಾಥಿ ಆ್ಯಪ್ ಕಡ್ಡಾಯದ ಬಗ್ಗೆ ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟನೆ
ಕೇಂದ್ರ ಸಂಪರ್ಕ ಮತ್ತು ಈಶಾನ್ಯ ವಲಯ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ‘ಸಂಚಾರ್ ಸಾಥಿ’ ಆ್ಯಪ್ ಕುರಿತು ಸ್ಪಷ್ಟನೆ ನೀಡಿದ್ದು, “ಸಂಚಾರ್ ಸಾಥಿ ಸಂಪೂರ್ಣವಾಗಿ ಪ್ರಜಾಸತ್ತಾತ್ಮಕ ಮತ್ತು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ,” ಎಂದು ತಿಳಿಸಿದ್ದಾರೆ. ಬಳಕೆದಾರರು ಈ ಆ್ಯಪ್ ನ ಪ್ರಯೋಜನಗಳನ್ನು ಪಡೆಯಲು ತಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನು ಸಕ್ರಿಯಗೊಳಿಸಿಕೊಳ್ಳಬಹುದು ಮತ್ತು ಯಾವಾಗ ಬೇಕಾದರೂ ತಮ್ಮ ಮೊಬೈಲ್ ಗಳಿಂದ ಇದನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ಡಿಲೀಟ್ ಮಾಡಬಹುದು ಎಂದು …
Read More »ನವೆಂಬರ್ ನಲ್ಲಿ 231 ಕೋಟಿ ಆಧಾರ್ ದೃಢೀಕರಣ ವಹಿವಾಟುಗಳನ್ನು ದಾಖಲಿಸಿದ UIDAI, ನವೆಂಬರ್ 2024ಕ್ಕೆ ಹೋಲಿಸಿದರೆ ಶೇ. 8.47 ರಷ್ಟು ಬೆಳವಣಿಗೆ
ನವೆಂಬರ್ 2025ರಲ್ಲಿ ಆಧಾರ್ ಬಳಕೆದಾರರು ಬರೋಬ್ಬರಿ 231 ಕೋಟಿ ದೃಢೀಕರಣ ವಹಿವಾಟುಗಳನ್ನು ನಡೆಸಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಸುಮಾರು ಶೇ. 8.5 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದು ದೇಶದಲ್ಲಿ ಆಧಾರ್ ನ ಹೆಚ್ಚುತ್ತಿರುವ ಬಳಕೆ ಹಾಗೂ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಯನ್ನು ಸೂಚಿಸುತ್ತದೆ. ಈ ಆರ್ಥಿಕ ವರ್ಷದ ಹಿಂದಿನ ಯಾವುದೇ ತಿಂಗಳುಗಳಿಗೆ ಹೋಲಿಸಿದರೆ, ನವೆಂಬರ್ 2025ರ ದೃಢೀಕರಣ ವಹಿವಾಟುಗಳು ಇಲ್ಲಿಯವರೆಗಿನ ಅತ್ಯಧಿಕವಾಗಿವೆ. ಇದಕ್ಕೂ ಮುನ್ನ ಅಕ್ಟೋಬರ್ ನಲ್ಲಿ …
Read More »ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಕರ್ನಾಟಕದಲ್ಲಿ 14,151 ರೂಫ್ ಟಾಪ್ ಸೋಲಾರ್ ಅಳವಡಿಕೆ; 22,313 ಕುಟುಂಬಗಳಿಗೆ ಪ್ರಯೋಜನ
ದಿನಾಂಕ 31.10.2025 ರಂತೆ, ಕರ್ನಾಟಕ ರಾಜ್ಯದಲ್ಲಿ ಒಟ್ಟು 25,675.39 ಮೆಗಾವ್ಯಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನವನ್ನು ಸ್ಥಾಪಿಸಲಾಗಿದೆ. ಇದು ದೇಶಾದ್ಯಂತ ಸ್ಥಾಪಿಸಲಾದ ಒಟ್ಟು 2,50,643.45 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಸುಮಾರು 10.24% ರಷ್ಟಿದೆ. ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯು (PMSG: MBY) ರೂಫ್ ಟಾಪ್ ಸೋಲಾರ್ (RTS) ವ್ಯವಸ್ಥೆಗಳ ಅಳವಡಿಕೆಗಾಗಿರುವ ಬೇಡಿಕೆ ಆಧಾರಿತ ಯೋಜನೆಯಾಗಿದೆ. ಇದರಲ್ಲಿ ಸ್ಥಳೀಯ ಡಿಸ್ಕಾಮ್‌ನ ಗ್ರಿಡ್ ಸಂಪರ್ಕಿತ ವಿದ್ಯುತ್ ಸಂಪರ್ಕವನ್ನು ಹೊಂದಿರುವ ದೇಶದ …
Read More »ಒಳಚರಂಡಿ ನಿರ್ಮಿಸಲು ಅರ್ಜಿ: ಸ್ಥಳೀಯರ ಮನವಿಗೆ ಕೂಡಲೇ ಸ್ಪಂದಿಸಿದ ಅಧಿಕಾರಿಗಳು
ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಮಾರ್ಖಲ್ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಬೆನಕನಳ್ಳಿಯಲ್ಲಿ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಕೊಳಕು, ನಿಂತ ನೀರಿನಲ್ಲಿ ಗಲೀಜು ಹೆಚ್ಚಾಗಿ ದುರ್ನಾತ ಹರಡುತ್ತಿದ್ದ ಕಾರಣ ವಿವಿಧ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ ಎಂದು ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ಅರ್ಜಿ ನೀಡಿದ್ದರು. ಅರ್ಜಿಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಶೀಘ್ರ ಮತ್ತು ಸಂಪೂರ್ಣವಾಗಿ ಪ್ರದೇಶದ ಪರಿಶೀಲನೆ ನಡೆಸಿ, ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಕಾಂಕ್ರೀಟ್ ಒಳಚರಂಡಿಯನ್ನು ನಿರ್ಮಿಸಬೇಕು ಹಾಗೂ ತೀವ್ರ ಸೊಳ್ಳೆಗಳ …
Read More »ರಾಜ್ಯಸಭಾ ಅಧ್ಯಕ್ಷರಾದ ಶ್ರೀ ಸಿ ಪಿ ರಾಧಾಕೃಷ್ಣನ್ ಅವರ ಸನ್ಮಾನ ಸಮಾರಂಭದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಕನ್ನಡ ಅವತರಣಿಕೆ
ಮಾನ್ಯ ಅಧ್ಯಕ್ಷರೇ, (ಸಂಸತ್ತಿನ) ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿದೆ, ಮತ್ತು ಇಂದು ಈ ಸದನದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಹೆಮ್ಮೆಯ ಕ್ಷಣವಾಗಿದೆ. ನಿಮ್ಮನ್ನು ಸ್ವಾಗತಿಸುತ್ತಾ, ನಿಮ್ಮ ಮಾರ್ಗದರ್ಶನದಲ್ಲಿ ಈ ಸದನದ ಮೂಲಕ ಪ್ರಮುಖ ವಿಷಯಗಳನ್ನು ಚರ್ಚಿಸಲು, ರಾಷ್ಟ್ರವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ಅಮೂಲ್ಯ ಮಾರ್ಗದರ್ಶನವನ್ನು ಪಡೆಯಲು ನಮಗೆಲ್ಲರಿಗೂ ಇದು ಒಂದು ಉತ್ತಮ ಅವಕಾಶವಾಗಿದೆ. ಸದನದ ಪರವಾಗಿ ಮತ್ತು ನನ್ನ ಪರವಾಗಿ, ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ, …
Read More »2025ರ ಸಂಸತ್ ಚಳಿಗಾಲದ ಅಧಿವೇಶನ ಆರಂಭದ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸತ್ತಿನ ಆವರಣದಲ್ಲಿ 2025ರ ಚಳಿಗಾಲದ ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಅಧಿವೇಶನವು ಕೇವಲ ಒಂದು ಆಚರಣೆಯಲ್ಲ, ಬದಲಿಗೆ, ತ್ವರಿತ ಪ್ರಗತಿಯತ್ತ ರಾಷ್ಟ್ರದ ಪಯಣಕ್ಕೆ ಹೊಸ ಶಕ್ತಿಯ ಮೂಲವಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. “ರಾಷ್ಟ್ರದ ಪ್ರಗತಿಯನ್ನು ವೇಗಗೊಳಿಸಲು ಪ್ರಸ್ತುತ ನಡೆಯುತ್ತಿರುವ ಪ್ರಯತ್ನಗಳಿಗೆ ಈ ಅಧಿವೇಶನವು ಹೊಸ ಶಕ್ತಿಯನ್ನು ತುಂಬಲಿದೆ ಎಂಬುದು ನನ್ನ ದೃಢವಾದ ನಂಬಿಕೆ,” ಎಂದು ಶ್ರೀ ಮೋದಿ …
Read More »ಸ್ಥೂಲತೆ ಹಾಗೂ ಮೆಟಾಬಾಲಿಕ್ ಸಿಂಡ್ರೋಮ್‌ಗಳ ಏಕೀಕೃತ ವಿಧಾನಗಳ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ – ಐ.ಐ.ಎಸ್.ಸಿ ಬೆಂಗಳೂರು
ಸ್ಥೂಲತೆ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ಗಳ ಏಕೀಕೃತ ವಿಧಾನಗಳ ಅಂತಾರಾಷ್ಟ್ರೀಯ ಸಮ್ಮೇಳನವು, ಸೆಂಟ್ರಲ್ ಆಯುರ್ವೇದ ರಿಸರ್ಚ್ ಇನ್‌ಸ್ಟಿಟ್ಯೂಟ್ (CARI), ಬೆಂಗಳೂರು ಹಾಗೂ ಐ.ಐ.ಎಸ್.ಸಿ ಮತ್ತು ನಿಮ್ಹಾನ್ಸ್‌ಗಳ ಸಹಯೋಗದಲ್ಲಿ, 2025 ಡಿಸೆಂಬರ್ 1 ರಂದು ಐ.ಐ.ಎಸ್.ಸಿ ಬೆಂಗಳೂರಿನಲ್ಲಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವನ್ನು ಸಿ.ಸಿ.ಆರ್.ಎ.ಎಸ್ ನ 57ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಡಾ. ಬಿ.ಎನ್. ಗಂಗಾಧರ, ಮಾಜಿ ಅಧ್ಯಕ್ಷರು, ಎನ್.ಎಂ.ಸಿ ಹಾಗೂ ನ್ಯಾಷನಲ್ ಆಯುಷ್ ಚೇರ್, ಪ್ರೊಫೆಸರ್ ಎಮೆರಿಟಸ್, ನಿರ್ಮಾನ್ಸ್ ಅವರಿಂದ …
Read More »
Matribhumi Samachar Kannad