ಆರೋಗ್ಯಕರ ಸಮಾಜವು ಬಲವಾದ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ಅಡಿಪಾಯ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಒತ್ತಿ ಹೇಳಿದ್ದಾರೆ. ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಇಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಯೋಜಿಸಿದ್ದ ವಿಶ್ವ ಆಹಾರ ಸುರಕ್ಷತಾ ದಿನದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸಚಿವರು, ತೈಲದಲ್ಲಿ ಕರಿದ ಆಹಾರಗಳ ಸೇವನೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡಲು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಯನ್ನು ನೆನಪಿಸಿಕೊಂಡರು. ಎಚ್ಚರಿಕೆಯಿಂದ ತಿನ್ನುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಶ್ರೀ ನಡ್ಡಾ, ಜನರು ತಮ್ಮ ಕ್ಯಾಲೋರಿ ಸೇವನೆಯ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಮತೋಲಿತ ಆಹಾರ ಸೇವನೆಯ ಪದ್ಧತಿಯನ್ನು ಕಾಪಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಇತ್ತೀಚಿನ ಅಧ್ಯಯನವನ್ನು ಉಲ್ಲೇಖಿಸಿದ ಅವರು, ಇದು 2008 ಮತ್ತು 2020ರ ನಡುವೆ ಭಾರತದಲ್ಲಿ ಬೊಜ್ಜು ಪ್ರಮಾಣವು ನಗರ ಪ್ರದೇಶಗಳಲ್ಲಿ 39.6% ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 23.1%ಕ್ಕೆ ಏರಿದೆ ಎಂಬುದನ್ನು ಬಹಿರಂಗಪಡಿಸಿದೆ. ಈಗಲೇ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, 2050ರ ವೇಳೆಗೆ ಭಾರತದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಬೊಜ್ಜು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಜಾಗೃತಿ ಅಭಿಯಾನದ ಭಾಗವಾಗಿ, ಸಚಿವರು “ಈಟ್ ರೈಟ್ ಆಕ್ಟಿವಿಟಿ ಪುಸ್ತಕ”ವನ್ನು ಬಿಡುಗಡೆ ಮಾಡಿದರು, ಇದನ್ನು ಶಿಕ್ಷಣ ಇಲಾಖೆಯ ಮೂಲಕ ಶಾಲಾ ಮಕ್ಕಳಿಗೆ ಮತ್ತು ರೈಲ್ವೆ ಮಂಡಳಿಯಿಂದ ಪ್ರಯಾಣಿಕರಿಗೆ ವಿತರಿಸಲಾಗುವುದು. ಶ್ರೀ ನಡ್ಡಾ ಅವರು ನವೀನ ವರ್ತನೆ ಬದಲಾವಣೆ ತಂತ್ರವನ್ನು ಅಂದರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ಎಫ್‌ಎಸ್‌ಎಸ್‌ಎಐ ಅಭಿವೃದ್ಧಿಪಡಿಸಿದ ಶಾಲೆಗಳು, ಕೆಲಸದ ಸ್ಥಳಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಕ್ಕರೆ ಮತ್ತು ತೈಲ ಬೋರ್ಡ್ ಗಳ ವ್ಯಾಪಕ ಪ್ರಚಾರವನ್ನು ಶ್ಲಾಘಿಸಿದರು, ಇದು ಪ್ರಬಲ ದೃಶ್ಯ ಪ್ರಚಾರ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ, ದೈನಂದಿನ ಆಹಾರ ಪದಾರ್ಥಗಳಲ್ಲಿ ಅಡಗಿರುವ ಸಕ್ಕರೆ ಮತ್ತು ಕೊಬ್ಬಿನ ಬಗ್ಗೆ ಸ್ಪಷ್ಟ, ಸಂಬಂಧಿತ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಎನ್‌ಸಿಇಆರ್‌ಟಿ ಶಾಲಾ ಪಠ್ಯಕ್ರಮದಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಒಂದು …
Read More »ಬೆಂಗಳೂರಿನ ಐಸಿಎಆರ್-ಐಐಎಚ್ಆರ್ (ICAR-IIHR) ನಲ್ಲಿ – ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR), ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ, ಮೇ 29 ರಿಂದ ಜೂನ್ 12, 2025 ರವರೆಗೆ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ಎಂಬ ರಾಷ್ಟ್ರವ್ಯಾಪಿ ಬೃಹತ್ ಮುಂಗಾರು ಪೂರ್ವ ಅಭಿಯಾನವನ್ನು ಪ್ರಾರಂಭಿಸಿದೆ. ಐಸಿಎಆರ್ ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳು, ಕೆವಿಕೆಗಳು ಮತ್ತು ರಾಜ್ಯ ಸರ್ಕಾರದ ಇಲಾಖೆಗಳನ್ನು ಒಳಗೊಂಡ ಒಮ್ಮುಖ ಕ್ರಮದಲ್ಲಿ ಇದು ನಡೆಯುತ್ತಿದೆ. ಕಳೆದ ಹತ್ತು ದಿನಗಳಲ್ಲಿ ದೇಶದಾದ್ಯಂತ 1896 …
Read More »ತೀವ್ರ ಶಾಖದ ಅಪಾಯಗಳನ್ನು ಪರಿಹರಿಸಲು ಗಡಿಯಾಚೆಗಿನ ಸಹಕಾರಕ್ಕೆ ಡಾ. ಪಿ.ಕೆ. ಮಿಶ್ರಾ ಕರೆ
ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು, ತೀವ್ರ ಶಾಖವನ್ನು ಜಾಗತಿಕ ಬಿಕ್ಕಟ್ಟಾಗಿ ಎದುರಿಸುವ ತುರ್ತು ಅಗತ್ಯವನ್ನು ಒತ್ತಿಹೇಳಿದ್ದಾರೆ, ಇದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಕರೆಯನ್ನು ಪ್ರತಿಧ್ವನಿಸಿದೆ. ಜಿನೀವಾದಲ್ಲಿ ನಿನ್ನೆ (2025ರ ಜೂನ್ 06) ನಡೆದ ತೀವ್ರ ಶಾಖ ಅಪಾಯ ಆಡಳಿತ ಕುರಿತ ವಿಶೇಷ ಅಧಿವೇಶನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಹೆಚ್ಚುತ್ತಿರುವ ತಾಪಮಾನವು ಸಾರ್ವಜನಿಕ ಆರೋಗ್ಯ, ಆರ್ಥಿಕ ಸ್ಥಿರತೆ ಮತ್ತು ಪರಿಸರ ಸ್ಥಿತಿಸ್ಥಾಪಕತ್ವಕ್ಕೆ ವ್ಯವಸ್ಥಿತ ಅಪಾಯವನ್ನುಂಟುಮಾಡುತ್ತದೆ …
Read More »ವಿಪತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು 5 ಪ್ರಮುಖ ಜಾಗತಿಕ ಆದ್ಯತೆಗಳನ್ನು ಪ್ರಧಾನಮಂತ್ರಿ ವಿವರಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ 2025ರ ಅಂತಾರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಭಾಷಣ ಮಾಡಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಯುರೋಪ್ ನಲ್ಲಿ ಮೊಟ್ಟಮೊದಲ ಬಾರಿಗೆ ಆತಿಥ್ಯ ವಹಿಸಿರುವ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ 2025ಕ್ಕೆ ಭಾಗವಹಿಸುವವರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮವನ್ನು ಆಯೋಜಿಸಲು ಬೆಂಬಲ ನೀಡಿದ ಫ್ರಾನ್ಸ್ ಅಧ್ಯಕ್ಷ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಫ್ರಾನ್ಸ್ ಸರ್ಕಾರಕ್ಕೆ …
Read More »ಜೂನ್ 07, 2025 ರಂದು ನಿಮ್ಹಾನ್ಸ್ ನಲ್ಲಿ ನಡೆಯಲಿರುವ FSSAI ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಭಾಗವಹಿಸಲಿದ್ದಾರೆ
ವಿಶ್ವ ಆಹಾರ ಸುರಕ್ಷತಾ ದಿನ 2025 ರ ಆಚರಣೆಯ ಪ್ರಯುಕ್ತ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI), ‘ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಸೇವಿಸಿ, ಸ್ಥೂಲಕಾಯ ತಡೆಯಿರಿ’ ಎಂಬ ವಿಷಯದ ಮೇಲೆ ದಿನಾಂಕ 07 ಜೂನ್ 2025 ರಂದು ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ (NIMHANS) ಒಂದು ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಸ್ಥೂಲಕಾಯ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚುತ್ತಿರುವ ಸಮಸ್ಯೆಯನ್ನು, ನಮ್ಮ ಸಾಂಪ್ರದಾಯಿಕ, ಸುರಕ್ಷಿತ ಮತ್ತು ಸಂಪೂರ್ಣ ಪೌಷ್ಟಿಕ ಆಹಾರ …
Read More »ನಮ್ಮ ಯುವ ಶಕ್ತಿಯು ಬೆಳಗಲು ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ನಾವು ಸದಾ ನೀಡುತ್ತೇವೆ, ಅವರು ವಿಕಸಿತ ಭಾರತದ ಪ್ರಮುಖ ನಿರ್ಮಾತೃಗಳು: ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭಾರತದ ಯುವಕರ ಜಾಗತಿಕ ಸಾಧನೆಗಳನ್ನು ಎತ್ತಿ ತೋರಿಸಿದರು, ಭಾರತದ ಯುವಕರು ಜಾಗತಿಕವಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದು ಹೇಳಿದರು. ಅವುಗಳನ್ನು ಚೈತನ್ಯ, ನಾವೀನ್ಯತೆ ಮತ್ತು ದೃಢಸಂಕಲ್ಪದ ಸಂಕೇತಗಳೆಂದು ವಿವರಿಸಿದ ಅವರು, ಕಳೆದ 11 ವರ್ಷಗಳಲ್ಲಿ ಯುವ ಶಕ್ತಿಯ ಅಪ್ರತಿಮ ಶಕ್ತಿ ಮತ್ತು ದೃಢಸಂಕಲ್ಪವು ರಾಷ್ಟ್ರದ ಬೆಳವಣಿಗೆಗೆ ಉತ್ತೇಜನ ನೀಡಿದೆ ಎಂದು ಹೇಳಿದರು. ನವೋದ್ಯಮಗಳು, ವಿಜ್ಞಾನ, ಕ್ರೀಡೆ, ಸಮುದಾಯ ಸೇವೆ ಮತ್ತು ಸಂಸ್ಕೃತಿ ಸೇರಿದಂತೆ …
Read More »ಬಲವಾದ ಮತ್ತು ಸ್ಪಂದನಶೀಲ ʻಡಿಆರ್‌ಆರ್ʼ ಹಣಕಾಸು ವ್ಯವಸ್ಥೆಯು ಸದೃಢತೆಯ ಮೂಲಾಧಾರವೆಂದು ಭಾರತ ನಂಬಿದೆ: ಡಾ. ಪಿ.ಕೆ.ಮಿಶ್ರಾ
ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು 2025ರ ಜೂನ್ 4ರಂದು ಜಿನೀವಾದಲ್ಲಿ ನಡೆದ ʻವಿಪತ್ತು ಅಪಾಯ ತಗ್ಗಿಸಲು (ಡಿಆರ್‌ಆರ್) ಹಣಕಾಸು ನೆರವು ಕುರಿತ ಸಚಿವರ ದುಂಡುಮೇಜಿನ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ನಿರ್ಣಾಯಕ ಸಭೆಯನ್ನು ಆಯೋಜಿಸಿದ್ದಕ್ಕಾಗಿ ಅವರು ʻವಿಪತ್ತು ಅಪಾಯ ತಗ್ಗಿಸುವ ಕುರಿತಾದ ವಿಶ್ವಸಂಸ್ಥೆಯ ಕಚೇರಿʼ(ಯುಎನ್‌ಡಿಆರ್‌ಆರ್) ಮತ್ತು ಅದರ ಪಾಲುದಾರರನ್ನು ಶ್ಲಾಘಿಸಿದರು. ಜಿ20 ಅಧ್ಯಕ್ಷತೆ ಮೂಲಕ ಜಾಗತಿಕ ಸಂವಾದವನ್ನು ಮುಂದುವರಿಸುವಲ್ಲಿ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಕೊಡುಗೆಗಳನ್ನು ಸಹ ಭಾರತ ಗುರುತಿಸಿತು. ʻವಿಪತ್ತು ಅಪಾಯ ತಗ್ಗಿಸಲು ಹಣಕಾಸು ನೆರವುʼ ಎಂಬುದು ಬಾಹ್ಯ ವಿಷಯವಲ್ಲ. ಬದಲಿಗೆ, ಅದು ರಾಷ್ಟ್ರೀಯ ವಿಪತ್ತು ನಿರ್ವಹಣಾ ವ್ಯವಸ್ಥೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಯಾಗಿದೆ. ಜೊತೆಗೆ ಹೆಚ್ಚುತ್ತಿರುವ ಹವಾಮಾನ ಮತ್ತು ವಿಪತ್ತು ಅಪಾಯಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ ಲಾಭಗಳನ್ನು ರಕ್ಷಿಸಲು ಇದು ಅತ್ಯಂತ ಮುಖ್ಯವಾಗಿದೆ ಎಂದು ಡಾ. ಮಿಶ್ರಾ ಒತ್ತಿಹೇಳಿದರು. ಬಲವಾದ ಮತ್ತು ಸ್ಪಂದನಶೀಲವಾದ ʻವಿಪತ್ತು ಅಪಾಯ ತಗ್ಗಿಸಲು ಹಣಕಾಸು ನೆರವುʼ ವ್ಯವಸ್ಥೆಯು ದೇಶವೊಂದರ ಸದೃಢತೆಗೆ ಮೂಲಾಧಾರವಾಗಿದೆ ಎಂಬ ಭಾರತದ ನಂಬಿಕೆಯನ್ನು ಅವರು ಪುನರುಚ್ಚರಿಸಿದರು. ʻವಿಪತ್ತು ಅಪಾಯ ತಗ್ಗಿಸುವಿಕೆಗಾಗಿ ಹಣಕಾಸು ನೆರವುʼ ಕ್ಷೇತ್ರದಲ್ಲಿ ಭಾರತದ ಪ್ರಯಾಣವನ್ನು ಎತ್ತಿ ತೋರಿದ ಅವರು, ಈ ಮೊದಲಿನ ಹಣಕಾಸು ಆಯೋಗಗಳು ಈ ನಿಟ್ಟಿನಲ್ಲಿ 60 ದಶಲಕ್ಷ ರೂಪಾಯಿಗಳ (ಸುಮಾರು 0.7 ದಶಲಕ್ಷ ಅಮೆರಿಕನ್ ಡಾಲರ್) ಆರಂಭಿಕ ನಿಧಿ ಹಂಚಿಕೆ ಮಾಡಿವೆ ಎಂದು ಮಾಹಿತಿ ನೀಡಿದರು. ಇಂದು, 15ನೇ ಹಣಕಾಸು ಆಯೋಗದ ಅಡಿಯಲ್ಲಿ ಈ ನಿಟ್ಟಿನಲ್ಲಿ ಒಟ್ಟು ವೆಚ್ಚವು 2.32 ಲಕ್ಷ ಕೋಟಿ ರೂಪಾಯಿಗಳನ್ನು (ಸುಮಾರು 28 ಶತಕೋಟಿ ಅಮೆರಿಕನ್ ಡಾಲರ್) ಮೀರಿದೆ ಎಂದು ಹೇಳಿದರು. ʻವಿಪತ್ತು ನಿರ್ವಹಣಾ ಕಾಯ್ದೆ-2005ʼರ ಬೆಂಬಲದೊಂದಿಗೆ ರಾಷ್ಟ್ರೀಯ ಮಟ್ಟದಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟಗಳಿಗೆ ಪೂರ್ವನಿರ್ಧರಿತ, ನಿಯಮ ಆಧಾರಿತ ಹಂಚಿಕೆಗಳ ಮಹತ್ವವನ್ನು ಮಿಶ್ರಾ ಅವರು ಒತ್ತಿ ಹೇಳಿದರು. ಈ ರೂಪಾಂತರವು ವಿಪತ್ತು ಹಣಕಾಸು ಪ್ರತಿಕ್ರಿಯಾತ್ಮಕವಾಗಿರುವುದರ ಬದಲು, ರಚನಾತ್ಮಕ ಮತ್ತು ನಿರೀಕ್ಷಿತವಾಗಿರುವಂತೆ ಖಾತ್ರಿಪಡಿಸಿದೆ ಎಂದು ಅವರು ಹೇಳಿದರು. ನಾಲ್ಕು ಪ್ರಮುಖ ತತ್ವಗಳ ಮೇಲೆ ನಿರ್ಮಿಸಲಾದ ಭಾರತದ ʻವಿಪತ್ತು ಅಪಾಯ ತಗ್ಗಿಸುವಿಕೆಗಾಗಿ ಹಣಕಾಸು ನೆರವುʼ ಕಾರ್ಯವಿಧಾನವನ್ನು ಅವರು ಶ್ರೀ ಮಿಶ್ರಾ ವಿವರಿಸಿದರು. ಮೊದಲನೆಯ ತತ್ವವೆಂದರೆ ಸನ್ನದ್ಧತೆ, ಅಪಾಯ ತಗ್ಗಿಸುವಿಕೆ, …
Read More »ಜಿಪಿಡಿಆರ್‌ಆರ್ 2025ರಲ್ಲಿ ಜಿ 20, ಡಬ್ಲ್ಯುಎಚ್‌ಒ ಮತ್ತು ಎಯು ಜೊತೆ ಡಾ.ಪಿ.ಕೆ.ಮಿಶ್ರಾ ಮಾತುಕತೆ
ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು ಇಂದು ಜಿನೀವಾದಲ್ಲಿ ನಡೆದ ವಿಪತ್ತು ಅಪಾಯ ತಗ್ಗಿಸುವ ಜಾಗತಿಕ ವೇದಿಕೆ (ಜಿಪಿಡಿಆರ್‌ಆರ್) 2025ರ ಅಂಚಿನಲ್ಲಿ ನಡೆದ ಜಿ20 ವಿಪತ್ತು ಅಪಾಯ ತಗ್ಗಿಸುವ (ಡಿಆರ್‌ಆರ್) ಕಾರ್ಯ ಗುಂಪಿನ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು. ಚರ್ಚೆಯ ಸಮಯದಲ್ಲಿ, ಅಭಿವೃದ್ಧಿಯ ಅನಿವಾರ್ಯತೆಗಳ ಜೊತೆಗೆ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಜಾಗತಿಕ ವಿಪತ್ತು ಅಪಾಯ ತಗ್ಗಿಸುವ ಪ್ರಯತ್ನಗಳನ್ನು ಮುನ್ನಡೆಸುವಲ್ಲಿ ಜಿ20ಯ ಪ್ರಮುಖ ಪಾತ್ರವನ್ನು ಅವರು ಒತ್ತಿ …
Read More »ಪ್ರಧಾನಮಂತ್ರಿ ಅವರ ಭೇಟಿಗೆ ಮುಂಚಿತವಾಗಿ ಚೆನಾಬ್ ಸೇತುವೆಯಲ್ಲಿನ ವ್ಯವಸ್ಥೆಗಳನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಪರಿಶೀಲಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪರ್ಕವನ್ನು ಹೆಚ್ಚಿಸಲು 46,000 ಕೋಟಿ ರೂ.ಗಳ ದೂರದೃಷ್ಟಿ ಮತ್ತು ಪ್ರಮುಖ ಯೋಜನೆಗಳನ್ನು ರೂಪಿಸಿದ್ದಾರೆ, ಇದು ಈ ಪ್ರದೇಶದ ಸಂಪರ್ಕದಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭೇಟಿಗೆ ಮುಂಚಿತವಾಗಿ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಅಪ್ರತಿಮ ಚೆನಾಬ್ ಸೇತುವೆಯ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಚೆನಾಬ್ ರೈಲು ಸೇತುವೆ ಜಮ್ಮು ಮತ್ತು …
Read More »ಏಕ್ ಪೆಡ್ ಮಾ ಕೆ ನಾಮ್ ಉಪಕ್ರಮವನ್ನು ಬಲಪಡಿಸುವ ಮತ್ತು ಅರಾವಳಿ ಹಸಿರು ಗೋಡೆ ಯೋಜನೆಯಡಿಯಲ್ಲಿ ಅರಾವಳಿ ಶ್ರೇಣಿಯನ್ನು ಮರು ಅರಣ್ಯೀಕರಣಗೊಳಿಸುವ ಸಂಕಲ್ಪದೊಂದಿಗೆ ದಿಲ್ಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನವನದಲ್ಲಿ ಸಸಿ ನೆಟ್ಟ ಪ್ರಧಾನಮಂತ್ರಿ
ವಿಶ್ವ ಪರಿಸರ ದಿನದ ಅಂಗವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿಲ್ಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಏಕ್ ಪೆಡ್ ಮಾ ಕೆ ನಾಮ್ ಉಪಕ್ರಮವನ್ನು ಬಲಪಡಿಸುವ ಸಲುವಾಗಿ ಸಸಿ ನೆಟ್ಟಿದ್ದಾರೆ. ಅರಾವಳಿ ಹಸಿರು ಗೋಡೆ ಯೋಜನೆಯಡಿಯಲ್ಲಿ ಅರಾವಳಿ ಶ್ರೇಣಿಯನ್ನು ಮರು ಅರಣ್ಯೀಕರಣಗೊಳಿಸುವ ಮಹತ್ವವನ್ನು ಶ್ರೀ ಮೋದಿ ಅವರು ಎತ್ತಿ ತೋರಿಸಿದ್ದಾರೆ. ಭೂಗ್ರಹದ ಅತ್ಯಂತ ಹಳೆಯ ಶ್ರೇಣಿಗಳಲ್ಲಿ ಒಂದಾದ ಅರಾವಳಿ ವಲಯವು ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದಿಲ್ಲಿಯನ್ನು ವ್ಯಾಪಿಸಿದೆ ಎಂಬುದರತ್ತ ಪ್ರಧಾನಿ ಗಮನ ಸೆಳೆದರು. ಈ ಪ್ರದೇಶವು ಹಲವಾರು ಪರಿಸರ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಅವುಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು. ಅರಾವಳಿ ಶ್ರೇಣಿ ಮತ್ತು ಅದರಾಚೆಗೆ, ಸಾಂಪ್ರದಾಯಿಕ ಗಿಡ ನೆಡುವ ವಿಧಾನಗಳ ಜೊತೆಗೆ, ವಿಶೇಷವಾಗಿ ಸ್ಥಳಾವಕಾಶದ ಮಿತಿಗಳಿರುವ ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ನಾವು ಹೊಸ ತಂತ್ರಗಳನ್ನು ಪ್ರೋತ್ಸಾಹಿಸುತ್ತೇವೆ ಎಂದು ಶ್ರೀ ಮೋದಿ ಹೇಳಿದರು. ಮೇರಿ ಲೈಫ್ ಪೋರ್ಟಲ್‌ನಲ್ಲಿ ತೋಟಗಾರಿಕೆ/ಪ್ಲಾಂಟೇಶನ್ ಚಟುವಟಿಕೆಗಳನ್ನು ಜಿಯೋ-ಟ್ಯಾಗ್ ಮಾಡಲಾಗುತ್ತದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದೂ ಶ್ರೀ ಮೋದಿ ಹೇಳಿದರು. ದೇಶದ ಯುವಜನರು ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ಭೂಗ್ರಹದ ಹಸಿರು ಹೊದಿಕೆಯನ್ನು ಹೆಚ್ಚಿಸಲು ಕೊಡುಗೆ ನೀಡಬೇಕೆಂದು ಪ್ರಧಾನಿ ಆಗ್ರಹಿಸಿದರು. ಈ ಬಗ್ಗೆ X ಥ್ರೆಡ್‌ನಲ್ಲಿ ಪ್ರಧಾನಿ ಹೀಗೆ ಹೇಳಿದ್ದಾರೆ; “ಇಂದು, #ವಿಶ್ವ ಪರಿಸರ ದಿನದಂದು(#WorldEnvironmentDay), ನಾವು ವಿಶೇಷ ಗಿಡ ನೆಡುವ ಅಭಿಯಾನದೊಂದಿಗೆ #EkPedMaaKeNaam ಉಪಕ್ರಮವನ್ನು ಬಲಪಡಿಸಿದ್ದೇವೆ. ದಿಲ್ಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನವನದಲ್ಲಿ ನಾನು ಸಸಿ ನೆಟ್ಟಿದ್ದೇನೆ. ಇದು ಅರಾವಳಿ ಶ್ರೇಣಿಯನ್ನು – ಅರಾವಳಿ ಹಸಿರು ಗೋಡೆ ಯೋಜನೆಯಲ್ಲಿ ಮರು ಅರಣ್ಯೀಕರಣಗೊಳಿಸುವ ನಮ್ಮ ಪ್ರಯತ್ನದ ಒಂದು ಭಾಗವಾಗಿದೆ.” “ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದಿಲ್ಲಿಯನ್ನು ಒಳಗೊಂಡ ಅರಾವಳಿ ಶ್ರೇಣಿಯು ನಮ್ಮ ಭೂಗ್ರಹದ ಅತ್ಯಂತ ಹಳೆಯ ಶ್ರೇಣಿಯಾಗಿದೆ ಎಂದು ವ್ಯಾಪಕವಾಗಿ ತಿಳಿಯಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ಶ್ರೇಣಿಗೆ ಸಂಬಂಧಿಸಿದ ಹಲವಾರು ಪರಿಸರ ಸವಾಲುಗಳು ಮುನ್ನೆಲೆಗೆ ಬಂದಿವೆ, ಇವುಗಳನ್ನು ತಗ್ಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಶ್ರೇಣಿಯೊಂದಿಗೆ ಸಂಪರ್ಕ ಹೊಂದಿದ ಪ್ರದೇಶಗಳನ್ನು ಪುನರುಜ್ಜೀವನಗೊಳಿಸುವುದರತ್ತ ನಾವು ಗಮನ ಹರಿಸಿದ್ದೇವೆ. ನಾವು ಆಯಾ ಸ್ಥಳೀಯ ಆಡಳಿತಗಳೊಂದಿಗೆ ಕೆಲಸ ಮಾಡಲಿದ್ದೇವೆ ಮತ್ತು ನೀರಿನ ವ್ಯವಸ್ಥೆಗಳನ್ನು ಸುಧಾರಿಸುವುದು, ಧೂಳಿನ ಬಿರುಗಾಳಿಗಳನ್ನು ನಿಗ್ರಹಿಸುವುದು, ಥಾರ್ ಮರುಭೂಮಿಯು ಪೂರ್ವಕ್ಕೆ ವಿಸ್ತರಣೆಗೊಳ್ಳುವುದನ್ನು ನಿಲ್ಲಿಸುವುದು ಸೇರಿದಂತೆ ಇನ್ನೂ ಹೆಚ್ಚಿನ ವಿಷಯಗಳಿಗೆ ಒತ್ತು ನೀಡಲಿದ್ದೇವೆ.” “ಅರಾವಳಿ ಶ್ರೇಣಿ ಮತ್ತು ಅದರಾಚೆಗೆ, ಸಾಂಪ್ರದಾಯಿಕ ಗಿಡ ನೆಡುವ ವಿಧಾನಗಳ …
Read More »
Matribhumi Samachar Kannad