बुधवार, जनवरी 08 2025 | 11:53:27 PM
Breaking News
Home / अन्य समाचार / ಡಬ್ಲ್ಯು.ಎ.ಎಂ. (ವಾಮ್) ! ಮಾಂಗಾ, ಅನಿಮೆ ಮತ್ತು ವೆಬ್ಟೂನ್ ಪ್ರತಿಭೆಯಲ್ಲಿ ಕಂಗೊಳಿಸಿದ ದಿಲ್ಲಿ; ಸ್ಪರ್ಧಿಗಳಿಂದ ರೋಮಾಂಚಕ ಕಾಸ್ಪ್ಲೇ (ವೇಷ ಭೂಷಣ ಸ್ಪರ್ಧೆ) ಮತ್ತು ಧ್ವನಿ ನಟನಾ (ಧ್ವನಿ ಅನುಕರಣೆ) ಪ್ರದರ್ಶನ ಅನಾವರಣ

ಡಬ್ಲ್ಯು.ಎ.ಎಂ. (ವಾಮ್) ! ಮಾಂಗಾ, ಅನಿಮೆ ಮತ್ತು ವೆಬ್ಟೂನ್ ಪ್ರತಿಭೆಯಲ್ಲಿ ಕಂಗೊಳಿಸಿದ ದಿಲ್ಲಿ; ಸ್ಪರ್ಧಿಗಳಿಂದ ರೋಮಾಂಚಕ ಕಾಸ್ಪ್ಲೇ (ವೇಷ ಭೂಷಣ ಸ್ಪರ್ಧೆ) ಮತ್ತು ಧ್ವನಿ ನಟನಾ (ಧ್ವನಿ ಅನುಕರಣೆ) ಪ್ರದರ್ಶನ ಅನಾವರಣ

Follow us on:

ಮೀಡಿಯಾ & ಎಂಟರ್ಟೈನ್ಮೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಇಎಐ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ, ಸಂಚಲನ ಮೂಡಿಸುವ ಡಬ್ಲ್ಯು.ಎ.ಎಂ ಯನ್ನು (ವೇವ್ಸ್ ಅನಿಮೆ & ಮಾಂಗಾ ಸ್ಪರ್ಧೆ) ಯಶಸ್ವಿಯಾಗಿ ಆಯೋಜಿಸಿದ್ದು, 2024 ರ ನವೆಂಬರ್ 30 ರಂದು ದಿಲ್ಲಿಯಲ್ಲಿ ನಡೆಯಿತು. ದಿಲ್ಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ನಲ್ಲಿ ನಡೆದ, ಡಬ್ಲ್ಯುಎಎಂನ ಈ ಇತ್ತೀಚಿನ ಕಂತು ಉತ್ಸಾಹಭರಿತ ಜನಸಮೂಹವನ್ನು ಆಕರ್ಷಿಸಿತು ಮತ್ತು ಭಾರತದ ಮಾಂಗಾ, ಅನಿಮೆ ಮತ್ತು ವೆಬ್ಟೂನ್ ಸೃಷ್ಟಿಕರ್ತರ ಅಪಾರ ಸೃಜನಶೀಲ ಸಾಮರ್ಥ್ಯವನ್ನು ಅನಾವರಣಗೊಳಿಸಿತು.

ಗುವಾಹಟಿ, ಕೋಲ್ಕತಾ, ಭುವನೇಶ್ವರ ಮತ್ತು ವಾರಣಾಸಿಯಲ್ಲಿ ತನ್ನ ಯಶಸ್ಸನ್ನು ಆಧರಿಸಿ, ವಾಮ್! ದಿಲ್ಲಿಯಲ್ಲಿ ಸ್ಪರ್ಧೆಯನ್ನು ಆಯೋಜಿಸಿದ್ದು, ಮಾಂಗಾ (ಜಪಾನೀಸ್ ಶೈಲಿಯ ಕಾಮಿಕ್ಸ್), ವೆಬ್ಟೂನ್ (ಡಿಜಿಟಲ್ ಕಾಮಿಕ್ಸ್) ಮತ್ತು ಅನಿಮೆ (ಜಪಾನೀ ಶೈಲಿಯ ಅನಿಮೇಷನ್) ಸೇರಿದಂತೆ ಈ ವಿಭಾಗಗಳಲ್ಲಿ 199 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ 28 ಮಂದಿ ರೋಮಾಂಚಕ ಕಾಸ್ಪ್ಲೇ (ವೇಷ ಭೂಷಣ ಸ್ಪರ್ಧೆ) ಮತ್ತು ಧ್ವನಿ ನಟನಾ ಸ್ಪರ್ಧಿಗಳು ಭಾಗವಹಿಸಿದ್ದರು. ಆ ಮೂಲಕ  ಪ್ರೀತಿಯ ಅನಿಮೆ ಮತ್ತು ಗೇಮಿಂಗ್ ಪಾತ್ರಗಳಿಗೆ ಜೀವ ತುಂಬಿದರು.

ಈ ಕಾರ್ಯಕ್ರಮದಲ್ಲಿ ವಿಯೆಟ್ನಾಂ ನಟಿ, ನಿರ್ದೇಶಕಿ ಮತ್ತು ನಿರ್ಮಾಪಕಿ ಮೈ ಥು ಹುಯೆನ್, ಅಮೆರಿಕನ್-ವಿಯೆಟ್ನಾಂ ನಿರ್ಮಾಪಕಿ ಮತ್ತು ನಟಿ ಜಾಕ್ವೆಲಿನ್ ಥಾವೊ ನ್ಗುಯೆನ್, ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಸುಶೀಲ್ ಕುಮಾರ್ ಭಾಸಿನ್ ಮತ್ತು ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಅಸೋಸಿಯೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ಕಮಲ್ ಪಹುಜಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮೈ ಥು ಹುಯೆನ್, ಭಾರತದಲ್ಲಿ ಮೂಡಿ ಬರುತ್ತಿರುವ ಪ್ರತಿಭೆಯನ್ನು ಶ್ಲಾಘಿಸಿದರು ಮತ್ತು ತಮ್ಮ ಮುಂಬರುವ ಚಿತ್ರ ’ಎ ಫ್ರೆಜೈಲ್ ಫ್ಲವರ್” ಬಿಡುಗಡೆಯ ಬಗ್ಗೆ ತಮ್ಮ ಸಂಭ್ರಮವನ್ನು ಹಂಚಿಕೊಂಡರು. ಅವರು ಈ ಚಿತ್ರವನ್ನು ಪುನಶ್ಚೇತನದ ಮತ್ತು ಸ್ವಯಂ-ಅನ್ವೇಷಣೆಯ ಶಕ್ತಿಯುತ ಕಥೆ್ ಎಂದು ಪರಿಚಯಿಸಿದರು, ಬೆರಗುಗೊಳಿಸುವ ದೃಶ್ಯಗಳನ್ನು ಆಳವಾದ ಭಾವನಾತ್ಮಕ ನಿರೂಪಣೆಯೊಂದಿಗೆ ರೂಪಿಸಲಾಗಿದೆ ಎಂದು ಹೇಳಿದರು.

ಕಾಸ್ಪ್ಲೇ ಸ್ಪರ್ಧೆ (ವೇಷ ಭೂಷಣ)   ಮತ್ತು ಧ್ವನಿ ನಟನೆ (ಧ್ವನಿ ಅನುಕರಣ) ಸ್ಪರ್ಧೆ

ದಿನದ ಪ್ರಮುಖ ಆಕರ್ಷಣೆ ಎಂದರೆ ಬಹು ನಿರೀಕ್ಷಿತ ಕಾಸ್ಪ್ಲೇ ಸ್ಪರ್ಧೆ, ಅಲ್ಲಿ ಭಾಗವಹಿಸುವವರು ತಮ್ಮ ನೆಚ್ಚಿನ ಅನಿಮೆ ಮತ್ತು ಗೇಮಿಂಗ್ ಪಾತ್ರಗಳನ್ನು ಸೃಜನಶೀಲತೆ ಮತ್ತು ನಿಖರತೆಯೊಂದಿಗೆ ಸಾಕಾರಗೊಳಿಸಿದರು. 14 ನುರಿತ ಕಲಾಕಾರರನ್ನು ಒಳಗೊಂಡ ಧ್ವನಿ ನಟನೆ ಸ್ಪರ್ಧೆಯು ಪ್ರದರ್ಶನ ಕಲೆಗಳಲ್ಲಿ ಭಾರತದ ವೃದ್ಧಿಸುತ್ತಿರುವ ಪರಿಣತಿಯನ್ನು ಅನಾವರಣ ಮಾಡಿತು.

ಈ ಉತ್ಸಾಹವನ್ನು ಹೆಚ್ಚಿಸಲು, ಕಾರ್ಯಕ್ರಮದಲ್ಲಿ ಪ್ರಸ್ತುತ ವೈಭವಿ ಸ್ಟುಡಿಯೋಸ್ ಅಭಿವೃದ್ಧಿಪಡಿಸುತ್ತಿರುವ ಭಾರತದ ಮೊದಲ ಅನಿಮೆ ಟ್ರಿಯೋದ ಇಣುಕು ನೋಟ ವಿಶೇಷ ಪ್ರದರ್ಶನ ಪೂರ್ವ ವೀಕ್ಷಣೆಗೆ ಲಭ್ಯವಿತ್ತು, ಇದು ಪ್ರೇಕ್ಷಕರಲ್ಲಿ ಸ್ಫೂರ್ತಿ ಮತ್ತು ನಿರೀಕ್ಷೆಯನ್ನು ಮೂಡಿಸಿತು.

ಕಾರ್ಯಕ್ರಮವು ಭವ್ಯ ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ಕೊನೆಗೊಂಡಿತು, ವಿಜೇತರನ್ನು ಬಿಸಿ-1, 2, 3 ಮತ್ತು ಎನ್ಎಂಸಿ ಪಿಎ ಉಸ್ತುವಾರಿ ಹೊಂದಿರುವ ಒಎಸ್ಡಿ (ಬಿಸಿ) ಶ್ರೀ ಅನುಭವ್ ಸಿಂಗ್ ಮತ್ತು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್ವೇರ್ ರಫ್ತು ಉತ್ತೇಜನ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಗುರ್ಮೀತ್ ಸಿಂಗ್ ಅವರು ಸನ್ಮಾನಿಸಿದರು. ವಿಜೇತರಿಗೆ ನಗದು ಬಹುಮಾನಗಳು, ವಾಕಾಮ್ ನಿಂದ ಪೆನ್ ಟ್ಯಾಬ್ಲೆಟ್ ಗಳು, ಫೇಬರ್-ಕ್ಯಾಸ್ಟಲ್ ನಿಂದ ಗೂಡಿ ಹ್ಯಾಂಪರ್ ಗಳು ಮತ್ತು ಟ್ರಿಯೋದ ಅಧಿಕೃತ ಸ್ಮರಣಿಕೆಗಳನ್ನು ನೀಡಲಾಯಿತು, ಅವರ ಅತ್ಯುತ್ತಮ ಸಾಧನೆಗಳನ್ನು ಸಂಭ್ರಮಿಸಲಾಯಿತು.

WAM! ಇದು ಕೇವಲ ಸ್ಪರ್ಧೆಯಲ್ಲ ಅದಕ್ಕಿಂತ  ಹೆಚ್ಚಿನದಾಗಿದೆ – ಇದು ಭಾರತದ ಸೃಜನಶೀಲ ಮನಸ್ಸುಗಳನ್ನು ಪ್ರೇರೇಪಿಸುವ ಮತ್ತು ಸಬಲೀಕರಣಗೊಳಿಸುವ ಆಂದೋಲನವಾಗಿದೆ. ಪ್ರತಿಭೆಯನ್ನು ಪೋಷಿಸುವ ಮೂಲಕ ಮತ್ತು ಬೌದ್ಧಿಕ ಆಸ್ತಿ ಸೃಷ್ಟಿಯ ವೇಗವನ್ನು ವರ್ಧಿಸುವ ಮೂಲಕ, ಭಾರತವನ್ನು ಮಾಂಗಾ, ಅನಿಮೆ ಮತ್ತು ವೆಬ್ಟೂನ್ಗಳ ಜಾಗತಿಕ ಕೇಂದ್ರವಾಗಿ ರೂಪಿಸುವ ಗುರಿಯನ್ನು ನಾವು ಹೊಂದಿದ್ದೇವೆ. ದಿಲ್ಲಿಯಲ್ಲಿ ಕಂಡು ಬಂದ ಉತ್ಸಾಹ ಮತ್ತು ನಾವೀನ್ಯತೆ ಭಾರತದ ಸೃಷ್ಟಿಕರ್ತ ಆರ್ಥಿಕತೆಯ ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗಿದೆ.

ದಿಲ್ಲಿ ವಾಮ್! ನಲ್ಲಿ ಗೆದ್ದವರು

  ಗುಂಪು/ವರ್ಗ ಸ್ಥಾನ ಗೆದ್ದವರು ಬಹುಮಾನದ ಮೊತ್ತ (ರೂ.ಗಳಲ್ಲಿ)
ಕಾಸ್ಪ್ಲೇ

 

ಗೆದ್ದವರು ವಿಶ್ 5000
ಎರಡನೇ ಸ್ಥಾನ ದ್ರುವ್ ಟುಲಿ 3000
ಧ್ವನಿ ಅನುಕರಣೆ

 

ಗೆದ್ದವರು ರೇಶಂ ತಲ್ವಾರ್ 5000
ಎರಡನೇ ಸ್ಥಾನ ದೀಪಕ್ ಸೈನಿ 3000
ಮೂರನೇ ಬಹುಮಾನ ಯಾಜಿನ್ ವಡೆಹ್ರಾ 2000
ಮಾಂಗಾ ವಿದ್ಯಾರ್ಥಿ ವರ್ಗ ಹರ್ಷಿಕಾ
ವೃತ್ತಿಪರ ವರ್ಗ ರೋಹನ್ ದಾಸ್
ವೆಬ್ಟೂನ್ ವಿದ್ಯಾರ್ಥಿ ವರ್ಗ ನಿಶಾಂತ್ ದೇಶ್ವಾಲ್

ದೃಷ್ಟಿಹೀನತೆ ಹೊಂದಿರುವ ಭಾರತದ ಮೊದಲ ಮುಖ್ಯವಾಹಿನಿಯ ಧ್ವನಿ ನಟ ರೇಶಮ್ ತಲ್ವಾರ್ ಅವರ ಬಗ್ಗೆ ವಿಶೇಷ ಉಲ್ಲೇಖ ಮಾಡಲಾಯಿತು.

WAM (ವಾಮ್)  ಬಗ್ಗೆ!

ವೇವ್ಸ್ (ವರ್ಲ್ಡ್ ಆಡಿಯೊ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆ – https://wavesindia.org), ಅಂಗವಾದ ವಾಮ್! ಭಾರತದ ಅನಿಮೇಷನ್, ಗೇಮಿಂಗ್ ಮತ್ತು ಮಾಂಗಾ ಕ್ಷೇತ್ರಗಳನ್ನು ಉನ್ನತೀಕರಿಸುವ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದೆ. ಪ್ರತಿ ನಗರದಲ್ಲಿ, ಇದು ಸೃಷ್ಟಿಕರ್ತರ ಹೊಸ ಅಲೆಯನ್ನು ಪ್ರೇರೇಪಿಸುತ್ತದೆ, ನಾವೀನ್ಯತೆಯನ್ನು ಪೋಷಿಸುತ್ತದೆ ಮತ್ತು ವಿಶ್ವಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸುವ ರೋಮಾಂಚಕ ಕಲಾ ಪ್ರಕಾರಗಳನ್ನು ಕೊಂಡಾಡುತ್ತದೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ઇન્સ્ટિટ્યૂટ ઓફ એરોસ્પેસ મેડિસિન ઇન્ડિયન સોસાયટી ઓફ એરોસ્પેસ મેડિસિન (આઇએસએએમ)ની 63મી વાર્ષિક પરિષદનું આયોજન કરશે

ઇન્ડિયન સોસાયટી ઓફ એરોસ્પેસ મેડિસિન (આઇએસએએમ) 05થી 07 ડિસેમ્બર 2024 દરમિયાન ઇન્સ્ટિટ્યૂટ ઓફ એરોસ્પેસ મેડિસિન (આઇએએમ), …