सोमवार, दिसंबर 23 2024 | 04:07:05 AM
Breaking News
Home / अन्य समाचार / ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನವನ್ನು ಬೆಂಗಳೂರಿನಲ್ಲಿ ಕೇಂದ್ರ ಪಿಂಚಣಿ ಇಲಾಖೆ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖಾ ಕಾರ್ಯದರ್ಶಿ, ಶ್ರೀ ವಿ. ಶ್ರೀನಿವಾಸ್ ಅವರು ಪರಿಶೀಲಿಸಿದರು

ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನವನ್ನು ಬೆಂಗಳೂರಿನಲ್ಲಿ ಕೇಂದ್ರ ಪಿಂಚಣಿ ಇಲಾಖೆ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖಾ ಕಾರ್ಯದರ್ಶಿ, ಶ್ರೀ ವಿ. ಶ್ರೀನಿವಾಸ್ ಅವರು ಪರಿಶೀಲಿಸಿದರು

Follow us on:

ಪಿಂಚಣಿದಾರರ ಡಿಜಿಟಲ್ ಸಬಲೀಕರಣಕ್ಕಾಗಿ ಕೇಂದ್ರ ಪಿಂಚಣಿ ಇಲಾಖೆ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ರಾಷ್ಟ್ರವ್ಯಾಪಿ ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನ 3.0 ಅನ್ನು ಪ್ರಾರಂಭಿಸಿತು. ಪಿಂಚಣಿದಾರರ ಸಬಲೀಕರಣಕ್ಕಾಗಿ ಡಿಜಿಟಲ್ ಜೀವನ ಪ್ರಮಾಣಪತ್ರವು ಪ್ರಧಾನ ಮಂತ್ರಿಯವರು ಹೊಂದಿರುವ ದೃಷ್ಟಿಕೋನವಾಗಿದೆ. ನವೆಂಬರ್ 1-30, 2024 ರಿಂದ ಭಾರತದ 800 ನಗರಗಳು/ ಪಟ್ಟಣಗಳಲ್ಲಿ ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನ  3.0 ನಡೆಯಲಿದೆ ಇದರಲ್ಲಿ ಕೇಂದ್ರ/ರಾಜ್ಯ ಸರ್ಕಾರಗಳು/ಇಪಿಎಫ್ಒ/ಸ್ವಾಯತ್ತ ಸಂಸ್ಥೆಗಳ ಎಲ್ಲಾ ಪಿಂಚಣಿದಾರರು ತಮ್ಮ ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನಗಳನ್ನು ಪಿಂಚಣಿ ವಿತರಣಾ ಬ್ಯಾಂಕ್ ಗಳಲ್ಲಿ ಅಥವಾ ಐಪಿಪಿಬಿಯಲ್ಲಿ ಸಲ್ಲಿಸಬಹುದು. ಅತ್ಯಂತ ಹಿರಿಯ (ಸೂಪರ್ ಸೀನಿಯರ್) ಪಿಂಚಣಿದಾರರು ತಮ್ಮ ನಿವಾಸದಿಂದಲೇ ಇದನ್ನು ಮಾಡಬಹುದು ಮತ್ತು ಸೇವೆಗಳ ಬಾಗಿಲು ಹಂತದ ವಿತರಣೆಯನ್ನು ಒದಗಿಸಲಾಗುತ್ತದೆ. ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನವನ್ನು ರಾಷ್ಟ್ರವ್ಯಾಪಿಗೊಳಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಜಿಡಿಎ, ಐಪಿಪಿಬಿ, ಯುಐಡಿಎಐ ಸೇರಿದಂತೆ ಎಲ್ಲಾ ಪಿಂಚಣಿ ವಿತರಣಾ ಬ್ಯಾಂಕ್ ಗಳು ಕಾರ್ಯಗತಗೊಳಿಸಲಿವೆ.

ಅಭಿಯಾನದ ಭಾಗವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಮನ್ವಯದಲ್ಲಿ ಬೆಂಗಳೂರಿನಲ್ಲಿ ಡಿಜಿಟಲ್ ಜೀವನ ಪ್ರಮಾಣಪತ್ರ ಬೃಹತ್ ಶಿಬಿರವನ್ನು ಆಯೋಜಿಸಲಾಗಿದೆ. ಕೇಂದ್ರ ಪಿಂಚಣಿ ಇಲಾಖೆ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ತಂಡವು, ಇಲಾಖಾ ಕಾರ್ಯದರ್ಶಿ (ಪಿಂಚಣಿ) ಶ್ರೀ ವಿ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ, ಪ್ರಚಾರದ ಪ್ರಗತಿಯನ್ನು ಪರಿಶೀಲಿಸಲು ನವೆಂಬರ್ 8 ರಂದು ಬೆಂಗಳೂರಿಗೆ ಭೇಟಿ ನೀಡಿತು. . ಕರ್ನಾಟಕ ಕೇಂದ್ರ ಸರ್ಕಾರಿ ಪಿಂಚಣಿದಾರರ ಸಂಘ, ಕರ್ನಾಟಕ ಪೋಸ್ಟ್ ಗಳು ಮತ್ತು ದೂರಸಂಪರ್ಕಗಳ ಪಿಂಚಣಿದಾರರ ಸಂಘ ಮತ್ತು ಅಖಿಲ ಭಾರತ ಬಿ.ಎಸ್.ಎನ್.ಎಲ್ ಪಿಂಚಣಿದಾರರ ಕಲ್ಯಾಣ ಸಂಘ ಇತ್ಯಾದಿ ಬ್ಯಾಂಕ್ ಅಧಿಕಾರಿಗಳು, ಪಿಂಚಣಿದಾರರು ಮತ್ತು ನೋಂದಾಯಿತ ಪಿಂಚಣಿದಾರರ ಸಂಘಗಳ ಪ್ರತಿನಿಧಿಗಳೊಂದಿಗೆ ಸಂವಾದಾತ್ಮಕ ಸಭೆ ನಡೆಸಲಾಯಿತು. ಅಗತ್ಯವಿರುವಲ್ಲಿ ಮತ್ತು ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ನೋಡಿಕೊಳ್ಳಲು ಯು.ಐ.ಡಿ.ಎ.ಐ ತಂಡ ಈ ಬೃಹತ್ ಶಿಬಿರದಲ್ಲಿ ಹಾಜರಾಗಿದ್ದು, ಪಿಂಚಣಿದಾರರು ತಮ್ಮ ಆಧಾರ್ ದಾಖಲೆಗಳನ್ನು ನವೀಕರಿಸಲು ಸಹಾಯ ಮಾಡಿದರು, ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಸಹಾಯಮಾಡಿದರು.

ಸಭೆಯಲ್ಲಿ 250 ಕ್ಕೂ ಹೆಚ್ಚು ಪಿಂಚಣಿದಾರರು ಪಾಲ್ಗೊಂಡರು ಮತ್ತು ಪಿಂಚಣಿದಾರರಿಗೆ ಸಾಂತ್ವನವನ್ನು ತರಲು ಈಗ ವ್ಯಾಪಕವಾಗಿ ಬಳಸುತ್ತಿರುವ ಪಾತ್ ಬ್ರೇಕಿಂಗ್ ತಂತ್ರದ ಅಭಿವೃದ್ಧಿಯ ಬಗ್ಗೆ ಎಲ್ಲರೂ ಅಪಾರ ತೃಪ್ತಿ ವ್ಯಕ್ತಪಡಿಸಿದರು.

ಕೇಂದ್ರ ಪಿಂಚಣಿ ಇಲಾಖೆ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಕಾರ್ಯದರ್ಶಿಯವರು ಪಿಂಚಣಿದಾರರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಪಿಂಚಣಿದಾರರ ‘ಸುಗಮ ಜೀವನ’ ವ್ಯವಸ್ಥೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆಯ ಉಪಕ್ರಮಗಳ ಬಗ್ಗೆ ಪಿಂಚಣಿದಾರರಿಗೆ ತಿಳಿಸಿದರು. ಡಿಜಿಟಲ್ ಜೀವನ ಪ್ರಮಾಣಪತ್ರ ಸಲ್ಲಿಕೆಗಾಗಿ ಮುಖದ ದೃಢೀಕರಣವನ್ನು ಬಳಸುವ ತಂತ್ರವು ದೂರದ ಪ್ರದೇಶಗಳಲ್ಲಿ ಪಿಂಚಣಿದಾರರನ್ನು ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಲು ಪ್ರಸ್ತುತ ಈ ನೂತನ ಅಭಿಯಾನದ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಈ ರಾಷ್ಟ್ರವ್ಯಾಪಿ ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನವನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಲು ಬ್ಯಾಂಕರ್ ಗಳು ಮತ್ತು ಪಿಂಚಣಿದಾರರನ್ನು ಈ ಸಂದರ್ಭದಲ್ಲಿ ಉತ್ತೇಜಿಸಲಾಯಿತು.

ಡಿಜಿಟಲ್ ಜೀವನ ಪ್ರಮಾಣಪತ್ರಗಳ ಅಭಿವೃದ್ಧಿಯು ಪಿಂಚಣಿದಾರರಿಗೆ, ವಿಶೇಷವಾಗಿ ವೃದ್ಧರು, ಅಂಗವಿಕಲರು ಮತ್ತು ಆಸ್ಪತ್ರೆಗೆ ದಾಖಲಾದವರಿಗೆ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಪಿಂಚಣಿದಾರರ ಸಂಘಗಳ ಪ್ರತಿನಿಧಿಗಳು ತಿಳಿಸಿದರು. ಫೇಸ್ ಟೆಕ್ನಿಕ್ ಬಳಕೆಯ ಮೂಲಕ, ಅವರು ತಮ್ಮ ಮನೆಗಳು, ಆಸ್ಪತ್ರೆಗಳಿಗೆ ಭೇಟಿ ನೀಡುವ ಮೂಲಕ ಮತ್ತು ಡಿಜಿಟಲ್ ಜೀವನ ಪ್ರಮಾಣಪತ್ರ ಶಿಬಿರಗಳನ್ನು ನಡೆಸುವ ಮೂಲಕ ಅಂತಹ ಪಿಂಚಣಿದಾರರ ಜೀವನ ಪ್ರಮಾಣಪತ್ರವನ್ನು ಯಶಸ್ವಿಯಾಗಿ ಸೃಷ್ಟಿಸಲು ಸಾಧ್ಯವಾಗುತ್ತದೆ.

ಶ್ರೀ ಸುಶೀಲ್ ಕುಮಾರ್ ಸಿಂಗ್, ಜಿಎಂ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, (ಬೆಂಗಳೂರು ಸರ್ಕಲ್ ) ಅವರು ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿ, ಬೆಂಗಳೂರು ವೃತ್ತದಲ್ಲಿ ಪಿಂಚಣಿದಾರರಿಗೆ ಅನುಕೂಲವಾಗುವ ಅಭಿಯಾನವನ್ನು ಯಶಸ್ವಿಗೊಳಿಸಲು ಬ್ಯಾಂಕ್ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ತಿಳಿಸಿದರು. ಇದಕ್ಕೆ ಅನುಗುಣವಾಗಿ, ಪ್ರತಿ ಎಸ್ಬಿಐ ಶಾಖೆಯಲ್ಲಿ ಸಹಾಯ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ.

ಇಂತಹ ಶಿಬಿರಗಳನ್ನು 40 ಕ್ಕೂ ಹೆಚ್ಚು ನಗರಗಳು/ಜಿಲ್ಲೆಗಳಲ್ಲಿ ಕರ್ನಾಟಕದ 102 ಸ್ಥಳಗಳನ್ನು ಎಲ್ಲಾ ಮಧ್ಯಸ್ಥಗಾರರಿಂದ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಈ ಅಭಿಯಾನದಲ್ಲಿ ಸುಮಾರು 52 ಹಿರಿಯ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.ಕೇಂದ್ರ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಈ ಅಭಿಯಾನವನ್ನು ದೇಶದಾದ್ಯಂತ ಅತ್ಯಂತ ಉತ್ತಮ ರೀತಿಯಲ್ಲಿ ಯಶಸ್ವಿಗೊಳಿಸಲು ತಂಡವು ಸಾಧ್ಯವಿರುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ઇન્સ્ટિટ્યૂટ ઓફ એરોસ્પેસ મેડિસિન ઇન્ડિયન સોસાયટી ઓફ એરોસ્પેસ મેડિસિન (આઇએસએએમ)ની 63મી વાર્ષિક પરિષદનું આયોજન કરશે

ઇન્ડિયન સોસાયટી ઓફ એરોસ્પેસ મેડિસિન (આઇએસએએમ) 05થી 07 ડિસેમ્બર 2024 દરમિયાન ઇન્સ્ટિટ્યૂટ ઓફ એરોસ્પેસ મેડિસિન (આઇએએમ), …