गुरुवार, नवंबर 14 2024 | 09:47:52 AM
Breaking News
Home / Choose Language / kannada / ಆಮದು ಬಿಲ್‌ನಲ್ಲಿ ಉಳಿತಾಯವಾಗುವ 91,000 ಕೋಟಿ ರೂ. ಕೃಷಿ ಕ್ಷೇತ್ರದ ಪ್ರಯೋಜನಕ್ಕೆ ಬಳಸಬಹುದು: ಶ್ರೀ ಹರ್ ದೀಪ್ ಸಿಂಗ್ ಪುರಿ

ಆಮದು ಬಿಲ್‌ನಲ್ಲಿ ಉಳಿತಾಯವಾಗುವ 91,000 ಕೋಟಿ ರೂ. ಕೃಷಿ ಕ್ಷೇತ್ರದ ಪ್ರಯೋಜನಕ್ಕೆ ಬಳಸಬಹುದು: ಶ್ರೀ ಹರ್ ದೀಪ್ ಸಿಂಗ್ ಪುರಿ

Follow us on:

ಜೈವಿಕ ಇಂಧನ ಮಿಶ್ರಣದ ಮೂಲಕ ದೇಶವು ಆಮದು ಬಿಲ್‌ನಲ್ಲಿ 91,000 ಕೋಟಿ ರೂಪಾಯಿಗಳನ್ನು ಉಳಿಸಬಹುದು ಮತ್ತು ಈ ಹಣವನ್ನು ಕೃಷಿ ಕ್ಷೇತ್ರದ ಪ್ರಯೋಜನಕ್ಕಾಗಿ ಬಳಸಬಹುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಹೇಳಿದರು.

ಬೆಂಗಳೂರಿನಲ್ಲಿ ಇಂದು 27ನೇ ʻಇಂಧನ ತಂತ್ರಜ್ಞಾನ ಶೃಂಗಸಭೆʼಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಜೈವಿಕ ಇಂಧನ ಮಿಶ್ರಣದಲ್ಲಿ ಭಾರತ ಜಾಗತಿಕವಾಗಿ ಎರಡನೇ ಸ್ಥಾನ ಗಳಿಸಿದೆ. ಮುಂದಿನ ವರ್ಷದ ವೇಳೆಗೆ ಭಾರತವು ಶೇ.20ರಷ್ಟು ಜೈವಿಕ ಇಂಧನ ಮಿಶ್ರಣದ ಗುರಿಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಧಿಸಲಿದೆ,ʼʼ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ನಮ್ಮ ಸಂಸ್ಕರಣಾಗಾರಗಳು ಹಸಿರು ಇಂಧನದತ್ತ ವಾಲಿದ್ದು, ಹಸಿರು ಜಲಜನಕ ಗುರಿಯತ್ತ ದೇಶವು ಯಶಸ್ವಿಗಿ ಸಾಗುತ್ತಿದೆ ಎಂದು ಸಚಿವರು ಹೇಳಿದರು. 2047ರ ವೇಳೆಗೆ ಭಾರತದ ಇಂಧನ ಬೇಡಿಕೆ ಎರಡೂವರೆ ಪಟ್ಟು ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಭಾರತದ ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯವು ವರ್ಷಕ್ಕೆ 400 ರಿಂದ 450 ದಶಲಕ್ಷ ಮೆಟ್ರಿಕ್ ಟನ್‌ ತಲುಪಿದೆ, ಇದು ಜಾಗತಿಕ ಸರಾಸರಿಯ ಮೂರನೇ ಒಂದು ಭಾಗವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

2070ರ ವೇಳೆಗೆ ʻನಿವ್ವಳ ಇಂಗಾಲ ಶೂನ್ಯ ಹೊರಸೂಸುವಿಕೆʼ ಗುರಿಯನ್ನು ಸಾಧಿಸಲು ಭಾರತವು ತನ್ನ ಪ್ರಯತ್ನಗಳನ್ನು ದ್ವಿಗುಣಗೊಳಿಸಬೇಕಾಗಿದೆ ಎಂದು ಸಚಿವರು ಕರೆ ನೀಡಿದರು. ಇಂಧನ ಕ್ಷೇತ್ರದಲ್ಲಿನ ಗುರಿಗಳನ್ನು ಸಾಧಿಸಲು ಇಂಧನ ಭದ್ರತೆ, ಸುಸ್ಥಿರತೆ ಮತ್ತು ತಂತ್ರಜ್ಞಾನ ನಾವೀನ್ಯತೆ ಜೊತೆಜೊತೆಯಾಗಿ ಸಾಗಬೇಕು ಎಂದು ಸಚಿವರು ಹೇಳಿದರು. ʻಸೆಂಟರ್ ಫಾರ್ ಹೈ ಟೆಕ್ನಾಲಜಿʼ ಮತ್ತು ʻಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ʼ ಮೂರು ದಿನಗಳ ʻಇಂಧನ ತಂತ್ರಜ್ಞಾನ ಶೃಂಗಸಭೆʼಯನ್ನು ಆಯೋಜಿಸಿವೆ. 1200 ಭಾಗಿದಾರರು ಸಭೆಯಲ್ಲಿ ಪಾಲ್ಗೊಂಡಿದ್ದು, ಇದರಲ್ಲಿ 60 ಪ್ರಬಂಧಗಳನ್ನು ಮಂಡಿಸಲಾಗುವುದು.

ಈ ಕಾರ್ಯಕ್ರಮದಲ್ಲಿ 23 ಪ್ರದರ್ಶಕರು ತಮ್ಮ ಇತ್ತೀಚಿನ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸ್ಥಾಪಿಸಿದ 2023-24ನೇ ಸಾಲಿನ ʻಅತ್ಯುತ್ತಮ ಇಂಧನ ದಕ್ಷ ತಂತ್ರಜ್ಞಾನ ಪ್ರಶಸ್ತಿʼಗಳನ್ನು ಸಚಿವರು ಪ್ರದಾನ ಮಾಡಿದರು.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಪ್ರಧಾನಮಂತ್ರಿಯವರು ಆಚಾರ್ಯ ಕೃಪಲಾನಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸಿದರು

ಶ್ರೀ ನರೇಂದ್ರ ಮೋದಿ ಅವರು ಆಚಾರ್ಯ ಕೃಪಲಾನಿ ಅವರ ಜನ್ಮಜಯಂತಿ ಅಂಗವಾಗಿ ಅವರಿಗೆ ಗೌರವ ಸಲ್ಲಿಸಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದ …