गुरुवार, दिसंबर 19 2024 | 04:40:48 PM
Breaking News
Home / अन्य समाचार / ಯೋಗ ಮತ್ತು ನ್ಯಾಚುರೋಪಥಿ ಕುರಿತಾದ ಕೇಂದ್ರೀಯ ಸಂಶೋಧನಾ ಮಂಡಳಿಯಿಂದ ನಾಗಮಂಗಲದಲ್ಲಿ 7ನೇ ನ್ಯಾಚುರೋಪಥಿ ದಿನಾಚರಣೆ

ಯೋಗ ಮತ್ತು ನ್ಯಾಚುರೋಪಥಿ ಕುರಿತಾದ ಕೇಂದ್ರೀಯ ಸಂಶೋಧನಾ ಮಂಡಳಿಯಿಂದ ನಾಗಮಂಗಲದಲ್ಲಿ 7ನೇ ನ್ಯಾಚುರೋಪಥಿ ದಿನಾಚರಣೆ

Follow us on:

ಕೇಂದ್ರ ಆಯುಷ್‌ ಸಚಿವಾಲಯದ ಯೋಗ ಮತ್ತು ನ್ಯಾಚುರೋಪಥಿ ಕುರಿತಾದ ಕೇಂದ್ರ ಸಂಶೋಧನಾ ಮಂಡಳಿ ವತಿಯಿಂದ ನಾಗಮಂಗಲದ ಕೇಂದ್ರ ಯೋಗ ಮತ್ತು ನ್ಯಾಚುರೋಪಥಿ ಸಂಶೋಧನಾ ಕೇಂದ್ರದಲ್ಲಿ 7ನೇ ನ್ಯಾಚುರೋಪಥಿ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಮಣಿಪುರ ಮೊದಲಾದ ರಾಜ್ಯಗಳಿಂದ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ತೊಡಗಿರುವ 800ಕ್ಕೂ ಅಧಿಕ ವೈದ್ಯರು ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ವಿದ್ವಾಂಸರು ಭಾಗವಹಿಸಿದ್ದರು. ಸಮಾರಂಭದಲ್ಲಿ ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಕವಿತಾ ಗರ್ಗ್, ಸಿಸಿಆರ್‌ವೈಎನ್ ನಿರ್ದೇಶಕ ಡಾ.ರಾಘವೇಂದ್ರ ರಾವ್, ಎಸ್‌ ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಆರ್.ನಾಗೇಂದ್ರ, ಎಸ್ ವ್ಯಾಸ ವಿಶ್ವವಿದ್ಯಾಲಯದ ಉಪಕುಲಪತಿಗಳು, ಸಿ.ಸಿ.ಆರ್.ವೈ.ಎನ್ ಆಡಳಿತ ಮಂಡಳಿ ಸದಸ್ಯರಾದ ಡಾ. ಪ್ರಶಾಂತ್ ಶೆಟ್ಟಿ, ಡಾ. ಮಂಜುನಾಥ್ ಎನ್.ಕೆ, ಕೃಷಿ ಸಚಿವರು ಹಾಗೂ ನಾಗಮಂಗಲದ ಶಾಸಕರಾದ ಶ್ರೀ ಚೆಲುವರಾಯಸ್ವಾಮಿ ಮತ್ತಿತರು ಭಾಗವಹಿಸಿದ್ದರು.

ಗೌರವಾನ್ವಿತ ಕೃಷಿ ಸಚಿವರಾದ ಶ್ರೀ ಚೆಲುವರಾಯಸ್ವಾಮಿ ಅವರು ನಾಗಮಂಗಲದ ಸಿ ಆರ್ ವೈ ಎನ್ ನಲ್ಲಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಕ್ಕಾಗಿ ಸಿ ಸಿ ಆರ್ ವೈ ಎನ್ ಗೆ ಧನ್ಯವಾದ ಸಲ್ಲಿಸಿದರು. ಇಂದಿನ ಆಧುನಿಕ ಜಗತ್ತಿನಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಕೃತಿ ಚಿಕಿತ್ಸೆ ಆಹಾರ ಮತ್ತು ಯೋಗದ ರೂಪದಲ್ಲಿ ಉತ್ತಮ ಜೀವನಶೈಲಿ ರೂಢಿಸಿಕೊಳ್ಳುವುದು ಅತಿ ಮುಖ್ಯ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಸಿಸಿಆರ್‌ವೈಎನ್ ನಿರ್ದೇಶಕ ಡಾ.ರಾಘವೇಂದ್ರ ರಾವ್ ಗಣ್ಯರನ್ನು ಸ್ವಾಗತಿಸಿದರು.

ಕಾರ್ಯದರ್ಶಿ ಶ್ರೀಮತಿ ಕವಿತಾ ಗರ್ಗ್ ಅವರು ಹುಟ್ಟಿನಿಂದಲೇ ಪ್ರಕೃತಿ ಚಿಕಿತ್ಸೆ ನೀಡಿದ ಮೊದಲ ವ್ಯಕ್ತಿ ತಾಯಿ ಎಂದು ಒತ್ತಿ ಹೇಳಿದರು. ಪ್ರಕೃತಿ ಚಿಕಿತ್ಸೆಯು ತಿನ್ನಲು, ಕುಡಿಯಲು, ವರ್ತಿಸಲು ಮತ್ತು ಮಿತವಾಗಿ ಬದುಕಲು ಕಲಿಸುತ್ತದೆ. “ಬದುಕಲು ತಿನ್ನಿರಿ ಮತ್ತು ತಿನ್ನಲು ಬದುಕಬೇಡಿ’’ ಎಂಬ ಗಾದೆ ಪ್ರಾಚೀನ ಕಾಲದಿಂದಲೂ ತಿಳಿದಿದೆ. ಪ್ರಕೃತಿ ಚಿಕಿತ್ಸೆಯು ಆಧ್ಯಾತ್ಮಿಕ ಅನ್ವೇಷಣೆಗಳಿಗಾಗಿ ಆರೋಗ್ಯಕರವಾಗಿರಲು ಸ್ವಯಂ ನಿರ್ವಹಣೆಯ ಕಲೆಯನ್ನು ನಮಗೆ ಕಲಿಸುತ್ತದೆ ಎಂದ ಅವರು,  ವರ್ತಮಾನದಲ್ಲಿಯೇ ಉಳಿದುಕೊಳ್ಳಿ ಮತ್ತು ಭವಿಷ್ಯದ ಅಥವಾ ಭೂತಕಾಲದ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದರು.

ಎಸ್-ವ್ಯಾಸ ಕುಲಪತಿಗಳಾದ ಡಾ.ಎಚ್.ಆರ್. ನಾಗೇಂದ್ರ, ಈ ವ್ಯವಸ್ಥೆಗಳನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಸಂಶೋಧನೆಯ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು. ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಉನ್ನತ ಮಟ್ಟದ ಸಂಶೋಧನೆಗೆ ಅನುಕೂಲ ಮಾಡಿಕೊಡಲು ಸಿಆರ್ ಐವೈಎನ್ ಹೆಸರಾಂತ ಸಂಸ್ಥೆಯಾಗಬಹುದು ಎಂದು ಅವರು ಹೇಳಿದರು.

ಅಂತಿಮವಾಗಿ ಗೌರವಾನ್ವಿತ ಆಯುಷ್‌ ಸಚಿವರು, ಪ್ರಕೃತಿ ಚಿಕಿತ್ಸಾ ದಿನದಂದು ಪ್ರಕೃತಿ ಚಿಕಿತ್ಸಾ ಸಮುದಾಯಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ಸಂಶೋಧನೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಂಸ್ಥೆಗಳು ಸಿ ಸಿ ಆರ್ ವೈ ಎನ್ ನೊಂದಿಗೆ ಸಹಕರಿಸಬೇಕು. ಪಿಪಿಪಿ ಮಾದರಿಯಲ್ಲಿ  ಜನಸಂಖ್ಯೆ ಅಗತ್ಯ ಸೇವೆಗಳನ್ನು ಪೂರೈಸಲು ಸಿಸಿಆರ್ ವೈಎನ್ ವೈದ್ಯಕೀಯ ಆಹಾರ ಮತ್ತು ಯೋಗ ಕೇಂದ್ರಗಳನ್ನು ಆರಂಭಿಸಬೇಕು ಎಂದು ಅವರು ಕರೆ ನೀಡಿದರು.

ಶಾಸನ ಬದ್ಧ ನಿಯಂತ್ರಣ ಕೇಂದ್ರ ಮತ್ತು ನೋಂದಣಿಗಾಗಿ ಪ್ರಕೃತಿ ಚಿಕಿತ್ಸಕ ಸಮುದಾಯದ ಬಹುಕಾಲದ ಬೇಡಿಕೆಯನ್ನು ಶೀಘ್ರದಲ್ಲೇ ಈಡೇರಿಸಲಾಗುವುದು ಎಂದು ಅವರು ಹೇಳಿದರು.

2024ರ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಸಚಿವಾಲಯವು ನಡೆಸಿದ ಯೋಗ ತಂತ್ರಜ್ಞಾನ ಸವಾಲಿನ ವಿಜೇತರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಯೋಗ ತಂತ್ರಜ್ಞಾನ ಚಾಲೆಂಜ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧರಿಸಿ ಅಪ್ಲಿಕೇಶನ್‌ಗಳು, ಧರಿಸಬಹುದಾದ ಸಾಧನಗಳು ಮತ್ತು ಸುಧಾರಿತ ಯೋಗ ಪರಿಕರಗಳಲ್ಲಿ ಪ್ರಾಚೀನ ಅಭ್ಯಾಸಗಳನ್ನು ತರುವ ಭರವಸೆಯನ್ನು ಯೋಗ ನವೋದ್ಯಮಗಳು ನೀಡಿದ್ದು, ಅವು ಆಧುನಿಕ ಸ್ವಾಸ್ಥ್ಯದ ಮುಂಚೂಣಿಯಲ್ಲಿದೆ. ವರ್ಚುವಲ್ ಆರೋಗ್ಯ ಪರಿಹಾರಗಳ ಯುಗದಲ್ಲಿ ಹೆಚ್ಚಿನ ಬೇಡಿಕೆಯಲ್ಲಿರುವ ಯುಗದಲ್ಲಿ, ಯೋಗಟೆಕ್‌  ಜೀವನದ ಗುಣಮಟ್ಟವನ್ನು ವೃದ್ಧಿಸುವಲ್ಲಿ ಡಿಜಿಟಲ್ ಮಧ್ಯಸ್ಥಿಕೆಗಳ ಪರಿವರ್ತಕ ಶಕ್ತಿಗೆ ಸಾಕ್ಷಿಯಾಗಿದೆ.

ಯೋಗವು ಮ್ಯಾಟ್ಸ್ ಮತ್ತು ಸ್ಟುಡಿಯೋಗಳನ್ನು ಮೀರಿ ವಿಕಸನಗೊಳ್ಳುತ್ತಿದ್ದಂತೆ, ಆಯುಷ್ ಸಚಿವಾಲಯದ ಅಡಿಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕೇಂದ್ರೀಯ ಸಂಶೋಧನಾ ಮಂಡಳಿ (ಸಿಸಿಆರ್ ವೈಎನ್) ಆಯೋಜಿಸಿದ ಯೋಗಟೆಕ್ ಚಾಲೆಂಜ್, ತಂತ್ರಜ್ಞಾನವನ್ನು ಯೋಗಕ್ಷೇಮದೊಂದಿಗೆ ವಿಲೀನಗೊಳಿಸುವ ನಾವೀನ್ಯಕಾರರನ್ನು ಗೌರವಿಸಲು ಸಜ್ಜಾಗಿದೆ. ಎಸ್-ವ್ಯಾಸ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಆಯೋಜಿಸಲಾದ ಈ ಅದ್ಭುತ ಕಾರ್ಯಕ್ರಮವು ಯೋಗದಲ್ಲಿ ಭಾರತದ ಅತ್ಯಂತ ಭರವಸೆಯ ನವೋದ್ಯಮಗಳನ್ನು ಗುರುತಿಸುವಂತೆ ಮಾಡಿದೆ. 70 ಪ್ರವೇಶಗಳ ಪೈಕಿ ಅಂತಿಮವಾಗಿ ಮೂರು ವಿಭಾಗಗಳಲ್ಲಿ 15 ಸ್ಟ್ಯಾಂಡ್‌ಔಟ್ ಕಂಪನಿಗಳು-ಸಾಧನಗಳು, ಐಟಿ ಪರಿಹಾರಗಳು/ ಅಪ್ಲಿಕೇಶನ್‌ಗಳು ಮತ್ತು ಪರಿಕರಗಳು ಮತ್ತು ಸಾಧನಗಳು ವರ್ಗಗಳಲ್ಲಿ  ಆಯ್ಕೆಯಾಗಿವೆ. ಎನ್ ಟಿ ಸಲ್ಯೂಷನ್ಸ್‌ ಸಾಧನ ವಿಭಾಗದಲ್ಲಿ ವಿಜೇತರಾಗಿ ಹೊರಹೊಮ್ಮಿದರೆ ಯೋಗಾಫಾರ್ ಲೈಫ್ (Yog4life) ಪರಿಹಾರಗಳ ವಿಭಾಗದಲ್ಲಿ ವಿಜೇತರಾಗಿ ಹೊರಹೊಮ್ಮಿದೆ. ನಿಮ್ಹಾನ್ಸ್, ಎಸ್-ವ್ಯಾಸ ವಿಶ್ವವಿದ್ಯಾಲಯ ಮತ್ತು ಸಿಸಿಆರ್‌ವೈಎನ್ ಜಂಟಿಯಾಗಿ ಸಂಕಲಿಸಿದ ವಿಶ್ವಸಂಸ್ಥೆಯ ಸುಸ್ಥಿರ ಗುರಿ (ಯುಎನ್ ಎಸ್‌ಡಿಜಿ)ಗಳಲ್ಲಿ ಯೋಗದ ಪಾತ್ರದ ಕುರಿತು ಪುಸ್ತಕ ಬಿಡುಗಡೆಯೊಂದಿಗೆ ಯೋಗ ತಂತ್ರಜ್ಞಾನದ ಅಭಿದಾನ ನಡೆಯಿತು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪೂರೈಸಲು ಯೋಗವನ್ನು ಬಳಸಿಕೊಳ್ಳುವ ವಿಧಾನಗಳನ್ನು ಈ ಪುಸ್ತಕವು ತಿಳಿಸಿಕೊಡುತ್ತದೆ. ಈ ಸಮಾರಂಭದಲ್ಲಿ ಯೋಗದ ಕುರಿತಾದ 10 ಸಾಹಿತ್ಯ ಸಂಶೋಧನಾ ಪುಸ್ತಕಗಳು ಮತ್ತು ಪ್ರಕೃತಿಚಿಕಿತ್ಸೆಯ ಒಂದು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ವೋಲ್ಟರ್ಸ್ ಕ್ಲುವರ್ ಪಬ್ಲಿಷರ್ಸ್‌ನಿಂದ ಸಿ ಸಿ ಆರ್ ವೈ ಎನ್ ನಿಂದ ಇಂಡಿಯನ್ ಜರ್ನಲ್ ಆಫ್ ಯೋಗ ಮತ್ತು ನ್ಯಾಚುರೋಪತಿಯ ಮೊದಲನೇ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ઇન્સ્ટિટ્યૂટ ઓફ એરોસ્પેસ મેડિસિન ઇન્ડિયન સોસાયટી ઓફ એરોસ્પેસ મેડિસિન (આઇએસએએમ)ની 63મી વાર્ષિક પરિષદનું આયોજન કરશે

ઇન્ડિયન સોસાયટી ઓફ એરોસ્પેસ મેડિસિન (આઇએસએએમ) 05થી 07 ડિસેમ્બર 2024 દરમિયાન ઇન્સ્ટિટ્યૂટ ઓફ એરોસ્પેસ મેડિસિન (આઇએએમ), …