बुधवार, अक्तूबर 23 2024 | 11:06:05 PM
Breaking News
Home / Choose Language / kannada / ಕಿತ್ತೂರು ರಾಣಿ ಚೆನ್ಮಮ್ಮ ಭಾರತದ ಆಸ್ತಿ, ನಾರಿ ಶಕ್ತಿಯ ಪ್ರೇರಣೆ – ವಿ.ಸೋಮಣ್ಣ, ಕೇಂದ್ರ ಸಚಿವರು

ಕಿತ್ತೂರು ರಾಣಿ ಚೆನ್ಮಮ್ಮ ಭಾರತದ ಆಸ್ತಿ, ನಾರಿ ಶಕ್ತಿಯ ಪ್ರೇರಣೆ – ವಿ.ಸೋಮಣ್ಣ, ಕೇಂದ್ರ ಸಚಿವರು

Follow us on:

ಇಂದು ವೀರ ಮಹಿಳೆ ಕಿತ್ತೂರು ರಾಣಿ ಚೆನ್ಮಮ್ಮನವರ 246ನೇ ಜನ್ಮದಿನೋತ್ಸವ ಮತ್ತು ಬ್ರಿಟಿಷರ ವಿರುದ್ದ ಜಯಗಳಿಸಿದ 200 ವರ್ಷದ ವಿಜಯೋತ್ಸವವನ್ನು ನವದೆಹಲಿಯ ಸಂಸತ್ ಭವನದ ಅವರಣದಲ್ಲಿನ ಪ್ರೇರಣಾ ಸ್ಥಳದಲ್ಲಿ ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತೆಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅತ್ಯಂತ ಸಂತಸದಿಂದ ಹಂಚಿಕೊಂಡಿದ್ದಾರೆ.

ನವದೆಹಲಿಯ ಸಂಸತ್ ಆವರಣದಲ್ಲಿನ ಪ್ರೇರಣಾ ಸ್ಥಳದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ಪುತ್ಥಳಿಗೆ ಇಂದು ಬೆಳಿಗ್ಗೆ ಲೋಕಸಭಾ ಸಭಾಪತಿಗಳಾದ ಶ್ರೀ ಓಂ ಬಿರ್ಲಾರವರ ಘನ ಉಪಸ್ಥಿತಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿಯವರು ಮತ್ತು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಪುಷ್ಪಾರ್ಚನೆಯೊಂದಿಗೆ ಗೌರವ ಸಲ್ಲಿಸಿದರು.

ಕಿತ್ತೂರು ರಾಣಿ ಚೆನ್ಮಮ್ಮ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ರಾಷ್ಟ್ರದ ಪ್ರಪ್ರಥಮ ಮಹಿಳೆಯರಲ್ಲಿ ಪ್ರಮುಖರು. ಇವರ ದಿಟ್ಟ ಹೋರಾಟ ಸಾವಿರಾರು ಭಾರತೀಯರನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರೇರೇಪಿಸಿತ್ತು ಎಂದು ಕೇಂದ್ರ ಸಚಿವರಾದ ಸೋಮಣ್ಣನವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

ಇಂದು ಚೆನ್ಮಮ್ನನವರ ಪುತ್ಥಳಿಗೆ ರಾಷ್ಟ್ರ ರಾಜಧಾನಿಯ ಸಂಸತ್ತಿನಲ್ಲಿ ಗೌರವ ಸಮರ್ಪಿಸಿರುವುದು ಕರ್ನಾಟಕದ ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ ಎಂದು ಕೇಂದ್ರ ಸಚಿವರಾದ ಸೋಮಣ್ಣ ತಿಳಿಸಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮನವರ 246ನೇ ಜನ್ಮದಿನೋತ್ಸವ ಮತ್ತು ಬ್ರಿಟಿಷರ ವಿರುದ್ದ ಹೋರಾಡಿ ಜಯಗಳಿಸಿ ಸೆಂಟ್ ತ್ಯಾಕೆರೆಯನ್ನು ಕೊಂದ 200 ವರುಷದ ಈ ವಿಜಯೋತ್ಸವದ ಸಂದರ್ಭದಲ್ಲಿ ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಚೆನ್ನಮ್ಮನವರ ಪುತ್ಥಳಿಗೆ ಗೌರವ ಸಲ್ಲಿಸಿದ್ದರಿಂದ ರಾಣಿ ಚನ್ನಮ್ಮರ ಖ್ಯಾತಿ ಇಂದು ಇಮ್ಮಡಿಗೊಂಡಿದೆ, ಕಿತ್ತೂರು ರಾಣಿ ಚೆನ್ಮಮ್ಮ ಭಾರತದ ಆಸ್ತಿ, ನಾರಿ ಶಕ್ತಿಯ ಪ್ರೇರಣೆ ಎಂದು ಕೇಂದ್ರ ಸಚಿವರಾದ ವಿ. ಸೋಮಣ್ಣ ಬಣ್ಣಿಸಿದ್ದಾರೆ.

ಈ ಗೌರವ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಅತೀ ಅಮೂಲ್ಯ ಸಮಯವನ್ನು ನೀಡಿದ ಲೋಕಸಭಾ ಸಭಾಪತಿಗಳಾದ ಶ್ರೀ ಓಂ ಬಿರ್ಲಾ ಅವರಿಗೆ ಕನ್ನಡ ನಾಡಿನ ಸಮಸ್ತ ಜನತೆಯ ಪರವಾಗಿ ಹಾರ್ದಿಕ ಅಭಿನಂದನೆಯನ್ನು ಕೇಂದ್ರ ಸಚಿವರಾದ ಸೋಮಣ್ಣ ತಿಳಿಸಿದ್ದಾರೆ.

ನಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ಕಿತ್ತೂರು ರಾಣಿ ಚೆನ್ನಮ್ಮನ ವ್ಯಕ್ತಿತ್ವ ಮಹಿಳಾ ಸಬಲೀಕರಣದ ಚಿಹ್ನೆಯಾಗಿ ಎಲ್ಲರನ್ನು ಪ್ರೇರೇಪಿಸುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಈ ಸ್ಮರಣೀಯ ದಿವಸದಂದು ಭಾರತ ಸರ್ಕಾರ ರಾಣಿ ಚೆನ್ಮಮ್ಮನವರ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದ್ದು, ಈ ಸಮಯೋಚಿತ ನಿರ್ಧಾರಕ್ಕಾಗಿ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಕನ್ನಡ ನಾಡಿನ ಸಮಸ್ತ ಜನತೆಯ ಪರವಾಗಿ ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ ಅಭಿನಂದನೆ ತಿಳಿಸಿದ್ದಾರೆ.

ರಾಜ್ಯ ಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ, ಶಾಸಕರಾದ ಶ್ರೀ ಅರವಿಂದ ಬೆಲ್ಲದ, ಶ್ರೀ ಬಸವನಗೌಡ ಪಾಟೀಲ್ ಯತ್ನಾಳ್, ದೆಹಲಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಸಿ. ಎಮ್. ನಾಗರಾಜ್, ರಾಜ್ಯದಿಂದ ಆಗಮಿಸಿದ ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಅಪಾರ ಸಂಖ್ಯೆಯಲ್ಲಿ ಸ್ವಇಚ್ಛೆಯಿಂದ ದೆಹಲಿ ಕನ್ನಡಿಗರು, ಲೋಕಸಭೆ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us