रविवार, नवंबर 24 2024 | 11:45:57 AM
Breaking News
Home / Choose Language / kannada / ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹದಿನೈದನೇ ಹಣಕಾಸು ಆಯೋಗದ (ಎಕ್ಸ್ ವಿ ಎಫ್ ಸಿ) ಅನುದಾನ ಬಿಡುಗಡೆ ಮಾಡಲಾಗಿದೆ

ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹದಿನೈದನೇ ಹಣಕಾಸು ಆಯೋಗದ (ಎಕ್ಸ್ ವಿ ಎಫ್ ಸಿ) ಅನುದಾನ ಬಿಡುಗಡೆ ಮಾಡಲಾಗಿದೆ

Follow us on:

ಕೇಂದ್ರ ಸರ್ಕಾರವು 2024-25ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹದಿನೈದನೇ ಹಣಕಾಸು ಆಯೋಗದ (ಎಕ್ಸ್ ವಿ ಎಫ್ ಸಿ) ಅನುದಾನದಲ್ಲಿ 448.29 ಕೋಟಿ ರೂಪಾಯಿಗಳ ಮೊದಲ ಕಂತನ್ನು ಬಿಡುಗಡೆ ಮಾಡಿದೆ. ಈ ಮೊತ್ತವು ರಾಜ್ಯದ ಎಲ್ಲಾ ಅರ್ಹ 5949 ಗ್ರಾಮ ಪಂಚಾಯಿತಿಗಳನ್ನೂ ಒಳಗೊಂಡಿದೆ.

ಭಾರತ ಸರ್ಕಾರವು ಪಂಚಾಯತ್ ರಾಜ್ ಸಚಿವಾಲಯ ಮತ್ತು ಜಲ ಶಕ್ತಿ ಸಚಿವಾಲಯ (ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ) ಮೂಲಕ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗಾಗಿ ರಾಜ್ಯಗಳಿಗೆ ಹದಿನೈದನೇ ಹಣಕಾಸು ಆಯೋಗದ (ಎಕ್ಸ್ ವಿ ಎಫ್ ಸಿ) ಅನುದಾನವನ್ನು ಬಿಡುಗಡೆ ಮಾಡಲು ಶಿಫಾರಸು ಮಾಡುತ್ತದೆ ನಂತರ ಅದನ್ನು ಹಣಕಾಸು ಸಚಿವಾಲಯ ಬಿಡುಗಡೆ ಮಾಡುತ್ತದೆ. ಮಂಜೂರು ಮಾಡಿದ ಅನುದಾನವನ್ನು ಒಂದು ಆರ್ಥಿಕ ವರ್ಷದಲ್ಲಿ 2 ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಸಂವಿಧಾನದ ಹನ್ನೊಂದನೇ ಶೆಡ್ಯೂಲ್‌ ನಲ್ಲಿರುವ ಇಪ್ಪತ್ತೊಂಬತ್ತು (29) ವಿಷಯಗಳ ಅಡಿಯಲ್ಲಿ ಸ್ಥಾನ-ನಿರ್ದಿಷ್ಟ ಅಗತ್ಯಗಳಿಗಾಗಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ವೇತನಗಳು ಮತ್ತು ಇತರ ವೆಚ್ಚಗಳನ್ನು ಹೊರತುಪಡಿಸಿ ಈ ನಿರ್ದಿಷ್ಟ ಅನುದಾನವನ್ನು ಬಳಸಿಕೊಳ್ಳುತ್ತವೆ. ಈ ನಿರ್ದಿಷ್ಟ ಅನುದಾನವನ್ನು ಕೆಳಕಂಡ ಮೂಲಭೂತ ಸೇವೆಗಳಿಗೆ ಬಳಸಬಹುದು.

(ಎ) ನೈರ್ಮಲ್ಯ ಮತ್ತು ಬಯಲು ಮಲವಿಸರ್ಜನೆ ಮುಕ್ತ ಪರಿಸ್ಥಿತಿಗಳನ್ನು ನಿರ್ವಹಿಸುವುದು ಮತ್ತು ಮನೆ ತ್ಯಾಜ್ಯದ ನಿರ್ವಹಣೆ ಮತ್ತು ಸಂಸ್ಕರಣೆ ಸೇರಿದಂತೆ ಮತ್ತು ನಿರ್ದಿಷ್ಟವಾಗಿ ಮಾನವ ಮಲ ಮತ್ತು ಮಲದ ಕೆಸರು ನಿರ್ವಹಣೆ ಮತ್ತು (ಬಿ) ಕುಡಿಯುವ ನೀರು ಸರಬರಾಜು, ಮಳೆ ನೀರು ಕೊಯ್ಲು ಮತ್ತು ನೀರಿನ ಮರುಬಳಕೆ.

ಪಂಚಾಯತ್ ರಾಜ್ ಸಂಸ್ಥೆಗಳಿಗೆ/ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹದಿನೈದನೇ ಹಣಕಾಸು ಆಯೋಗದ ಅನುದಾನವನ್ನು ಒದಗಿಸುವ ಮೂಲಕ ಗ್ರಾಮೀಣ ಸ್ವಯಂ-ಆಡಳಿತವನ್ನು ಬಲಪಡಿಸಲು ಭಾರತ ಸರ್ಕಾರವು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ನಿಧಿಯು ಸ್ಥಳೀಯ ಆಡಳಿತ ಮಂಡಳಿಗಳು ಹೆಚ್ಚು ಪರಿಣಾಮಕಾರಿ, ಜವಾಬ್ದಾರಿಯುತ ಮತ್ತು ಸ್ವತಂತ್ರವಾಗಲು ಸಹಾಯ ಮಾಡುತ್ತದೆ, ಇದು ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ಮತ್ತು ಶಾಶ್ವತ ಪ್ರಗತಿಗೆ ಕಾರಣವಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್’ ಎಂಬ ದೃಷ್ಟಿಕೋನವನ್ನು ಅನುಸರಿಸಿ, ಈ ಉಪಕ್ರಮವು ಎಲ್ಲರಿಗೂ ಪ್ರಯೋಜನಕಾರಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಜನರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ. ಈ ಸ್ಥಳೀಯ ಸಂಸ್ಥೆಗಳು ಭಾರತದ ಅಭಿವೃದ್ಧಿಗೆ ಪ್ರಮುಖವಾಗಿವೆ ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ಸಹಾಯ ಮಾಡುತ್ತಿವೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹದಿನೈದನೇ ಹಣಕಾಸು ಆಯೋಗದ (ಎಕ್ಸ್ ವಿ ಎಫ್ ಸಿ) ಅನುದಾನ ಬಿಡುಗಡೆ ಮಾಡಲಾಗಿದೆ

ಕೇಂದ್ರ ಸರ್ಕಾರವು 2024-25ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹದಿನೈದನೇ ಹಣಕಾಸು ಆಯೋಗದ (ಎಕ್ಸ್ ವಿ ಎಫ್ ಸಿ) ಅನುದಾನದಲ್ಲಿ 448.29 ಕೋಟಿ ರೂಪಾಯಿಗಳ ಮೊದಲ …