बुधवार, नवंबर 27 2024 | 05:23:03 PM
Breaking News
Home / Choose Language / kannada / ಸಂವಿಧಾನವನ್ನು ಅಂಗೀಕರಿಸಿದ 75 ವರ್ಷಗಳ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾದ ಭಾರತದ ರಾಷ್ಟ್ರಪತಿಗಳು

ಸಂವಿಧಾನವನ್ನು ಅಂಗೀಕರಿಸಿದ 75 ವರ್ಷಗಳ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾದ ಭಾರತದ ರಾಷ್ಟ್ರಪತಿಗಳು

Follow us on:

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ನವೆಂಬರ್ 26, 2024) ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಸಂವಿಧಾನವನ್ನು ಅಂಗೀಕರಿಸಿದ 75 ವರ್ಷಗಳ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, 75 ವರ್ಷಗಳ ಹಿಂದೆ, ಇದೇ ದಿನದಂದು, ‘ಸಂವಿಧಾನ್ ಸದನ’ದ ಇದೇ ಸೆಂಟ್ರಲ್ ಹಾಲ್ ನಲ್ಲಿ, ಸಂವಿಧಾನ ರಚನಾ ಸಭೆಯು ಹೊಸದಾಗಿ ಸ್ವತಂತ್ರಗೊಂಡ ದೇಶಕ್ಕೆ ಸಂವಿಧಾನವನ್ನು ರೂಪಿಸುವ ಬೃಹತ್ ಕಾರ್ಯವನ್ನು ಪೂರ್ಣಗೊಳಿಸಿತು. ಆ ದಿನ, ಸಂವಿಧಾನ ರಚನಾ ಸಭೆಯ ಮೂಲಕ, ನಾವು, ಭಾರತದ ಜನರು, ಈ ಸಂವಿಧಾನವನ್ನು ಅಂಗೀಕರಿಸಿದ್ದೇವೆ, ಜಾರಿಗೆ ತಂದಿದ್ದೇವೆ ಮತ್ತು ನಮಗೆ ಸಮರ್ಪಿಸಿಕೊಂಡಿದ್ದೇವೆ.

ನಮ್ಮ ಸಂವಿಧಾನವು ನಮ್ಮ ಪ್ರಜಾಪ್ರಭುತ್ವ ಗಣರಾಜ್ಯದ ಬಲವಾದ ಅಡಿಪಾಯವಾಗಿದೆ. ನಮ್ಮ ಸಂವಿಧಾನವು ನಮ್ಮ ಸಾಮೂಹಿಕ ಮತ್ತು ವೈಯಕ್ತಿಕ ಘನತೆಯನ್ನು ಖಚಿತಪಡಿಸುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು.

ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ, ದೇಶದ ಎಲ್ಲಾ ನಾಗರಿಕರು ʻಸ್ವಾತಂತ್ರ್ಯದ ಅಮೃತ ಮಹೋತ್ಸವʼವನ್ನು(‘ಆಜಾದಿ ಕಾ ಅಮೃತ ಮಹೋತ್ಸವ್’) ಆಚರಿಸಿದರು ಎಂದು ರಾಷ್ಟ್ರಪತಿಗಳು ಹೇಳಿದರು. ಮುಂದಿನ ವರ್ಷ ಜನವರಿ 26 ರಂದು ನಾವು ನಮ್ಮ ಗಣರಾಜ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದೇವೆ. ಇಂತಹ ಆಚರಣೆಗಳು ಇಲ್ಲಿಯವರೆಗಿನ ನಮ್ಮ ಪ್ರಯಾಣದ ಬಗ್ಗೆ ತಿಳಿದುಕೊಳ್ಳಲು ಮತ್ತು ಮುಂದಿನ ಪ್ರಯಾಣಕ್ಕಾಗಿ ಉತ್ತಮವಾಗಿ ಯೋಜಿಸಲು ನಮಗೆ ಅವಕಾಶಗಳನ್ನು ಒದಗಿಸುತ್ತವೆ. ಇಂತಹ ಆಚರಣೆಗಳು ನಮ್ಮ ಏಕತೆಯನ್ನು ಬಲಪಡಿಸುತ್ತವೆ ಮತ್ತು ರಾಷ್ಟ್ರೀಯ ಗುರಿಗಳನ್ನು ಸಾಧಿಸುವ ನಮ್ಮ ಪ್ರಯತ್ನಗಳಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ ಎಂದು ತೋರಿಸುತ್ತವೆ ಎಂದು ಅವರು ವಿವರಿಸಿದರು.

ಒಂದು ಅರ್ಥದಲ್ಲಿ, ಭಾರತದ ಸಂವಿಧಾನವು ಕೆಲವು ಮಹಾನ್ ವ್ಯಕ್ತಿಗಳ ಸುಮಾರು ಮೂರು ವರ್ಷಗಳ ಚರ್ಚೆಯ ಫಲಿತಾಂಶವಾಗಿದೆ ಎಂದು ರಾಷ್ಟ್ರಪತಿ ಹೇಳಿದರು. ಆದರೆ, ನಿಜವಾದ ಅರ್ಥದಲ್ಲಿ, ಇದು ನಮ್ಮ ಸುದೀರ್ಘ ಸ್ವಾತಂತ್ರ್ಯ ಹೋರಾಟದ ಫಲವಾಗಿದೆ. ಆ ಸಾಟಿಯಿಲ್ಲದ ರಾಷ್ಟ್ರೀಯ ಚಳವಳಿಯ ಆದರ್ಶಗಳನ್ನು ಸಂವಿಧಾನದಲ್ಲಿ ಪ್ರತಿಷ್ಠಾಪಿಸಲಾಗಿದೆ. ಆ ಆದರ್ಶಗಳನ್ನು ಸಂವಿಧಾನದ ಪೀಠಿಕೆಯಲ್ಲಿ ಸಂಕ್ಷಿಪ್ತವಾಗಿ ಸೆರೆಹಿಡಿಯಲಾಗಿದೆ. ಅವುಗಳೆಂದರೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ. ಈ ಆದರ್ಶಗಳು ಯುಗಯುಗಗಳಿಂದಲೂ ಭಾರತವನ್ನು ವ್ಯಾಖ್ಯಾನಿಸಿವೆ. ಸಂವಿಧಾನದ ಪೀಠಿಕೆಯಲ್ಲಿ ಎತ್ತಿ ತೋರಲಾದ ಆದರ್ಶಗಳು ಒಂದಕ್ಕೊಂದು ಪೂರಕವಾಗಿವೆ. ಒಟ್ಟಾಗಿ, ಪ್ರತಿಯೊಬ್ಬ ನಾಗರಿಕನು ಅಭಿವೃದ್ಧಿ ಹೊಂದಲು, ಸಮಾಜಕ್ಕೆ ಕೊಡುಗೆ ನೀಡಲು ಮತ್ತು ಸಹ ನಾಗರಿಕರಿಗೆ ಸಹಾಯ ಮಾಡಲು ಅವಕಾಶವನ್ನು ಕಂಡುಕೊಳ್ಳುವ ವಾತಾವರಣವನ್ನು ಅವು ಸೃಷ್ಟಿಸುತ್ತಾರೆ ಎಂದ ರಾಷ್ಟ್ರಪತಿಗಳು ತಿಳಿಸಿದರು.

ನಮ್ಮ ಸಾಂವಿಧಾನಿಕ ಆದರ್ಶಗಳು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹಾಗೂ ಎಲ್ಲಾ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯಿಂದ ಬಲವರ್ಧನೆಗೊಳ್ಳುತ್ತವೆ. ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯಗಳನ್ನು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಭಾರತದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸುವುದು, ಸಮಾಜದಲ್ಲಿ ಸಾಮರಸ್ಯವನ್ನು ಉತ್ತೇಜಿಸುವುದು, ಮಹಿಳೆಯರ ಘನತೆಯನ್ನು ಕಾಯ್ದುಕೊಳ್ಳುವುದು, ಪರಿಸರವನ್ನು ರಕ್ಷಿಸುವುದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು, ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಮತ್ತು ರಾಷ್ಟ್ರವನ್ನು ಸಾಧನೆಯ ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು ನಾಗರಿಕರ ಮೂಲಭೂತ ಕರ್ತವ್ಯಗಳಲ್ಲಿ ಸೇರಿವೆ ಎಂದು ರಾಷ್ಟ್ರಪತಿ ಹೇಳಿದರು.

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ, ಸಾಮಾನ್ಯ ಜನರ ಜೀವನವನ್ನು ಉತ್ತಮಗೊಳಿಸಲು ಒಟ್ಟಾಗಿ ಕೆಲಸ ಮಾಡುವುದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಜವಾಬ್ದಾರಿಯಾಗಿದೆ ಎಂದು ರಾಷ್ಟ್ರಪತಿಗಳು ಉಲ್ಲೇಖಿಸಿದರು. ಸಂಸತ್ತು ಜಾರಿಗೆ ತಂದ ಅನೇಕ ಶಾಸನಗಳಲ್ಲಿ ಜನರ ಆಕಾಂಕ್ಷೆಗಳು ಅಭಿವ್ಯಕ್ತಿಯನ್ನು ಕಂಡುಕೊಂಡಿವೆ ಎಂದು ಅವರು ಗಮನ ಸೆಳೆದರು. ಕಳೆದ ಕೆಲವು ವರ್ಷಗಳಲ್ಲಿ, ಸಮಾಜದ ಎಲ್ಲಾ ವರ್ಗಗಳ, ವಿಶೇಷವಾಗಿ ದುರ್ಬಲ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಇಂತಹ ನಿರ್ಧಾರಗಳು ಜನರ ಜೀವನವನ್ನು ಸುಧಾರಿಸಿವೆ ಮತ್ತು ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಒದಗಿಸುತ್ತಿವೆ. ಸರ್ವೋಚ್ಚ ನ್ಯಾಯಾಲಯದ ಪ್ರಯತ್ನಗಳೊಂದಿಗೆ, ದೇಶದ ನ್ಯಾಯಾಂಗವು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

ನಮ್ಮ ಸಂವಿಧಾನವು ಜೀವಂತ ಮತ್ತು ಪ್ರಗತಿಪರ ದಾಖಲೆಯಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ನಮ್ಮ ದೂರದೃಷ್ಟಿಯ ಸಂವಿಧಾನ ರಚನಾಕಾರರು ಬದಲಾಗುತ್ತಿರುವ ಸಮಯದ ಅಗತ್ಯಗಳಿಗೆ ಅನುಗುಣವಾಗಿ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುವ ವ್ಯವಸ್ಥೆಯನ್ನು ಒದಗಿಸಿದ್ದಾರೆ. ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಮಹತ್ವಾಕಾಂಕ್ಷೆಯ ಗುರಿಗಳನ್ನು ನಾವು ಸಾಧಿಸಿದ್ದೇವೆ. ಹೊಸ ಕಾರ್ಯವಿಧಾನದೊಂದಿಗೆ, ನಾವು ಜಾಗತಿಕ ರಾಷ್ಟ್ರಗಳ ಸಮುದಾಯದಲ್ಲಿ ಭಾರತಕ್ಕೆ ಹೊಸ ಗುರುತನ್ನು ಗಳಿಸುತ್ತಿದ್ದೇವೆ. ನಮ್ಮ ಸಂವಿಧಾನ ರಚನಾಕಾರರು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಭಾರತಕ್ಕೆ ನಿರ್ದೇಶನ ನೀಡಿದ್ದರು. ಇಂದು, ಪ್ರಮುಖ ಆರ್ಥಿಕತೆಯಾಗಿರುವುದಲ್ಲದೆ, ನಮ್ಮ ದೇಶವು ‘ವಿಶ್ವ-ಬಂಧು’ವಿನಂತೆ ಈ ಪಾತ್ರವನ್ನು ಚೆನ್ನಾಗಿ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಸುಮಾರು ಮುಕ್ಕಾಲು ಶತಮಾನದ ಸಾಂವಿಧಾನಿಕ ಪ್ರಯಾಣದಲ್ಲಿ, ರಾಷ್ಟ್ರವು ಆ ಸಾಮರ್ಥ್ಯಗಳನ್ನು ತೋರಿಸುವಲ್ಲಿ ಮತ್ತು ಆ ಸಂಪ್ರದಾಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಗಮನಾರ್ಹ ಮಟ್ಟದಲ್ಲಿ ಯಶಸ್ವಿಯಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ನಾವು ಕಲಿತ ಪಾಠಗಳನ್ನು ಮುಂದಿನ ಪೀಳಿಗೆಗೆ ರವಾನಿಸಬೇಕು ಎಂದು ಅವರು ಒತ್ತಿ ಹೇಳಿದರು. 2015 ರಿಂದ ಪ್ರತಿ ವರ್ಷ ‘ಸಂವಿಧಾನ್ ದಿವಸ್’ ಆಚರಣೆಗಳು ನಮ್ಮ ಸಂಸ್ಥಾಪನಾ ದಾಖಲೆಯಾದ ಸಂವಿಧಾನದ ಬಗ್ಗೆ ನಮ್ಮ ಯುವಕರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡಿವೆ ಎಂದು ಅವರು ಗಮನ ಸೆಳೆದರು. ಎಲ್ಲಾ ಸಹ ನಾಗರಿಕರು ತಮ್ಮ ನಡವಳಿಕೆಯಲ್ಲಿ ಸಾಂವಿಧಾನಿಕ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಅವರು ಒತ್ತಾಯಿಸಿದರು; ಮೂಲಭೂತ ಕರ್ತವ್ಯಗಳನ್ನು ಅನುಸರಿಸುವಂತೆ ಮತ್ತು 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಿಸುವ ರಾಷ್ಟ್ರೀಯ ಗುರಿಯತ್ತ ಸಮರ್ಪಣೆಯಿಂದ ಮುಂದುವರಿಯುವಂತೆ ರಾಷ್ಟ್ರಪತಿಗಳು ಕರೆ ನೀಡಿದರು.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ವೋಚ್ಛ ನ್ಯಾಯಾಲಯದಲ್ಲಿ ನಡೆದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ …