शनिवार, नवंबर 16 2024 | 10:26:30 AM
Breaking News
Home / Choose Language / kannada / ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನ ಅಂಗವಾಗಿ ನವದೆಹಲಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಭವ್ಯ ಪ್ರತಿಮೆ ಅನಾವರಣಗೊಳಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ

ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನ ಅಂಗವಾಗಿ ನವದೆಹಲಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಭವ್ಯ ಪ್ರತಿಮೆ ಅನಾವರಣಗೊಳಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ

Follow us on:

ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ,  ನವದೆಹಲಿಯ ಬಾನ್ಸೆರಾ ಪಾರ್ಕ್‌ನಲ್ಲಿಂದು ಭಗವಾನ್ ಬಿರ್ಸಾ ಮುಂಡಾ ಅವರ ಭವ್ಯ ಪ್ರತಿಮೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅನಾವರಣಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಮನೋಹರ್ ಲಾಲ್, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ, ಕೇಂದ್ರದ ಸಹಾಯಕ ಖಾತೆ ಸಚಿವ ಶ್ರೀ ಹರ್ಷ್ ಮಲ್ಹೋತ್ರಾ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.

1BM.JPG

ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, 2021ರಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವ(ನವೆಂಬರ್ 15)ವನ್ನು ಜನಜಾತಿಯ ಗೌರವ್ ದಿವಸ್(ಬುಡಕಟ್ಟು ಜನಾಂಗದ ಹೆಮ್ಮೆಯ ದಿನ) ಎಂದು ಆಚರಿಸಲಾಗುವುದು ಎಂದು ಘೋಷಿಸಿದರು. ಈ ದಿನವೇ ಭಗವಾನ್ ಬಿರ್ಸಾ ಮುಂಡಾ ಜಾರ್ಖಂಡ್‌ನ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಬಿರ್ಸಾ ಮುಂಡಾ ಅವರ 150ನೇ ಜನ್ಮದಿನದ ಸ್ಮರಣಾರ್ಥ ಮುಂಬರುವ ವರ್ಷ 2025  ನವೆಂಬರ್ 15ರ ವರೆಗೆ ಆದಿವಾಸಿ ಗೌರವ ವರ್ಷ ಎಂದು ಆಚರಿಸಲಾಗುವುದು. ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ದೆಹಲಿಯ ಸರಾಯ್ ಕಾಲೇ ಖಾನ್ ಚೌಕದ ಹೆಸರನ್ನು ‘ಭಗವಾನ್ ಬಿರ್ಸಾ ಮುಂಡಾ ಚೌಕ್’ ಎಂದು ಬದಲಾಯಿಸಲು ಮೋದಿ ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.

2BM.jpg

ಭಗವಾನ್ ಬಿರ್ಸಾ ಮುಂಡಾ ಅವರು ತಮ್ಮ ಮೂಲ ಬುಡಕಟ್ಟು ಸಂಸ್ಕೃತಿಯ ಸಂರಕ್ಷಕರು ಮಾತ್ರವಲ್ಲದೆ, ತಮ್ಮ 25 ವರ್ಷಗಳ ಅಲ್ಪಾವಧಿಯಲ್ಲಿ, ಒಬ್ಬರು ಜೀವನವನ್ನು ಹೇಗೆ ನಡೆಸಬೇಕು, ಏನು ಮಾಡಬೇಕು ಎಂಬುದನ್ನು ತಮ್ಮ ಕಾರ್ಯಗಳ ಮೂಲಕ ದೇಶದ ಅನೇಕ ಜನರಿಗೆ ಸಾರಿದ್ದಾರೆ. ನಮ್ಮ ಜೀವನದ ಗುರಿ ಏನಿರಬೇಕು, ಗುರಿ ಹೇಗಿರಬೇಕು, ಎಂಥದ್ದಿರಬೇಕು ಎಂಬುದನ್ನು ಅವರು ತಿಳಿಸಿದ್ದಾರೆ. ಭಗವಾನ್ ಬಿರ್ಸಾ ಮುಂಡಾ ಖಂಡಿತವಾಗಿಯೂ ಸ್ವಾತಂತ್ರ್ಯ ಹೋರಾಟದ ಮಹಾನ್ ವೀರರಲ್ಲಿ ಒಬ್ಬರಾಗಿದ್ದಾರೆ. 1875ರಲ್ಲಿ ಜನಿಸಿದ ಭಗವಾನ್ ಬಿರ್ಸಾ ಮುಂಡಾ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ತಮ್ಮ ಮಾಧ್ಯಮಿಕ ಶಿಕ್ಷಣದ ಸಮಯದಲ್ಲಿ ಧಾರ್ಮಿಕ ಮತಾಂತರದ ವಿರುದ್ಧ ಧ್ವನಿ ಎತ್ತಿದ್ದರು. ಇಡೀ ಭಾರತ ಮತ್ತು ವಿಶ್ವದ 2ನೇ 2ರಷ್ಟು ಭಾಗ ಬ್ರಿಟಿಷರ ಆಳ್ವಿಕೆಯಲ್ಲಿದ್ದಾಗ, ಆ ಸಮಯದಲ್ಲಿ ಬಿರ್ಸಾ ಮುಂಡಾ ಅವರು ಧಾರ್ಮಿಕ ಮತಾಂತರದ ವಿರುದ್ಧ ದೃಢವಾಗಿ ನಿಲ್ಲುವ ಧೈರ್ಯ ಪ್ರದರ್ಶಿಸಿದರು. ನಂತರ ಈ ಸಂಕಲ್ಪ ಮತ್ತು ಧೈರ್ಯವು ಅವರನ್ನು ಈ ದೇಶದ ನಾಯಕನನ್ನಾಗಿ ಪರಿವರ್ತಿಸಿತು. ರಾಂಚಿಯ ಜೈಲಿನಿಂದ ಹಿಡಿದು ಇಂಗ್ಲೆಂಡಿನ ರಾಣಿಯ ತನಕ ರಾಷ್ಟ್ರನಾಯಕ ಬಿರ್ಸಾ ಮುಂಡಾಜಿ ದೇಶವಾಸಿಗಳ ಗಟ್ಟಿ ಧ್ವನಿಯಾಗಿದ್ದರು ಎಂದು ಅಮಿತ್ ಶಾ ಹೇಳಿದರು.

3BM.JPG

ಭಗವಾನ್ ಬಿರ್ಸಾ ಮುಂಡಾ ಅವರು ಬುಡಕಟ್ಟು ಸಮುದಾಯದ ಪರಿಸರ ವ್ಯವಸ್ಥೆ, ಜೀವನೋಪಾಯ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿದ್ದು, ಬುಡಕಟ್ಟು ಜನಾಂಗದವರಿಗೆ ಇವೆಲ್ಲವೂ ಸೇರಿವೆ ಎಂಬ ಪರಿಕಲ್ಪನೆ ಪುನರುಜ್ಜೀವನಗೊಳಿಸಿದರು. ಬುಡಕಟ್ಟು ಸಮಾಜದಲ್ಲಿ ಬಿರ್ಸಾ ಮುಂಡಾ ಸೇರಿದಂತೆ ಇತರೆ ಹಲವಾರು ನಾಯಕರು ಜಾಗೃತಿ ಮೂಡಿಸಿದರು. ಮದ್ಯ ಸೇವನೆ, ಭೂಮಾಲೀಕರ ಶೋಷಣೆ ಮತ್ತು ಬ್ರಿಟಿಷ್ ರಾಜ್ ಅನ್ನು ಅವರು ವಿರೋಧಿಸಿದರು. ಈ ದೇಶದ ಬುಡಕಟ್ಟು ಸಮಾಜದ ಸಾಮಾಜಿಕ ಸುಧಾರಣೆಗಳಿಗಾಗಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಮತ್ತು ಮತಾಂತರ ವಿರೋಧಿ ಚಳವಳಿಗಾಗಿ ಇಡೀ ದೇಶವು ಭಗವಾನ್ ಬಿರ್ಸಾ ಮುಂಡಾ ಅವರಿಗೆ ಕೃತಜ್ಞರಾಗಿರಬೇಕು ಎಂದು ಅಮಿತ್ ಶಾ ಹೇಳಿದರು.

“ಧರ್ತಿ ಅಬಾ”(ಭೂಮಿಯ ತಂದೆ) ಎಂದೂ ಕರೆಯಲ್ಪಡುವ ಭಗವಾನ್ ಬಿರ್ಸಾ ಮುಂಡಾ ಅವರ ಜೀವನವನ್ನು 2 ಭಾಗಗಳಾಗಿ ವಿಂಗಡಿಸಿಕ ನೋಡಬಹುದು. ಮೊದಲ ಭಾಗವು ಬುಡಕಟ್ಟು ಸಂಸ್ಕೃತಿಯನ್ನು ರಕ್ಷಿಸುವ ಅವರ ಬದ್ಧತೆಯಾದರೆ, ಎರಡನೆಯ ಭಾಗವು ಮಾತೃಭೂಮಿಯ ಸ್ವಾತಂತ್ರ್ಯ ಮತ್ತು ಅದರ ರಕ್ಷಣೆಗಾಗಿ ಸರ್ವೋಚ್ಚ ತ್ಯಾಗ ಮಾಡುವ ಉತ್ಸಾಹವಾಗಿದೆ. ಭಗವಾನ್ ಬಿರ್ಸಾ ಮುಂಡಾ ಅವರು ಕೇವಲ 25ನೇ ವಯಸ್ಸಿನಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಕ್ರಾಂತಿಯ ಜ್ವಾಲೆ ಬೆಳಗಿದರು. ಬುಡಕಟ್ಟು ಜನಾಂಗದ ಸ್ಥಿತಿಯತ್ತ ದೇಶ ಮಾತ್ರವಲ್ಲದೆ, ಇಡೀ ವಿಶ್ವದ ಗಮನ ಸೆಳೆದರು. ಅಂತಹ ಕಥೆಗಳನ್ನು ತಮ್ಮ ಕೃತಿಗಳಲ್ಲಿ ಬರೆದರು. 150 ವರ್ಷಗಳ ನಂತರವೂ ಇಡೀ ದೇಶವೇ ಇಂದು ಅವರ ಮುಂದೆ ತಲೆಬಾಗುತ್ತಿದೆ.

ದೇಶಾದ್ಯಂತ ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು, ಆದರೆ ದುರದೃಷ್ಟವಶಾತ್ ಸ್ವಾತಂತ್ರ್ಯಾ ನಂತರ ಈ ಮಹಾನ್ ವೀರರನ್ನು ಮರೆಯಲಾಗಿದೆ. 2015ರಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 200 ಕೋಟಿ ರೂ. ವೆಚ್ಚದಲ್ಲಿ ದೇಶದಲ್ಲಿ 20 ಬುಡಕಟ್ಟು ಮಹಾವೀರರ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದರು, ಈ ಮೂಲಕ ಮಕ್ಕಳು ಈ ಮಹಾನ್ ವೀರರ ಜೀವನದ ಬಗ್ಗೆ ಪರಿಚಿತರಾಗುತ್ತಾರೆ. ಇಲ್ಲಿಯವರೆಗೆ 3 ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಲಾಗಿದೆ. ರಾಂಚಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ಮ್ಯೂಸಿಯಂ, ಜಬಲ್‌ಪುರದಲ್ಲಿ ಶಂಕರ್ ಶಾ ಮತ್ತು ರಘುನಾಥ್ ಷಾ ಮ್ಯೂಸಿಯಂ ಮತ್ತು ಛಿಂದ್ವಾರದಲ್ಲಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಮ್ಯೂಸಿಯಂ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಉಳಿದ ಎಲ್ಲಾ ವಸ್ತುಸಂಗ್ರಹಾಲಯಗಳು 2026ರ ವೇಳೆಗೆ ಸಿದ್ಧವಾಗುತ್ತವೆ ಎಂದು ಅಮಿತ್ ಶಾ ತಿಳಿಸಿದರು.

4BM.JPG

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ ಬುಡಕಟ್ಟು ಜನಾಂಗದ ಅಭಿಮಾನಕ್ಕಾಗಿ ಸಾಕಷ್ಟು ಕೆಲಸ ಮಾಡಿದೆ. ಸ್ವಾತಂತ್ರ್ಯಾ ನಂತರ 75 ವರ್ಷಗಳ ಬಳಿಕ ಮೊಟ್ಟಮೊದಲ ಬಾರಿಗೆ ಮೋದಿ ಸರಕಾರ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಭಾರತದ ರಾಷ್ಟ್ರಪತಿಯಾಗುವ ಅವಕಾಶ ನೀಡಿದೆ. ಶ್ರೀಮತಿ ದ್ರೌಪದಿ ಮುರ್ಮು ಅವರು ಬಡ ಬುಡಕಟ್ಟು ಕುಟುಂಬದ ಮಗಳಾಗಿದ್ದು, ಇಂದು ದೇಶದ ಪ್ರಥಮ ಪ್ರಜೆಯ ಸ್ಥಾನ ಅಲಂಕರಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರವು ಬುಡಕಟ್ಟು ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ತಡೆಯುವ ಮತ್ತು ಮಕ್ಕಳನ್ನು ದಾರಿ ತಪ್ಪಿಸುವ ನಕ್ಸಲೀಯ ಚಟುವಟಿಕೆಗಳನ್ನು ಬಹುತೇಕ ನಿರ್ಮೂಲನೆ ಮಾಡಿದೆ ಎಂದು ಅಮಿತ್ ಶಾ ಹೇಳಿದರು.

ಆದಿವಾಸಿಗಳ ಅಭಿವೃದ್ಧಿಗೆ ಹಿಂದಿನ ಸರಕಾರಗಳು ಕೇವಲ 28,000 ಕೋಟಿ ರೂ. ಮೊತ್ತದ ಬಜೆಟ್ ನೀಡಿದ್ದರೆ, ಮೋದಿ ಸರ್ಕಾರವು 2024-25ರ ಬಜೆಟ್‌ನಲ್ಲಿ ಆದಿವಾಸಿಗಳ ಅಭಿವೃದ್ಧಿಗೆ 1,33,000 ಕೋಟಿ ರೂ. ಒದಗಿಸಿದೆ. ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 26,428 ಗಿರಿಜನ ಗ್ರಾಮಗಳಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಸಂಪೂರ್ಣ ಒದಗಿಸಲಾಗಿದೆ. ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಡಿ ಬುಡಕಟ್ಟು ಪ್ರದೇಶಗಳಿಗೆ 97 ಸಾವಿರ ಕೋಟಿ ರೂ. ವಿತರಣೆ ಮಾಡಲಾಗಿದೆ, 708 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ, ಪ್ರಧಾನ ಮಂತ್ರಿ ಪಿವಿಟಿಜಿ ಅಭಿವೃದ್ಧಿ ಮಿಷನ್ ಅಡಿ, 15,000 ಕೋಟಿ ರೂ. ಮತ್ತು ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನದಡಿ 24,000 ಕೋಟಿ ರೂ. ನೀಡಲಾಗಿದೆ. ಈ ಎಲ್ಲಾ ಅನುದಾನವನ್ನು 63,000 ಗ್ರಾಮಗಳ ಸಂಪೂರ್ಣ ಅಭಿವೃದ್ಧಿಗೆ ನೀಡಲಾಗಿದೆ ಎಂದು ಸಚಿವ ಅಮಿತ್ ಶಾ ತಿಳಿಸಿದರು.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಶ್ರೀ ಜವಾಹರಲಾಲ್ ನೆಹರೂ ಅವರ ಜನ್ಮ ಜಯಂತಿಯಂದು ಪ್ರಧಾನಮಂತ್ರಿಯವರಿಂದ ಗೌರವ ನಮನ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮಾಜಿ ಪ್ರಧಾನಮಂತ್ರಿ ಶ್ರೀ ಜವಾಹರಲಾಲ್ ನೆಹರೂ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ …