रविवार, नवंबर 24 2024 | 03:01:11 PM
Breaking News
Home / Choose Language / kannada / ಫ್ಯಾಷನ್ ಉದ್ಯಮದ ಹಿನ್ನೆಲೆಯು ನನ್ನ ಚಿತ್ರನಿರ್ಮಾಣ ಶೈಲಿಯ ಮೇಲೆ ಪ್ರಭಾವ ಬೀರಿತು, ವಿಶೇಷವಾಗಿ ಕಥೆ ಹೇಳುವಿಕೆ ಮತ್ತು ವಿವರಗಳಿಗೆ ಗಮನ ಕೊಡುವುದರ ಬಗ್ಗೆ: ಮನೀಶ್ ಮಲ್ಹೋತ್ರಾ, ‘ಸಾಲಿ ಮೊಹಬ್ಬತ್’ ನಿರ್ಮಾಪಕರು

ಫ್ಯಾಷನ್ ಉದ್ಯಮದ ಹಿನ್ನೆಲೆಯು ನನ್ನ ಚಿತ್ರನಿರ್ಮಾಣ ಶೈಲಿಯ ಮೇಲೆ ಪ್ರಭಾವ ಬೀರಿತು, ವಿಶೇಷವಾಗಿ ಕಥೆ ಹೇಳುವಿಕೆ ಮತ್ತು ವಿವರಗಳಿಗೆ ಗಮನ ಕೊಡುವುದರ ಬಗ್ಗೆ: ಮನೀಶ್ ಮಲ್ಹೋತ್ರಾ, ‘ಸಾಲಿ ಮೊಹಬ್ಬತ್’ ನಿರ್ಮಾಪಕರು

Follow us on:

ದ್ರೋಹ, ಸೇಡು ಮತ್ತು ಮಸುಕಾದ ನೈಜತೆಗಳ ರೋಮಾಂಚಕ ಕಥೆಯಲ್ಲಿ, ‘ಸಾಲಿ ಮೊಹಬ್ಬತ್’ ಚಿತ್ರವು ಹಿಂದಿನ ಮತ್ತು ವರ್ತಮಾನದ ನಡುವಿನ ತಿರುಚಿದ ಕೊಂಡಿಯನ್ನು ಹೆಣೆಯುತ್ತದೆ, ಇದು ನಿಜವಾದ ಭಾವನೆಗಳನ್ನು ಮತ್ತು ಆಳವಾದ ಪಾತ್ರ ಹೊಂದಿದ ಶ್ರೀಮಂತ ಸಿನಿಮಾವನ್ನು ಹುಡುಕುತ್ತಿರುವವರಿಗೆ ಸಂತೋಷವನ್ನು ನೀಡುವ ರೋಮಾಂಚಕ ಕಥೆಯನ್ನು ನೀಡುತ್ತದೆ. ಕಥಾವಸ್ತುವಿನ ಅನಿರೀಕ್ಷಿತ ತಿರುವುಗಳನ್ನು ಮೀರಿಸುತ್ತದೆ. ಗೋವಾದಲ್ಲಿ ನಡೆದ 55ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಸಾಲಿ ಮೊಹಬ್ಬತ್’ ಚಿತ್ರತಂಡವು ಮಾಧ್ಯಮಗಳೊಂದಿಗೆ ಸಂವಾದ ನಡೆಸಿ, ಚಿತ್ರ ನಿರ್ಮಿಸಿದ ತಮ್ಮ ಅನುಭವ ಮತ್ತು ಆಕಾಂಕ್ಷೆಗಳನ್ನು ಅವರೊಂದಿಗೆ ಹಂಚಿಕೊಂಡಿತು.

ಪ್ರಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ನಿರ್ಮಾಪಕರಾಗಿ ಪಾದಾರ್ಪಣೆ ಮಾಡುತ್ತಾ, ಅವರ ಫ್ಯಾಶನ್ ಉದ್ಯಮದ ಹಿನ್ನೆಲೆ ಚಲನಚಿತ್ರ ನಿರ್ಮಾಣ ಶೈಲಿಯನ್ನು ಹೇಗೆ ಪ್ರಭಾವಿಸಿತು, ವಿಶೇಷವಾಗಿ ಕಥೆ ಹೇಳುವುದು ಮತ್ತು ವಿವರಗಳಿಗೆ ಗಮನ ಕೊಡುವುದರ ಬಗ್ಗೆ ಚರ್ಚಿಸಿದರು. ಪ್ರದರ್ಶನಕ್ಕಿಂತ ಹೆಚ್ಚಾಗಿ ಪಾತ್ರದ ಆಳವನ್ನು ಕೇಂದ್ರೀಕರಿಸಿದ ಆಧಾರವಾಗಿರುವ, ನೈಜ ನಿರೂಪಣೆಯ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು. ಮಲ್ಹೋತ್ರಾ ಅವರು ಸಾಂಪ್ರದಾಯಿಕ ಕಥಾವಸ್ತುವಿನ ತಿರುವುಗಳನ್ನು ಅವಲಂಬಿಸಿರುವುದಕ್ಕಿಂತ ಹೆಚ್ಚಾಗಿ ಭಾವನಾತ್ಮಕವಾಗಿ  ಮತ್ತು ಪ್ರೇಕ್ಷಕರೊಂದಿಗೆ ಸಂಪರ್ಕ ಹೊಂದಿದ ಕಥೆಯನ್ನು ರಚಿಸುವ ಗುರಿಯನ್ನು ಹೊಂದಿದ್ದು,  ಪತ್ತೆದಾರಿ ಕಥಾ ಪ್ರಕಾರವನ್ನು ಅನ್ವೇಷಿಸುವ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದರು.

ಸಹ ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಅವರು ನಿಖರವಾದ ಕಥೆ ಹೇಳುವ ಮಹತ್ವವನ್ನು ಎತ್ತಿ ತೋರಿಸಿದರು, ಇತ್ತೀಚಿನ ವರ್ಷಗಳಲ್ಲಿ ಪತ್ತೆದಾರಿ ಕಥಾ ಪ್ರಕಾರದ ವೂ-ಡನ್ನಿಟ್ ಚಿತ್ರಗಳು ಹೆಚ್ಚುಯಶಸ್ವಿ ಚಲನಚಿತ್ರಗಳಾಗಿಲ್ಲ ಎಂದು ಹೇಳಿದರು. ಅವರು ಭಾರತದಲ್ಲಿ ಚಲನಚಿತ್ರದ ಪ್ರಥಮ ಪ್ರದರ್ಶನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು, ಅಪರೂಪವಾಗಿ ಚಲನಚಿತ್ರವೊಂದು ತಾಯ್ನಾಡಿನಲ್ಲಿ ವಿಶ್ವದ ಪ್ರಥಮ ಪ್ರದರ್ಶನವಾಗಿರುವುದನ್ನು ಒತ್ತಿಹೇಳಿದರು. ದೇಶಪಾಂಡೆ ಅವರು ಚಿತ್ರದ ಆಳವಾದ ಪಾತ್ರ ಕೇಂದ್ರಿತ ವಿಧಾನದ ಬಗ್ಗೆ ವಿಶೇಷವಾಗಿ ಉತ್ಸುಕರಾಗಿದ್ದರು ಆಘಾತ ಮೌಲ್ಯವನ್ನು ಅವಲಂಬಿಸಿರುವುದಕ್ಕಿಂತ ಹೆಚ್ಚಾಗಿ ಅದರ ಭಾವನಾತ್ಮಕ ಸಂಪರ್ಕಕ್ಕಾಗಿ ಚಲನಚಿತ್ರವು ಹೇಗೆ ಎದ್ದು ಕಾಣುತ್ತದೆ ಎಂದು ಹೇಳಿದರು.

ನಿರ್ದೇಶಕಿ ಟಿಸ್ಕಾ ಚೋಪ್ರಾ ಸಾಂಪ್ರದಾಯಿಕ ಶೈಲಿಗಿಂತ ಸೂಕ್ಷ್ಮತೆ ಮತ್ತು ಭಾವನಾತ್ಮಕ ಅನುರಣನದ ಮೇಲೆ ಕೇಂದ್ರೀಕರಿಸಿದ ಚಿತ್ರಕ್ಕಾಗಿ ತಮ್ಮ ದೃಷ್ಟಿಯ ಬಗ್ಗೆ ಮಾತನಾಡಿದರು. ಅವರು ತಂಡದೊಳಗಿನ ಸಹಯೋಗದ ಕುರಿತು ಒತ್ತಿಹೇಳುತ್ತಾ ಅಲ್ಲಿ ಪ್ರತಿ ವಿವರವು ಚಿತ್ರಕಥೆಯಿಂದ ಹಿಡಿದು ನಟನೆ ಮತ್ತು ಪ್ರದರ್ಶನಗಳವರೆಗೆ, ಚಿತ್ರದ ಒಟ್ಟಾರೆ ಪ್ರಭಾವಕ್ಕೆ ಕೊಡುಗೆ ನೀಡಿತು ಎಂದು ಹೇಳಿದರು.

ನಟ ದಿಬ್ಯೇಂದು ಅವರು ಸಿನಿಮಾವು ಬಾಹ್ಯ ರಹಸ್ಯಕ್ಕಿಂತ ಹೆಚ್ಚಾಗಿ ಪಾತ್ರಗಳ ಸಂಕೀರ್ಣತೆಯ ಮೇಲೆ ಕೇಂದ್ರೀಕರಿಸುವ ಮೂಲಕ ಸಾಮಾನ್ಯ ಪತ್ತೆದಾರಿ ಕಥೆಗಳಿಗಿಂತ ವಿಭಿನ್ನವಾಗಿರುವ ಬಗ್ಗೆ ಹೇಳಿದರು. ಪ್ರೇಕ್ಷಕರ ಆಸಕ್ತಿಯು ಕಥೆಯ ಆಳ ಮತ್ತು ಅದರ ಭಾವನಾತ್ಮಕ ತಿರುಳಿನಲ್ಲಿರುವಂತೆ ಪಾತ್ರಗಳ ಸಂಬಂಧಗಳು ಮತ್ತು ಪ್ರೇರಣೆಗಳ ಮೂಲಕ ತಂಡವು ಮಾನಸಿಕ ಉದ್ವೇಗವನ್ನು ಹೇಗೆ ನಿರ್ಮಿಸಿದೆ ಎಂಬುದನ್ನು ಅವರು ವಿವರಿಸಿದರು.

ಪ್ರೇಕ್ಷಕರು ಪಾತ್ರಗಳು ಮತ್ತು ಅವರ ಪ್ರೇರಣೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಒತ್ತು ನೀಡುವ ಮೂಲಕ ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವ ಮತ್ತು ಚಿಂತನೆಗೆ ಪ್ರಚೋದನೆ ನೀಡುವ ಚಲನಚಿತ್ರವನ್ನು ರಚಿಸುವುದು ತಮ್ಮ ಗುರಿಯಾಗಿದೆ ಎಂದು ಒತ್ತಿ ಹೇಳುವ ಮೂಲಕ ತಂಡವು ತಮ್ಮ ಪತ್ರಿಕಾಗೋಷ್ಠಿಯನ್ನು ಮುಕ್ತಾಯಗೊಳಿಸಿತು.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹದಿನೈದನೇ ಹಣಕಾಸು ಆಯೋಗದ (ಎಕ್ಸ್ ವಿ ಎಫ್ ಸಿ) ಅನುದಾನ ಬಿಡುಗಡೆ ಮಾಡಲಾಗಿದೆ

ಕೇಂದ್ರ ಸರ್ಕಾರವು 2024-25ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹದಿನೈದನೇ ಹಣಕಾಸು ಆಯೋಗದ (ಎಕ್ಸ್ ವಿ ಎಫ್ ಸಿ) ಅನುದಾನದಲ್ಲಿ 448.29 ಕೋಟಿ ರೂಪಾಯಿಗಳ ಮೊದಲ …