Wednesday, December 10 2025 | 01:42:20 PM
Breaking News

National

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತ ಸರ್ಕಾರವು ಪ್ರಕೃತಿ ವಿಕೋಪಗಳು ಮತ್ತು ವಿಪತ್ತುಗಳ ಸಮಯದಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಜೊತೆಯಾಗಿ ನಿಂತಿದೆ

2023ರ ಪ್ರವಾಹ, ಭೂಕುಸಿತ, ಮೇಘಸ್ಫೋಟದ ನಂತರ ಹಿಮಾಚಲ ಪ್ರದೇಶ ರಾಜ್ಯಕ್ಕೆ ಚೇತರಿಕೆ ಮತ್ತು ಪುನರ್ ನಿರ್ಮಾಣ ಯೋಜನೆಗೆ ಒಟ್ಟು 2006.40 ಕೋಟಿ ರೂ.ಗಳನ್ನು  ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಅನುಮೋದಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್.ಡಿ.ಆರ್.ಎಫ್) ಅಡಿಯಲ್ಲಿ ಚೇತರಿಕೆ ಮತ್ತು ಪುನರ್ನಿರ್ಮಾಣ ನಿಧಿ ವಿಭಾಗದಿಂದ ರಾಜ್ಯಕ್ಕೆ ಆರ್ಥಿಕ ಸಹಾಯದ ಪ್ರಸ್ತಾವನೆಯನ್ನು ಹಣಕಾಸು ಸಚಿವರು, ಕೃಷಿ ಸಚಿವರು ಮತ್ತು …

Read More »

ದೇಶದಲ್ಲಿ ಸ್ವಾವಲಂಬನೆ ಬಲಗೊಳಿಸುವಲ್ಲಿ ಭಾರತದ ಯುವಶಕ್ತಿ ನೇತೃತ್ವದ ತಂತ್ರಜ್ಞಾನ ನಾವಿನ್ಯತೆಗೆ ಪ್ರಧಾನಮಂತ್ರಿ ಮೆಚ್ಚುಗೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಂತ್ರಜ್ಞಾನವನ್ನು ಮುಂದುವರಿಸುವಲ್ಲಿ ಮತ್ತು ದೇಶದ ಸ್ವಾವಲಂಬನೆಯನ್ನು ಮುನ್ನಡೆಸುವಲ್ಲಿ ಭಾರತದ ಯುವ ನಾವಿನ್ಯಕಾರರ ಪ್ರಮುಖ ಪಾತ್ರವನ್ನು ಶ್ಲಾಘಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ, ಡಿಜಿಟಲ್ ಇಂಡಿಯಾ ಉಪಕ್ರಮವು  ನಾವಿನ್ಯತೆಯ ಸಮರ್ಪಕ ಬಳಕೆಯ ಮೂಲಕ ಯುವಜನರನ್ನು ಸಬಲಗೊಳಿಸುತ್ತಾ ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಿದೆ. ಕಳೆದ 11 ವರ್ಷಗಳಲ್ಲಿ ತಂತ್ರಜ್ಞಾನದ ಶಕ್ತಿಯ ಸಮರ್ಪಕ ಬಳಕೆಯಿಂದಾಗಿ ಭಾರತದ ಜನರಿಗೆ ಅಸಂಖ್ಯಾತ ಅನುಕೂಲಗಳುಂಟಾಗಿದೆ ಎಂದು ಶ್ರೀ ಮೋದಿ …

Read More »

ಹೆಚ್ಚುತ್ತಿರುವ ಸ್ಥೂಲಕಾಯದ ಸಮಸ್ಯೆಯನ್ನು ಕಡಿಮೆ ಮಾಡಲು ದೇಶಾದ್ಯಂತ ಉಪಕ್ರಮಕ್ಕೆ ಕೇಂದ್ರ ಆರೋಗ್ಯ ಸಚಿವರಾದ​​​​​​​ ಶ್ರೀ ಜೆ.ಪಿ. ನಡ್ಡಾ ಚಾಲನೆ

ಆರೋಗ್ಯಕರ ಸಮಾಜವು ಬಲವಾದ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ಅಡಿಪಾಯ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಒತ್ತಿ ಹೇಳಿದ್ದಾರೆ. ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಇಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಯೋಜಿಸಿದ್ದ ವಿಶ್ವ ಆಹಾರ ಸುರಕ್ಷತಾ ದಿನದ ಕಾರ್ಯಕ್ರಮದಲ್ಲಿ  ದಿಕ್ಸೂಚಿ ಭಾಷಣ ಮಾಡಿದ ಸಚಿವರು, ತೈಲದಲ್ಲಿ ಕರಿದ ಆಹಾರಗಳ  ಸೇವನೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡಲು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ  ಕರೆಯನ್ನು ನೆನಪಿಸಿಕೊಂಡರು. ಎಚ್ಚರಿಕೆಯಿಂದ ತಿನ್ನುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಶ್ರೀ ನಡ್ಡಾ, ಜನರು ತಮ್ಮ ಕ್ಯಾಲೋರಿ ಸೇವನೆಯ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಮತೋಲಿತ ಆಹಾರ ಸೇವನೆಯ ಪದ್ಧತಿಯನ್ನು ಕಾಪಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಇತ್ತೀಚಿನ ಅಧ್ಯಯನವನ್ನು ಉಲ್ಲೇಖಿಸಿದ ಅವರು, ಇದು 2008 ಮತ್ತು 2020ರ ನಡುವೆ ಭಾರತದಲ್ಲಿ ಬೊಜ್ಜು ಪ್ರಮಾಣವು ನಗರ ಪ್ರದೇಶಗಳಲ್ಲಿ 39.6% ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 23.1%ಕ್ಕೆ ಏರಿದೆ ಎಂಬುದನ್ನು ಬಹಿರಂಗಪಡಿಸಿದೆ. ಈಗಲೇ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, 2050ರ ವೇಳೆಗೆ ಭಾರತದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಬೊಜ್ಜು ಸಮಸ್ಯೆ ಎದುರಿಸುವ  ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಜಾಗೃತಿ ಅಭಿಯಾನದ ಭಾಗವಾಗಿ, ಸಚಿವರು “ಈಟ್ ರೈಟ್ ಆಕ್ಟಿವಿಟಿ ಪುಸ್ತಕ”ವನ್ನು ಬಿಡುಗಡೆ ಮಾಡಿದರು, ಇದನ್ನು ಶಿಕ್ಷಣ ಇಲಾಖೆಯ ಮೂಲಕ ಶಾಲಾ ಮಕ್ಕಳಿಗೆ ಮತ್ತು ರೈಲ್ವೆ ಮಂಡಳಿಯಿಂದ ಪ್ರಯಾಣಿಕರಿಗೆ ವಿತರಿಸಲಾಗುವುದು. ಶ್ರೀ ನಡ್ಡಾ ಅವರು ನವೀನ ವರ್ತನೆ ಬದಲಾವಣೆ ತಂತ್ರವನ್ನು ಅಂದರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ಎಫ್‌ಎಸ್‌ಎಸ್‌ಎಐ ಅಭಿವೃದ್ಧಿಪಡಿಸಿದ ಶಾಲೆಗಳು, ಕೆಲಸದ ಸ್ಥಳಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಕ್ಕರೆ ಮತ್ತು ತೈಲ ಬೋರ್ಡ್ ಗಳ  ವ್ಯಾಪಕ ಪ್ರಚಾರವನ್ನು ಶ್ಲಾಘಿಸಿದರು, ಇದು ಪ್ರಬಲ ದೃಶ್ಯ ಪ್ರಚಾರ ಸಾಧನವಾಗಿ  ಕಾರ್ಯನಿರ್ವಹಿಸುತ್ತದೆ, ದೈನಂದಿನ ಆಹಾರ ಪದಾರ್ಥಗಳಲ್ಲಿ ಅಡಗಿರುವ ಸಕ್ಕರೆ ಮತ್ತು ಕೊಬ್ಬಿನ ಬಗ್ಗೆ ಸ್ಪಷ್ಟ, ಸಂಬಂಧಿತ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಎನ್‌ಸಿಇಆರ್‌ಟಿ ಶಾಲಾ ಪಠ್ಯಕ್ರಮದಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಒಂದು …

Read More »

ತೀವ್ರ ಶಾಖದ ಅಪಾಯಗಳನ್ನು ಪರಿಹರಿಸಲು ಗಡಿಯಾಚೆಗಿನ ಸಹಕಾರಕ್ಕೆ ಡಾ. ಪಿ.ಕೆ. ಮಿಶ್ರಾ ಕರೆ

ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು, ತೀವ್ರ ಶಾಖವನ್ನು ಜಾಗತಿಕ ಬಿಕ್ಕಟ್ಟಾಗಿ ಎದುರಿಸುವ ತುರ್ತು ಅಗತ್ಯವನ್ನು ಒತ್ತಿಹೇಳಿದ್ದಾರೆ, ಇದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಕರೆಯನ್ನು ಪ್ರತಿಧ್ವನಿಸಿದೆ. ಜಿನೀವಾದಲ್ಲಿ ನಿನ್ನೆ (2025ರ ಜೂನ್ 06) ನಡೆದ ತೀವ್ರ ಶಾಖ ಅಪಾಯ ಆಡಳಿತ ಕುರಿತ ವಿಶೇಷ ಅಧಿವೇಶನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಹೆಚ್ಚುತ್ತಿರುವ ತಾಪಮಾನವು ಸಾರ್ವಜನಿಕ ಆರೋಗ್ಯ, ಆರ್ಥಿಕ ಸ್ಥಿರತೆ ಮತ್ತು ಪರಿಸರ ಸ್ಥಿತಿಸ್ಥಾಪಕತ್ವಕ್ಕೆ ವ್ಯವಸ್ಥಿತ ಅಪಾಯವನ್ನುಂಟುಮಾಡುತ್ತದೆ …

Read More »

ವಿಪತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು 5 ಪ್ರಮುಖ ಜಾಗತಿಕ ಆದ್ಯತೆಗಳನ್ನು ಪ್ರಧಾನಮಂತ್ರಿ ವಿವರಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ 2025ರ ಅಂತಾರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಭಾಷಣ ಮಾಡಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಯುರೋಪ್ ನಲ್ಲಿ ಮೊಟ್ಟಮೊದಲ ಬಾರಿಗೆ ಆತಿಥ್ಯ ವಹಿಸಿರುವ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ 2025ಕ್ಕೆ ಭಾಗವಹಿಸುವವರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮವನ್ನು ಆಯೋಜಿಸಲು ಬೆಂಬಲ ನೀಡಿದ ಫ್ರಾನ್ಸ್ ಅಧ್ಯಕ್ಷ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಫ್ರಾನ್ಸ್ ಸರ್ಕಾರಕ್ಕೆ …

Read More »

ಜೂನ್ 07, 2025 ರಂದು ನಿಮ್ಹಾನ್ಸ್ ನಲ್ಲಿ ನಡೆಯಲಿರುವ FSSAI ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಭಾಗವಹಿಸಲಿದ್ದಾರೆ

ವಿಶ್ವ ಆಹಾರ ಸುರಕ್ಷತಾ ದಿನ 2025 ರ ಆಚರಣೆಯ ಪ್ರಯುಕ್ತ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI), ‘ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಸೇವಿಸಿ, ಸ್ಥೂಲಕಾಯ ತಡೆಯಿರಿ’ ಎಂಬ ವಿಷಯದ ಮೇಲೆ ದಿನಾಂಕ 07 ಜೂನ್ 2025 ರಂದು ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ (NIMHANS) ಒಂದು ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಸ್ಥೂಲಕಾಯ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚುತ್ತಿರುವ ಸಮಸ್ಯೆಯನ್ನು, ನಮ್ಮ ಸಾಂಪ್ರದಾಯಿಕ, ಸುರಕ್ಷಿತ ಮತ್ತು ಸಂಪೂರ್ಣ ಪೌಷ್ಟಿಕ ಆಹಾರ …

Read More »

ನಮ್ಮ ಯುವ ಶಕ್ತಿಯು ಬೆಳಗಲು ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ನಾವು ಸದಾ ನೀಡುತ್ತೇವೆ, ಅವರು ವಿಕಸಿತ ಭಾರತದ ಪ್ರಮುಖ ನಿರ್ಮಾತೃಗಳು: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭಾರತದ ಯುವಕರ ಜಾಗತಿಕ ಸಾಧನೆಗಳನ್ನು ಎತ್ತಿ ತೋರಿಸಿದರು, ಭಾರತದ ಯುವಕರು ಜಾಗತಿಕವಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದು ಹೇಳಿದರು. ಅವುಗಳನ್ನು ಚೈತನ್ಯ, ನಾವೀನ್ಯತೆ ಮತ್ತು ದೃಢಸಂಕಲ್ಪದ ಸಂಕೇತಗಳೆಂದು ವಿವರಿಸಿದ ಅವರು, ಕಳೆದ 11 ವರ್ಷಗಳಲ್ಲಿ ಯುವ ಶಕ್ತಿಯ ಅಪ್ರತಿಮ ಶಕ್ತಿ ಮತ್ತು ದೃಢಸಂಕಲ್ಪವು  ರಾಷ್ಟ್ರದ ಬೆಳವಣಿಗೆಗೆ ಉತ್ತೇಜನ ನೀಡಿದೆ ಎಂದು ಹೇಳಿದರು. ನವೋದ್ಯಮಗಳು, ವಿಜ್ಞಾನ, ಕ್ರೀಡೆ, ಸಮುದಾಯ ಸೇವೆ ಮತ್ತು ಸಂಸ್ಕೃತಿ ಸೇರಿದಂತೆ …

Read More »

ಬಡವರ ಕಲ್ಯಾಣಕ್ಕೆ ಸಮರ್ಪಿತವಾದ ಸಹಾನುಭೂತಿಯುಳ್ಳ ಸರ್ಕಾರ: ಪ್ರಧಾನಮಂತ್ರಿ

ದೇಶವು ಪರಿವರ್ತನಶೀಲ ಮತ್ತು ಎಲ್ಲರನ್ನೂ ಒಳಗೊಂಡ ಆಡಳಿತದ 11ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಬಡವರ ಕಲ್ಯಾಣಕ್ಕೆ ಎನ್‌ಡಿಎ ಸರ್ಕಾರದ ಅಚಲ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುನರುಚ್ಚರಿಸಿದ್ದಾರೆ. ಸಬಲೀಕರಣ, ಮೂಲಸೌಕರ್ಯ ಮತ್ತು ಒಳಗೊಳ್ಳುವಿಕೆಯ ಮೇಲೆ ಗಮನ ಕೇಂದ್ರೀಕರಿಸಿದ ಸಹಾನುಭೂತಿಯುಳ್ಳ ಸರ್ಕಾರವು 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ. ʻಪ್ರಧಾನಮಂತ್ರಿ ಆವಾಸ್ ಯೋಜನೆʼ, ʻಪಿಎಂ ಉಜ್ವಲ ಯೋಜನೆʼ, ʻಜನ್ ಧನ್ ಯೋಜನೆʼ ಮತ್ತು ʻಆಯುಷ್ಮಾನ್ ಭಾರತ್ʼನಂತಹ ಪರಿವರ್ತಕ ಯೋಜನೆಗಳ ಪರಿಣಾಮವನ್ನು ಪ್ರಧಾನಿ ಎತ್ತಿ ತೋರಿದರು. ಈ ಯೋಜನೆಗಳು ವಸತಿ, ಶುದ್ಧ ಅಡುಗೆ ಇಂಧನ, ಬ್ಯಾಂಕಿಂಗ್ ಮತ್ತು ಆರೋಗ್ಯ ಸೇವೆಗಳ ಲಭ್ಯತೆಯನ್ನು ವಿಸ್ತರಿಸಿವೆ. ಪ್ರಯೋಜನಗಳ ಪಾರದರ್ಶಕ ಮತ್ತು ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ʻನೇರ ಲಾಭ ವರ್ಗಾವಣೆʼ (ಡಿಬಿಟಿ), ಡಿಜಿಟಲ್ ಸೇರ್ಪಡೆ ಮತ್ತು ಗ್ರಾಮೀಣ ಮೂಲಸೌಕರ್ಯದ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ. ಪ್ರಧಾನಮಂತ್ರಿಯವರು ʻಎಕ್ಸ್‌ʼ ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ: “ಬಡವರ ಕಲ್ಯಾಣಕ್ಕೆ ಸಮರ್ಪಿತವಾದ ಸಹಾನುಭೂತಿಯುಳ್ಳ ಸರ್ಕಾರ! ಕಳೆದ ದಶಕದಲ್ಲಿ, ಎನ್‌ಡಿಎ ಸರ್ಕಾರವು ಹಲವಾರು ಜನರನ್ನು ಬಡತನದ ಹಿಡಿತದಿಂದ ಮೇಲೆತ್ತಲು ಹೊಸ ಉಪಕ್ರಮಗಳನ್ನು ಕೈಗೊಂಡಿದೆ. ಸಬಲೀಕರಣ, ಮೂಲಸೌಕರ್ಯ ಮತ್ತು ಒಳಗೊಳ್ಳುವಿಕೆಯ ಮೇಲೆ ಗಮನ ಕೇಂದ್ರೀಕರಿಸಿದೆ. ನಮ್ಮ ಎಲ್ಲಾ ಪ್ರಮುಖ ಯೋಜನೆಗಳು ಬಡವರ ಜೀವನವನ್ನು ಪರಿವರ್ತಿಸಿವೆ. ಪಿಎಂ ಆವಾಸ್ ಯೋಜನೆ, ಪಿಎಂ ಉಜ್ವಲ ಯೋಜನೆ, ಜನ್ ಧನ್ ಯೋಜನೆ ಮತ್ತು ʻಆಯುಷ್ಮಾನ್ ಭಾರತ್ʼನಂತಹ ಉಪಕ್ರಮಗಳು ವಸತಿ, ಶುದ್ಧ ಅಡುಗೆ ಇಂಧನ, ಬ್ಯಾಂಕಿಂಗ್ ಮತ್ತು ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಿವೆ. ʻಡಿಬಿಟಿʼ, ಡಿಜಿಟಲ್ ಸೇರ್ಪಡೆ ಮತ್ತು ಗ್ರಾಮೀಣ ಮೂಲಸೌಕರ್ಯಗಳಿಗೆ ಒತ್ತು ನೀಡಿರುವುದು ಪಾರದರ್ಶಕತೆ ಮತ್ತು ಪ್ರಯೋಜನಗಳನ್ನು ಕೊನೆಯ ಮೈಲಿವರೆಗೆ ವೇಗವಾಗಿ ತಲುಪಿಸುವುದನ್ನು ಖಾತರಿಪಡಿಸಿದೆ. ಈ ಕಾರಣದಿಂದಾಗಿಯೇ 25 ಕೋಟಿಗೂ ಹೆಚ್ಚು ಜನರು ಬಡತನವನ್ನು ಸೋಲಿಸಿದ್ದಾರೆ. ಪ್ರತಿಯೊಬ್ಬ ನಾಗರಿಕನಿಗೂ ಘನತೆಯಿಂದ ಬದುಕುವ ಅವಕಾಶವಿರುವ ಎಲ್ಲರನ್ನೂ ಒಳಗೊಂಡ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಎನ್‌ಡಿಎ ಬದ್ಧವಾಗಿದೆ. #11YearsOfGaribKalyan”   भारत : 1885 से 1950 (इतिहास पर एक दृष्टि) …

Read More »

2024-25 ಮತ್ತು 2025-26 ಸಾಲಿಗೆ ಹೆಚ್ಚಿನ ಹಂಚಿಕೆಯೊಂದಿಗೆ ಪರಿಷ್ಕೃತ ರಾಷ್ಟ್ರೀಯ ಗೋಕುಲ್ ಮಿಷನ್ ಅನುಷ್ಠಾನಕ್ಕೆ ಸಂಪುಟದ ಅನುಮೋದನೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಾನುವಾರು ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ಪರಿಷ್ಕೃತ ರಾಷ್ಟ್ರೀಯ ಗೋಕುಲ್ ಮಿಷನ್ (RGM) ಗೆ ಇಂದು ಅನುಮೋದನೆ ನೀಡಿದೆ. ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆಯ ಕೇಂದ್ರ ವಲಯದ ಅಂಶವಾಗಿ ಪರಿಷ್ಕೃತ RGM ಅನುಷ್ಠಾನಕ್ಕೆ 1000 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ನೀಡಲಾಗುತ್ತಿದೆ, ಇದು 2021-22 ರಿಂದ 2025-26 ರವರೆಗಿನ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಒಟ್ಟು …

Read More »

ಪ್ರಧಾನ ಮಂತ್ರಿ ಇಂಟರ್ನ್ ಷಿಪ್ ಯೋಜನೆ (ಪಿಎಂಐಎಸ್) ಮತ್ತೊಮ್ಮೆ ಪ್ರಾಯೋಗಿಕ ಹಂತದ 2ನೇ ಸುತ್ತಿನ ಪ್ರಾರಂಭದೊಂದಿಗೆ ಅರ್ಜಿಗಳಿಗೆ ಮುಕ್ತವಾಗಿದೆ

ಪ್ರಧಾನಮಂತ್ರಿ ಇಂಟರ್ನ್ ಷಿಪ್ ಸ್ಕೀಮ್ (ಪಿಎಂಐಎಸ್) ಮತ್ತೊಮ್ಮೆ ಪ್ರಾಯೋಗಿಕ ಹಂತದ 2ನೇ ಸುತ್ತಿನ ಪ್ರಾರಂಭದೊಂದಿಗೆ ಅರ್ಜಿಗಳಿಗೆ ಮುಕ್ತವಾಗಿದೆ. ರೌಂಡ್ 1 ರಲ್ಲಿ 6 ಲಕ್ಷಕ್ಕೂ ಹೆಚ್ಚು ಅರ್ಜಿಗಳ ನಂತರ, ರೌಂಡ್ 2 ಭಾರತದ 730ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉನ್ನತ ಕಂಪನಿಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಇಂಟರ್ನ್ ಷಿಪ್ ಅವಕಾಶಗಳನ್ನು ನೀಡುತ್ತದೆ. ತೈಲ, ಅನಿಲ ಮತ್ತು ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 300ಕ್ಕೂ ಹೆಚ್ಚು ಉನ್ನತ ಕಂಪನಿಗಳು; ಬ್ಯಾಂಕಿಂಗ್ ಮತ್ತು ಹಣಕಾಸು …

Read More »