ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಉತ್ತರ ಪ್ರದೇಶದ ಆಗ್ರಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರದ (ಸಿಐಪಿ) ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ (ಸಿ.ಎಸ್.ಎ.ಆರ್ ಸಿ.) ಸ್ಥಾಪಿಸುವ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಪ್ರಸ್ತಾವನೆಗೆ ತನ್ನ ಅನುಮೋದನೆ ನೀಡಿದೆ. ಆಲೂಗಡ್ಡೆ ಮತ್ತು ಗೆಣಸು ಉತ್ಪಾದಕತೆ, ಕಟಾವು ನಂತರದ ನಿರ್ವಹಣೆ ಮತ್ತು ಮೌಲ್ಯವರ್ಧನೆ ಸುಧಾರಿಸುವ ಮೂಲಕ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆ, ರೈತರ …
Read More »ಪುಣೆ ಮೆಟ್ರೋ ರೈಲು ಯೋಜನೆ ಹಂತ-2ಕ್ಕೆ: ವನಜ್ ನಿಂದ ಚಾಂದನಿ ಚೌಕ್ (ಕಾರಿಡಾರ್ 2ಎ) ಮತ್ತು ರಾಮ್ ವಾಡಿಯಿಂದ ವಾಘೋಲಿ/ವಿಠ್ಠಲವಾಡಿ(ಕಾರಿಡಾರ್ 2ಬಿ) ಹಾಗೂ ಹಾಲಿ ಇರುವ ಪುಣೆ ಮೆಟ್ರೋ ಹಂತ-1ರ ವಿಸ್ತರಣೆಗೆ (ವನಜ್-ರಾಮ್ ವಾಡಿ) ಸಚಿವ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಪುಣೆ ಮೆಟ್ರೋ ರೈಲು ಯೋಜನೆಯ ಹಂತ-2ಕ್ಕೆ: ವನಜ್ ನಿಂದ ಚಂದಾನಿ ಚೌಕ್ (ಕಾರಿಡಾರ್ 2ಎ) ಮತ್ತು ರಾಮ್ ವಾಡಿಯಿಂದ ವಾಘೋಲಿ/ವಿಠ್ಠಲವಾಡಿ (ಕಾರಿಡಾರ್ 2ಬಿ) ಅನುಮೋದನೆ ನೀಡಿದೆ. ಹಂತ -1ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ವನಜ್-ರಾಮ್ ವಾಡಿ ಕಾರಿಡಾರ್ ನ ವಿಸ್ತರಣೆಯಾಗಿ ಇದಕ್ಕೆ ಅನುಮೋದನೆ ನೀಡಲಾಗಿದೆ. ಈ ಎರಡು ಎತ್ತರಿಸಿದ ಮಾರ್ಗಗಳು 12.75 ಕಿ.ಮೀ. ಇರಲಿದ್ದು, ವೇಗವಾಗಿ …
Read More »ಝರಿಯಾ ಕಲ್ಲಿದ್ದಲು ಕ್ಷೇತ್ರದಲ್ಲಿ ಬೆಂಕಿ ಅವಘಡ, ಭೂಕುಸಿತ ಮತ್ತು ಬಾಧಿತ ಕುಟುಂಬಗಳ ಪುನರ್ವಸತಿಗಾಗಿ ಪರಿಷ್ಕೃತ ಝರಿಯಾ ಮಾಸ್ಟರ್ ಪ್ಲಾನ್ ಗೆ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಝರಿಯಾ ಕಲ್ಲಿದ್ದಲು ಕ್ಷೇತ್ರದಲ್ಲಿ ಬೆಂಕಿ ಅವಘಡ, ಭೂ ಕುಸಿತ ಮತ್ತು ಬಾಧಿತ ಕುಟುಂಬಗಳ ಪುನರ್ವಸತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಪರಿಷ್ಕೃತ ಝರಿಯಾ ಮಾಸ್ಟರ್ ಪ್ಲಾನ್ (ಜೆಎಂಪಿ) ಅನ್ನು ಅನುಮೋದಿಸಿದೆ. ಪರಿಷ್ಕೃತ ಯೋಜನೆಯ ಅನುಷ್ಠಾನಕ್ಕೆ ಒಟ್ಟು ಹಣಕಾಸು ವೆಚ್ಚ 5,940.47 ಕೋಟಿ ರೂ. ಆಗಿದೆ. ಹಂತವಾರು ವಿಧಾನವು ಬೆಂಕಿ ಮತ್ತು ಭೂಕುಸಿತ ನಿರ್ವಹಣೆ ಮತ್ತು ಬಾಧಿತ …
Read More »ಎಸ್ ಪಿ ಎಂ ಇ ಪಿ ಸಿ ಐ ಅಡಿಯಲ್ಲಿ ಪೋರ್ಟಲ್ ಪ್ರಾರಂಭಿಸುವ ಮೂಲಕ ಭಾರತ ಜಾಗತಿಕ ಇವಿ ದಿಗ್ಗಜರಿಗೆ ಬಾಗಿಲು ತೆರೆದಿದೆ
ಭಾರತದಲ್ಲಿ ವಿದ್ಯುತ್ ಚಾಲಿತ ಪ್ರಯಾಣಿಕ ಕಾರುಗಳ ತಯಾರಿಕೆ ಉತ್ತೇಜನಾ ಯೋಜನೆ (ಎಸ್ ಪಿ ಎಂ ಇ ಪಿ ಸಿ ಐ) ಅಡಿಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಾಗಿ ಪೋರ್ಟಲ್ ಪ್ರಾರಂಭಿಸುತ್ತಿರುವುದನ್ನು ಘೋಷಿಸಲು ಬೃಹತ್ ಕೈಗಾರಿಕಾ ಸಚಿವಾಲಯ ಹರ್ಷಪಡುತ್ತದೆ. ಈ ಯೋಜನೆಯನ್ನು ಮಾರ್ಚ್ 15, 2024ರಂದು ಅಧಿಸೂಚಿಸಲಾಗಿತ್ತು ಮತ್ತು ನಂತರ 02.06.2025ರ ಅಧಿಸೂಚನೆ ಸಂಖ್ಯೆ S.O. 2450(E) ಮೂಲಕ ವಿವರವಾದ ಯೋಜನಾ ಮಾರ್ಗಸೂಚಿಗಳನ್ನು ಹೊರಡಿಸಲಾಯಿತು. ಅಧಿಸೂಚನೆ ಮತ್ತು ಮಾರ್ಗಸೂಚಿಗಳು ಸಚಿವಾಲಯದ ಅಧಿಕೃತ ಜಾಲತಾಣದಲ್ಲಿ …
Read More »ಭಾರತದ ಆಹಾರ ಸಂಸ್ಕರಣೆ ಕ್ಷೇತ್ರ ಹಲವು ವರ್ಷಗಳಿಂದ ಹೇಗೆ ಗಮನಾರ್ಹ ಪರಿವರ್ತನೆ ಹೊಂದಿದೆ ಎಂದು ಉಲ್ಲೇಖಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಭಾರತದ ಆಹಾರ ಸಂಸ್ಕರಣೆ ಕ್ಷೇತ್ರ, ಕ್ರಿಯಾತ್ಮಕ ವಿಧಾನದೊಂದಿಗೆ ಗ್ರಾಮೀಣ ಉದ್ಯಮಿಗಳನ್ನು ಸಬಲಗೊಳಿಸುವುದರ ಜೊತೆಗೆ ಹಲವು ವರ್ಷಗಳಿಂದ ಹೇಗೆ ಗಮನಾರ್ಹ ಪರಿವರ್ತನೆ ಹೊಂದಿದೆ ಎಂದು ಉಲ್ಲೇಖಿಸುವ ಲೇಖನವನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡುತ್ತ, ಪ್ರಧಾನಮಂತ್ರಿಗಳು ಹೀಗೆ ಹೇಳಿದ್ದಾರೆ: “ಕೇಂದ್ರ ಸಚಿವರಾದ ಶ್ರೀ @iChiragPaswan ಅವರು ಭಾರತದ ಆಹಾರ ಸಂಸ್ಕರಣೆ ಕ್ಷೇತ್ರ, ಕ್ರಿಯಾತ್ಮಕ ವಿಧಾನದೊಂದಿಗೆ …
Read More »11 ವರ್ಷಗಳ ಗಣಿ ಕ್ಷೇತ್ರದ ಪರಿವರ್ತನಾ ಸುಧಾರಣೆಗಳ ಕುರಿತು ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಕಳೆದ 11 ವರ್ಷಗಳಿಂದ ಆದ ಮಹತ್ವದ ಸುಧಾರಣೆ ಹೇಗೆ ಭಾರತದ ಗಣಿ ಕ್ಷೇತ್ರವನ್ನು ಸಹಕಾರ ಸಂಯುಕ್ತ ವ್ಯವಸ್ಥೆ ಹಾಗೂ ಪಾರದರ್ಶಕ ಆಡಳಿತಕ್ಕೆ ದಾರಿದೀಪವಾಗಿದೆ ಎಂಬುದರ ಕುರಿತು ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಮಂತ್ರಿಗಳು ಹೀಗೆ ಹೇಳಿದ್ದಾರೆ: “ಕೇಂದ್ರ ಸಚಿವರಾದ ಶ್ರೀ @kishanreddybjp ಕಳೆದ 11 ವರ್ಷಗಳ ಸುಧಾರಣೆಗಳು ಹೇಗೆ …
Read More »ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನ ದಿನದ ನಿಮಿತ್ತ ಪ್ರಧಾನಮಂತ್ರಿ ಗೌರವ ನಮನ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನ ದಿನದ ನಿಮಿತ್ತ ಅವರಿಗೆ ಗೌರವ ನಮನ ಸಮರ್ಪಿಸಿದರು. X ಪೋಸ್ಟ್ ನಲ್ಲಿ ಅವರು ಬರೆದಿದ್ದಾರೆ: “डॉ. श्यामा प्रसाद मुखर्जी को उनके बलिदान दिवस पर कोटि-कोटि नमन। उन्होंने देश की अखंडता को अक्षुण्ण रखने के लिए अतुलनीय साहस और पुरुषार्थ का परिचय दिया। राष्ट्र …
Read More »ಸಾಫ್ಟ್‌ವೇರ್ ಅಪ್ಲಿಕೇಶನ್‌ನ ಉನ್ನತೀಕರಣಕ್ಕಾಗಿ (ಸುಧಾರಿತ ಅಂಚೆ ತಂತ್ರಜ್ಞಾನ 2.O) 24 ಮತ್ತು 25 ಜೂನ್ 2025 (ಮಂಗಳವಾರ ಮತ್ತು ಬುಧವಾರ) ಅಂಚೆ ಕಚೇರಿಗಳು ಕಾರ್ಯನಿರ್ವಹಿಸುವುದಿಲ್ಲ
ದಿನಾಂಕ 26.06.2025 ರಂದು ನಿಗದಿಪಡಿಸಲಾದ ಸಾಫ್ಟ್‌ವೇರ್ ಅನುಷ್ಠಾನಕ್ಕಾಗಿ ಈ ಕೆಳಗೆ ತಿಳಿಸಲಾದ ಅಂಚೆ ಕಚೇರಿಗಳಲ್ಲಿ ಮತ್ತು ಸಂಬಂಧಿತ ಉಪ/ಶಾಖೆ ಅಂಚೆ ಕಚೇರಿಗಳಲ್ಲಿ ದಿನಾಂಕ 24 ಮತ್ತು 25 ಜೂನ್ 2025 (ಮಂಗಳವಾರ ಮತ್ತು ಬುಧವಾರ) ರಂದು ಸಾರ್ವಜನಿಕರಿಗೆ ಅಂಚೆ ಸೇವೆಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಎಚ್‌ಎಎಲ್ ಮುಖ್ಯ ಅಂಚೆ ಕಚೇರಿ ಜಾಲಹಳ್ಳಿ ಮುಖ್ಯ ಅಂಚೆ ಕಚೇರಿ ಬಸವನಗುಡಿ ಮುಖ್ಯ ಅಂಚೆ ಕಚೇರಿ ಗ್ರಾಹಕರಿಗೆ ಸೇವೆಯ ದಕ್ಷತೆ, ರಕ್ಷಣೆ ಹಾಗೂ ಗುಣಮಟ್ಟ ಹೆಚ್ಚಿಸಲು …
Read More »ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಂಗಳವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ʻಕೇಂದ್ರ ವಲಯ ಮಂಡಳಿʼಯ 25ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2025ರ ಜೂನ್ 24ರ ಮಂಗಳವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ `ಕೇಂದ್ರ ವಲಯ ಮಂಡಳಿ’ಯ 25ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಸದಸ್ಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪ್ರತಿ ರಾಜ್ಯದ ಇಬ್ಬರು ಹಿರಿಯ ಸಚಿವರು ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ʻಕೇಂದ್ರ ವಲಯ ಮಂಡಳಿʼಯು ಛತ್ತೀಸ್‌ಗಢ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳನ್ನು ಒಳಗೊಂಡಿದೆ. ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಅಂತರ-ರಾಜ್ಯ ಮಂಡಳಿ ಸಚಿವಾಲಯವು ಉತ್ತರ ಪ್ರದೇಶ ಸರ್ಕಾರದ ಸಹಯೋಗದೊಂದಿಗೆ ಈ ಸಭೆಯನ್ನು ಆಯೋಜಿಸಿದೆ. ʻರಾಜ್ಯಗಳ ಪುನರ್‌ಸಂಘಟನೆ ಕಾಯ್ದೆ-1956ʼರ ಸೆಕ್ಷನ್ 15 ರಿಂದ 22ರ ಅಡಿಯಲ್ಲಿ, ಐದು ವಲಯ ಮಂಡಳಿಗಳನ್ನು ಸ್ಥಾಪಿಸಲಾಯಿತು. ಕೇಂದ್ರ ಗೃಹ ಸಚಿವರು ಈ ಐದು ವಲಯ ಮಂಡಳಿಗಳ ಅಧ್ಯಕ್ಷರಾಗಿದ್ದಾರೆ. ಸದಸ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು / ಲೆಫ್ಟಿನೆಂಟ್ ಗವರ್ನರ್ಗಳು / ಆಡಳಿತಗಾರರು ಇದರ ಸದಸ್ಯರಾಗಿರುತ್ತಾರೆ. ಈ ಸದಸ್ಯರಲ್ಲಿ, ಒಂದು ಸದಸ್ಯ ರಾಜ್ಯದ ಮುಖ್ಯಮಂತ್ರಿ (ಪ್ರತಿ ವರ್ಷ ಆವರ್ತನೆ) ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರತಿ ಸದಸ್ಯ ರಾಜ್ಯದಿಂದ, ರಾಜ್ಯಪಾಲರು ಇಬ್ಬರು ಮಂತ್ರಿಗಳನ್ನು ಮಂಡಳಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುತ್ತಾರೆ. ಪ್ರತಿ ʻವಲಯ ಮಂಡಳಿʼಯು ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಶಾಶ್ವತ ಸಮಿತಿಯನ್ನು ರಚಿಸಿದೆ. ರಾಜ್ಯಗಳು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಮೊದಲಿಗೆ ಚರ್ಚೆಗಾಗಿ ಸಂಬಂಧಪಟ್ಟ ವಲಯ ಮಂಡಳಿಯ ಶಾಶ್ವತ ಸಮಿತಿಯ ಮುಂದಿಡಲಾಗುತ್ತದೆ. ಶಾಶ್ವತ ಸಮಿತಿಯ ಪರಿಶೀಲನೆಯ ನಂತರ, ಉಳಿದ ಸಮಸ್ಯೆಗಳನ್ನು ಹೆಚ್ಚಿನ ಚರ್ಚೆಗಾಗಿ ವಲಯ ಮಂಡಳಿ ಸಭೆಯ ಮುಂದಿಡಲಾಗುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಹಕಾರ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ಬಳಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಬಲವಾದ ರಾಜ್ಯಗಳು ಬಲವಾದ ರಾಷ್ಟ್ರವನ್ನು ನಿರ್ಮಿಸಬಲ್ಲವು ಎಂಬ ನಂಬಿಕೆಯೊಂದಿಗೆ, ʻವಲಯ ಮಂಡಳಿʼಗಳು ಎರಡು ಅಥವಾ ಹೆಚ್ಚು ರಾಜ್ಯಗಳ ಮೇಲೆ ಪರಿಣಾಮ ಬೀರುವ ಅಥವಾ ಕೇಂದ್ರ ಮತ್ತು ರಾಜ್ಯಗಳ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಸಂವಾದ ಮತ್ತು ಚರ್ಚೆಗೆ ರಚನಾತ್ಮಕ ಕಾರ್ಯವಿಧಾನವನ್ನು ಒದಗಿಸುತ್ತವೆ. ಈ ಮೂಲಕ ಪರಸ್ಪರ ಸಹಕಾರವನ್ನು ಹೆಚ್ಚಿಸಲು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ʻವಲಯ ಮಂಡಳಿʼಗಳು ಸಲಹೆದಾರನ ಪಾತ್ರವನ್ನು ವಹಿಸುತ್ತದೆ; ಆದಾಗ್ಯೂ, ಕಳೆದ ಕೆಲವು ವರ್ಷಗಳಲ್ಲಿ, ಈ ಮಂಡಳಿಗಳು ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ತಿಳಿವಳಿಕೆ ಮತ್ತು ಸಹಕಾರದ ಆರೋಗ್ಯಕರ ಬಂಧಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಕಾಣಬಹುದು. ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಸಹಕಾರದೊಂದಿಗೆ, ಕಳೆದ ಹನ್ನೊಂದು ವರ್ಷಗಳಲ್ಲಿ ವಿವಿಧ ವಲಯ ಮಂಡಳಿಗಳು ಮತ್ತು ಅವುಗಳ ಶಾಶ್ವತ ಸಮಿತಿಗಳ ಒಟ್ಟು 61 ಸಭೆಗಳು ನಡೆದಿವೆ. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳ ಪ್ರಕರಣಗಳ ತ್ವರಿತ ತನಿಖೆ ಮತ್ತು ಅವುಗಳ ತ್ವರಿತ ವಿಲೇವಾರಿಗಾಗಿ ತ್ವರಿತ ವಿಶೇಷ ನ್ಯಾಯಾಲಯಗಳ (ಎಫ್‌ಟಿಎಸ್‌ಸಿ) ಅನುಷ್ಠಾನ ಸೇರಿದಂತೆ ರಾಷ್ಟ್ರೀಯ ಪ್ರಾಮುಖ್ಯತೆಯ ವಿಶಾಲ ವಿಷಯಗಳ ಬಗ್ಗೆಯೂ ವಲಯ ಮಂಡಳಿಗಳು ಚರ್ಚಿಸುತ್ತವೆ. ಪ್ರತಿ ಹಳ್ಳಿಯ ಗೊತ್ತುಪಡಿಸಿದ ಪ್ರದೇಶದಲ್ಲಿ ಶಾಶ್ವತ ಬ್ಯಾಂಕಿಂಗ್ ಶಾಖೆಯ ಸೌಲಭ್ಯಗಳನ್ನು ಒದಗಿಸುವುದು; ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ …
Read More »ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತ ಮತ್ತು ಪ್ರಪಂಚದಾದ್ಯಂತ ಇರುವ ಜನರಿಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳನ್ನು ತಿಳಿಸಿದರು. ಈ ವರ್ಷವು 11ನೇ ಬಾರಿಗೆ ಜೂನ್ 21ರಂದು ಜಗತ್ತು ಒಟ್ಟಾಗಿ ಸೇರಿ ಯೋಗವನ್ನು ಸಾಮೂಹಿಕವಾಗಿ ಅಭ್ಯಾಸ …
Read More »
Matribhumi Samachar Kannad