बुधवार, जनवरी 08 2025 | 11:57:20 AM
Breaking News
Home / अन्य समाचार / ಭಾರತದ ರಾಷ್ಟ್ರಪತಿ ಅವರಿಂದ ವಿಶೇಷಚೇತನರ ಸಬಲೀಕರಣಕ್ಕಾಗಿ ಶ್ರಮಿಸಿದವರಿಗೆ 2024ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನ

ಭಾರತದ ರಾಷ್ಟ್ರಪತಿ ಅವರಿಂದ ವಿಶೇಷಚೇತನರ ಸಬಲೀಕರಣಕ್ಕಾಗಿ ಶ್ರಮಿಸಿದವರಿಗೆ 2024ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನ

Follow us on:

ಅಂತಾರಾಷ್ಟ್ರೀಯ ವಿಶೇಷಚೇತನ ವ್ಯಕ್ತಿಗಳ ದಿನಾಚರಣೆ ಅಂಗವಾಗಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನವದೆಹಲಿಯಲ್ಲಿ ಇಂದು (ಡಿಸೆಂಬರ್ 3, 2024) ವಿಶೇಷಚೇತನರ ಸಬಲೀಕರಣಕ್ಕಾಗಿ ಶ್ರಮಿಸಿದವರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಎಲ್ಲಾ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಈ ಪ್ರಶಸ್ತಿಗಳು ದೂರಗಾಮಿ ಸಾಮಾಜಿಕ ಮಹತ್ವವನ್ನು ಹೊಂದಿವೆ. ಇದರಿಂದ ಉತ್ತೇಜಿತರಾಗಿ ಇತರೆ ವ್ಯಕ್ತಿಗಳು ಮತ್ತು ಸಂಸ್ಥೆಗಳು ವಿಶೇಷಚೇತನ ವ್ಯಕ್ತಿಗಳ ಸಬಲೀಕರಣದ ನಿಟ್ಟಿನಲ್ಲಿ ಮುಂದಾಗುತ್ತಾರೆ ಎಂದರು.

ಈ ವರ್ಷದ ಅಂತಾರಾಷ್ಟ್ರೀಯ ವಿಶೇಷಚೇತನರ ದಿನದ ಘೋಷವಾಕ್ಯ ‘ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಶೇಷಚೇತನ ವ್ಯಕ್ತಿಗಳಲ್ಲಿನ ನಾಯಕತ್ವ ಉತ್ತೇಜಿಸುವುದು’ ಎಂಬುದಾಗಿದೆ ಎಂದು ಉಲ್ಲೇಖಿಸಿದ ರಾಷ್ಟ್ರಪತಿ ಅವರು, ದಿವ್ಯಾಂಗರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು, ಉದ್ಯೋಗವನ್ನು ಒದಗಿಸುವುದು, ಅವರ ಉತ್ಪನ್ನಗಳನ್ನು ಖರೀದಿಸುವುದು ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದರಿಂದ  ಅವರ ನಾಯಕತ್ವದ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದರು.

ಇಡೀ ಮನುಕುಲವು ದಿವ್ಯಾಂಗ ಜನರಿಗೆ ನೆಮ್ಮದಿ ಮತ್ತು ಸಮಾನ ಭಾವನೆ ಮೂಡಿಸಬೇಕು ಎಂದು ರಾಷ್ಟ್ರಪತಿ ಹೇಳಿದರು. ಅವರಿಗೆ ಎಲ್ಲ ರೀತಿಯಲ್ಲೂ ಅಡೆ ತಡೆರಹಿತ ವಾತಾವರಣ ಕಲ್ಪಿಸುವುದು ಸಮಾಜದ ಆದ್ಯತೆಯಾಗಬೇಕು. ನಿಜವಾದ ಅರ್ಥದಲ್ಲಿ, ದಿವ್ಯಾಂಗರಿಗೆ ಸಮಾನವಾದ ಸೌಲಭ್ಯಗಳು ಮತ್ತು ಅವಕಾಶಗಳು ಸಿಗುವ ಸಮಾಜವನ್ನು ಮಾತ್ರ ಸೂಕ್ಷ್ಮ ಸಮಾಜ ಎಂದು ಕರೆಯಬಹುದೆಂದರು.

ವಿಶೇಷಚೇತನರಾಗಿರುವುದು ಯಾವುದೇ ರೀತಿಯ ನೂನ್ಯತೆಯಲ್ಲ ಎಂದು ರಾಷ್ಟ್ರಪತಿ ಹೇಳಿದರು. ಇದು ವಿಶೇಷ ಸ್ಥಿತಿಯಾಗಿದೆ. ದಿವ್ಯಾಂಗರಿಗೆ  ತಾದಾತ್ಮ್ಯನುಭೂತಿ ಬೇಕು, ಸಹಾನುಭೂತಿ ಅಲ್ಲ, ಅವರಿಗೆ ಸೂಕ್ಷ್ಮತೆ ಬೇಕು, ದಯೆಯಲ್ಲ, ಅವರಿಗೆ ನೈಸರ್ಗಿಕ ವಾತ್ಸಲ್ಯ ಬೇಕು, ವಿಶೇಷ ಗಮನವಲ್ಲ. ಸಮಾಜದ ಇತರ ಸದಸ್ಯರೊಂದಿಗೆ ಅವರು ಸಮಾನತೆ, ಘನತೆ ಮತ್ತು ಗೌರವವನ್ನು ಪಡೆಯುತ್ತಿದ್ದಾರೆಂಬುದನ್ನು ಸಮಾಜ ಖಚಿತಪಡಿಸಿಕೊಳ್ಳಬೇಕು  ಎಂದು ತಿಳಿಸಿದರು.

ಇತರ ವ್ಯಕ್ತಿಗಳಂತೆ ದುಡಿಯುವ ಅವಕಾಶ ದಿವ್ಯಾಂಗರಲ್ಲಿ ಆತ್ಮಸ್ಥೈರ್ಯ ಹಾಗೂ ಸಾರ್ಥಕ ಜೀವನ ನಡೆಸುವ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ರಾಷ್ಟ್ರಪತಿ ಹೇಳಿದರು. ಹಾಗಾಗಿ, ಉದ್ಯೋಗ, ಉದ್ಯಮ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಅವರ ಜೀವನವನ್ನು ಸುಧಾರಿಸಬಹುದು ಎಂದು ದ್ರೌಪದಿ ಮುರ್ಮು ಅವರು ತಿಳಿಸಿದರು.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ઇન્સ્ટિટ્યૂટ ઓફ એરોસ્પેસ મેડિસિન ઇન્ડિયન સોસાયટી ઓફ એરોસ્પેસ મેડિસિન (આઇએસએએમ)ની 63મી વાર્ષિક પરિષદનું આયોજન કરશે

ઇન્ડિયન સોસાયટી ઓફ એરોસ્પેસ મેડિસિન (આઇએસએએમ) 05થી 07 ડિસેમ્બર 2024 દરમિયાન ઇન્સ્ટિટ્યૂટ ઓફ એરોસ્પેસ મેડિસિન (આઇએએમ), …