गुरुवार, दिसंबर 05 2024 | 12:26:58 AM
Breaking News
Home / Choose Language / kannada / ಭಾರತದಾದ್ಯಂತ ದಿವ್ಯಾಂಗರನ್ನು ಸಬಲೀಕರಣಗೊಳಿಸಲು ದಿವ್ಯಾಂಗರ ಅಂತಾರಾಷ್ಟ್ರೀಯ ದಿನ 2024 ರಂದು ಕೇಂದ್ರ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರಿಂದ 16 ಮಹತ್ವದ ಉಪಕ್ರಮಗಳ ಅನಾವರಣ

ಭಾರತದಾದ್ಯಂತ ದಿವ್ಯಾಂಗರನ್ನು ಸಬಲೀಕರಣಗೊಳಿಸಲು ದಿವ್ಯಾಂಗರ ಅಂತಾರಾಷ್ಟ್ರೀಯ ದಿನ 2024 ರಂದು ಕೇಂದ್ರ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರಿಂದ 16 ಮಹತ್ವದ ಉಪಕ್ರಮಗಳ ಅನಾವರಣ

Follow us on:

ಭಾರತದಾದ್ಯಂತ ದಿವ್ಯಾಂಗರನ್ನು ಸಬಲೀಕರಣಗೊಳಿಸಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ (MoSJE) ಅಡಿಯಲ್ಲಿ ದಿವ್ಯಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ (DEPwD) ಇಂದು 16 ಮಹತ್ವದ ಉಪಕ್ರಮಗಳಿಗೆ ಚಾಲನೆ ನೀಡಿದೆ. ದಿವ್ಯಾಂಗರ ಅಂತಾರಾಷ್ಟ್ರೀಯ ದಿನ 2024 ರಂದು ಕೇಂದ್ರ ಸಚಿವರಾದ ಶ್ರೀ ವೀರೇಂದ್ರ ಕುಮಾರ್ ಅವರು ನವದೆಹಲಿಯಲ್ಲಿಂದು ಈ ಉಪಕ್ರಮಗಳಿಗೆ ಚಾಲನೆ ನೀಡಿದ್ದು,  ಅಂಗವೈಕಲ್ಯ ವಲಯದ ಹಿರಿಯ ಅಧಿಕಾರಿಗಳು, ಸಂಬಂಧಿತರು, ಪ್ರತಿನಿಧಿಗಳು ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದಿವ್ಯಾಂಗ ಕಲಾವಿದರ ಅದ್ಭುತ ಪ್ರತಿಭೆ ಮತ್ತು ಸ್ಥಿರತೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ವೀರೇಂದ್ರ ಕುಮಾರ್ ಅವರು, “ಈ ಮಹತ್ವದ ಸಂದರ್ಭವು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ರೂಪಿಸುವ ನಮ್ಮ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಉಪಕ್ರಮಗಳ ಮೂಲಕ, ನಾವು ಪ್ರತಿ ದಿವ್ಯಾಂಗರಿಗೆ ಸಮಾನ ಅವಕಾಶಗಳು, ಪ್ರವೇಶಾವಕಾಶ ಮತ್ತು ಸಬಲೀಕರಣವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ. ಇಲಾಖೆಯು ದಿವ್ಯಾಂಗರ ಹಕ್ಕುಗಳು ಮತ್ತು ಘನತೆಯನ್ನು ಎತ್ತಿಹಿಡಿಯುವ ತನ್ನ ಧ್ಯೇಯದಲ್ಲಿ ದೃಢ ಸಂಕಲ್ಪ ಹೊಂದಿದ್ದು, ಭಾರತವನ್ನು ನಿಜವಾದ ಒಳಗೊಂಡ ಮತ್ತು ಪ್ರವೇಶಾವಕಾಶದ ಸಮಾಜವಾಗಿಸುವ ನಿಟ್ಟಿನಲ್ಲಿ ಕೊಂಡೊಯ್ಯುತ್ತಿದೆ ಎಂದು ಹೇಳಿದರು.

ದಿವ್ಯಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ (DEPwD)ದ ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್ ಮಾತನಾಡಿ, ವಿಕಲಾಂಗ ವ್ಯಕ್ತಿಗಳಿಗೆ ಒಳಗೊಂಡ ಮತ್ತು ಸಶಕ್ತ ಸಮಾಜವನ್ನು ರೂಪಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತಾ, “ಪ್ರವೇಶಸಾಧ್ಯತೆಯನ್ನು ಹೆಚ್ಚಿಸುವುದರಿಂದ ಹಿಡಿದು ಉದ್ಯೋಗಶೀಲತೆಯನ್ನು ಉತ್ತೇಜಿಸುವವರೆಗೆ, ಪ್ರತಿ ಹೆಜ್ಜೆಯೂ ಅಡೆತಡೆಗಳನ್ನು ತೊಡೆದು ಹಾಕಿ ಅವಕಾಶಗಳ ಹೊಸ ಮಾರ್ಗಗಳನ್ನು ತೆರೆಯುವ ನಮ್ಮ ಸಂಕಲ್ಪವನ್ನು ಇದು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ, ಆತನ/ಆಕೆಯ ಸಾಮರ್ಥ್ಯ ಏನೇ ಇರಲಿ, ಎಲ್ಲರೂ ಗೌರವಯುತ ಮತ್ತು ಸ್ವಾವಲಂಬನೆಯ ಜೀವನವನ್ನು ನಡೆಸಬೇಕು ಎಂಬ ಸಮಾನ ಭಾರತದ ಸರ್ಕಾರದ ದೂರದೃಷ್ಟಿಯನ್ನು ಈ ಉಪಕ್ರಮಗಳು ಸಾಕಾರಗೊಳಿಸಲಿವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಉಪಕ್ರಮಗಳ ಪ್ರಮುಖಾಂಶಗಳು ಇಲ್ಲಿವೆ : 

1. ಸುಗಮ್ಯ ಭಾರತ ಅಭಿಯಾನ: ರೂಪಿಸಲ್ಪಟ್ಟ ಪರಿಸರಕ್ಕಾಗಿ ಲಭ್ಯವಾಗಬಲ್ಲ ಆಡಿಟರ್‌ಗಳ ತಂಡದ ರಚನೆಗಾಗಿ ಒಳಗೊಂಡ ಮೂಲಸೌಕರ್ಯವನ್ನು ಒದಗಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುವ ಆನ್‌ಲೈನ್ ವೇದಿಕೆಯನ್ನು ಪರಿಚಯಿಸಲಾಗಿದೆ.

2. ಸುಗಮ್ಯ ಭಾರತ ಯಾತ್ರೆ: ದಿವ್ಯಾಂಗರ ಸಂಘದ ಸಹಭಾಗಿತ್ವದಲ್ಲಿ ಒಂದು ವಿಶಿಷ್ಟ ಉಪಕ್ರಮ ಇದಾಗಿದೆ. ಇಲ್ಲಿ ದಿವ್ಯಾಂಗರು ಎಐ ಆಧಾರಿತ “ಯೆಸ್ ಟು ಆ್ಯಕ್ಸೆಸ್” ಆ್ಯಪ್ ಮೂಲಕ ಸಾರ್ವಜನಿಕ ಸ್ಥಳಗಳ ಪ್ರವೇಶವನ್ನು ನಿರ್ಣಯಿಸಬಹುದಾಗಿದೆ.

3. ಪ್ರವೇಶ ಮಾರ್ಗಗಳು – ಭಾಗ 3 ಸಂಕಲನ: ದಿವ್ಯಾಂಗರನ್ನು ಜ್ಞಾನ ಮತ್ತು ಸಂಪನ್ಮೂಲಗಳ ಲಭ್ಯತೆಯೊಂದಿಗೆ ಸಬಲಗೊಳಿಸುತ್ತಾ ಸರಣಿಯ ಮೂರನೇ ಆವೃತ್ತಿಯು ಉದ್ಯೋಗ, ಹಣಕಾಸು ಸೇವೆಗಳು ಮತ್ತು ಆರೋಗ್ಯ ರಕ್ಷಣೆಯ ಪ್ರಮುಖ ಸರ್ಕಾರಿ ದಾಖಲೆಗಳ ಬಗ್ಗೆ ತಿಳಿಸುತ್ತದೆ.

4. ತೀಕ್ಷ್ಣ ಶಕ್ತಿಯ ಕನ್ನಡಕ (ಹೈ-ಪವರ್ ಸ್ಪೆಕ್ಟಾಕಲ್ಸ್): ಸಿ ಎಸ್ ಐ ಆರ್ -ಸಿಎಸ್ಐಒ  ಅಭಿವೃದ್ಧಿಪಡಿಸಿರುವ ಈ ಕನ್ನಡಕವು ಉತ್ತಮ ಗೋಚಾರ ಸ್ಪಷ್ಟತೆ ನೀಡುತ್ತಾ ಕಡಿಮೆ ದೃಷ್ಟಿ ಹೊಂದಿರುವ ವ್ಯಕ್ತಿಗಳ ಅಗತ್ಯಗಳನ್ನು ಪೂರೈಸುತ್ತಾ ಅವರ ಜೀವನದ ಗುಣಮಟ್ಟವನ್ನು ಸುಧಾರಿಸಲಿದೆ.

5. ದಿವ್ಯಶಾ ಇ-ಕಾಫಿ ಟೇಬಲ್ ಬುಕ್: ದಿವ್ಯಾಂಗರಿಗೆ ಸಹಾಯಕವಾಗಬಲ್ಲ ಸಾಧನಗಳನ್ನು ಒದಗಿಸುವಲ್ಲಿ 50 ವರ್ಷಗಳ ಪಯಣದ ಸ್ಮರಣಾರ್ಥ ತನ್ನ ಸಾಧನೆಗಳು ಮತ್ತು ಸ್ಪೂರ್ತಿದಾಯಕ ಕಥೆಗಳನ್ನು ತಿಳಿಸುವ ಅಲಿಂಕೋದ ಇ-ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ.

6.  ಕದಮ್ ನೀ ಜಾಯಿಂಟ್: ಸಹಾಯಕ ತಂತ್ರಜ್ಞಾನದಲ್ಲಿ ಪ್ರಮುಖ ಉಪಕ್ರಮವಾಗಿ ಪ್ರಾರಂಭಿಸಲಾದ ಐಐಟಿ ಮದ್ರಾಸ್ ಮತ್ತು ಎಸ್ ಬಿ ಎಂ ಟಿ ಅಭಿವೃದ್ಧಿಪಡಿಸಿರುವ ಇದು ಸ್ಥಳೀಯ ನಾವಿನ್ಯತೆ, ವರ್ಧಿತ ಚಲನಶೀಲತೆ ಮತ್ತು ಸುಧಾರಿತ ಬಾಳಿಕೆಯನ್ನು ನೀಡುತ್ತದೆ.

7. ಜಾಗೃತಿ ಮತ್ತು ಪ್ರಚಾರ ಪೋರ್ಟಲ್: ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಜಾಗೃತಿ ಮತ್ತು ಪ್ರಚಾರ ಯೋಜನೆಯಡಿಯಲ್ಲಿ ಈ ತಡೆರಹಿತ  ಡಿಜಿಟಲ್ ವೇದಿಕೆಯನ್ನು ಆರಂಭಿಸಲಾಗಿದೆ.

8. ಲಭ್ಯವಾಗುವ ಕಥೆಪುಸ್ತಕಗಳು: ಒಳಗೊಂಡ ಶಿಕ್ಷಣ ಉತ್ತೇಜಿಸಲು ಎನ್ಐಇಪಿವಿಡಿ ಮತ್ತು ಎನ್‌ಬಿಟಿ  ಸಹಯೋಗದೊಂದಿಗೆ, ಬ್ರೈಲ್, ಆಡಿಯೋ ಮತ್ತು ಬೃಹತ್ ಮುದ್ರಣ ಸ್ವರೂಪಗಳಲ್ಲಿ ಲಭ್ಯವಾಗಬಲ್ಲ 21 ಪುಸ್ತಕಗಳನ್ನು ಒದಗಿಸಲಾಗಿದೆ.

9. ಸ್ಟ್ಯಾಂಡರ್ಡ್ ಭಾರತಿ ಬ್ರೈಲ್ ಸಂಕೇತ: 13 ಭಾರತೀಯ ಭಾಷೆಗಳಲ್ಲಿ ಪ್ರಮಾಣೀಕರಿಸಿದ ಬ್ರೈಲ್ ಲಿಪಿಗಳ ಕರಡನ್ನು ಸಾರ್ವಜನಿಕ ಸಮಾಲೋಚನೆಗಾಗಿ ಪರಿಚಯಿಸಲಾಗಿದ್ದು, ಇದು ಯುನಿಕೋಡ್ ಮಾನದಂಡಗಳೊಂದಿಗೆ ಸ್ಥಿರತೆ ಮತ್ತು ಹೊಂದಾಣಿಕೆಯನ್ನು ಖಚಿತಪಡಿಸುತ್ತದೆ.

10.ಬ್ರೈಲ್ ಪುಸ್ತಕಗಳ ಪೋರ್ಟಲ್: ಬ್ರೈಲ್ ಪುಸ್ತಕಗಳನ್ನು ರಚಿಸಲು ಆನ್‌ಲೈನ್ ಸಲ್ಲಿಕೆ ಪೋರ್ಟಲ್ ಅನ್ನು ಅನಾವರಣಗೊಳಿಸಲಾಗಿದ್ದು, ಇದು ಒಳಗೊಂಡ ಶಿಕ್ಷಣವನ್ನು ಉತ್ತೇಜಿಸುತ್ತದೆ.

11. ಇನ್ಫೋಸಿಸ್ ಬಿಪಿಎಂ ಜೊತೆಗಿನ ಒಡಂಬಡಿಕೆ: ಪಿಎಂ ದಕ್ಷ್ ಪೋರ್ಟಲ್ನ ದಿವ್ಯಾಂಗರ ರೋಜ್‌ಗಾರ್ ಸೇತು ಉಪಕ್ರಮದ ಮೂಲಕ ದಿವ್ಯಾಂಗರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮಹತ್ವದ ಒಪ್ಪಂದ ಇದಾಗಿದೆ.

12. ಉದ್ಯೋಗ ಕೌಶಲ್ಯಗಳ ಪುಸ್ತಕ: 11 ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾದ ಈ ಪುಸ್ತಕವು ದಿವ್ಯಾಂಗರಿಗೆ ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡುತ್ತಾ, ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸಲಿದೆ.

13. ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಸ್ಕಿಲ್ ಪ್ರೋಗ್ರಾಂ:  ಭಾರತದಾದ್ಯಂತ ಶ್ರವಣ ಮಾಂದ್ಯರ ಕಲಿಕೆಗೆ ಅನುವಾಗಲು ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಇತ್ತೀಚೆಗೆ ಯುನಿಕೀಯೊಂದಿಗೆ ಸಹಯೋಗ ಮಾಡಿಕೊಂಡಿದೆ. ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ನಲ್ಲಿ ಯುನಿಕೀ ಚಾನೆಲ್ ಮೂಲಕ ನೀಡಲಾಗುವ ಕೋರ್ಸ್‌ಗಳು ಲಕ್ಷಾಂತರ ಯುವ ಶ್ರವಣ ಮಾಂದ್ಯ ಕಲಿಕಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಮಾರುಕಟ್ಟೆ ಸಾಮರ್ಥ್ಯಗಳನ್ನು ಪಡೆಯಲು ನೆರವಾಗಿವೆ. ಕಲಿಕಾರ್ಥಿಗಳು ಈ ಕೌಶಲ್ಯಗಳನ್ನು ಕರಗತ ಮಾಡಿಕೊಂಡ ನಂತರ ಪ್ರಮಾಣೀಕರಣವನ್ನು ಪಡೆದರೆ, ಅವರು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶಗಳನ್ನು ಪಡೆಯಬಹುದಾಗಿದೆ ಮತ್ತು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಸನ್ನದ್ಧರಾಗಲಿದ್ದಾರೆ. ಅವರು ತಮ್ಮದೇ ಆದ ಸಣ್ಣ ವ್ಯಾಪಾರ  ವಹಿವಾಟುಗಳನ್ನು ಪ್ರಾರಂಭಿಸಬಹುದಾಗಿದೆ ಅಥವಾ ಪ್ರಸ್ತುತ ನಿರ್ವಹಿಸುತ್ತಿರುವ ಕೆಲಸದಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಬಹುದಾಗಿದೆ ಅಥವಾ ಸರ್ಕಾರಿ ಉದ್ಯೋಗಕ್ಕಾಗಿ ಪರೀಕ್ಷೆಗಳಿಗೆ ಪರಿಣಾಮಕಾರಿಯಾಗಿ ತಯಾರಿ ನಡೆಸಬಹುದಾಗಿದೆ. ಈ ಸಹಯೋಗದ ಮೂಲಕ, ಮುಂದಿನ ಒಂದು ವರ್ಷದಲ್ಲಿ 10,000 ಕಲಿಕಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿ ಹೊಂದಲಾಗಿದೆ.

14. ಶ್ರವಣದೋಷವುಳ್ಳ ವ್ಯಕ್ತಿಗಳಿಗಾಗಿ ಗೂಗಲ್‌ ಎಕ್ಸ್‌ ಟೆನ್ಷನ್: ಭಾರತದಲ್ಲಿನ ಕಿವುಡ ಸಮುದಾಯಕ್ಕಾಗಿ ಮನರಂಜನೆ, ಮಾಹಿತಿ ಮತ್ತು ಶೈಕ್ಷಣಿಕ ಮಾಧ್ಯಮದಲ್ಲಿ ಸದೃಢ, ವಿಶ್ವಾಸಾರ್ಹ, ಪ್ರವೇಶ ಸಾಧ್ಯ ಸಂಕೇತ ಭಾಷೆಯ ಸಂವಹನವನ್ನು ಒದಗಿಸಲು ಸೈನ್‌ಅಪ್ ಮೀಡಿಯಾ ಮತ್ತು ಯುನಿಕೀ ಪಾಲುದಾರಿಕೆ ಮಾಡಿಕೊಂಡಿವೆ. ಈ ತಂತ್ರಜ್ಞಾನದ ಮೂಲಕ, ಭಾರತದಲ್ಲಿನ ಶ್ರವಣ ಮಾಂದ್ಯರಿಗೆ ಮನರಂಜನೆ ಮತ್ತು ಇತರ ವೀಡಿಯೊ ವಿಷಯಗಳು ವಿಸ್ತೃತವಾಗಿ ಎಲ್ಲರಿಗೂ ಸಮನಾದ ಅವಕಾಶ ನೀಡಬೇಕೆಂಬ ಗುರಿಯನ್ನು ಹೊಂದಲು ಮತ್ತು ದೇಶದ ಬೆಳವಣಿಗೆಗೆ ಕೊಡುಗೆ ನೀಡಲು ಸಾಧ್ಯವಾಗಲಿದೆ. ದೇಶದಾದ್ಯಂತ ಮೊದಲ ಬಾರಿಗೆ, ಶ್ರವಣ ಮಾಂದ್ಯರ ಸಮುದಾಯವು ಮಾಧ್ಯಮ ಮತ್ತು ಶಿಕ್ಷಣದಲ್ಲಿ ತನ್ನ ಪ್ರಾಥಮಿಕ ಭಾಷೆಯನ್ನು ಹೊಂದಿರಲಿದೆ.

15. ಇ-ಸಾನಿಧ್ಯ ಪೋರ್ಟಲ್: ಟಾಟಾ ಪವರ್ ಸಮುದಾಯ ಅಭಿವೃದ್ಧಿ ಟ್ರಸ್ಟ್ ಮತ್ತು ಸಿಕಂದರಾಬಾದ್‌ನ ಎನ್‌ ಐ ಇ ಪಿ ಐ ಡಿ ಹೊರತಂದಿರುವ ವೇದಿಕೆ ಇದಾಗಿದೆ. ಟಾಟಾ ಇ-ಸಾನಿಧ್ಯ ನ್ಯೂರೋ-ಡೈವರ್ಸಿಟಿ ಪ್ಲಾಟ್‌ಫಾರ್ಮ್ ವಿಶೇಷವಾದ ಆನ್‌ಲೈನ್ ಮತ್ತು ಆಫ್‌ಲೈನ್ (ಡಿಜಿಟಲ್) ಸೇವೆಯಾಗಿದ್ದು, ವಿವಿಧ ನರ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ವಿಶೇಷವಾಗಿ ಬೆಳವಣಿಗೆ ಮತ್ತು ವರ್ತನೆಯ ಸಮಸ್ಯೆಗಳಿರುವವರಿಗೆ (ಆಟಿಸಂ) ನೆರವಾಗಲು ವಿನ್ಯಾಸಗೊಳಿಸಲಾಗಿದೆ. ದಿವ್ಯಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ ಅಡಿಯಲ್ಲಿ ಬೌದ್ಧಿಕ ವೈಕಲ್ಯತೆ ಹೊಂದಿರುವ ವ್ಯಕ್ತಿಗಳ ಸಬಲೀಕರಣಕ್ಕಾಗಿನ ರಾಷ್ಟ್ರೀಯ ಸಂಸ್ಥೆ (ಎನ್‌ಐಇಪಿಐಡಿ) ಸಹಯೋಗದೊಂದಿಗೆ ಟಾಟಾ ಪವರ್ ಸಮುದಾಯ ಅಭಿವೃದ್ಧಿ ಟ್ರಸ್ಟ್ ಈ ವೇದಿಕೆಯನ್ನು ರೂಪಿಸಿದೆ.

16. ಸಿಕಂದರಾಬಾದ್ ನ ಎನ್ಐಇಪಿಐಡಿ ಯಿಂದ ಕಂಪ್ಯೂಟರ್ ಆಧಾರಿತ ಭಾರತೀಯ ಬೌದ್ಧಿಕ ಪರೀಕ್ಷೆ: ಎನ್‌ಐಇಪಿಐಡಿ ಅಭಿವೃದ್ಧಿಪಡಿಸಿರುವ ದೇಶೀಯ ಭಾರತೀಯ ಬೌದ್ಧಿಕ ಪರೀಕ್ಷೆಯನ್ನು ಮಾನ್ಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು 2023ರ ಡಿಸೆಂಬರ್ 11 ರಂದು ನವದೆಹಲಿಯಲ್ಲಿ ಉದ್ಘಾಟಿಸಿದರು. ಎನ್‌ಐಇಪಿಐಡಿಯ ಭಾರತೀಯ ಬೌದ್ಧಿಕ ಪರೀಕ್ಷೆಯ ಸಾಂಸ್ಕೃತಿಕ ಪ್ರಸ್ತುತತೆ ಮತ್ತು ಸೂಕ್ಷ್ಮತೆ ಅದರ ಪ್ರಮುಖ ಬಲವಾಗಿದೆ. ಭಾರತದ ವಿವಿಧ ಭಾಗಗಳ 4,070 ಮಕ್ಕಳ ದತ್ತಾಂಶದಿಂದ ರೂಪುಗೊಂಡಿರುವ ಈ ಪರೀಕ್ಷೆಯು ಭಾರತೀಯ ಜನಸಂಖ್ಯೆಯ ನಿಖರ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಫಿಲ್ಮ್ ಬಜಾರ್ 2024ರಲ್ಲಿ ಮಿಂಚಿದ ‘ಕೊನ್ಯಾಕ್’ ಚಿತ್ರಕಥೆಗಾರರಿಗೆ ​​ಲ್ಯಾಬ್ ರೈಟರ್ಸ್‌ ಪ್ರಶಸ್ತಿ

ಇತ್ತೀಚೆಗೆ ಮುಕ್ತಾಯಗೊಂಡ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ ಎಫ್ ಐ) ನಲ್ಲಿ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ(ಎನ್ ಎಫ್ ಡಿ ಸಿ) …