शुक्रवार, नवंबर 22 2024 | 04:18:45 AM
Breaking News
Home / Choose Language / kannada / ಐ ಎಫ್ ಎಫ್ ಐ 2024: ವರ್ಕ್ ಇನ್ ಪ್ರೊಗ್ರೆಸ್ ಲ್ಯಾಬ್ ನಲ್ಲಿ ಆರು ಚಲನಚಿತ್ರಗಳ ಪ್ರದರ್ಶನ

ಐ ಎಫ್ ಎಫ್ ಐ 2024: ವರ್ಕ್ ಇನ್ ಪ್ರೊಗ್ರೆಸ್ ಲ್ಯಾಬ್ ನಲ್ಲಿ ಆರು ಚಲನಚಿತ್ರಗಳ ಪ್ರದರ್ಶನ

Follow us on:

ಈ ವರ್ಷದ ಐಎಫ್ ಎಫ್  ವರ್ಕ್ ಇನ್ ಪ್ರೊಗ್ರೆಸ್‌ ಲ್ಯಾಬ್ ನಲ್ಲಿ ಆರು ಅದ್ವಿತೀಯ ಫಿಕ್ಷನ್ ಸಿನಿಮಾಗಳು ಅಧಿಕೃತವಾಗಿ ಪ್ರದರ್ಶನಕ್ಕೆ ಆಯ್ಕೆಯಾಗಿವೆ ಎಂದು ಫಿಲಂ ಬಜಾರ್‌  ಪ್ರಕಟಿಸಿದೆ.

ಆಯ್ಕೆಯಾಗಿರುವ ಚಲನಚಿತ್ರಗಳೆಂದರೆ:

1. ಟ್ರಿಬೆನಿ ರೈ ಅವರ ಶೇಪ್ ಆಫ್ ಮೊಮೊಸ್  (ನೇಪಾಳಿ)

2. ಶಕ್ತಿಧರ್ ಬೀರ್ (ಬಂಗಾಳಿ) ಅವರ ಗಾಂಗ್ಶಾಲಿಕ್ (ಗಾಂಗ್ಶಾಲಿಕ್ – ರಿವರ್ ಬರ್ಡ್)

3. ಮೋಹನ್ ಕುಮಾರ್ ವಲ್ಸಲ (ತೆಲುಗು) ಅವರ ಯೆರ್ರಾ ಮಂದಾರಂ (ದಿ ರೆಡ್ ಹೈಬಿಸ್ಕಸ್)

4. ರಿದಮ್ ಜಾನ್ವೆ (ಗಡ್ಡಿ, ನೇಪಾಳಿ)ಅವರ ಕತ್ತಿ ರಿ ರಾಟ್ಟಿ (ಹಂಟರ್ಸ್ ಮೂನ್)

5. ಸಿದ್ಧಾರ್ಥ್ ಬದಿ (ಮರಾಠಿ) ಅವರ  ಉಮಲ್

6. ವಿವೇಕ್ ಕುಮಾರ್ (ಹಿಂದಿ) ಅವರ ದಿ ಗುಡ್ದಿ ಬ್ಯಾಡ್ದಿ ಹಂಗ್ರಿ 

ಈ ಸಮಯ ಪರೀಕ್ಷಿತ ಮಾದರಿ ಹಿನ್ನೆಲೆಯಲ್ಲಿ ಲ್ಯಾಬ್ ಈ ವರ್ಷವೂ ಆನ್ ಲೈನ್ಗ್ ಮತ್ತು ಆಫ್ ಲೈನ್ ಎರಡೂ ಮಾದರಿಯಲ್ಲಿರುತ್ತದೆ. ನಾನಾ ಬಗೆಯಲ್ಲಿ ತೊಡಗಿಸಿಕೊಳ್ಳುವ ವಿಧಾನಗಳಿಂದಾಗಿ ಚಿತ್ರ ನಿರ್ದೇಶಕರು ಪ್ರೋಸ್ಟ್‌ ಪ್ರೊಡಕ್ಷನ್ ಬೆಂಬಲ ಪಡೆಯುವ ಮಾರ್ಗೋಪಾಯಗಳನ್ನು ಸಕಾಲದಲ್ಲಿ ಪಡೆಯುವ ಬಗ್ಗೆ ಚಿಂಥನ ಮಂಥನ ನಡೆಸಲು ಅವಕಾಶ ನೀಡುತ್ತದೆ.

ಈ ಆರು ಚಲನಚಿತ್ರಗಳಲ್ಲಿ ಐದು ಯುವ ಮತ್ತು ಉದಯೋನ್ಮುಖ ಚಲನಚಿತ್ರ ನಿರ್ದೇಶಕರ ಚೊಚ್ಚಲ ಚಿತ್ರಗಳಾಗಿವೆ. ಈ ಚಲನಚಿತ್ರಗಳು ವಿಭಿನ್ನ ನಿರೂಪಣೆಗಳ ಶ್ರೀಮಂತಿಕೆಯನ್ನು ಪ್ರದರ್ಶಿಸುವುದಲ್ಲದೆ ಸಾಂಸ್ಕೃತಿಕ ದೃಷ್ಟಿಕೋನಗಳ ಉತ್ಕೃಷ್ಟತೆಯ ಚಿತ್ರಣವನ್ನು ಪ್ರತಿಬಿಂಬಿಸುತ್ತವೆ. ಈ ತಿಂಗಳು 55 ನೇ ವರ್ಷಕ್ಕೆ ಕಾಲಿಡುತ್ತಿರುವ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ ಎಫ್ ಐ) ಯುವ ಚಲನಚಿತ್ರ ನಿರ್ದೇಶಕರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಮೂಲಕ ಅವರ ನವೀನ ಕಥೆಯ ನಿರೂಪಣೆ ಮತ್ತು ಹೊಸ ಆಯಾಮಗಳನ್ನು ಎತ್ತಿ ತೋರಿಸುವ ಮೂಲಕ ಮಹತ್ವದ ಸಂದೇಶವನ್ನು ರವಾನಿಸುತ್ತದೆ.

ವರ್ಕ್ಸ್ ಇನ್ ಪ್ರೋಗ್ರೆಸ್ (ಡಬ್ಲೂಐಪಿ) ವಿಭಾಗವು ಸೃಜನಶೀಲತೆಯನ್ನು ಬೆಳೆಸಲು ಐ ಎಫ್ ಎಫ್ ಐನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಹೊಸ ಪೀಳಿಗೆಯ ಕಲಾವಿದರ ದೃಷ್ಟಿಯಲ್ಲಿ ಸಮಕಾಲೀನ ಜೀವನದ ಸಂಕೀರ್ಣತೆಯನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಪ್ರೇಕ್ಷಕರಿಗೆ ಪ್ರತಿಧ್ವನಿಸುವ ಕಥೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತವೆ. ಇದು ಚಲನಚಿತ್ರಗಳಿಗೆ ರೋಮಾಂಚನಕಾರಿ ಸಮಯವಾಗಿದೆ ಮತ್ತು ಈ ಉದಯೋನ್ಮುಖ ಧ್ವನಿಗಳನ್ನು ಆಲಿಸುವಲ್ಲಿ ಫಿಲ್ಮ್ ಬಜಾರ್ ಮುಂಚೂಣಿಯಲ್ಲಿದೆ.!

ವರ್ಕ್ ಇನ್ ಪ್ರೊಗ್ರೆಸ್‌ ಲ್ಯಾಬ್ ಕುರಿತು

ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್ ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯ ಗುರಿಯನ್ನು ಹೊಂದಿರುವ ಕಾಲ್ಪನಿಕ ಚಲನಚಿತ್ರಗಳಿಗೆ ಮೀಸಲಾಗಿರುತ್ತದೆ. ಪ್ರತಿ ವರ್ಷ ಗರಿಷ್ಠ ಆರು ಚಲನಚಿತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ದ ಚಲನಚಿತ್ರಗಳ ನಿರ್ದೇಶಕರು ಮತ್ತು ಎಡಿಟರ್ ಗಳು ತಮ್ಮ ಕಚ್ಚಾ ದೃಶ್ಯಗಳನ್ನು ( ಕಟ್‌ಗಳನ್ನು ಮಾಡದ) ಗೌರವಾನ್ವಿತ ಮಾರ್ಗದರ್ಶಕರ ಸಮಿತಿಗೆ ಪ್ರದರ್ಶಿಸಲು ಹಾಗೂ ಅಮೂಲ್ಯವಾದ ಪ್ರತಿಕ್ರಿಯೆ ಸ್ವೀಕರಿಸುವ ಅನನ್ಯ ಅವಕಾಶವನ್ನು ಹೊಂದಿರುತ್ತಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಎಡಿಟರ್ ಗಳು ಎಡಿಟಿಂಗ್ ಗೋಷ್ಠಿಗಳ ಮೂಲಕ ಆಯ್ದ ಚಿತ್ರ ನಿರ್ದೇಶಕರಿಗೆ ಮಾರ್ಗದರ್ಶನ ನೀಡಲಿದ್ದಾರೆ ಮತ್ತು ಆ ಮೂಲಕ ಅವರ ಕಲೆಯನ್ನು ವೃದ್ಧಿಸಿ, ಅವರ ಕಲ್ಪನೆಗೆ ಮತ್ತಷ್ಟು ಹೊಳಪು ತುಂಬಲಿದ್ದಾರೆ. ಮಾರ್ಗದರ್ಶಕರಲ್ಲಿ ಉದ್ಯಮದ ಭಿನ್ನ ವೃತ್ತಿಪರರರು, ಚಲನಚಿತ್ರೋತ್ಸವ ನಿರ್ದೇಶಕರು, ವಿಮರ್ಶಕರು ಮತ್ತು ನುರಿತ ಎಡಿಟರ್ ಗಳು ಸೇರಿದ್ದಾರೆ. ಅವರೆಲ್ಲಾ ಅಂತಿಮ ಚಿತ್ರವನ್ನು ರೂಪಿಸಲು ಚಿತ್ರ ನಿರ್ದೇಶಕರಿಗೆ ಸಹಾಯ ಮಾಡುವ ಬದ್ಧತೆಯುಳ್ಳವರಾಗಿರುತ್ತಾರೆ.

2008ರಲ್ಲಿ ಆರಂಭವಾದಾಗಿನಿಂದ ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಥಮ ಪ್ರದರ್ಶನಗೊಳ್ಳುವ ಚಲನಚಿತ್ರಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಹಾಗೂ ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದೆ. ಪುತುಲ್ ನಾಚೆರ್ ಇತಿಕಥಾ (ಡಬ್ಲೂಐಪಿ ಲ್ಯಾಬ್ 2023), ಶಿವಮ್ಮ (ಡಬ್ಲೂಐಪಿ ಲ್ಯಾಬ್ 2021, ಬುಸಾನ್ 2022 ವಿಜೇತ), ಏಕ್ ಜಗಹ್ ಅಪ್ನಿ (ಡಬ್ಲೂಐಪಿ ಲ್ಯಾಬ್ 2021), ಪೊವೈ (ಡಬ್ಲೂಐಪಿ ಲ್ಯಾಬ್ 2020), ಪಾಕಾ (ರಿವರ್ ಆಫ ಬ್ಲಡ್‌) (ಡಬ್ಲೂಐಪಿ ಲ್ಯಾಬ್ 2020 ), ಪೆಡ್ರೊ (ಡಬ್ಲೂಐಪಿ ಲ್ಯಾಬ್ 2019), ಶಂಕರ್ಸ್ ಫೇರೀಸ್ (ಡಬ್ಲೂಐಪಿ ಲ್ಯಾಬ್ 2019), ಲೈಲಾ ಔರ್ ಸತ್ತ್ ಗೀತ್ (ದಿ ಶೆಫರ್ಡೆಸ್ ಮತ್ತು ಸೆವೆನ್ ಸಾಂಗ್ಸ್) (ಡಬ್ಲೂಐಪಿ ಲ್ಯಾಬ್ 2019), ಫೈರ್ ಇನ್ ದಿ ಮೌಂಟೇನ್ಸ್ (ಡಬ್ಲೂಐಪಿ ಲ್ಯಾಬ್ 2019), ಈಬ್ ಅಲ್ಲೆ ಓಓ! (ಡಬ್ಲೂಐಪಿ ಲ್ಯಾಬ್ 2018), ಸೋನಿ (ಡಬ್ಲೂಐಪಿ ಲ್ಯಾಬ್ 2017), ದಿ ಗೋಲ್ಡ್ಲಾಡೆನ್ ಶೀಪ್ ಮತ್ತು ದಿ ಸೇಕ್ರೆಡ್ ಮೌಂಟೇನ್ (ಡಬ್ಲೂಐಪಿ ಲ್ಯಾಬ್ 2016), ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ (ಡಬ್ಲೂಐಪಿ ಲ್ಯಾಬ್ 2015), ತಿಥಿ (ಡಬ್ಲೂಐಪಿ ಲ್ಯಾಬ್ 2014), ತಿತ್ಲಿ (ಡಬ್ಲೂಐಪಿ ಲ್ಯಾಬ್ 2013 ), ಕಿಲ್ಲಾ (ಡಬ್ಲೂಐಪಿ ಲ್ಯಾಬ್ 2013), ತುಂಬಾಬಾದ್ (ಡಬ್ಲೂಐಪಿ 2012), ಮಿಸ್ ಲವ್ಲಿ (ಡಬ್ಲೂಐಪಿ ಲ್ಯಾಬ್ 2011) ಮತ್ತು ಶಿಪ್ ಆಫ್ ಥೀಸಸ್ (ಡಬ್ಲೂಐಪಿ ಲ್ಯಾಬ್ 2011).

ಫಿಲಂ ಬಜಾರ್ ಕುರಿತು

ಫಿಲ್ಮ್ ಬಜಾರ್ ಬಿ2ಬಿ ವೇದಿಕೆಯಾಗಿದ್ದು, ಅದು ದಕ್ಷಿಣ ಏಷ್ಯಾದ ಚಲನಚಿತ್ರಗಳನ್ನು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾರುಕಟ್ಟೆಗೆ ಪ್ರಚಾರ ಮಾಡುವ ಗುರಿಯನ್ನು ಹೊಂದಿದೆ. ಫಿಲ್ಮ್ ಬಜಾರ್‌ನಲ್ಲಿರುವ ವೀಕ್ಷಣಾ ಕೊಠಡಿಯು ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರವನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು, ವಿಶ್ವ ಮಾರಾಟ ಏಜೆಂಟ್‌ಗಳು ಮತ್ತು ಖರೀದಿದಾರರಿಗೆ ಪ್ರತ್ಯೇಕವಾಗಿ ಪ್ರಚಾರ ಮಾಡಲು ಒದಗಿಸಲಾದ ಪಾವತಿಸುವ  ವೇದಿಕೆಯಾಗಿದೆ

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಕರ್ಟೈನ್ ರೈಸರ್ – ಐ ಎಫ್‌ ಎಫ್‌ ಐ 2024 ಕುರಿತ ಮಾಧ್ಯಮ ಪ್ರಕಟಣೆ

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ ಎಫ್‌ ಎಫ್‌ ಐ) 55ನೇ ಆವೃತ್ತಿಯು 2024ರ ನವೆಂಬರ್ 20 ರಿಂದ 28 ರವರೆಗೆ …