शनिवार, दिसंबर 28 2024 | 01:26:13 AM
Breaking News
Home / अन्य समाचार / ಫಿಲ್ಮ್ ಬಜಾರ್‌ ನ 18ನೇ ಆವೃತ್ತಿಯು ಗೋವಾದ ಐ ಎಫ್‌ ಎಫ್‌ ಐ ನಲ್ಲಿ ಪ್ರಾರಂಭವಾಗಿದೆ

ಫಿಲ್ಮ್ ಬಜಾರ್‌ ನ 18ನೇ ಆವೃತ್ತಿಯು ಗೋವಾದ ಐ ಎಫ್‌ ಎಫ್‌ ಐ ನಲ್ಲಿ ಪ್ರಾರಂಭವಾಗಿದೆ

Follow us on:

ಭಾರತದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂದು ದಕ್ಷಿಣ ಏಷ್ಯಾದ ಪ್ರಮುಖ ಚಲನಚಿತ್ರ ಮಾರುಕಟ್ಟೆಯಾದ ಫಿಲ್ಮ್ ಬಜಾರ್‌ ನ 18ನೇ ಆವೃತ್ತಿಯ ಅದ್ಧೂರಿ ಉದ್ಘಾಟನೆಗೆ ಸಾಕ್ಷಿಯಾಯಿತು. ಐ ಎಫ್‌ ಎಫ್‌ ಐ ನ ಪ್ರಮುಖ ವಿಭಾಗವಾದ ಫಿಲ್ಮ್ ಬಜಾರ್ ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾತೃಗಳು ಮತ್ತು ಸ್ಥಾಪಿತ ಉದ್ಯಮ ವೃತ್ತಿಪರರಿಗೆ ಸಂಪರ್ಕ, ಸಹಯೋಗ ಮತ್ತು ಸಿನಿಮಾದ ಭವಿಷ್ಯವನ್ನು ಮುನ್ನಡೆಸಲು ಕ್ರಿಯಾತ್ಮಕ ವೇದಿಕೆಯನ್ನು ಒದಗಿಸುತ್ತದೆ.

ಐ ಎಫ್‌ ಎಫ್‌ ಐ ನಲ್ಲಿ ಫಿಲ್ಮ್ ಬಜಾರ್ ಅನ್ನು ಉದ್ಘಾಟಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು, ದಾಖಲೆಯ ನೋಂದಣಿ (1500 ಕ್ಕೂ ಹೆಚ್ಚು) ಮತ್ತು 10 ಕ್ಕೂ ಹೆಚ್ಚು ದೇಶ-ನಿರ್ದಿಷ್ಟ ಪೆವಿಲಿಯನ್‌ ಗಳ ಉಪಸ್ಥಿತಿಯನ್ನು ಎತ್ತಿ ತೋರಿಸಿದರು. “ಭವಿಷ್ಯದ ಚಲನಚಿತ್ರ ನಿರ್ಮಾತೃಗಳನ್ನು ಅಭಿವೃದ್ಧಿಪಡಿಸಲು ಇದೊಂದು ಅಸಾಧಾರಣ ವೇದಿಕೆಯಾಗಿದೆ. ಕಲ್ಪನೆಗಳನ್ನು ಪ್ರಸ್ತುತಪಡಿಸುವುದರಿಂದ ಹಿಡಿದು ಒಪ್ಪಂದಗಳನ್ನು ಭದ್ರಪಡಿಸಿಕೊಳ್ಳುವವರೆಗೆ, ಚಲನಚಿತ್ರ ಮಾರುಕಟ್ಟೆಯು ಉದ್ಯಮದ ಎಲ್ಲಾ ಹಂತಗಳಲ್ಲಿ ಫಲಪ್ರದ ಸಂವಾದಗಳನ್ನು ಉತ್ತೇಜಿಸುತ್ತದೆ” ಎಂದು ಅವರು ಹೇಳಿದರು.

ಯುವ ಪ್ರತಿಭೆಗಳನ್ನು ಪೋಷಿಸಲು ಐ ಎಫ್‌ ಎಫ್‌ ಐ ಬದ್ಧತೆಯ ಬಗ್ಗೆ ಅವರು ಮತ್ತಷ್ಟು ವಿವರಿಸಿದರು. “ಈ ವರ್ಷದ ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಕಾರ್ಯಕ್ರಮವು, ಚಲನಚಿತ್ರ ನಿರ್ಮಾಣದಲ್ಲಿ ಭಾರತದ ಉಜ್ವಲ ಯುವ ಪ್ರತಿಭೆಗಳನ್ನು ಗುರುತಿಸಲು ಮತ್ತು ಪೋಷಿಸಲು ದಾರಿದೀಪವಾಗಿದೆ, ಇದು 100 ಭರವಸೆಯ ವ್ಯಕ್ತಿಗಳನ್ನು ಸ್ವಾಗತಿಸುವ ಗಮನಾರ್ಹ ವಿಸ್ತರಣೆಯ ಹೆಗ್ಗಳಿಕೆಯನ್ನು ಹೊಂದಿದೆ” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ 55ನೇ ಐ ಎಫ್‌ ಎಫ್‌ ಐ ನ ಚಿತ್ರೋತ್ಸವ ನಿರ್ದೇಶಕ ಶೇಖರ್ ಕಪೂರ್, ಯುವ ಚಲನಚಿತ್ರ ನಿರ್ಮಾತೃಗಳು ತಮ್ಮ ಆಲೋಚನೆಗಳು ಮತ್ತು ರಚನೆಗಳನ್ನು ಉತ್ಸಾಹದಿಂದ ಪ್ರಸ್ತುತಪಡಿಸುವ ಆಸಕ್ತಿದಾಯಕ ವೇದಿಕೆ ಫಿಲ್ಮ್ ಬಜಾರ್ ಎಂದು ಬಣ್ಣಿಸಿದರು. ” ಫಿಲ್ಮ್ ಬಜಾರ್ ಯುವ ಚಲನಚಿತ್ರ ನಿರ್ಮಾತೃಗಳ ಶಕ್ತಿಯಿಂದ ತುಂಬಿದೆ, ಅವರು ತಮ್ಮ ಕೆಲಸವನ್ನು ಅಪಾರ ಉತ್ಸಾಹದಿಂದ ಪ್ರದರ್ಶಿಸುತ್ತಾರೆ, ನಾನು ನಿಜವಾಗಿಯೂ ಇಲ್ಲಿಗೆ ಬಂದು ಆ ಉತ್ಸಾಹವನ್ನು ಅನುಭವಿಸಲು ಬಯಸುತ್ತೇನೆ.”ಎಂದು ಅವರು ಹೇಳಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಎನ್‌ ಎಫ್‌ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ಪೃಥುಲ್ ಕುಮಾರ್ ಅವರು ಆನ್‌ಲೈನ್ ಫಿಲ್ಮ್ ಬಜಾರ್ ಉಪಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಈ ನವೀನ ವೇದಿಕೆಯು ಜಾಗತಿಕ ಖರೀದಿದಾರರು ಮತ್ತು ಮಾರಾಟಗಾರರನ್ನು ಸಂಪರ್ಕಿಸಲು, ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಸಿನಿಮಾದ ವ್ಯವಹಾರವನ್ನು ಮುನ್ನಡೆಸಲು ವರ್ಚುವಲ್ ಹಬ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು,

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ (ಚಲನಚಿತ್ರಗಳು) ವೃಂದಾ ಮನೋಹರ್ ದೇಸಾಯಿ ಅವರು ಏಳು ದೇಶಗಳ 21 ಚಲನಚಿತ್ರಗಳು ಮತ್ತು 8 ವೆಬ್ ಸರಣಿಗಳನ್ನು ಒಳಗೊಂಡಿರುವ ಸಹ-ನಿರ್ಮಾಣ ಮಾರುಕಟ್ಟೆಯ ವಿವರಗಳನ್ನು ಅನಾವರಣಗೊಳಿಸಿದರು. ಚಲನಚಿತ್ರ ನಿರ್ಮಾಪಕರಿಗೆ ವಿತರಣೆ ಮತ್ತು ಹಣಕಾಸು ಒದಗಿಸುವ ಪ್ರಮುಖ ಸಂಪನ್ಮೂಲವಾದ ವೀಕ್ಷಣಾ ಕೊಠಡಿಯನ್ನು ಉಲ್ಲೇಖಿಸಿದ ಅವರು, ಈ ವರ್ಷ ಫೀಚರ್, ಮಧ್ಯಮ ಉದ್ದ ಮತ್ತು ಕಿರು ಚಿತ್ರಗಳು ಸೇರಿದಂತೆ 208 ಚಲನಚಿತ್ರಗಳು ವೀಕ್ಷಿಸಲು ಲಭ್ಯವಿರುತ್ತದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ಪಿಲ್ಮ್‌ ಬಜಾರ್ ಸಲಹೆಗಾರ ಜೆರೋಮ್ ಪೈಲಾರ್ಡ್ ಮತ್ತು ಆಸ್ಟ್ರೇಲಿಯಾದ ಭಾರತದ ಡೆಪ್ಯುಟಿ ಹೈ ಕಮಿಷನರ್ ನಿಕೋಲಸ್ ಮೆಕ್ ಕ್ಯಾಫ್ರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.‌

ಫಿಲ್ಮ್ ಬಜಾರ್ ಬಗ್ಗೆ

ಫಿಲ್ಮ್ ಬಜಾರ್ ಅನ್ನು ಪ್ರತಿ ವರ್ಷ ಭಾರತದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್‌ ಎಫ್‌ ಐ) ಜೊತೆಗೆ ಆಯೋಜಿಸಲಾಗುತ್ತದೆ. ಈ ವರ್ಷ, ಫಿಲ್ಮ್ ಬಜಾರ್ 2024 ರ ನವೆಂಬರ್ 20 ರಿಂದ 24 ರವರೆಗೆ ಗೋವಾದ ಮ್ಯಾರಿಯೊಟ್ ರೆಸಾರ್ಟ್‌ನಲ್ಲಿ ನಡೆಯಲಿದೆ.

2007ರಲ್ಲಿ ಪ್ರಾರಂಭವಾದಾಗಿನಿಂದ, ಫಿಲ್ಮ್ ಬಜಾರ್ ದಕ್ಷಿಣ ಏಷ್ಯಾದ ಚಲನಚಿತ್ರಗಳು ಮತ್ತು ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲಿನ ಪ್ರತಿಭೆಯನ್ನು ಅನ್ವೇಷಿಸಲು, ಬೆಂಬಲಿಸಲು ಮತ್ತು ಪ್ರದರ್ಶಿಸಲು ಸಮರ್ಪಿಸಲಾಗಿದೆ. ಬಜಾರ್ ದಕ್ಷಿಣ ಏಷ್ಯಾದ ಪ್ರದೇಶದಲ್ಲಿ ವಿಶ್ವ ಸಿನಿಮಾದ ಮಾರಾಟವನ್ನು ಸುಗಮಗೊಳಿಸುತ್ತದೆ, ಇದು ದಕ್ಷಿಣ ಏಷ್ಯಾದ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾತೃಗಳು, ನಿರ್ಮಾಪಕರು, ಮಾರಾಟ ಏಜೆಂಟರು ಮತ್ತು ಉತ್ಸವದ ಪ್ರೋಗ್ರಾಮರ್‌ ಗಳಿಗೆ ಸೃಜನಶೀಲ ಮತ್ತು ಆರ್ಥಿಕ ಸಹಯೋಗಕ್ಕಾಗಿ ಸಮನ್ವಯ ಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ಐದು ದಿನಗಳಲ್ಲಿ, ಫಿಲ್ಮ್ ಮಾರ್ಕೆಟ್ ದಕ್ಷಿಣ ಏಷ್ಯಾದ ಕಂಟೆಂಟ್ ಮತ್ತು ಪ್ರತಿಭೆಯನ್ನು ಉತ್ತೇಜಿಸಲು ಕೇಂದ್ರೀಕರಿಸುತ್ತದೆ. ಸಹ-ನಿರ್ಮಾಣ ಮಾರುಕಟ್ಟೆಯು ವೈವಿಧ್ಯಮಯ ಜಾಗತಿಕ ನಿರೂಪಣೆಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ઇન્સ્ટિટ્યૂટ ઓફ એરોસ્પેસ મેડિસિન ઇન્ડિયન સોસાયટી ઓફ એરોસ્પેસ મેડિસિન (આઇએસએએમ)ની 63મી વાર્ષિક પરિષદનું આયોજન કરશે

ઇન્ડિયન સોસાયટી ઓફ એરોસ્પેસ મેડિસિન (આઇએસએએમ) 05થી 07 ડિસેમ્બર 2024 દરમિયાન ઇન્સ્ટિટ્યૂટ ઓફ એરોસ્પેસ મેડિસિન (આઇએએમ), …