ಬೆಂಗಳೂರಿನ ದಿವ್ಯಾಂಗರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರವು 2024ರ ನವೆಂಬರ್ 28 ರಂದು ದಿವ್ಯಾಂಗರಿಗಾಗಿ ಉದ್ಯೋಗ ಮೇಳ ಆಯೋಜಿಸಿದೆ.
ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಡಿಯ ಈ ಕೇಂದ್ರವು ಅಮೆರಿಕನ್ ಇಂಡಿಯನ್ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿರುವ ಈ ಮೇಳದಲ್ಲಿ ಮಾಹಿತಿ ತಂತ್ರಜ್ಞಾನಯೇತರ ಸಾಮಾನ್ಯ ಕಚೇರಿ ನಿರ್ವಹಣೆ, ವಾಹನ, ಚಿಲ್ಲರೆ, ಆತಿಥ್ಯ ವಲಯದ 20 ಖ್ಯಾತ ಕಂಪೆನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ.
ಬೆಂಗಳೂರಿನ ಶೇಷಾದ್ರಿಪುರಂನ ಕುಮಾರ ಪಾರ್ಕ್ ಪೂರ್ವ ಇಲ್ಲಿರುವ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಭವನದಲ್ಲಿ ಇದೇ 28 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಮೇಳ ನಡೆಯಲಿದೆ.
ಉದ್ಯೋಗ ಅರಸುತ್ತಿರುವ ದಿವ್ಯಾಂಗರು ತಮ್ಮ ಸ್ವವಿವರದ 4 ಪ್ರತಿ; ನಾಲ್ಕು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ; ವಿದ್ಯಾರ್ಹತೆ ಪ್ರಮಾಣಪತ್ರದ ಮೂಲ ಮತ್ತು ನಕಲು ಪ್ರತಿ; ಆಧಾರ್, ಪ್ಯಾನ್, ಚುನಾವಣಾ ಗುರುತಿನ ಚೀಟಿ ಇತ್ಯಾದಿ ಗುರುತಿನ ದಾಖಲೆ; ಕನಿಷ್ಠ ಶೇಕಡ 40 ರಷ್ಟು ಅಂಗವೈಕಲ್ಯತೆ ದೃಢೀಕರಿಸುವ ವೈದ್ಯಕೀಯ ಪ್ರಮಾಣಪತ್ರದೊಂದಿಗೆ ಮೇಳದಲ್ಲಿ ಪಾಲ್ಗೊಂಡು ತಮ್ಮ ಆಯ್ಕೆಯ ಉದ್ಯೋಗ ಪಡೆಯಬಹುದಾಗಿದೆ. ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ.
भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं
ऑडियो बुक : भारत 1885 से 1950 (इतिहास पर एक दृष्टि)