शनिवार, नवंबर 23 2024 | 06:18:54 PM
Breaking News
Home / Choose Language / kannada / ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನಲ್ಲಿಂದು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿದಂತೆ ದಕ್ಷಿಣ ವಲಯದ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾರ್ಯಕ್ಷಮತೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನಲ್ಲಿಂದು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿದಂತೆ ದಕ್ಷಿಣ ವಲಯದ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾರ್ಯಕ್ಷಮತೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು

Follow us on:

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನಲ್ಲಿಂದು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯನ್ನುನ್ನು ಒಳಗೊಂಡಿರುವ ದಕ್ಷಿಣ ವಲಯದ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಸಭೆ ನಡೆಸಿದರು.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶ್ರೀ ಪಂಕಜ್ ಚೌಧರಿ; ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ಶ್ರೀ ಎಂ. ನಾಗರಾಜು; ಇಡಿ, ಆರ್‌ ಬಿ ಐ ಅಧಿಕಾರಿಗಳು; ಆರ್‌ ಆರ್‌ ಬಿ ಗಳು ಮತ್ತು ಪ್ರಾಯೋಜಕ ಬ್ಯಾಂಕುಗಳ ಅಧ್ಯಕ್ಷರು; ಹಣಕಾಸು ಸೇವೆಗಳ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ನಬಾರ್ಡ್ ಮತ್ತು ಎಸ್‌ ಐ ಡಿ ಬಿ ಐ ಪ್ರತಿನಿಧಿಗಳು ಮತ್ತು ಭಾಗವಹಿಸುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ, 10 ಆರ್‌ ಆರ್‌ ಬಿ (ಪ್ರಾದೇಶಿಕ ಗ್ರಾಮೀಣ ಬ್ಯಾಂಕು) ಗಳು ಭಾಗವಹಿಸಿದವು. ವ್ಯವಹಾರದ ಕಾರ್ಯಕ್ಷಮತೆ, ಡಿಜಿಟಲ್ ತಂತ್ರಜ್ಞಾನ ಸೇವೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಕೃಷಿ ಮತ್ತು ಸೂಕ್ಷ್ಮ ಮತ್ತು ಸಣ್ಣ ಉದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ವ್ಯವಹಾರ ಬೆಳವಣಿಗೆಯನ್ನು ಉತ್ತೇಜಿಸುವ ಬಗ್ಗೆ ಸಭೆಯು ಕೇಂದ್ರೀಕರಿಸಿತು. ಗ್ರಾಮೀಣ ಆರ್ಥಿಕತೆಯನ್ನು ಬೆಂಬಲಿಸುವಲ್ಲಿ ಆರ್‌ ಆರ್‌ ಬಿ ಗಳ ಪ್ರಮುಖ ಪಾತ್ರವನ್ನು ಗಮನಿಸಿದ ಕೇಂದ್ರ ಹಣಕಾಸು ಸಚಿವರು ತಮ್ಮ ಪ್ರಾಯೋಜಕ ಬ್ಯಾಂಕುಗಳ ಸಕ್ರಿಯ ಬೆಂಬಲದೊಂದಿಗೆ ಭಾರತ ಸರ್ಕಾರದ ವಿವಿಧ ಪ್ರಮುಖ ಯೋಜನೆಗಳಾದ ಮುದ್ರಾ, ಪ್ರಧಾನಮಂತ್ರಿ ವಿಶ್ವಕರ್ಮ ಇತ್ಯಾದಿಗಳ ಅಡಿಯಲ್ಲಿ ಸಾಲ ವಿತರಣೆಯನ್ನು ಹೆಚ್ಚಿಸಲು ಆರ್‌ ಆರ್‌ ಬಿ ಗಳನ್ನು ಒತ್ತಾಯಿಸಿದರು.

ಕೃಷಿ ಸಂಬಂಧಿತ ಚಟುವಟಿಕೆಗಳಾದ ಹೈನುಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮುಂತಾದವುಗಳ ಮೇಲೆ ವಿಶೇಷ ಗಮನಹರಿಸಿ, ತಳಮಟ್ಟದಲ್ಲಿ ಕೃಷಿ ಸಾಲ ವಿತರಣೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಲು ಶ್ರೀಮತಿ ಸೀತಾರಾಮನ್ ಅವರು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನಿರ್ದೇಶನ ನೀಡಿದರು. ಅಲ್ಲದೆ, ಈ ಪ್ರದೇಶದಲ್ಲಿ ಕೃಷಿ ಸಂಬಂಧಿತ ಚಟುವಟಿಕೆಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿಶೇಷವಾಗಿ ಕೇರಳದ ಮೀನುಗಾರಿಕಾ ವಲಯ ಮತ್ತು ತೆಲಂಗಾಣದ ಡೈರಿ ವಲಯಕ್ಕೆ ಸಾಲ ವಿತರಣೆಯನ್ನು ಹೆಚ್ಚಿಸಲು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಪ್ರಾಯೋಜಕ ಬ್ಯಾಂಕುಗಳು ಆಯಾ ರಾಜ್ಯ ಸರ್ಕಾರದ ಇಲಾಖೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ನಿರ್ದೇಶನ ನೀಡಲಾಯಿತು.

2022ರಲ್ಲಿ ನಿಯಮಿತ ಪರಿಶೀಲನೆ ಪ್ರಾರಂಭವಾದಾಗಿನಿಂದ ಆರ್‌ ಆರ್‌ ಬಿ ಗಳ ಆರ್ಥಿಕ ಕಾರ್ಯಕ್ಷಮತೆ ಮತ್ತು ತಂತ್ರಜ್ಞಾನದ ಉನ್ನತೀಕರಣದಲ್ಲಿ ಗಮನಾರ್ಹ ಸುಧಾರಣೆಯನ್ನು ಕೇಂದ್ರ ಹಣಕಾಸು ಸಚಿವರು ಶ್ಲಾಘಿಸಿದರು. 2024ನೇ ಹಣಕಾಸು ವರ್ಷದಲ್ಲಿ ಶೇ.17.6 ರ ಏಕೀಕೃತ ಸಿ ಆರ್‌ ಎ ಆರ್‌ ಮತ್ತು ಶೇ.3.94 ರ ಒಟ್ಟು ಅನುತ್ಪಾದಕ ಆಸ್ತಿಗಳು (ಜಿ ಎನ್‌ ಪಿ ಎ) ಆರೋಗ್ಯಕರ ಮಟ್ಟದಲ್ಲಿವೆ. 2024ನೇ ಹಣಕಾಸು ವರ್ಷದ ಅವಧಿಯಲ್ಲಿ ದಕ್ಷಿಣ ವಲಯದ ಆರ್‌ ಆರ್‌ ಬಿ ಗಳು 3,816 ಕೋಟಿ ರೂ.ಗಳ ಏಕೀಕೃತ ಲಾಭವನ್ನು ಗಳಿಸಿವೆ, ಇದು ಎಲ್ಲಾ ಆರ್‌ ಆರ್‌ ಬಿ ಗಳ ಒಟ್ಟು ನಿವ್ವಳ ಏಕೀಕೃತ ಲಾಭದ ಶೇ.50 ಕ್ಕಿಂತ ಹೆಚ್ಚು.

ಪರಿಶೀಲನೆಯ ಸಮಯದಲ್ಲಿ, ಚಾಲ್ತಿ ಖಾತೆಯ ಉಳಿತಾಯ ಖಾತೆ (ಸಿ ಎ ಎಸ್‌ ಎ) ಠೇವಣಿಗಳನ್ನು ಹೆಚ್ಚಿಸುವ ಪ್ರಾಮುಖ್ಯತೆ, ಸುಸ್ಥಿರ ಸಾಲದ ಬೆಳವಣಿಗೆಯ ವೇಗವನ್ನು ಇನ್ನಷ್ಟು ವೇಗಗೊಳಿಸಲು ಸಿ ಎ ಎಸ್‌ ಎ ಠೇವಣಿಗಳನ್ನು ಸಜ್ಜುಗೊಳಿಸಲು ದಕ್ಷಿಣ ವಲಯದಲ್ಲಿ ಆರ್‌ ಆರ್‌ ಬಿ ಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಲಾಯಿತು.

ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಶ್ರೀ ಪಂಕಜ್ ಚೌಧರಿ ಅವರು, ಪ್ರಧಾನ ಮಂತ್ರಿಯವರ ಆರ್ಥಿಕ ಒಳಗೊಳ್ಳುವಿಕೆಯ ದೃಷ್ಟಿಕೋನವನ್ನು ವಿವರಿಸುತ್ತಾ, ಭಾರತ ಸರ್ಕಾರದ ಹಣಕಾಸು ಸೇರ್ಪಡೆ ಯೋಜನೆಗಳ ಅಡಿಯಲ್ಲಿ ಸಾಧನೆಗೆ ಗರಿಷ್ಠ ಒತ್ತು ನೀಡುವಂತೆ ಬ್ಯಾಂಕುಗಳಿಗೆ ಒತ್ತಾಯಿಸಿದರು.

ಶ್ರೀಮತಿ ಸೀತಾರಾಮನ್ ಅವರು ದಕ್ಷಿಣ ವಲಯದಲ್ಲಿ ಆರ್ಥಿಕ ಸೇರ್ಪಡೆಯಲ್ಲಿ ಾರ್‌ ಆರ್‌ ಬಿ ಗಳು ವಹಿಸಿದ ಪ್ರಮುಖ ಪಾತ್ರವನ್ನು ಪ್ರಸ್ತಾಪಿಸಿದರು ಮತ್ತು ಪ್ರಧಾನಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈY), ಪ್ರಧಾನ್ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿ ಎಂ ಎಸ್‌ ಬಿ ವೈ), ಅಟಲ್ ಪಿಂಚಣಿ ಯೋಜನೆ (ಎಪಿವೈ)  ಮುಂತಾದ ಹಣಕಾಸು ಸೇರ್ಪಡೆ ಯೋಜನೆಗಳ ಅಡಿಯಲ್ಲಿ ಸಂಪೂರ್ಣತೆಯ ಕಡೆಗೆ ಪ್ರಯತ್ನಗಳನ್ನು ಮುಂದುವರಿಸುವಂತೆ ಮತ್ತು ಆಯಾ ಗುರಿಗಳನ್ನು ಸಾಧಿಸುವಂತೆ ಹಣಕಾಸು ಸಚಿವರು ಹೇಳಿದರು. ಆರ್‌ ಆರ್‌ ಬಿ ಗಳ ಜೊತೆಗೆ ಹಣಕಾಸು ಸೇರ್ಪಡೆ ಯೋಜನೆಗಳ ಗುರಿಗಳನ್ನು ಮರುರೂಪಿಸಲು ಪ್ರಾಯೋಜಕ ಬ್ಯಾಂಕುಗಳಿಗೆ ನಿರ್ದೇಶನ ನೀಡಿದರು ಮತ್ತು ಪಿಎಂಜೆಡಿವೈ ಅಡಿಯಲ್ಲಿ ನಿಷ್ಕ್ರಿಯ ಖಾತೆಗಳನ್ನು ಕಾರ್ಯಗತಗೊಳಿಸಲು ವಿಶೇಷ ಅಭಿಯಾನವನ್ನು ಪ್ರಾರಂಭಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದರು.

ಎಂ ಎಸ್‌ ಎಂ ಇ ಗಳಿಗೆ ಸಾಲ ಬೆಂಬಲವನ್ನು ಬಲಪಡಿಸಲು ಮತ್ತು ಡಿಜಿಟಲ್ ಆವಿಷ್ಕಾರಗಳ ಮೂಲಕ ಗ್ರಾಹಕರ ಸೇರ್ಪಡೆ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಕುರಿತು ವಿಶೇಷ ಒತ್ತು ನೀಡಲಾಯಿತು. ಡಿಜಿಟಲ್ ವೇದಿಕೆಗಳಲ್ಲಿ ಸಹಕರಿಸಲು, ಸಹ-ಸಾಲ/ಅಪಾಯ ಹಂಚಿಕೆ ಮಾದರಿಗಳನ್ನು ಅನ್ವೇಷಿಸಲು ಮತ್ತು ಎಂ ಎಸ್‌ ಎಂ ಪೋರ್ಟ್‌ಫೋಲಿಯೊಗೆ ಮರುಹಣಕಾಸು ಮಾಡುವಂತೆ ಎಸ್‌ ಐ ಡಿ ಬಿ ಐ ಮತ್ತು ಆರ್‌ ಆರ್‌ ಬಿ ಗಳಿಗೆ ಹಣಕಾಸು ಸಚಿವರು ನಿರ್ದೇಶನ ನೀಡಿದರು.

10 ಆರ್‌ ಆರ್‌ ಬಿ ಗಳು ಗ್ರಾಹಕ-ಕೇಂದ್ರಿತ ಡಿಜಿಟಲ್ ಸೇವೆಗಳಾದ ಮೈಕ್ರೋ-ಎಟಿಎಂಗಳು, ಕಾಲ್ ಸೆಂಟರ್‌ ಗಳು, ನೆಟ್ ಬ್ಯಾಂಕಿಂಗ್, ವಿಡಿಯೋ ಕೆವೈಸಿ, ಆರ್‌ ಟಿ ಜಿ ಎಸ್‌, ಐಎಂಪಿಎಸ್, ಇತ್ಯಾದಿ ವಿವಿಧ ತಂತ್ರಜ್ಞಾನದ ಉನ್ನತೀಕರಣವನ್ನು ಪೂರ್ಣಗೊಳಿಸಿರುವುದಕ್ಕೆ ಕೇಂದ್ರ ಹಣಕಾಸು ಸಚಿವರು ಶ್ಲಾಘಿಸಿದರು. ಆಯಾ ಪ್ರಾಯೋಜಕ ಬ್ಯಾಂಕುಗಳ ಸಹಾಯದಿಂದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಈ ಸೇವೆಗಳ ಬಳಕೆಯನ್ನು ತಮ್ಮ ಗ್ರಾಹಕರಲ್ಲಿ ಉತ್ತೇಜಿಸುವಂತೆ ಒತ್ತಾಯಿಸಿದರು.

ಎಲ್ಲಾ ಆರ್‌ ಆರ್‌ ಬಿ ಗಳು ಕ್ಲಸ್ಟರ್ ಚಟುವಟಿಕೆಗಳೊಂದಿಗೆ ಕಸ್ಟಮೈಸ್ ಮಾಡಿದ ಉತ್ಪನ್ನಗಳೊಂದಿಗೆ ಎಂ ಎಸ್‌ ಎಂ ಇ ಸಾಲಕ್ಕಾಗಿ ಕಾರ್ಯತಂತ್ರವನ್ನು ರೂಪಿಸಬೇಕು ಮತ್ತು ಭಾರತ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಮನ್ವಯ ಮತ್ತು ಜಾಗೃತಿಯೊಂದಿಗೆ ವಿಶೇಷ ಔಟ್ರೀಚ್ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಶ್ರೀಮತಿ ಸೀತಾರಾಮನ್ ಅವರು ಹೇಳಿದರು. ಎಸ್‌ ಐ ಡಿ ಬಿ ಐ ನ ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳನ್ನು ಬಳಸಿಕೊಳ್ಳಲು ಆರ್‌ ಆರ್‌ ಬಿ ಗಳು ಪ್ರಯತ್ನಿಸಬೇಕು ಮತ್ತು ಅದರಿಂದ ಎಂ ಎಸ್‌ ಎಂ ಇ ಮರುಹಣಕಾಸನ್ನು ಪಡೆಯಬೇಕು ಎಂದು ಅವರು ಹೇಳಿದರು.

ಅಭ್ಯರ್ಥಿಗಳಲ್ಲಿ ಸ್ಥಳೀಯ ಭಾಷೆಯ ಜ್ಞಾನ ಮತ್ತು ಪ್ರಾವೀಣ್ಯತೆಯನ್ನು ಖಚಿತಪಡಿಸಿಕೊಳ್ಳಲು ಆರ್‌ ಆರ್‌ ಬಿ ಗಳ ನೇಮಕಾತಿ ನಿಯಮಗಳನ್ನು ಪರಿಶೀಲಿಸಲು ಮತ್ತು ಅದನ್ನು ಸೂಕ್ತವಾಗಿ ಮಾರ್ಪಡಿಸಲು ಕೇಂದ್ರ ಹಣಕಾಸು ಸಚಿವರು ಹಣಕಾಸು ಸೇವೆಗಳ ಇಲಾಖೆಗೆ ನಿರ್ದೇಶನ ನೀಡಿದರು.

‘ಒಂದು ರಾಜ್ಯ-ಒಂದು ಆರ್‌ ಆರ್‌ ಬಿ’ ತತ್ವದ ಮೇಲೆ ಆರ್‌ ಆರ್‌ ಬಿ ಗಳ ವಿಲೀನದ ಪ್ರಸ್ತಾಪದ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ಕೇಂದ್ರ ಹಣಕಾಸು ಸಚಿವರು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಡಾ. ಹರೇಕೃಷ್ಣ ಮಹತಾಬ್‌ ಅವರ ಶಾಶ್ವತ ಪರಂಪರೆಯ 125ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ

ಉತ್ಕಲ್‌ ಕೇಶರಿ ಡಾ. ಹರೇಕೃಷ್ಣ ಮಹತಾಬ್‌ ಅವರ 125ನೇ ಜನ್ಮ ದಿನಾಚರಣೆಯಂದು ಸಂಸ್ಕೃತಿ ಸಚಿವಾಲಯವು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ …