शुक्रवार, नवंबर 15 2024 | 11:19:53 AM
Breaking News
Home / Choose Language / kannada / ದೆಹಲಿಯಲ್ಲಿ ಮೊದಲ ಬೋಡೋಲ್ಯಾಂಡ್ ಮಹೋತ್ಸವ ಉದ್ಘಾಟಿಸಲಿರುವ ಪ್ರಧಾನಮಂತ್ರಿ

ದೆಹಲಿಯಲ್ಲಿ ಮೊದಲ ಬೋಡೋಲ್ಯಾಂಡ್ ಮಹೋತ್ಸವ ಉದ್ಘಾಟಿಸಲಿರುವ ಪ್ರಧಾನಮಂತ್ರಿ

Follow us on:

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ SAI ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ನವೆಂಬರ್ 15 ರಂದು ಸುಮಾರು 6:30 PMಕ್ಕೆ ಮೊದಲ ಬೋಡೋಲ್ಯಾಂಡ್ ಮಹೋತ್ಸೊವ್ ಅನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನವೆಂಬರ್ 15 ಮತ್ತು 16 ರಂದು ಎರಡು ದಿನಗಳ ಮಹೋತ್ಸವವನ್ನು ಆಯೋಜಿಸಲಾಗಿದೆ. ಇದು ಶಾಂತಿಯನ್ನು ಉಳಿಸಿಕೊಳ್ಳಲು ಮತ್ತು ರೋಮಾಂಚಕ ಬೋಡೋ ಸಮಾಜವನ್ನು ನಿರ್ಮಿಸಲು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತಾದ ಮೆಗಾ ಸಮಾವೇಶವಾಗಿದೆ. ಇದು ಬೋಡೋಲ್ಯಾಂಡ್‌ನಲ್ಲಿ ಮಾತ್ರವಲ್ಲದೆ ಅಸ್ಸಾಂ, ಪಶ್ಚಿಮ ಬಂಗಾಳ, ನೇಪಾಳ ಮತ್ತು ಈಶಾನ್ಯದ ಇತರ ಅಂತಾರಾಷ್ಟ್ರೀಯ ಗಡಿ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯ ಬೋಡೋ ಜನರನ್ನು ಏಕೀಕರಿಸುವ ಗುರಿಯನ್ನು ಹೊಂದಿದೆ. ಮಹೊತ್ಸವದ ವಿಷಯವು ‘ಸಮೃದ್ಧ ಭಾರತಕ್ಕಾಗಿ ಶಾಂತಿ ಮತ್ತು ಸಾಮರಸ್ಯ’ ಎಂಬುದಾಗಿದೆ.  ಬೋಡೋ ಸಮುದಾಯದ ಶ್ರೀಮಂತ ಸಂಸ್ಕೃತಿ, ಭಾಷೆ ಮತ್ತು ಶಿಕ್ಷಣದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ (ಬಿಟಿಆರ್) ಇತರ ಸಮುದಾಯಗಳೊಂದಿಗೆ ಇದು ನಂಟು ಹೊಂದಿದೆ. ಇದು ಬೋಡೋಲ್ಯಾಂಡ್‌ನ ಸಾಂಸ್ಕೃತಿಕ ಮತ್ತು ಭಾಷಿಕ ಪರಂಪರೆಯ ಶ್ರೀಮಂತಿಕೆ, ಪರಿಸರ ಜೈವಿಕ ವೈವಿಧ್ಯತೆ ಮತ್ತು ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕ್ರಿಯಾತ್ಮಕ ನಾಯಕತ್ವದಲ್ಲಿ 2020 ರಲ್ಲಿ ಬೋಡೋ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರದ ಚೇತರಿಕೆ ಮತ್ತು ಸ್ಥಿತಿಸ್ಥಾಪಕತ್ವದ ಗಮನಾರ್ಹ ಪ್ರಯಾಣ ಮುಂದುವರಿದಿದ್ದು, ಈಗ ಮೆಗಾ ಮಹೋತ್ಸವ ಆಯೋಜಿಸಲಾಗಿದೆ. ಈ ಶಾಂತಿ ಒಪ್ಪಂದವು ಬೋಡೋಲ್ಯಾಂಡ್‌ನಲ್ಲಿ ದಶಕಗಳ ಸಂಘರ್ಷ, ಹಿಂಸಾಚಾರ ಮತ್ತು ಜೀವಹಾನಿಗಳನ್ನು ತಡೆಗಟ್ಟಿದೆ ಇತರ ಶಾಂತಿ ವಸಾಹತುಗಳಿಗೆ ವೇಗವರ್ಧಕವಾಗಿಯೂ ಕಾರ್ಯನಿರ್ವಹಿಸಿದೆ.

“ಭಾರತೀಯ ಪರಂಪರೆ ಮತ್ತು ಸಂಪ್ರದಾಯಗಳಿಗೆ ಕೊಡುಗೆ ನೀಡುವ ಶ್ರೀಮಂತ ಬೋಡೋ ಸಂಸ್ಕೃತಿ, ಸಂಪ್ರದಾಯ ಮತ್ತು ಸಾಹಿತ್ಯ” ಎಂಬ ಅಧಿವೇಶನವು ಮಹೋತ್ಸವದ ಪ್ರಮುಖ ಅಂಶವಾಗಿದೆ ಮತ್ತು ಶ್ರೀಮಂತ ಬೋಡೋ ಸಂಸ್ಕೃತಿ, ಸಂಪ್ರದಾಯಗಳು, ಭಾಷೆ ಮತ್ತು ಸಾಹಿತ್ಯದ ಕುರಿತು ಚರ್ಚೆಗಳಿಗೆ ಸಾಕ್ಷಿಯಾಗಲಿದೆ. “ರಾಷ್ಟ್ರೀಯ ಶಿಕ್ಷಣ ನೀತಿ, 2020 ಮೂಲಕ ಮಾತೃಭಾಷಾ ಮಾಧ್ಯಮದ ಸವಾಲುಗಳು ಮತ್ತು ಅವಕಾಶಗಳು” ಕುರಿತು ಮತ್ತೊಂದು ಅಧಿವೇಶನವೂ ನಡೆಯಲಿದೆ.

ಬೋಡೋಲ್ಯಾಂಡ್ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ “ಸ್ಥಳೀಯ ಸಾಂಸ್ಕೃತಿಕ ಸಭೆ ಮತ್ತು ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ಮೂಲಕ ‘ವೈಬ್ರಂಟ್ ಬೋಡೋಲ್ಯಾಂಡ್’ ಪ್ರದೇಶವನ್ನು ನಿರ್ಮಿಸುವ ಕುರಿತು ವಿಷಯಾಧಾರಿತ ಚರ್ಚೆಯನ್ನು ಸಹ ಆಯೋಜಿಸಲಾಗುತ್ತದೆ.

ಬೋಡೋಲ್ಯಾಂಡ್ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಭಾರತದ ಇತರ ಭಾಗಗಳು ಮತ್ತು ನೆರೆಯ ರಾಜ್ಯಗಳಾದ ನೇಪಾಳ ಮತ್ತು ಭೂತಾನ್‌ನಿಂದ ಐದು ಸಾವಿರಕ್ಕೂ ಹೆಚ್ಚು ಸಾಂಸ್ಕೃತಿಕ, ಭಾಷಾ ಮತ್ತು ಕಲಾ ಆಸಕ್ತರು, ಇತರರು ಭಾಗವಹಿಸಲಿದ್ದಾರೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಪಂಕಜ್ ಅಡ್ವಾಣಿ ಅವರಿಗೆ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ 2024 ಕಿರೀಟ – ಪ್ರಧಾನಮಂತ್ರಿ ಮೆಚ್ಚುಗೆ

ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್ 2024ರ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ ಅವರನ್ನು  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿ, ಇದು …