ಮೀಡಿಯಾ & ಎಂಟರ್ಟೈನ್ಮೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಇಎಐ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ, ಸಂಚಲನ ಮೂಡಿಸುವ ಡಬ್ಲ್ಯು.ಎ.ಎಂ ಯನ್ನು (ವೇವ್ಸ್ ಅನಿಮೆ & ಮಾಂಗಾ ಸ್ಪರ್ಧೆ) ಯಶಸ್ವಿಯಾಗಿ ಆಯೋಜಿಸಿದ್ದು, 2024 ರ ನವೆಂಬರ್ 30 ರಂದು ದಿಲ್ಲಿಯಲ್ಲಿ ನಡೆಯಿತು. ದಿಲ್ಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ನಲ್ಲಿ ನಡೆದ, ಡಬ್ಲ್ಯುಎಎಂನ ಈ ಇತ್ತೀಚಿನ ಕಂತು ಉತ್ಸಾಹಭರಿತ ಜನಸಮೂಹವನ್ನು ಆಕರ್ಷಿಸಿತು ಮತ್ತು ಭಾರತದ ಮಾಂಗಾ, ಅನಿಮೆ ಮತ್ತು ವೆಬ್ಟೂನ್ ಸೃಷ್ಟಿಕರ್ತರ ಅಪಾರ ಸೃಜನಶೀಲ ಸಾಮರ್ಥ್ಯವನ್ನು ಅನಾವರಣಗೊಳಿಸಿತು. ಗುವಾಹಟಿ, ಕೋಲ್ಕತಾ, ಭುವನೇಶ್ವರ ಮತ್ತು ವಾರಣಾಸಿಯಲ್ಲಿ ತನ್ನ ಯಶಸ್ಸನ್ನು ಆಧರಿಸಿ, ವಾಮ್! ದಿಲ್ಲಿಯಲ್ಲಿ ಸ್ಪರ್ಧೆಯನ್ನು ಆಯೋಜಿಸಿದ್ದು, ಮಾಂಗಾ (ಜಪಾನೀಸ್ ಶೈಲಿಯ ಕಾಮಿಕ್ಸ್), ವೆಬ್ಟೂನ್ (ಡಿಜಿಟಲ್ ಕಾಮಿಕ್ಸ್) ಮತ್ತು ಅನಿಮೆ (ಜಪಾನೀ ಶೈಲಿಯ ಅನಿಮೇಷನ್) ಸೇರಿದಂತೆ ಈ ವಿಭಾಗಗಳಲ್ಲಿ 199 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ 28 ಮಂದಿ ರೋಮಾಂಚಕ ಕಾಸ್ಪ್ಲೇ (ವೇಷ ಭೂಷಣ ಸ್ಪರ್ಧೆ) ಮತ್ತು ಧ್ವನಿ ನಟನಾ ಸ್ಪರ್ಧಿಗಳು ಭಾಗವಹಿಸಿದ್ದರು. ಆ ಮೂಲಕ ಪ್ರೀತಿಯ ಅನಿಮೆ ಮತ್ತು ಗೇಮಿಂಗ್ ಪಾತ್ರಗಳಿಗೆ ಜೀವ ತುಂಬಿದರು. ಈ ಕಾರ್ಯಕ್ರಮದಲ್ಲಿ ವಿಯೆಟ್ನಾಂ ನಟಿ, ನಿರ್ದೇಶಕಿ ಮತ್ತು ನಿರ್ಮಾಪಕಿ ಮೈ ಥು ಹುಯೆನ್, ಅಮೆರಿಕನ್-ವಿಯೆಟ್ನಾಂ ನಿರ್ಮಾಪಕಿ ಮತ್ತು ನಟಿ ಜಾಕ್ವೆಲಿನ್ ಥಾವೊ ನ್ಗುಯೆನ್, ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಸುಶೀಲ್ ಕುಮಾರ್ ಭಾಸಿನ್ ಮತ್ತು ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಅಸೋಸಿಯೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ಕಮಲ್ ಪಹುಜಾ ಉಪಸ್ಥಿತರಿದ್ದರು. …
Read More »