ಇಂಡೊ-ಟಿಬೆಟ್ ಗಡಿ ಪೊಲೀಸ್(ITBP)ರೈಸಿಂಗ್ ದಿನದ ಸಂದರ್ಭದಲ್ಲಿ ಐಟಿಬಿಪಿ ಹಿಮವೀರರು ಮತ್ತು ಅವರ ಕುಟುಂಬಸ್ಥರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ, ಇಂಡೊ-ಟಿಬೆಟ್ ಗಡಿ ಪೊಲೀಸರು ಶೌರ್ಯ ಮತ್ತು ಸಮರ್ಪಣೆಯ ಸಂಕೇತ ಎಂದು ಬಣ್ಣಿಸಿದ್ದಾರೆ. ನೈಸರ್ಗಿಕ ವಿಕೋಪಗಳು ಮತ್ತು ರಕ್ಷಣಾ ಕಾರ್ಯಾಚರಣೆ ಸಮಯದಲ್ಲಿ ಅವರ ಪ್ರಯತ್ನಗಳು ಶ್ಲಾಘನೀಯವಾಗಿದ್ದು, ಜನರಲ್ಲಿ ಅಪಾರ ಹೆಮ್ಮೆಯನ್ನು ತರುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನ ಮಂತ್ರಿಗಳು:
“ಐಟಿಬಿಪಿ ಹಿಮವೀರರು ಮತ್ತು ಅವರ ಕುಟುಂಬಗಳಿಗೆ ರೈಸಿಂಗ್ ಡೇ ಪ್ರಯುಕ್ತ ಶುಭಾಶಯಗಳು. ಈ ಪಡೆ ಶೌರ್ಯ ಮತ್ತು ಸಮರ್ಪಣೆಯ ಸಂಕೇತವಾಗಿ ಎತ್ತರದ ಸ್ಥಾನದಲ್ಲಿದೆ. ಕೆಲವು ಅತ್ಯಂತ ಸವಾಲಿನ ಭೂಪ್ರದೇಶಗಳು ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳನ್ನು ಒಳಗೊಂಡಂತೆ ಅವರು ನಾಗರಿಕರನ್ನು ರಕ್ಷಿಸುತ್ತಾರೆ. ನೈಸರ್ಗಿಕ ವಿಪತ್ತುಗಳು ಮತ್ತು ರಕ್ಷಣಾ ಕಾರ್ಯಾಚರಣೆಗಳ ಸಮಯದಲ್ಲಿ ಅವರ ಪ್ರಯತ್ನಗಳು ಜನರಲ್ಲಿ ಅಪಾರ ಹೆಮ್ಮೆಯನ್ನು ಉಂಟುಮಾಡುತ್ತವೆ” ಎಂದು ಬರೆದಿದ್ದಾರೆ.
@ITBP_official”