मंगलवार, नवंबर 26 2024 | 02:08:59 PM
Breaking News
Home / Choose Language / kannada / ಸಂಪರ್ಕ ಒದಗಿಸಲು, ಪ್ರಯಾಣ ಸುಗಮವಾಗಿಸಲು, ಸಾಗಣೆ ವೆಚ್ಚ ಕಡಿಮೆ ಮಾಡಲು, ತೈಲ ಆಮದುಗಳನ್ನು ಕಡಿತಗೊಳಿಸಲು ಮತ್ತು ಇಂಗಾಲಾಮ್ಲ ಹೊರಸೂಸುವಿಕೆ ತಗ್ಗಿಸಲು ಭಾರತೀಯ ರೈಲ್ವೆಯ ಮೂರು ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೆ ಸಂಪುಟದ ಅನುಮೋದನೆ

ಸಂಪರ್ಕ ಒದಗಿಸಲು, ಪ್ರಯಾಣ ಸುಗಮವಾಗಿಸಲು, ಸಾಗಣೆ ವೆಚ್ಚ ಕಡಿಮೆ ಮಾಡಲು, ತೈಲ ಆಮದುಗಳನ್ನು ಕಡಿತಗೊಳಿಸಲು ಮತ್ತು ಇಂಗಾಲಾಮ್ಲ ಹೊರಸೂಸುವಿಕೆ ತಗ್ಗಿಸಲು ಭಾರತೀಯ ರೈಲ್ವೆಯ ಮೂರು ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೆ ಸಂಪುಟದ ಅನುಮೋದನೆ

Follow us on:

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಇಂದು ರೈಲ್ವೆ ಸಚಿವಾಲಯದ ಒಟ್ಟು ರೂ.7,927 ಕೋಟಿ (ಅಂದಾಜು) ವೆಚ್ಚದ ಮೂರು ಯೋಜನೆಗಳಿಗೆ ಅನುಮೋದನೆ ನೀಡಿದೆ.

ಈ ಯೋಜನೆಗಳೆಂದರೆ:
i.             ಜಲಗಾಂವ್ – ಮನ್ಮಾಡ್ 4 ನೇ ಮಾರ್ಗ (160 ಕಿಮೀ)
ii.           ಭೂಸಾವಲ್ – ಖಾಂಡ್ವಾ 3ನೇ ಮತ್ತು 4ನೇ ಮಾರ್ಗ (131 ಕಿಮೀ)
iii.         ಪ್ರಯಾಗ್ರಾಜ್ (ಇರದತ್ ಗಂಜ್) – ಮಾಣಿಕ್ ಪುರ್ 3 ನೇ ಮಾರ್ಗ (84 ಕಿಮೀ)

ಮುಂಬೈ ಮತ್ತು ಪ್ರಯಾಗ್ರಾಜ್ ನಡುವಿನ ಅತ್ಯಂತ ಜನನಿಬಿಡ ವಿಭಾಗಗಳಲ್ಲಿ ಪ್ರಸ್ತಾವಿತ ಬಹು- ಹಳಿ ಯೋಜನೆಗಳು ಕಾರ್ಯಾಚರಣೆಯನ್ನು ಸುಗಮಗೊಳಿಸುತ್ತದೆ ಮತ್ತು ದಟ್ಟಣೆಯನ್ನು ಕಡಿಮೆ ಮಾಡುತ್ತಾ ಹೆಚ್ಚು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಯನ್ನು ಒದಗಿಸಲಿದೆ.

ಈ ಯೋಜನೆಗಳು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನವಭಾರತದ ದೂರದೃಷ್ಟಿಯ ಸಾಕಾರಕ್ಕೆ ಅನುಗುಣವಾಗಿದ್ದು, ಇದು ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ ಅವರ ಉದ್ಯೋಗ/ಸ್ವಯಂ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತಾ ಈ ಭಾಗದ ಜನರನ್ನು ಸ್ವಾವಲಂಬಿಗಳನ್ನಾಗಿಸುತ್ತದೆ.

ಬಹು-ಮಾದರಿ ಸಂಪರ್ಕಕ್ಕಾಗಿನ ಪ್ರಧಾನಮಂತ್ರಿ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಫಲವಾಗಿ ಈ ಯೋಜನೆಗಳು ರೂಪುಗೊಂಡಿದ್ದು, ಸಮಗ್ರ ಯೋಜನೆಯ ಮೂಲಕ ಸಾಧ್ಯವಾಗಿದೆ. ಇವು ಜನರು, ಸರಕು ಮತ್ತು ಸೇವೆಗಳ ಸಂಚಾರ/ಸಾಗಾಟಕ್ಕೆ ತಡೆರಹಿತ ಸಂಪರ್ಕವನ್ನು ಒದಗಿಸಲಿದೆ.

ಮೂರು ರಾಜ್ಯಗಳಲ್ಲಿ ಅಂದರೆ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಏಳು ಜಿಲ್ಲೆಗಳಲ್ಲಿ  ಈ ಮೂರು ಯೋಜನೆಗಳಿಂದಾಗಿ ಭಾರತೀಯ ರೈಲ್ವೆಯ ಪ್ರಸ್ತುತದ ಜಾಲ ಸುಮಾರು 639 ಕಿಮೀಗಳಷ್ಟು ಹೆಚ್ಚಾಗಲಿದೆ. ಪ್ರಸ್ತಾವಿತ ಬಹು-ಟ್ರ್ಯಾಕಿಂಗ್ ಯೋಜನೆಗಳು ಎರಡು ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ (ಖಾಂಡ್ವಾ ಮತ್ತು ಚಿತ್ರಕೂಟ) ಸಂಪರ್ಕವನ್ನು ವೃದ್ಧಿಸುತ್ತಾ ಸುಮಾರು 1,319 ಗ್ರಾಮಗಳ ಸುಮಾರು 38 ಲಕ್ಷ ಜನರಿಗೆ ಸೇವೆ ಒದಗಿಸಲಿದೆ.

ಪ್ರಸ್ತಾವಿತ ಯೋಜನೆಗಳು ಮುಂಬೈ-ಪ್ರಯಾಗ್ರಾಜ್-ವಾರಾಣಸಿ ಮಾರ್ಗದಲ್ಲಿ ಹೆಚ್ಚುವರಿ ಪ್ರಯಾಣಿಕ ರೈಲುಗಳ ಕಾರ್ಯಾಚರಣೆ ಮೂಲಕ ಸಂಪರ್ಕವನ್ನು ಹೆಚ್ಚಿಸಲಿದ್ದು, ನಾಸಿಕ್ (ತ್ರಯಂಬಕೇಶ್ವರ), ಖಾಂಡ್ವಾ (ಓಂಕಾರೇಶ್ವರ), ಮತ್ತು ವಾರಾಣಸಿ (ಕಾಶಿ ವಿಶ್ವನಾಥ) ಗಳಲ್ಲಿರುವ ಜ್ಯೋತಿರ್ಲಿಂಗಗಳಿಗೆ ಜೊತೆಗೆ ಪ್ರಯಾಗರಾಜ್, ಚಿತ್ರಕೂಟ, ಗಯಾ ಮತ್ತು ಶಿರಡಿಗೆ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಅಲ್ಲದೇ, ಈ ಯೋಜನೆಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಖಜುರಾಹೊ, ಅಜಂತಾ ಮತ್ತು ಎಲ್ಲೋರಾ ಗುಹೆಗಳ ಜೊತೆಗೆ ದೇವಗಿರಿ ಕೋಟೆ, ಅಸಿರ್ಗಢ್ ಕೋಟೆ, ರೇವಾ ಕೋಟೆ, ಯಾವಲ್ ವನ್ಯಜೀವಿ ಅಭಯಾರಣ್ಯ, ಕಿಯೋತಿ ಜಲಪಾತಗಳು ಮತ್ತು ಪೂರ್ವಾ ಜಲಪಾತಗಳಂತಹ ವಿವಿಧ ಪ್ರವಾಸಿಗರ ಆಕರ್ಷಣೆಯ ಪ್ರದೇಶಗಳಿಗೆ ಸುಧಾರಿತ ಸಂಪರ್ಕದ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.

ಕೃಷಿ ಉತ್ಪನ್ನಗಳು, ರಸಗೊಬ್ಬರ, ಕಲ್ಲಿದ್ದಲು, ಉಕ್ಕು, ಸಿಮೆಂಟ್, ಕಂಟೈನರ್ಗಳಂತಹ ಸರಕುಗಳ ಸಾಗಣೆಗೆ ಇವು ಅತ್ಯಗತ್ಯ ಮಾರ್ಗಗಳಾಗಿವೆ. ಸಾಮರ್ಥ್ಯ ವರ್ಧನೆಯ ಕಾರ್ಯಗಳಿಂದಾಗಿ ಹೆಚ್ಚುವರಿಯಾಗಿ 51 ಎಂಟಿಪಿಎ (ವಾರ್ಷಿಕ ದಶಲಕ್ಷ ಟನ್) ಸರಕು ಸಾಗಣೆಗೆ ಸಾಧ್ಯವಾಗಲಿದೆ. ರೈಲ್ವೆಯು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷ ಸಾರಿಗೆ ವಿಧಾನವಾಗಿದ್ದು, ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಸಾಗಣೆ ವೆಚ್ಚವನ್ನು ಕಡಿಮೆ ಮಾಡಲು ಜೊತೆಗೆ 11 ಕೋಟಿ ಮರಗಳಿಗೆ ಸಮನಾದ 271 ಕೋಟಿ ಕೆಜಿ ಇಂಗಾಲಾಮ್ಲ ಹೊರಸೂಸುವಿಕೆ ತಗ್ಗಿಸಲು ಸಾಧ್ಯವಾಗಲಿದೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಅಟಲ್ ಇನ್ನೋವೇಶನ್ ಮಿಷನ್‌ನ ಮುಂದುವರಿಕೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ನೀತಿ ಆಯೋಗದ ಅಧೀನದಲ್ಲಿ ತನ್ನ ಪ್ರಮುಖ …