सोमवार, दिसंबर 23 2024 | 02:33:57 AM
Breaking News
Home / अन्य समाचार / ಐ ಎಫ್‌ ಎಫ್‌ ಐ 2024ರಲ್ಲಿ ಫಿಲ್ಮ್ ಬಜಾರ್ ವೀಕ್ಷಣಾ ಕೊಠಡಿಯಲ್ಲಿ 208 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು

ಐ ಎಫ್‌ ಎಫ್‌ ಐ 2024ರಲ್ಲಿ ಫಿಲ್ಮ್ ಬಜಾರ್ ವೀಕ್ಷಣಾ ಕೊಠಡಿಯಲ್ಲಿ 208 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು

Follow us on:

ಭಾರತದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಈ ವರ್ಷದ ನವೆಂಬರ್ 20 ರಿಂದ 28 ರವರೆಗೆ ಗೋವಾದ ಸಾಂಸ್ಕೃತಿಕ ಭೂದೃಶ್ಯವನ್ನು ಪ್ರದರ್ಶಿಸಲು ಸಜ್ಜಾಗಿದೆ. ಹೆಚ್ಚುವರಿಯಾಗಿ, ಫಿಲ್ಮ್ ಬಜಾರ್‌ ನ 18ನೇ ಆವೃತ್ತಿಯು ನವೆಂಬರ್ 20 ರಿಂದ 24 ರವರೆಗೆ ನಡೆಯುತ್ತದೆ, ಇದು ಚಲನಚಿತ್ರ ನಿರ್ಮಾತೃಗಳು ಮತ್ತು ಉದ್ಯಮದ ವೃತ್ತಿಪರರಿಗೆ ಪರಸ್ಪರ ಸಂಪರ್ಕ ಸಾಧಿಸಲು, ಸಹಯೋಗ ಸಾಧಿಸಲು ಮತ್ತು ತಮ್ಮ ಕೆಲಸವನ್ನು ಪ್ರದರ್ಶಿಸಲು ಕ್ರಿಯಾತ್ಮಕ ವೇದಿಕೆಯನ್ನು ಒದಗಿಸುತ್ತದೆ.

ಈ ವರ್ಷ, ವೀಕ್ಷಣಾ ಕೊಠಡಿಯು (Viewing Room) ಮ್ಯಾರಿಯೊಟ್ ರೆಸಾರ್ಟ್‌ ಗೆ ಮರಳಿದೆ,  ಇದು ಭಾರತ ಮತ್ತು ದಕ್ಷಿಣ ಏಷ್ಯಾದ ಉತ್ತಮ ಗುಣಮಟ್ಟದ ಚಲನಚಿತ್ರಗಳ ಸಮೃದ್ಧ ಶ್ರೇಣಿಯನ್ನು ಒಳಗೊಂಡಿದೆ. ವಿತರಣೆ ಮತ್ತು ಹಣಕಾಸು ಬಯಸುವ ಚಲನಚಿತ್ರ ನಿರ್ಮಾಪಕರಿಗೆ ನಿರ್ಣಾಯಕ ಕೇಂದ್ರವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ, ವೀಕ್ಷಣಾ ಕೊಠಡಿಯು ಸಂಪೂರ್ಣವಾಗಿರುವ ಅಥವಾ ನಿರ್ಮಾಣದ ಹಂತದಲ್ಲಿರುವ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ, ಇದು ಜಾಗತಿಕ ಚಲನಚಿತ್ರ ಪ್ರೋಗ್ರಾಮರ್‌ ಗಳು, ವಿತರಕರು, ಮಾರಾಟ ಏಜೆಂಟರು ಮತ್ತು ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. ವೀಕ್ಷಣಾ ಕೊಠಡಿಯನ್ನು ನವೆಂಬರ್ 21 ರಿಂದ 24 ರವರೆಗೆ ಪ್ರವೇಶಿಸಬಹುದಾಗಿದೆ.

ಈ ವರ್ಷದ ವೀಕ್ಷಣಾ ಕೊಠಡಿ ಲೈಬ್ರರಿಯಲ್ಲಿ 208 ಚಲನಚಿತ್ರಗಳು ವೀಕ್ಷಣೆಗೆ ಲಭ್ಯವಿರುತ್ತವೆ ಅದರಲ್ಲಿ 145 ಚಲನಚಿತ್ರಗಳು, 23 ಮಧ್ಯಮ-ಉದ್ದದ ಚಲನಚಿತ್ರಗಳು, 30 ಕಿರುಚಿತ್ರಗಳು. ಫೀಚರ್‌ ಫಿಲ್ಮ್‌ ಮತ್ತು ಮಧ್ಯಮ-ಉದ್ದದ ಚಲನಚಿತ್ರಗಳ ಒಟ್ಟಾರೆ ಪಟ್ಟಿಯು ಎನ್‌ ಎಫ್‌ ಡಿ ಸಿ ನಿರ್ಮಾಣ ಮತ್ತು ಸಹ-ನಿರ್ಮಾಣದ ಹನ್ನೆರಡು ಚಲನಚಿತ್ರಗಳನ್ನು ಮತ್ತು ಎನ್‌ ಎಫ್‌ ಡಿ ಸಿ-ಎನ್‌ ಎಫ್‌ ಎ ಐ ನ 10 ಮರುಸ್ಥಾಪಿಸಲಾದ ಕ್ಲಾಸಿಕ್‌ ಗಳನ್ನು ಒಳಗೊಂಡಿದೆ. ವೀಕ್ಷಣಾ ಕೊಠಡಿ ವಿಭಾಗಲ್ಲೆ ಸಲ್ಲಿಸಲಾದ 30-70 ನಿಮಿಷಗಳ ಅವಧಿಯ ಚಲನಚಿತ್ರಗಳನ್ನು ಮಧ್ಯಮ-ಅವಧಿಯ ಚಲನಚಿತ್ರಗಳು ಎಂಬ ವರ್ಗದಲ್ಲಿ ತೋರಿಸಲಾಗುತ್ತದೆ. 30 ನಿಮಿಷಗಳಿಗಿಂತ ಕಡಿಮೆ ಅವಧಿಯ ಚಲನಚಿತ್ರಗಳು ಕಿರುಚಿತ್ರ ವಿಭಾಗದಲ್ಲಿರುತ್ತವೆ.

ಫಿಲ್ಮ್ ಬಜಾರ್ ಶಿಫಾರಸುಗಳು (ಎಫ್‌ ಬಿ ಆರ್)

ಫಿಲ್ಮ್ ಬಜಾರ್ ಶಿಫಾರಸುಗಳ (ಎಫ್‌ ಬಿ ಆರ್) ಪಟ್ಟಿಯು 27 ಯೋಜನೆಗಳನ್ನು ಒಳಗೊಂಡಿದೆ, ಇದರಲ್ಲಿ 19 ಚಲನಚಿತ್ರಗಳು, 3 ಮಧ್ಯಮ-ಅವಧಿಯ ಚಲನಚಿತ್ರಗಳು, 2 ಕಿರುಚಿತ್ರಗಳು ಮತ್ತು 3 ಪುನಃಸ್ಥಾಪಿಸಲಾದ ಕ್ಲಾಸಿಕ್‌ ಗಳು ಸೇರಿವೆ.

ಎನ್‌ ಎಫ್‌ ಡಿ ಸಿ ಯ ವ್ಯವಸ್ಥಾಪಕ ನಿರ್ದೇಶಕ ಪೃಥುಲ್ ಕುಮಾರ್‌ “ಈ ಉಪಕ್ರಮವು ಚಲನಚಿತ್ರ ನಿರ್ಮಾತೃಗಳ ಸೃಜನಶೀಲತೆ ಮತ್ತು ಉತ್ಸಾಹವನ್ನು ಆಚರಿಸುತ್ತದೆ, ಇದು ಕಥೆಗಾರರಿಗೆ ಅವರ ದೃಷ್ಟಿಯನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ. ನಾವು ಚಲನಚಿತ್ರದ ಪರಿವರ್ತಕ ಶಕ್ತಿಯನ್ನು ನಂಬುತ್ತೇವೆ ಮತ್ತು ಮುಂದಿನ ಪೀಳಿಗೆಯ ಕಲಾವಿದರನ್ನು ಪ್ರೇರೇಪಿಸಲು ಮತ್ತು ಮನರಂಜನೆಗಾಗಿ ಬೆಂಬಲಿಸಲು ಬದ್ಧರಾಗಿದ್ದೇವೆ” ಎಂದು ಹೇಳುತ್ತಾರೆ.

ಎಫ್‌ ಬಿ ಆರ್‌ ನಿಂದ ಆಯ್ದ ಪ್ರಾಜೆಕ್ಟ್‌ ಗಳು ತಮ್ಮ ಚಲನಚಿತ್ರಗಳನ್ನು ನಿರ್ಮಾಪಕರು, ಮಾರಾಟ ಏಜೆಂಟರು, ವಿತರಕರು, ಉತ್ಸವದ ಪ್ರೋಗ್ರಾಮರ್‌ ಗಳು ಮತ್ತು ಸಂಭಾವ್ಯ ಹೂಡಿಕೆದಾರರು ಸೇರಿದಂತೆ ಫಿಲ್ಮ್ ಬಜಾರ್‌ ನಲ್ಲಿ ಓಪನ್ ಪಿಚಿಂಗ್ ಅಧಿವೇಶನದಲ್ಲಿ ತಮ್ಮ ಚಲನಚಿತ್ರಗಳನ್ನು ಪ್ರಸ್ತುತಪಡಿಸುವ ಅವಕಾಶವನ್ನು ಹೊಂದಿರುತ್ತಾರೆ. ವೀಕ್ಷಣಾ ಕೊಠಡಿಯಿಂದ ಫೀಚರ್, ಮಧ್ಯಮ-ಉದ್ದ ಮತ್ತು ಕಿರುಚಿತ್ರ ನಿರ್ಮಾಪಕರ ಎಫ್‌ ಬಿ ಆರ್‌ ವಿಭಾಗಕ್ಕೆ ಆಯ್ಕೆ ಮಾಡಲಾದ ಈ ಯೋಜನೆಗಳು ಗೋವಾದಲ್ಲಿ ಫಿಲ್ಮ್ ಬಜಾರ್‌ನಲ್ಲಿ ಓಪನ್‌ ಪಿಚಿಂಗ್ ಅಧಿವೇಶನದಲ್ಲಿ ನಿರ್ಮಾಪಕರು, ಮಾರಾಟ ಏಜೆಂಟ್‌ಗಳು, ವಿತರಕರು, ಉತ್ಸವದ ಪ್ರೋಗ್ರಾಮರ್‌ ಗಳು ಮತ್ತು ಸಂಭಾವ್ಯ ಹೂಡಿಕೆದಾರರಿಗೆ ತಮ್ಮ ಚಲನಚಿತ್ರಗಳನ್ನು ಪ್ರಸ್ತುತಪಡಿಸುತ್ತವೆ. ಚಲನಚಿತ್ರಗಳ ಸಂಪೂರ್ಣ ಪಟ್ಟಿಯನ್ನು here ಇಲ್ಲಿ ಹುಡುಕಿ.

* ಎಫ್‌ ಬಿ ಆರ್‌ ಪಟ್ಟಿ ಅಥವಾ ವೀಕ್ಷಣಾ ಕೊಠಡಿಯ ಚಲನಚಿತ್ರಗಳು ತಮ್ಮ ಕ್ರೆಡಿಟ್‌ ಗಳು ಅಥವಾ ಪ್ರಚಾರ ಸಾಮಗ್ರಿಗಳಲ್ಲಿ ಫಿಲ್ಮ್ ಬಜಾರ್ ಲೋಗೋವನ್ನು ಬಳಸಲು ಅನುಮತಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ಫಿಲ್ಮ್ ಬಜಾರ್ ಬಗ್ಗೆ

ಫಿಲ್ಮ್ ಬಜಾರ್ ದಕ್ಷಿಣ ಏಷ್ಯಾದ ಚಲನಚಿತ್ರಗಳನ್ನು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾರುಕಟ್ಟೆಗೆ ಪ್ರಚಾರ ಮಾಡುವ ಗುರಿಯನ್ನು ಹೊಂದಿರುವ ಬಿ2ಬಿ ವೇದಿಕೆಯಾಗಿದೆ. ಫಿಲ್ಮ್ ಬಜಾರ್‌ ನಲ್ಲಿರುವ ವೀಕ್ಷಣಾ ಕೊಠಡಿಯು ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರವನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು, ವಿಶ್ವ ಮಾರಾಟ ಏಜೆಂಟರು ಮತ್ತು ಖರೀದಿದಾರರಿಗೆ ಪ್ರತ್ಯೇಕವಾಗಿ ಪ್ರಚಾರ ಮಾಡಲು ಒದಗಿಸಲಾದ ಪಾವತಿಸಿದ ವೇದಿಕೆಯಾಗಿದೆ.

ವೀಕ್ಷಣಾ ಕೊಠಡಿಯು ಮಾರಾಟಗಾರರನ್ನು (ಚಲನಚಿತ್ರ ನಿರ್ಮಾಪಕರು) ಪ್ರಪಂಚದಾದ್ಯಂತದ ಖರೀದಿದಾರರೊಂದಿಗೆ (ಚಲನಚಿತ್ರ ಪ್ರೋಗ್ರಾಮರ್‌ ಗಳು, ವಿತರಕರು, ವಿಶ್ವ ಮಾರಾಟ ಏಜೆಂಟರು ಮತ್ತು ಹೂಡಿಕೆದಾರರು) ಸಂಪರ್ಕಿಸುವ ನಿರ್ಬಂಧಿತ ವಲಯವಾಗಿದೆ. ‘ಖರೀದಿದಾರರನ್ನು’ ಅವರ ಪ್ರೊಫೈಲ್‌ ಗಳ ಆಧಾರದ ಮೇಲೆ ಫಿಲ್ಮ್ ಬಜಾರ್ ತಂಡವು ಪರಿಶೀಲಿಸುತ್ತದೆ. ಖರೀದಿದಾರರು ಚಲನಚಿತ್ರಗಳ ಕುರಿತು ವಿವರಗಳನ್ನು ಪ್ರವೇಶಿಸಲು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ವೀಕ್ಷಣಾ ಕೊಠಡಿ ಸಾಫ್ಟ್‌ವೇರ್ ಮೂಲಕ ಚಲನಚಿತ್ರ ನಿರ್ಮಾಪಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ઇન્સ્ટિટ્યૂટ ઓફ એરોસ્પેસ મેડિસિન ઇન્ડિયન સોસાયટી ઓફ એરોસ્પેસ મેડિસિન (આઇએસએએમ)ની 63મી વાર્ષિક પરિષદનું આયોજન કરશે

ઇન્ડિયન સોસાયટી ઓફ એરોસ્પેસ મેડિસિન (આઇએસએએમ) 05થી 07 ડિસેમ્બર 2024 દરમિયાન ઇન્સ્ટિટ્યૂટ ઓફ એરોસ્પેસ મેડિસિન (આઇએએમ), …