गुरुवार, दिसंबर 19 2024 | 07:36:15 PM
Breaking News
Home / अन्य समाचार / ಬೆಂಗಳೂರಿನ ಭಾರತೀಯ ಮಾನಕ ಬ್ಯೂರೋ (ಬಿಐಎಸ್) ನಿಂದ ರಾಷ್ಟ್ರೀಯ ಪತ್ರಿಕಾ ದಿನ 2024 ಆಚರಣೆ

ಬೆಂಗಳೂರಿನ ಭಾರತೀಯ ಮಾನಕ ಬ್ಯೂರೋ (ಬಿಐಎಸ್) ನಿಂದ ರಾಷ್ಟ್ರೀಯ ಪತ್ರಿಕಾ ದಿನ 2024 ಆಚರಣೆ

Follow us on:

ಬೆಂಗಳೂರಿನ ಭಾರತೀಯ ಮಾನಕ ಬ್ಯೂರೋ (ಬಿಐಎಸ್) ಇಂದು ರಾಷ್ಟ್ರೀಯ ಪತ್ರಿಕಾ ದಿನ 2024 ಅನ್ನು ದೂರದರ್ಶನ, ಆಕಾಶವಾಣಿ, ಇಂಡಿಯನ್ ಎಕ್ಸ್‌ಪ್ರೆಸ್ ಪ್ರಾದೇಶಿಕ ಮತ್ತು ಇತರ ಪ್ರಮುಖ ಮಾಧ್ಯಮ ಸಂಸ್ಥೆಗಳೊಂದಿಗೆ ಮಾಧ್ಯಮ ವೃತ್ತಿಪರರನ್ನು ಒಟ್ಟುಗೂಡಿಸುವ ಆಕರ್ಷಕ ಕಾರ್ಯಕ್ರಮ ಏರ್ಪಡಿಸಿತ್ತು. ಸಮಾಜದಲ್ಲಿ ಮಾಧ್ಯಮದ ನಿರ್ಣಾಯಕ ಪಾತ್ರವನ್ನು ಗೌರವಿಸಲು ನಡೆದ ಈ ಕಾರ್ಯಕ್ರಮದಲ್ಲಿ, ಪ್ರೆಸ್ ಕ್ಲಬ್ ಸದಸ್ಯರು, ಪತ್ರಕರ್ತರು ಮತ್ತು ವರದಿಗಾರರು ಸೇರಿದಂತೆ 13 ಪ್ರಮುಖರು ಪಾಲ್ಗೊಂಡಿದ್ದರು.

ಗುಣಮಟ್ಟದ ಮಾನದಂಡಗಳು ಮತ್ತು ಗ್ರಾಹಕರ ರಕ್ಷಣೆ, ಸುರಕ್ಷತೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಮೇಲೆ ಅವುಗಳ ಪ್ರಭಾವದ ಬಗ್ಗೆ ಜಾಗೃತಿಯನ್ನು ಉತ್ತೇಜಿಸುವಲ್ಲಿ ಮಾಧ್ಯಮದ ಪ್ರಮುಖ ಪಾತ್ರದ ಬಗ್ಗೆ ಒತ್ತಿ ಹೇಳಲಾಯಿತು. ಇನ್ನಷ್ಟು ಸುರಕ್ಷಿತ ಮತ್ತು ತಿಳುವಳಿಕೆಯುಳ್ಳ ಸಮಾಜವನ್ನು ರೂಪಿಸುವಲ್ಲಿ ಮಾಧ್ಯಮ ಮತ್ತು ಗುಣಮಟ್ಟದ ಮಾನದಂಡಗಳ ನಡುವಿನ ಕೊಂಡಿಯ ಬಗ್ಗೆ ಚರ್ಚಿಸಲು ಈ ಕಾರ್ಯಕ್ರಮ ಪ್ರಮುಖ ವೇದಿಕೆಯಾಗಿತ್ತು.

ಬಿಐಎಸ್ ಬೆಂಗಳೂರಿನ ನಿರ್ದೇಶಕರು ಮತ್ತು ಮುಖ್ಯಸ್ಥರಾದ ವಿಜ್ಞಾನಿ ಶ್ರೀ ವಿಜಯವೀರನ್ ಕೆ ಅವರು ಬಿಐಎಸ್‌ನ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಗುಣಮಟ್ಟದ ಮಾನದಂಡಗಳನ್ನು ಹೊಂದಿಸುವಲ್ಲಿ ಮತ್ತು ಖಾತರಿಪಡಿಸುವಲ್ಲಿ ಬ್ಯೂರೋದ ಪಾತ್ರದ ಬಗ್ಗೆ ಅವರು ತಿಳಿಸಿದರು. ಅವರು ಬಿಐಎಸ್-ಪ್ರಮಾಣೀಕೃತ ಉತ್ಪನ್ನಗಳು ಮತ್ತು ಸೇವೆಗಳ ಮಾಹಿತಿಯನ್ನು ಲಭ್ಯವಾಗಿಸಲು ಗ್ರಾಹಕರಿಗೆ ಬಳಕೆದಾರ ಸ್ನೇಹಿ ವೇದಿಕೆಯಾದ ಬಿಐಎಸ್ ಕೇರ್ ಅಪ್ಲಿಕೇಶನ್ ಅನ್ನು ಪರಿಚಯಿಸಿದರು.

ಮಾಜಿ ವಿಜ್ಞಾನಿ  ಹಾಗೂ ಹಿರಿಯ ನಿರ್ದೇಶಕರಾದ ಶ್ರೀ ಎಸ್.ಪಿ.ಹಿರೇಮಠ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಮ್ಮ ಭಾಷಣದಲ್ಲಿ ಅವರು, ಗುಣಮಟ್ಟ ಮತ್ತು ಮಾನದಂಡಗಳ ಬಗ್ಗೆ ಸಂದೇಶಗಳನ್ನು ಪ್ರಸಾರ ಮಾಡುವಲ್ಲಿ, ದೈನಂದಿನ ಜೀವನದಲ್ಲಿ ಅವುಗಳ ಮಹತ್ವದ ಬಗ್ಗೆ ಜನರಿಗೆ ಜಾಗೃತಿ ನೀಡುವಲ್ಲಿ ಮಾಧ್ಯಮದ ಹೇಗೆ ವೇಗವರ್ಧಕವಾಗಿ ಪಾತ್ರ ನಿರ್ವಹಿಸಬಹುದೆಂದು ಒತ್ತಿ ಹೇಳಿದರು. ಗುಣಮಟ್ಟವು ಸುರಕ್ಷತೆ ಮತ್ತು ರಾಷ್ಟ್ರದ ಪ್ರಗತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಆಳವಾದ ತಿಳುವಳಿಕೆಯನ್ನು ಮಾಧ್ಯಮವು ಹೇಗೆ ಪರಿಣಾಮಕಾರಿ ನೀಡಬಹುದು ಎಂಬ ಬಗ್ಗೆ ಕೂಡ ಶ್ರೀ ಹಿರೇಮಠ್ ಅವರು ಒತ್ತಿ ಹೇಳಿದರು. ಅವರು ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಚಿನ್ನ ಮತ್ತು ಬೆಳ್ಳಿ ಆಭರಣಗಳ ಹಾಲ್ ಮಾರ್ಕಿಂಗ್ ಪ್ರಕ್ರಿಯೆಯು ಹೇಗೆ ನಡೆಯಲಿದೆ ಎಂಬ ಬಗ್ಗೆ ವಿವರವಾಗಿ ತಿಳಿಸಿದರು.

ಕಾರ್ಯಕ್ರಮವು ಉತ್ಸಾಹಭರಿತ ಪ್ರಶ್ನೋತ್ತರ ಅವಧಿಯೊಂದಿಗೆ ಮುಕ್ತಾಯಗೊಂಡಿತು. ಬಿಐಎಸ್‌ನ ಉಪಕ್ರಮಗಳು ಹಾಗೂ ಗ್ರಾಹಕರ ಸುರಕ್ಷತೆ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಗುಣಮಟ್ಟದ ಮಾನದಂಡಗಳ ಪಾತ್ರದ ಕುರಿತು ಭಾಷಣಕಾರರಿಂದ ಮಾಧ್ಯಮ ಪ್ರತಿನಿಧಿಗಳು ಹೆಚ್ಚಿನ ಮಾಹಿತಿ ಪಡೆದರು.

ಗುಣಮಟ್ಟದ ಮಾನದಂಡಗಳ ಪ್ರಾಮುಖ್ಯತೆ ಮತ್ತು ದೈನಂದಿನ ಜೀವನದಲ್ಲಿ ಅವುಗಳ ನೇರ ಪ್ರಭಾವದ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸುವಲ್ಲಿ ಮಾಧ್ಯಮ ಮತ್ತು ಬಿಐಎಸ್ ನಡುವಿನ ಸಹಯೋಗದ ಪ್ರಯತ್ನವನ್ನು ಕಾರ್ಯಕ್ರಮವು ಒತ್ತಿಹೇಳಿದೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ઇન્સ્ટિટ્યૂટ ઓફ એરોસ્પેસ મેડિસિન ઇન્ડિયન સોસાયટી ઓફ એરોસ્પેસ મેડિસિન (આઇએસએએમ)ની 63મી વાર્ષિક પરિષદનું આયોજન કરશે

ઇન્ડિયન સોસાયટી ઓફ એરોસ્પેસ મેડિસિન (આઇએસએએમ) 05થી 07 ડિસેમ્બર 2024 દરમિયાન ઇન્સ્ટિટ્યૂટ ઓફ એરોસ્પેસ મેડિસિન (આઇએએમ), …