शुक्रवार, नवंबर 29 2024 | 09:43:32 AM
Breaking News
Home / Choose Language / kannada / ಕಾಶ್ಮೀರದ ರೌಫ್‌ ಡ್ಯಾನ್ಸ್ ನಿಂದ ತಮಿಳುನಾಡಿನ ಕರಕಟ್ಟಂವರೆಗೆ: 55ನೇ ಐ ಎಫ್ ಎಫ್ ಐನಲ್ಲಿ ಕೇಂದ್ರೀಯ ಸಂವಹನ ಇಲಾಖೆಯಿಂದ ಶಾಸ್ತ್ರೀಯ ಹಾಗೂ ಜಾನಪದ ಕಲಾವಿದರ ಸಮಾಗಮ

ಕಾಶ್ಮೀರದ ರೌಫ್‌ ಡ್ಯಾನ್ಸ್ ನಿಂದ ತಮಿಳುನಾಡಿನ ಕರಕಟ್ಟಂವರೆಗೆ: 55ನೇ ಐ ಎಫ್ ಎಫ್ ಐನಲ್ಲಿ ಕೇಂದ್ರೀಯ ಸಂವಹನ ಇಲಾಖೆಯಿಂದ ಶಾಸ್ತ್ರೀಯ ಹಾಗೂ ಜಾನಪದ ಕಲಾವಿದರ ಸಮಾಗಮ

Follow us on:

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದಡಿ ಬರುವ ಕೇಂದ್ರೀಯ ಸಂವಹನ ಬ್ಯೂರೋ(ಸಿಬಿಸಿ) ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೃತ್ಯ ಮತ್ತು ನಾಟಕ ವಿಭಾಗದಿಂದ ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲಾಯಿತು. ಐಎಫ್‌ ಎಫ್ ಐ 2024 ನೇಪಥ್ಯದಲ್ಲಿ ಇಫಿಪೀಸ್ಟಾದ ಭಾಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಐಎಫ್ ಎಫ್‌  55ರಲ್ಲಿ ಸಾಂಸ್ಕೃತಿಕ ಸಂಭ್ರಮವನ್ನು ತಂದ ಸಿಬಿಸಿ

ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯ ಮೂಲಕ, ಭಾರತದ ವಿವಿಧ ಪ್ರದೇಶಗಳ ಜಾನಪದ ಮತ್ತು ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಐಎಫ್ ಎಫ್ ಐ 2024 ರ ವಿವಿಧ ಸ್ಥಳಗಳಲ್ಲಿ ಪ್ರದರ್ಶಿಸಲಾಯಿತು, ಇದು ದೇಶದ ಅದ್ಭುತ ಸಂಪ್ರದಾಯಗಳು ಮತ್ತು ಕಲಾತ್ಮಕ ಪರಂಪರೆಯನ್ನು ಬಿಂಬಿಸಿತು. ಪ್ರತಿಯೊಂದು ನೃತ್ಯ ಪ್ರಕಾರವು ವಿಶಿಷ್ಟವಾದ ಕಥೆಯನ್ನು ಹೇಳುತ್ತದೆ ಮತ್ತು ಆಯಾ ಪ್ರದೇಶದ ಸ್ಥಳೀಯ ಪದ್ಧತಿಗಳು, ಆಚರಣೆಗಳು ಮತ್ತು ಆಧ್ಯಾತ್ಮಿಕತೆಯನ್ನು ಸಾಕಾರಗೊಳಿಸುತ್ತವೆ. ಇದು ಇಫಿಯಲ್ಲಿ ಚಲನಚಿತ್ರ ಅಭಿಮಾನಿಗಳಿಗೆ ಅದ್ಭುತವಾದ ದೃಶ್ಯ ಮತ್ತು ಕಲಾತ್ಮಕ ಅನುಭವವನ್ನು ನೀಡಿತು.

ದೇಶಾದ್ಯಂತದ 110 ಕ್ಕೂ ಅಧಿಕ ಪ್ರತಿಭಾವಂತ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಪ್ರಾದೇಶಿಕ ನೃತ್ಯ ಶೈಲಿಗಳ ವ್ಯಾಪಕ ಪ್ರಕಾರಗಳನ್ನು ಪ್ರತಿನಿಧಿಸುತ್ತಿದ್ದಾರೆಮ

ಗುವಾಹಟಿ, ಹೈದರಾಬಾದ್, ಭುವನೇಶ್ವರ, ಜಮ್ಮು,ಚೆನ್ನೈ, ಹಿಮಾಚಲ ಪ್ರದೇಶ, ಬೆಂಗಳೂರು, ಪುಣೆ ಮತ್ತು ದೆಹಲಿ ಸೇರಿದಂತೆ ವಿವಿಧ ಸಿಬಿಸಿ ಪ್ರಾದೇಶಿಕ ಕಚೇರಿಗಳು ಪ್ರದರ್ಶನಗಳನ್ನು ಆಯೋಜಿಸುತ್ತಿವೆ.

 ಕೆಳಗಿನ ಪ್ರದರ್ಶನಗಳನ್ನು ಪ್ರದರ್ಶಿಸಲಾಯಿತು:

  • ಅಸ್ಸಾಂನಿಂದ ಸತ್ರಿಯಾಭೋರ್ತಾಲ್ದಿಯೋಧಾನಿ ಮತ್ತು ಬಿಹು ನೃತ್ಯ –ಪ್ರಸ್ತುತಿ ಸಿಬಿಸಿ ಗುವಾಹಟಿ
  • ತೆಲಂಗಣಾದಿಂದ ಗುಸ್ಸಾಡಿ ನೃತ್ಯ – ಪ್ರಸ್ತುತಿ ಹೈದರಾಬಾದ್ ಸಿಬಿಸಿ
  • ಒಡಿಶಾದಿಂದ ಒಡಿಸ್ಸಿ – ಪ್ರಸ್ತುತಿ ಸಿಬಿಸಿ ಭುವನೇಶ್ವರ್‌
  • ಕಾಶ್ಮೀರದಿಂದ ರೌಫ್‌ – ಪ್ರಸ್ತುತಿ ಸಿಬಿಸಿ ಜಮ್ಮು ವಿಭಾಗ
  • ತಮಿಳುನಾಡಿನಿಂದ ಕರಕಟ್ಟಂ– ಪ್ರಸ್ತುತಿ ಸಿಬಿಸಿ ಚೆನ್ನೈ
  • ಕೇರಳಿಂದ ಮೋಹಿಟಿಅಟ್ಟಂ – ಪ್ರಸ್ತುತಿ ಸಿಬಿಸಿ ಕೇರಳ
  • ಹಿಮಾಚಲ ಪ್ರದೇಶದಿಂದ ಸಿರ್ಮೌರ್ ನಾಟಿದಗ್ಯಾಲಿ ಮತ್ತು ಡೀಪ್ ನೃತ್ಯ – ಪ್ರಸ್ತುತಿ ಸಿಬಿಸಿ ಹಿಮಾಚಲ ಪ್ರದೇಶ
  • ಕರ್ನಾಟಕದಿಂದ ಜೋಗತಿ ಮತ್ತು ದೀಪಂ ನೃತ್ಯ–  ಸಿಬಿಸಿ ಬೆಂಗಳೂರು ಪ್ರಸ್ತುತಿ
  • ಮಹಾರಾಷ್ಟ್ರದಿಂದ ಲಾವಣಿ ನೃತ್ಯ ಮತ್ತು ಮುಜ್ರಾ  – ಸಿಬಿಸಿ ಪುಣೆ  ಪ್ರಸ್ತುತಿ
  • ರಾಜಸ್ಥಾನದಿಂದ ಚೆರಿ ಮತ್ತು ಕಲ್ ಬೇಲಿಯಾ ನೃತ್ಯ ಮತ್ತು ಬಿಹಾರರಿಂದ ಝಿಝಿಯಾ ನೃತ್ಯ– ಸಿಬಿಸಿ ದೆಹಲಿ ಪ್ರಸ್ತುತಿ

ಸಿಬಿಸಿ ಆಯೋಜಿಸಿದ ಸಾಂಸ್ಕೃತಿಕ ಪ್ರದರ್ಶನಗಳಿಂದ ನಾವು ವರ್ಣರಂಜಿತ ಕ್ಲಿಕ್‌ಗಳನ್ನು ಸಂಗ್ರಹಿಸಿದ್ದೇವೆ. ಸಿಬಿಸಿಯ ಶಾಸ್ತ್ರೀಯ ಮತ್ತು ಜಾನಪದ ಕಲಾವಿದರ ಪ್ರದರ್ಶನಗಳನ್ನು ನೀವು ಇಲ್ಲಿ ಸ್ಕ್ರಾಲ್ ಮಾಡಬಹುದು.

ಹಲವು ಸಿಬಿಸಿ ಪ್ರಾದೇಶಿಕ ಕಚೇರಿಗಳು ಪ್ರದರ್ಶನಗಳನ್ನು ಆಯೋಜಿಸಿದ್ದವು,

ಕಾಶ್ಮೀರದಿಂದ ರೌಫ್‌– ಪ್ರಸ್ತುತಿ ಸಿಸಿಬಿ ಜಮ್ಮು ವಿಭಾಗ

 

ಒಡಿಶಾದಿಂದ ಒಡಿಸ್ಸಿ – ಪ್ರಸ್ತುತಿ ಸಿಬಿಸಿ ಭುವನೇಶ್ವರ್‌

 

ಕೇರಳದಿಂದ ಮೋಹಿಟಿಅಟ್ಟಂ – ಪ್ರಸ್ತುತಿ ಸಿಬಿಸಿ ಕೇರಳ

ಹಿಮಾಚಲ ಪ್ರದೇಶದಿಂದ ಸಿರ್ಮೌರ್ ನಾಟಿದಗ್ಯಾಲಿ ಮತ್ತು ಡೀಪ್ ನೃತ್ಯ – ಪ್ರಸ್ತುತಿ ಸಿಬಿಸಿ ಹಿಮಾಚಲ ಪ್ರದೇಶ

 

ರಾಜಸ್ಥಾನದಿಂದ ಚೆರಿ ಮತ್ತು ಕಲ್ ಬೇಲಿಯಾ ನೃತ್ಯ ಮತ್ತು ಬಿಹಾರರಿಂದ ಝಿಝಿಯಾ ನೃತ್ಯ– ಸಿಬಿಸಿ ದೆಹಲಿಪ್ರಸ್ತುತಿ

 

ಅಸ್ಸಾಂನಿಂದ ಸತ್ರಿಯಾಭೋರ್ತಾಲ್ದಿಯೋಧಾನಿ ಮತ್ತು ಬಿಹು ನೃತ್ಯ – ಸಿಬಿಸಿ ಗುವಾಹಟಿ ಪ್ರಸ್ತುತಿ

ಕರ್ನಾಟಕದಿಂದ ಜೋಗತಿ ಮತ್ತು ದೀಪಂ ನೃತ್ಯ–  ಸಿಬಿಸಿ ಬೆಂಗಳೂರು ಪ್ರಸ್ತುತಿ

ಮಹಾರಾಷ್ಟ್ರದಿಂದ ಲಾವಣಿ ನೃತ್ಯ ಮತ್ತು ಮುಜ್ರಾ  – ಸಿಬಿಸಿ ಪುಣೆ  ಪ್ರಸ್ತುತಿ

 

ತೆಲಂಗಣಾದಿಂದ ಗುಸ್ಸಾಡಿ ನೃತ್ಯ – ಹೈದರಾಬಾದ್ ಸಿಬಿಸಿ ಪ್ರಸ್ತುತಿ

ತಮಿಳುನಾಡಿನಿಂದ ಕರಕಟ್ಟಂ– ಪ್ರಸ್ತುತಿ ಸಿಬಿಸಿ ಚೆನ್ನೈ

ಇಫಿಯೆಸ್ಟಾ ಕುರಿತು:

55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ ಎಫ್ ಐ) 2024 ಗೋವಾದ ಪಣಜಿಮ್‌ನಲ್ಲಿರುವ ಚಿತ್ರ ಸದೃಶ ಕಲಾ ಅಕಾಡೆಮಿಯಲ್ಲಿ ನವೆಂಬರ್ 21 ರಿಂದ ನವೆಂಬರ್ 28 ರವರೆಗೆ ಅದ್ಭುತವಾದ ಮನರಂಜನಾ ಮಹೋತ್ಸವವಾದ ಇಫಿ ಇಸ್ಟಾವನ್ನು ಆರಂಭಿಸಿದೆ. ಚಲನಚಿತ್ರ, ಸಂಗೀತ, ಕಲೆ ಮತ್ತು ಆಹಾರದ ಜಾದೂವನ್ನು  ಸಂಭ್ರಮಿಸಲು ರೂಪಿಸಲಾದ ಈ ಉತ್ಸವವು ಸಂಸ್ಕೃತಿ ಮತ್ತು ಮನರಂಜನೆಯ ಆಕರ್ಷಕ ಸಮ್ಮಿಲನದ ಮೂಲಕ ಸಮುದಾಯಗಳನ್ನು ಒಗೂಡಿಸಿತು.

ಕಲಾ ಅಕಾಡೆಮಿ ಮತ್ತು ಸುತ್ತಮುತ್ತಲಿನ ಮನರಂಜನಾ ವಲಯ ಯುವಜನತೆಗಾಗಿ ಕೇಂದ್ರೀಕೃತವಾಗಿದೆ. ನವೆಂಬರ್ 22 ರಂದು ಇಫಿ ಇಸ್ಟಾ ಭಾಗವಾಗಿ ‘ಜರ್ನಿ ಆಫ್ ಇಂಡಿಯನ್ ಸಿನಿಮಾ’ ಸುತ್ತ ಕಾರ್ನಿವಲ್ ಪರೇಡ್ ಅನ್ನು ಸಹ ಆಯೋಜಿಸಲಾಗಿತ್ತು.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯಿಂದ ಹಲವು ರಾಜ್ಯಗಳಿಗೆ ವಿಪತ್ತು ನಿರ್ವಹಣೆ ಮತ್ತು ಸಾಮರ್ಥ್ಯವೃದ್ಧಿ ಯೋಜನೆಗಳಿಗಾಗಿ 1115.67 ಕೋಟಿ ಅನುಮೋದನೆ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯಿಂದ ಹಲವು ರಾಜ್ಯಗಳಿಗೆ …