बुधवार, जनवरी 08 2025 | 11:22:04 PM
Breaking News
Home / अन्य समाचार / ಮಹತ್ವದ ಪ್ರಾದೇಶಿಕ ಕಾನೂನು ಪರಿಶೀಲನಾ ಸಮಾಲೋಚನೆಗಾಗಿ ಎನ್ ಸಿ ಡಬ್ಲೂ ಜತೆ ಪಾಲುದಾರಿಕೆ ಮಾಡಿಕೊಂಡ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (ಆರ್ ಆರ್ ಯು)

ಮಹತ್ವದ ಪ್ರಾದೇಶಿಕ ಕಾನೂನು ಪರಿಶೀಲನಾ ಸಮಾಲೋಚನೆಗಾಗಿ ಎನ್ ಸಿ ಡಬ್ಲೂ ಜತೆ ಪಾಲುದಾರಿಕೆ ಮಾಡಿಕೊಂಡ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (ಆರ್ ಆರ್ ಯು)

Follow us on:

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದಡಿ ಬರುವ ರಾಷ್ಟ್ರೀಯ ಪ್ರಾಮುಖ್ಯತಾ ಸಂಸ್ಥೆ, ಗುಜರಾತ್ ನ ಗಾಂಧಿನಗರದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (ಆರ್ ಆರ್ ಯು) ಪ್ರಾದೇಶಿಕ ಕಾನೂನುಗಳ ಪರಿಶೀಲನಾ ಸಮಾಲೋಚನೆಗಾಗಿ ( ಪಶ್ಚಿಮ ವಲಯ) ರಾಷ್ಟ್ರೀಯ ಮಹಿಳಾ ಆಯೋಗ (ಎನ್ ಸಿಡಬ್ಲೂ) ಜತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಮಹತ್ವದ ಕಾರ್ಯಕ್ರಮ ಮಹಿಳೆಯರ ವಿರುದ್ಧ ಸೈಬರ್ ಅಪರಾಧಗಳಿಂದ ಉಂಟಾಗುವ ನಿರ್ಣಾಯಕ ಸವಾಲುಗಳನ್ನು ಎದುರಿಸಲು ಮತ್ತು ಭವಿಷ್ಯದ ಚಿಂತನೆ, ಕ್ರಮಬದ್ಧ ಸುಧಾರಣೆಗಳನ್ನು ಪ್ರಸ್ತಾಪಿಸಲು ವಿಶೇಷ ಕಾನೂನು ತಜ್ಞರು, ಕಾನೂನು ಜಾರಿ ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ನೀತಿ ನಿರೂಪಕರನ್ನು ಒಗ್ಗೂಡಿಸಿತು.

ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ಆರ್ ಆರ್ ಯುನ ಸಂಶೋಧನಾ ಪ್ರಕಾಶನಾ ವಿಭಾಗದ ಮುಖ್ಯಸ್ಥ ಡಾ.ಆನಂದ್ ಕುಮಾರ್ ತ್ರಿಪಾಠಿ, ತಂತ್ರಜ್ಞಾನದ  ದ್ವಂದ ಸ್ವರೂಪವನ್ನು ಒತ್ತಿ ಹೇಳಿದರು. ಅವರು “ಡಿಜಿಟಲ್ ಯುಗವು ಮಹಿಳೆಯರಿಗೆ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆದಿದೆ, ಅಭೂತಪೂರ್ವ ಅವಕಾಶಗಳನ್ನು ನೀಡುತ್ತದೆ, ಇದು ಸೈಬರ್ ಕಿರುಕುಳ, ಗುರುತು ಕಳ್ಳತನ ಮತ್ತು ಆನ್ಲೈನ್ ಶೋಷಣೆ ಸೇರಿದಂತೆ ಗಮನಾರ್ಹ ಅಪಾಯಗಳಿಗೆ ಮಹಿಳೆಯರನ್ನು ದೂಡಿದೆ. ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳ ಆತಂಕಕಾರಿ ಏರಿಕೆ, ತುರ್ತು ಗಮನವನ್ನು ಬೇಡುತ್ತದೆ. ಈ ಸಮಾಲೋಚನೆಯು ಕಾನೂನು ಚೌಕಟ್ಟಿನಲ್ಲಿನ ಅಂತರವನ್ನು ಗುರುತಿಸುವ ಗುರಿಯನ್ನು ಹೊಂದಿದೆ ಮತ್ತು ಡಿಜಿಟಲ್ ಪ್ರಪಂಚವು ಒಡ್ಡುವ ಸಂಕೀರ್ಣ ಸವಾಲುಗಳಿಗೆ ನವೀನ ಪರಿಹಾರಗಳನ್ನು ನೀಡುತ್ತದೆ’’ ಎಂದು ಡಾ. ತ್ರಿಪಾಠಿ ಹೇಳಿದ್ದಾರೆ.

ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಉಪ ಕಾರ್ಯದರ್ಶಿ ಡಾ.ಶಿವಾನಿ ಡೇ ಸೈಬರ್ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದರೊಂದಿಗೆ ದೂರುಗಳ ಸ್ವರೂಪದಲ್ಲಿ ಬದಲಾವಣೆ ಆಗುತ್ತಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. “ಈ ಪ್ರಕರಣಗಳಲ್ಲಿ ಸಮಯವು ಅತ್ಯಂತ ಮಹತ್ವದ್ದಾಗಿದೆ ಮತ್ತು ಕ್ಷಿಪ್ರ ಕ್ರಮದ ಅಗತ್ಯವು ನಿರ್ಣಾಯಕವಾಗಿದೆ” ಎಂದು ಅವರು ಒತ್ತಿ ಹೇಳಿದರು. ಅವರ ಭಾಷಣದ ಜತೆಗೆ, ವಿಶ್ವವಿದ್ಯಾಲಯದ ಕುಲಸಚಿವ ಡಾ. ಧರ್ಮೇಶ ಕುಮಾರ ಪ್ರಜಾಪತಿ ಮತ್ತು ಎನ್.ಸಿ. ಡಬ್ಲ್ಯೂ ಅಧೀನ ಕಾರ್ಯದರ್ಶಿ ಡಾ. ಆಶುತೋಷ್ ಪಾಂಡೆ ಅವರು ತಮ್ಮ ಮೌಲ್ಯಯುತ ಭಾಷಣಗಳಲ್ಲಿ, ಕಾರ್ಯಕ್ರಮದ ವ್ಯಾಪ್ತಿ ಮತ್ತು ಉದ್ದೇಶವನ್ನು ವ್ಯಾಖ್ಯಾನಿಸಿದರು, ಸಹಕಾರಿ ಪ್ರಯತ್ನಗಳು ಮತ್ತು ಕಾರ್ಯಕಾರಿ ಫಲಿತಾಂಶಗಳ ಮಹತ್ವವನ್ನು ಒತ್ತಿ ಹೇಳಿದರು.

ಗೌರವಾನ್ವಿತ ನ್ಯಾಯಮೂರ್ತಿ ಸೋನಿಯಾ ಗೋಕಣಿ, ಶ್ರೀಮತಿ ಸುಧಾರಾಣಿ ರೇಲಂಗಿ, ಐಪಿಎಸ್ ಅಧಿಕಾರಿ ಶ್ರೀ ಟಿ.ಎಸ್. ಬಿಸ್ಟ್, ಶ್ರೀ ಅಂಕುರ್ ಗರ್ಗ್, ಐಪಿಎಸ್  ಅಧಿಕಾರಿ ಶ್ರೀಮತಿ ಅರುಣಾ ಬಹುಗುಣ, ಪ್ರೊ. ರೇಖಾ ಜೈನ್, ಪ್ರೊ. ಎನ್.ಕೆ. ಪಾಠಕ್, ಶ್ರೀ ದಿವೇಶ್ ಚಂದ್ರ ಸಾಮಂತ್, ಐಪಿಎಸ್ ಅಧಿಕಾರಿ ಶ್ರೀ ಬ್ರಜೇಶ್ ಮಿಶ್ರಾ ಮತ್ತು ಶ್ರೀ ಸಿಬಿಐನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿನಯ್ ಓಜಾ, ಮತ್ತು ಐಪಿಎಸ್ ಅಧಿಕಾರಿ ಡಾ. ಹಾರ್ದಿಕ್ ಮಕಾಡಿಯಾ ಅವರುಗಳ ಸಂವಾದವು ಪ್ರಮುಖ ತಜ್ಞರ ಒಳನೋಟಗಳನ್ನು ಒಳಗೊಂಡಿತ್ತು.  ಅಸ್ತಿತ್ವದಲ್ಲಿರುವ ಸೈಬರ್ ಕಾನೂನುಗಳ ಮಿತಿಗಳು, ನೈಜ-ಜೀವನದಲ್ಲಿನ ಕಿರುಕುಳದ ಪ್ರಕರಣಗಳು ಮತ್ತು ಬಲಿಪಶುಗಳ ಮೇಲೆ ಮಾನಸಿಕ ಹೊರೆಯಾಗುವಂತಹ ನಿರ್ಣಾಯಕ ವಿಷಯಗಳನ್ನು ಚರ್ಚೆಗಳು ಅನ್ವೇಷಿಸಿದವು. ಸಂವಾದಕಾರರಲ್ಲಿ ತ್ವರಿತ ಕಾನೂನು ಪ್ರತಿಕ್ರಿಯೆಗಳು, ಸಮುದಾಯ ಜಾಗೃತಿ ಮತ್ತು ಲಿಂಗ-ಸೂಕ್ಷ್ಮ ನ್ಯಾಯ ಪ್ರಕ್ರಿಯೆಗಳ ತುರ್ತು ಅಗತ್ಯತೆಯನ್ನು ಅವರು  ಪ್ರಮುಖವಾಗಿ ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಮಹಿಳೆಯರು ಎದುರಿಸುತ್ತಿರುವ ದತ್ತಾಂಶ ಗೌಪ್ಯತೆ ಸೂಕ್ಷ್ಮತೆಗಳನ್ನು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಿಗದಿಪಡಿಸಿರುವ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮದ ಗುರಿಗಳು, ದೃಢವಾದ ಸೈಬರ್ ಭದ್ರತಾ ಚೌಕಟ್ಟುಗಳು ಮತ್ತು ಡಿಜಿಟಲ್ ಮಧ್ಯವರ್ತಿಗಳ ಹೊಣೆಗಾರಿಕೆ ಮತ್ತು ತ್ವರಿತ ಕಂಟೆಂಟ್ ತೆಗೆಯುವ ಕಾರ್ಯವಿಧಾನಗಳ ಪ್ರಾಮುಖ್ಯತೆಗೆ ತಜ್ಞರು ಕರೆ ನೀಡಿದರು. ಸುರಕ್ಷಿತ ಡಿಜಿಟಲ್ ಪರಿಸರವನ್ನು ಬೆಳೆಸಲು ಮತ್ತು ಸೈಬರ್ ಅಪರಾಧಗಳ ಬಲಿಪಶುಗಳಿಗೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಈ ವೇದಿಕೆಯು ಸಾಮೂಹಿಕ ಜವಾಬ್ದಾರಿಯನ್ನು ಒತ್ತಿಹೇಳುತ್ತದೆ. ಶ್ರೀಮತಿ ಬಹುಗುಣ ಸಂತ್ರಸ್ತರು ಎದುರಿಸುತ್ತಿರುವ ಮಾನಸಿಕ ಪರಿಣಾಮಗಳ ಬಗ್ಗೆ ಭಾವುಕರಾಗಿ ಮಾತನಾಡಿದರು, ಅವರಲ್ಲಿ ಅನೇಕರು ಸಾಮಾಜಿಕ ಕಳಂಕವನ್ನು ಅನುಭವಿಸುತ್ತಾರೆ ಮತ್ತು ನಿರಂತರ ಭಯದಲ್ಲಿ ಬದುಕುತ್ತಾರೆ. “ನಾವು ಕಾನೂನು ವ್ಯಾಖ್ಯಾನಗಳನ್ನು ಹೆಚ್ಚಿಸಬೇಕು, ವಿಶೇಷ ಕಾನೂನುಗಳನ್ನು ಪರಿಚಯಿಸಬೇಕು ಮತ್ತು ಡಿಜಿಟಲ್ ಯುಗದಲ್ಲಿ ಮಹಿಳೆಯರಿಗೆ ನ್ಯಾಯವನ್ನು ಖಾತ್ರಿಪಡಿಸಿಕೊಳ್ಳಲು ಲಿಂಗ-ಸೂಕ್ಷ್ಮ ಪ್ರಮಾಣಿತ ಕಾರ್ಯಾಚರಣೆ  ಕಾರ್ಯವಿಧಾನ (ಮಾರ್ಗಸೂಚಿ-ಎಸ್ ಒಪಿ)ಯನ್ನು ರೂಪಿಸಬೇಕು” ಎಂದು ಅವರು ಆಗ್ರಹಿಸಿದರು.

ಈ ಸಮಾಲೋಚನೆಯು ಮಹಿಳೆಯರ ವಿರುದ್ಧ ಸೈಬರ್ ಅಪರಾಧಗಳನ್ನು ಎದುರಿಸಲು ಪರಿವರ್ತಕ ಶಿಫಾರಸುಗಳನ್ನು ಸಿದ್ಧಪಡಿಸಿತು. ಪ್ರತಿ ಪೊಲೀಸ್ ಠಾಣೆಯಲ್ಲಿ ನಿರ್ದಿಷ್ಟ ಸೈಬರ್ ಸಹಾಯವಾಣಿಗಳು ಮತ್ತು ಕಾರ್ಯಪಡೆಗಳ ಸ್ಥಾಪನೆ, ತ್ವರಿತ ಕಾನೂನು ಪ್ರಕ್ರಿಯೆಗಳಿಗಾಗಿ ವಿಶೇಷ ಸೈಬರ್ ಕ್ರೈಮ್ ನ್ಯಾಯಾಲಯಗಳು ಮತ್ತು ಡೀಪ್ಫೇಕ್ ಅಶ್ಲೀಲತೆ ಮತ್ತು ಸೇಡಿನ ಅಶ್ಲೀಲತೆಯಂತಹ ಹೊಸ ಬಗೆಯ ಅಪರಾಧಗಳನ್ನು ಗುರಿಯಾಗಿಟ್ಟುಕೊಂಡು ಹೊಸ ಕಾನೂನುಗಳು ರೂಪಿಸುವುದು.  ಡಿಜಿಟಲ್ ಸಾಕ್ಷರತೆ ಕಡಿಮೆ ಇರುವ ಪ್ರದೇಶಗಳಲ್ಲಿ ಅಭಿಯಾನಗಳನ್ನು ಆರಂಭಿಸುವುದು ಮತ್ತು ಸೈಬರ್ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ಸದೃಢವಾದ ಸಾರ್ವಜನಿಕ-ಖಾಸಗಿ ವಲಯದ ಸಹಯೋಗವನ್ನು ಬೆಳೆಸುವ ಅಗತ್ಯವಿದೆ.

ರಾಷ್ಟ್ರೀಯ ಭದ್ರತಾ ಸಂಶೋಧನೆ ಮತ್ತು ಶಿಕ್ಷಣದಲ್ಲಿ ಮುಂಚೂಣಿ ನಾಯಕನಾಗಿರುವ ಆರ್ ಅರ್ ಯು ಉದಯಿಸುತ್ತಿರುವ ಸಾಮಾಜಿಕ ಸವಾಲುಗಳನ್ನು ಎದುರಿಸಲು ತನ್ನ ಬದ್ಧತೆಯನ್ನು ಪುನರುಚ್ಚಿರಿಸಿತು. ಎನ್ ಸಿಡಬ್ಲೂ ಜೊತೆಗಿನ ಈ ಸಹಯೋಗದೊಂದಿಗೆ ಸುರಕ್ಷಿತ ಮತ್ತು ಹೆಚ್ಚು ಸಮಾನ ಸಮಾಜವನ್ನು ರೂಪಿಸಲು ಆರ್ ಆರ್ ಯುನ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ರಾಷ್ಟ್ರೀಯ ಭದ್ರತೆ ಮತ್ತು ಪೋಲೀಸಿಂಗ್ನಲ್ಲಿ ಮಹತ್ವದ ಸಂಶೋಧನೆ ಮತ್ತು ನೀತಿ ನಿರೂಪಣೆಗೆ ವೇಗವರ್ಧಕವಾಗಿ ಆರ್ ಆರ್ ಯು ಸ್ಥಿರ ಪಾತ್ರವನ್ನು ವಹಿಸಲಿದೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ઇન્સ્ટિટ્યૂટ ઓફ એરોસ્પેસ મેડિસિન ઇન્ડિયન સોસાયટી ઓફ એરોસ્પેસ મેડિસિન (આઇએસએએમ)ની 63મી વાર્ષિક પરિષદનું આયોજન કરશે

ઇન્ડિયન સોસાયટી ઓફ એરોસ્પેસ મેડિસિન (આઇએસએએમ) 05થી 07 ડિસેમ્બર 2024 દરમિયાન ઇન્સ્ટિટ્યૂટ ઓફ એરોસ્પેસ મેડિસિન (આઇએએમ), …