ಉದ್ಯಮ ಸ್ಥಾಪಿಸಲು ಎಂ ಎಸ್ ಎಂ ಇ ಬಹಳ ಸಹಕಾರಿಯಾಗಿದೆ. ಉದ್ಯಮ ಬೆಳೆದರೆ ಭಾರತದ ಆರ್ಥಿಕತೆಯ ಬೆಳೆಯುತ್ತದೆ ಹಾಗೂ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಬ್ಯಾಂಕ್ ಆಫ್ ಬರೋಡ ಪ್ರಧಾನ ವ್ಯವಸ್ಥಾಪಕ ರಾಜೇಶ್ ಖನ್ನಾ ಹೇಳಿದ್ದಾರೆ. ಅವರು ಇಂದು ರಾಷ್ಟ್ರೀಯ ಎಂಎಸ್ಎಂಇ ಕ್ಲಸ್ಟರ್ ಔಟರೀಚ್ ನೇರ ಕಾರ್ಯಕ್ರಮ ಹುಬ್ಬಳ್ಳಿಯ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ಅದೇ ರೀತಿ ಮಂಗಳೂರ ಬ್ರಾಂಚ್ ನ ವ್ಯವಸ್ಥಾಪಕರಾದ ಅಶ್ವಿನಿ ಅವರು ಕೂಡ ಮಾತನಾಡಿ, ಈ ಯೋಜನೆಯಡಿ ಸರಿಯಾದ ಮಾಹಿತಿ ಪಡೆದು ಇದರ ಸದುಪಯೋಗ ಪಡೆಸಿಕೊಂಡು ಯುವಕರು ತಮ್ಮ ಸ್ವಂತ ಉದ್ದೇಮ ಸ್ಥಾಪಿಸಿ, ಸ್ವಾವಲಂಬಿಗಳಾಗಬೇಕು ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ನ ವ್ಯವಸ್ಥಾಪಕ ಪ್ರಭುದೇವ ಮಾತನಾಡಿ, ಎಂ ಎಸ್ ಸ್ವಾಮಿ ಯೋಜನೆ ಅಡಿಯಲ್ಲಿ ಒಟ್ಟು 143 ಫಲಾನುಭವಿಗಳಿಗೆ ವಿವಿಧ ಬ್ಯಾಂಕುಗಳಿಂದ ಸಾಲ ನೀಡಲಾಗಿದ್ದು, ಸುಮಾರು 6 ಕೋಟಿ ರಷ್ಟು ಸಾಲ ನೀಡಲಾಗಿದೆ ಎಂದರು.
ಫಲಾನುಭವಿ ಧನರಾಜ ಲಕ್ಕಣ್ಣವರ್ ಮಾತನಾಡಿ, ಎಂ ಎಸ್ ಎಮ್ ಇ ಯೋಜನೆಯಿಂದ ಸುಮಾರು 95 ಲಕ್ಷ ಸಾಲ ಪಡೆದಿದ್ದೇನೆ. ಈ ಯೋಜನೆ ಯುವ ಉದ್ಯಮದವರಿಗೆ ಬಹಳ ಅನುಕೂಲವಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯಿಂದ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಅದೇ ರೀತಿ ಫಲನುಭವಿಗಳಾದ ಮಹೇಂದ್ರ, ಬಸವರಾಜ್, ಪ್ರಭು ಬಡಿಗೇರ್ ಫಲನುಭವಿಗಳು ಕೂಡ ಮಾತನಾಡಿ ಸಂತಸ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಮೇಲೆ ಬ್ಯಾಂಕಗಳ ಅಧಿಕಾರಿಗಳು ನಮ್ಮನ್ನು ಕರೆದು ಲೋನ್ ಕೊಡ್ತಾ ಇರುವುದು ಒಂದು ವಿಶೇಷ ಎಂದು ತಿಳಿಸಿದರು.