शुक्रवार, नवंबर 22 2024 | 08:41:42 PM
Breaking News
Home / Choose Language / kannada / ಈಶಾನ್ಯದಿಂದ ಲಡಾಖ್‌ವರೆಗೆ: ಐ ಎಫ್‌ ಎಫ್‌ ಐ 2024ರಲ್ಲಿ ನಾನ್‌-ಫೀಚರ್ ಚಲನಚಿತ್ರಗಳು ಗಮನ ಸೆಳೆಯಲಿವೆ

ಈಶಾನ್ಯದಿಂದ ಲಡಾಖ್‌ವರೆಗೆ: ಐ ಎಫ್‌ ಎಫ್‌ ಐ 2024ರಲ್ಲಿ ನಾನ್‌-ಫೀಚರ್ ಚಲನಚಿತ್ರಗಳು ಗಮನ ಸೆಳೆಯಲಿವೆ

Follow us on:

“ನಾವು ದೇಶಾದ್ಯಂತ 250ಕ್ಕೂ ಹೆಚ್ಚು ಸಲ್ಲಿಕೆಗಳನ್ನು ಸ್ವೀಕರಿಸಿದ್ದೇವೆ, ಅದರಲ್ಲಿ ಈಶಾನ್ಯದಿಂದ ಗಮನಾರ್ಹ ಸಂಖ್ಯೆಯಿದೆ” ಎಂದು ಭಾರತೀಯ ಪನೋರಮಾ ನಾನ್-ಫೀಚರ್ ಫಿಲ್ಮ್ಸ್ ತೀರ್ಪುಗಾರ ಸಮಿತಿಯ ಅಧ್ಯಕ್ಷ ಶ್ರೀ ಸುಬ್ಬಯ್ಯ ನಲ್ಲಮುತ್ತು ಅವರು ಗೋವಾದಲ್ಲಿ 55ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು. “ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ರಚನೆಕಾರರು ಸೇರಿದಂತೆ ವಿವಿಧ ಕ್ಷೇತ್ರಗಳ ಚಲನಚಿತ್ರ ನಿರ್ಮಾತೃಗಳು ತಮ್ಮ ನಮೂದುಗಳನ್ನು ಸಲ್ಲಿಸಿದ್ದಾರೆ. ವಿಷಯ ಮತ್ತು ಕಥೆ ಹೇಳುವಿಕೆಯು ಆಯ್ಕೆಯ ಪ್ರಮುಖ ಮಾನದಂಡವಾಗಿತ್ತು ”ಎಂದು ಅವರು ಹೇಳಿದರು.

ತೀರ್ಪುಗಾರರ ಸಮಿತಿ ಸದಸ್ಯರಾದ ಶ್ರೀಮತಿ ಶಾಲಿನಿ ಶಾ ಅವರು ಲಡಾಖಿ ಚಲನಚಿತ್ರವನ್ನು ಆರಂಭಿಕ ಚಿತ್ರವಾಗಿ ಆಯ್ಕೆ ಮಾಡಿದ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದರು. ಇದನ್ನು “ಅಪರೂಪದ ಮತ್ತು ಹೆಮ್ಮೆಯ ಸಂದರ್ಭ” ಎಂದು ಕರೆದರು. ಅವರು ಹರ್ಯಾನ್ವಿ ಸಿನಿಮಾದಲ್ಲಿನ ಪ್ರಗತಿಯನ್ನು ಎತ್ತಿ ತೋರಿಸಿದರು, ಸಿನಿಮಾ ಕೌಶಲ್ಯದಲ್ಲಿನ ಸುಧಾರಣೆಗೆ ಸಮರ್ಪಿತ ಮಾರ್ಗದರ್ಶನ ಉಪಕ್ರಮಗಳು ಕಾರಣವಾಗಿವೆ ಎಂದು ಅವರು ಹೇಳಿದರು.

ನಾನ್-ಫೀಚರ್ ಚಿತ್ರಗಳತ್ತ ಗಮನ ಹರಿಸಬೇಕಾದ ತುರ್ತು ಅಗತ್ಯವನ್ನು ತೀರ್ಪುಗಾರರು ಒತ್ತಿ ಹೇಳಿದರು. “ನಾವು ಈ ಚಲನಚಿತ್ರಗಳ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಮಾತನಾಡಬೇಕು ಮತ್ತು ಪ್ರೇಕ್ಷಕರು ಮತ್ತು ಚಲನಚಿತ್ರ ನಿರ್ಮಾಪಕರಲ್ಲಿ ಜಾಗೃತಿ ಮೂಡಿಸಲು ಫಿಲ್ಮ್ ಕ್ಲಬ್‌ ಗಳನ್ನು ರಚಿಸಬೇಕಾಗಿದೆ” ಎಂದು ಶ್ರೀಮತಿ ವಂದನಾ ಕೊಹ್ಲಿ ಹೇಳಿದರು. ಮಾರ್ಗದರ್ಶನದ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ವಿಷಯವು ಸಾಮಾನ್ಯವಾಗಿ ಅಸಾಮಾನ್ಯವಾಗಿದ್ದರೂ, ಸಂಕಲನ ಮತ್ತು ಕಥೆ ಹೇಳುವ ಕಲೆಯು ವೃತ್ತಿಪರ ಮಾರ್ಗದರ್ಶನದಿಂದ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.

ಉದಯೋನ್ಮುಖ ಪ್ರವೃತ್ತಿಗಳನ್ನು ಪರಿಗಣಿಸಿ, ತೀರ್ಪುಗಾರರು ಈಶಾನ್ಯದಿಂದ ಪ್ರವೇಶಗಳಲ್ಲಿ ಭರವಸೆಯ ಹೆಚ್ಚಳವನ್ನು ಗಮನಿಸಿದರು. ಈ ವರ್ಷದ ಆಯ್ದ ಅನೇಕ ಚಲನಚಿತ್ರಗಳ ವಿಷಯಗಳಲ್ಲಿ ಪ್ರತಿಫಲಿಸಿದಂತೆ ಪ್ರಭಾವಶಾಲಿ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು ದೂರದ ಪ್ರದೇಶಗಳಿಗೆ ಹೋಗುತ್ತಿರುವ ನಗರ ಚಲನಚಿತ್ರ ನಿರ್ಮಾಪಕರ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಹೆಚ್ಚಿನ ಬೆಂಬಲ ನೀಡುವಂತೆ ಸಮಿತಿಯು ಒಟ್ಟಾಗಿ ಕರೆ ನೀಡಿತು, ಕಾರ್ಯಸಾಧ್ಯವಾದ ವೇದಿಕೆಗಳ ಕೊರತೆಯು ಅವರ ಪ್ರವೇಶಕ್ಕೆ ಅಡ್ಡಿಯಾಗುತ್ತದೆ ಎಂದು ಗಮನಿಸಿದರು. ಒಟಿಟಿ ಪ್ಲಾಟ್‌ಫಾರ್ಮ್‌ ಗಳು ನಾನ್-ಫೀಚರ್ ಫಿಲ್ಮ್‌ ಗಳನ್ನು ನಿಯೋಜಿಸುವಲ್ಲಿ ಮತ್ತು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಅವರು ಒತ್ತಾಯಿಸಿದರು. “ಜಾಗೃತಿ, ಹಣಕಾಸು ಮತ್ತು ಪ್ರಚಾರಕ್ಕಾಗಿ ರಚನಾತ್ಮಕ ಚಾನಲ್ ಅನ್ನು ರಚಿಸುವುದು ಈ ಪ್ರಕಾರವನ್ನು ಬೆಂಬಲಿಸಲು ಪ್ರಮುಖವಾಗಿದೆ” ಎಂದು ಅವರು ಹೇಳಿದರು.

ಸರ್ಕಾರವು ಸಿ ಎಸ್ ಆರ್ ನಿಧಿಯನ್ನು ವೈಯಕ್ತಿಕ ನಾನ್-ಫೀಚರ್ ಫಿಲ್ಮ್ ಪ್ರಾಜೆಕ್ಟ್‌ ಗಳಿಗೆ ಹಣಕಾಸಿನ ನೆರವು ನೀಡಲು ನಿರ್ದೇಶಿಸುವುದನ್ನು ಪರಿಗಣಿಸಬಹುದು ಎಂದು ತೀರ್ಪುಗಾರರ  ಸಮಿತಿ ಸಲಹೆ ನೀಡಿದೆ. ಈಶಾನ್ಯದಲ್ಲಿ ನಾನ್-ಫೀಚರ್ ಚಲನಚಿತ್ರಗಳಿಗೆ ಹಣಕಾಸು ಒದಗಿಸಲು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್‌‌ ಎಫ್‌ ಡಿ ಸಿ) ಡಾಕ್ಯುಮೆಂಟರಿ ರಿಸೋರ್ಸ್ ಇನಿಶಿಯೇಟಿವ್ ಉಪಕ್ರಮವನ್ನು ಸಮಿತಿ ಸ್ವಾಗತಿಸಿತು.

ಏಳು ಸದಸ್ಯರ ನಾನ್-ಫೀಚರ್ ಫಿಲ್ಮ್ ತೀರ್ಪುಗಾರರ ಸಮಿತಿಯ ನೇತೃತ್ವವನ್ನು ಹೆಸರಾಂತ ಸಾಕ್ಷ್ಯಚಿತ್ರ ನಿರ್ಮಾಪಕ ಮತ್ತು ಎಫ್‌ ಟಿ ಐ ಐ ಹಳೆಯ ವಿದ್ಯಾರ್ಥಿ ಶ್ರೀ ಸುಬ್ಬಯ್ಯ ನಲ್ಲಮುತ್ತು ವಹಿಸಿದ್ದಾರೆ, ಅವರು ಪ್ರತಿಷ್ಠಿತ ವಿ. ಶಾಂತಾರಾಮ್ ಜೀವಮಾನ ಸಾಧನೆ ಪ್ರಶಸ್ತಿ, ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು ಹಲವಾರು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಚಲನಚಿತ್ರೋತ್ಸವಗಳ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ನಾನ್-ಫೀಚರ್ ಜ್ಯೂರಿಯು ಈ ಕೆಳಗಿನ ಸದಸ್ಯರನ್ನು ಒಳಗೊಂಡಿದೆ, ಅವರು ಅನೇಕ ಮೆಚ್ಚುಗೆ ಪಡೆದ ಚಲನಚಿತ್ರಗಳನ್ನು ತ ಮ್ಮ ಹೆಸರಿನಲ್ಲಿಹೊಂದಿದ್ದಾರೆ ಮತ್ತು ವೈಯಕ್ತಿಕವಾಗಿ ವಿವಿಧ ಚಲನಚಿತ್ರ ಸಂಸ್ಥೆಗಳು ಮತ್ತು ವ್ಯವಹಾರಗಳನ್ನು ಪ್ರತಿನಿಧಿಸುತ್ತಾರೆ, ಆದರೆ ಒಟ್ಟಾರೆಯಾಗಿ ಶ್ರೀಮಂತ ಮತ್ತು ವೈವಿಧ್ಯಮಯ ಭಾರತೀಯ ಚಲನಚಿತ್ರ ಸಮುದಾಯವನ್ನು ಪ್ರತಿನಿಧಿಸುತ್ತಾರೆ:

ಐ ಎಫ್‌ ಎಫ್‌ ಐ 2024ರ ನಾನ್-ಫೀಚರ್ ಚಲನಚಿತ್ರ ತೀರ್ಪುಗಾರರ ಸಮಿತಿ ಇವರನ್ನು ಒಳಗೊಂಡಿದೆ:

  1. ಶ್ರೀ ಸುಬ್ಬಯ್ಯ ನಲ್ಲಮುತ್ತು (ಅಧ್ಯಕ್ಷರು)
  2. ಶ್ರೀ ರಜನಿಕಾಂತ್ ಆಚಾರ್ಯ, ನಿರ್ಮಾಪಕ ಮತ್ತು ಚಲನಚಿತ್ರ ನಿರ್ದೇಶಕ
  3. ಶ್ರೀ ರೋನೆಲ್ ಹಾಬಾಮ್, ಚಲನಚಿತ್ರ ನಿರ್ದೇಶಕ
  4. ಶ್ರೀಮತಿ ಉಷಾ ದೇಶಪಾಂಡೆ, ಚಲನಚಿತ್ರ ನಿರ್ದೇಶಕಿ ಮತ್ತು ನಿರ್ಮಾಪಕಿ
  5. ಶ್ರೀಮತಿ ವಂದನಾ ಕೊಹ್ಲಿ, ಚಲನಚಿತ್ರ ನಿರ್ದೇಶಕಿ ಮತ್ತು ಲೇಖಕಿ
  6. ಶ್ರೀ ಮಿಥುನಚಂದ್ರ ಚೌಧರಿ, ಚಲನಚಿತ್ರ ನಿರ್ದೇಶಕ
  7. ಶ್ರೀಮತಿ ಶಾಲಿನಿ ಶಾ, ಚಲನಚಿತ್ರ ನಿರ್ದೇಶಕಿ

“ನಾವು ಸಾಕ್ಷ್ಯಚಿತ್ರಗಳನ್ನು ಅರ್ಥಮಾಡಿಕೊಳ್ಳಬೇಕು, ಅವುಗಳನ್ನು ಗ್ರಹಿಸಬೇಕು ಮತ್ತು ಅವುಗಳನ್ನು ಆಚರಿಸಬೇಕು” ಎಂದು ಹೇಳಿದ ಶ್ರೀಮತಿ ವಂದನಾ ಕೊಹ್ಲಿ ಪತ್ರಿಕಾಗೋಷ್ಠಿಯನ್ನು ಮುಕ್ತಾಯಗೊಳಿಸಿದರು. ಶ್ರೀ ಸಯ್ಯದ್ ರಬಿಹಾಶ್ಮಿ ಪತ್ರಿಕಾಗೋಷ್ಠಿಯನ್ನು ನಿರ್ವಹಿಸಿದರು.

ಐ ಎಫ್‌ ಎಫ್‌ ಐ 2024ರಲ್ಲಿ, 262 ಚಲನಚಿತ್ರಗಳಿಂದ ಆಯ್ಕೆ ಮಾಡಲಾದ 20 ನಾನ್-ಫೀಚರ್‌ ಚಲನಚಿತ್ರಗಳನ್ನು ಭಾರತೀಯ ಪನೋರಮಾದಾದ್ಯಂತ ಪ್ರದರ್ಶಿಸಲಾಗುತ್ತದೆ. ನಾನ್-ಫೀಚರ್ ಫಿಲ್ಮ್‌ಗಳ ಪ್ಯಾಕೇಜ್ ಉದಯೋನ್ಮುಖ ಮತ್ತು ಸ್ಥಾಪಿತ ಚಲನಚಿತ್ರ ನಿರ್ಮಾಪಕರ ಸಮಕಾಲೀನ ಭಾರತೀಯ ಮೌಲ್ಯಗಳನ್ನು ದಾಖಲಿಸುವ, ಮನರಂಜಿಸುವ ಮತ್ತು ಪ್ರತಿಬಿಂಬಿಸುವ ಸಾಮರ್ಥ್ಯವನ್ನು ಉದಾಹರಿಸುತ್ತದೆ. ನಾನ್-ಫೀಚರ್ ವಿಭಾಗದಲ್ಲಿ ಉದ್ಘಾಟನಾ ಚಿತ್ರವಾಗಿ ತೀರ್ಪುಗಾರರ ಆಯ್ಕೆಯು ಶ್ರೀ ಹರ್ಷ ಸಂಗನಿ ನಿರ್ದೇಶನದ ‘ಘರ್ ಜೈಸಾ ಕುಚ್ (ಲಡಾಖಿ)’ ಆಗಿದೆ.

55ನೇ ಐ ಎಫ್‌ ಎಫ್‌ ಐ ಚಲನಚಿತ್ರ ನಿರ್ಮಾಪಕರಿಗೆ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಜಾಗತಿಕ ಚಲನಚಿತ್ರ ಸಮುದಾಯದಲ್ಲಿ ಸಂವಾದ, ನಾವೀನ್ಯತೆ ಮತ್ತು ಸಹಯೋಗವನ್ನು ಉತ್ತೇಜಿಸುತ್ತದೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಗಯಾನಾ ಸಂಸತ್ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

ಗಯಾನಾ ಸಂಸತ್ತಿನ ರಾಷ್ಟ್ರೀಯ ಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾಷಣ ಮಾಡಿದರು. ಅಲ್ಲಿನ ಸಂಸತ್‌ ಉದ್ದೇಶಿಸಿ …