मंगलवार, दिसंबर 03 2024 | 01:37:58 AM
Breaking News
Home / Choose Language / kannada / ದಿವ್ಯಾಂಗರಿಗೆ ನವೆಂಬರ್ 28 ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ

ದಿವ್ಯಾಂಗರಿಗೆ ನವೆಂಬರ್ 28 ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ

Follow us on:

ಬೆಂಗಳೂರಿನ ದಿವ್ಯಾಂಗರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರವು 2024ರ ನವೆಂಬರ್ 28 ರಂದು ದಿವ್ಯಾಂಗರಿಗಾಗಿ ಉದ್ಯೋಗ ಮೇಳ ಆಯೋಜಿಸಿದೆ.

ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಡಿಯ ಈ ಕೇಂದ್ರವು ಅಮೆರಿಕನ್ ಇಂಡಿಯನ್ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿರುವ ಈ ಮೇಳದಲ್ಲಿ ಮಾಹಿತಿ ತಂತ್ರಜ್ಞಾನಯೇತರ ಸಾಮಾನ್ಯ ಕಚೇರಿ ನಿರ್ವಹಣೆ, ವಾಹನ, ಚಿಲ್ಲರೆ, ಆತಿಥ್ಯ ವಲಯದ 20 ಖ್ಯಾತ ಕಂಪೆನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ.

ಬೆಂಗಳೂರಿನ ಶೇಷಾದ್ರಿಪುರಂನ ಕುಮಾರ ಪಾರ್ಕ್ ಪೂರ್ವ ಇಲ್ಲಿರುವ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಭವನದಲ್ಲಿ ಇದೇ 28 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಮೇಳ ನಡೆಯಲಿದೆ.

ಉದ್ಯೋಗ ಅರಸುತ್ತಿರುವ ದಿವ್ಯಾಂಗರು ತಮ್ಮ ಸ್ವವಿವರದ 4 ಪ್ರತಿ; ನಾಲ್ಕು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ; ವಿದ್ಯಾರ್ಹತೆ ಪ್ರಮಾಣಪತ್ರದ ಮೂಲ ಮತ್ತು ನಕಲು ಪ್ರತಿ; ಆಧಾರ್, ಪ್ಯಾನ್, ಚುನಾವಣಾ ಗುರುತಿನ‌ ಚೀಟಿ ಇತ್ಯಾದಿ ಗುರುತಿನ ದಾಖಲೆ; ಕನಿಷ್ಠ ಶೇಕಡ 40 ರಷ್ಟು ಅಂಗವೈಕಲ್ಯತೆ ದೃಢೀಕರಿಸುವ ವೈದ್ಯಕೀಯ ಪ್ರಮಾಣಪತ್ರದೊಂದಿಗೆ ಮೇಳದಲ್ಲಿ ಪಾಲ್ಗೊಂಡು ತಮ್ಮ ಆಯ್ಕೆಯ ಉದ್ಯೋಗ ಪಡೆಯಬಹುದಾಗಿದೆ. ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಭುವನೇಶ್ವರದಲ್ಲಿ ನವೆಂಬರ್ 30ರಿಂದ ಡಿಸೆಂಬರ್ 1ರ ವರೆಗೆ ಪೊಲೀಸ್ ಡೈರೆಕ್ಟರ್ ಜನರಲ್‌ಗಳು / ಇನ್‌ಸ್ಪೆಕ್ಟರ್ ಜನರಲ್‌ಗಳ ಅಖಿಲ ಭಾರತ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ನವೆಂಬರ್ 30ರಿಂದ ಡಿಸೆಂಬರ್ 1ರ ವರೆಗೆ ಒಡಿಶಾ ರಾಜ್ಯದ ಭುವನೇಶ್ವರದ ಲೋಕಸೇವಾ …