गुरुवार, दिसंबर 12 2024 | 10:39:13 PM
Breaking News
Home / अन्य समाचार / ಪೋರ್ಚುಗೀಸ್ ಚಲನಚಿತ್ರ- ದೊಡ್ಡ ಹೃದಯದ ಸಣ್ಣ ಚಿತ್ರ, ಲೆಫ್ಟ್ ಅನ್ ಸೆಡ್ , 55ನೇ ಐಎಫ್ಎಫ್ಐನಲ್ಲಿ ವಿಶ್ವದ ಪ್ರಥಮ ಪ್ರದರ್ಶನವನ್ನು ಮಾಡಿತು

ಪೋರ್ಚುಗೀಸ್ ಚಲನಚಿತ್ರ- ದೊಡ್ಡ ಹೃದಯದ ಸಣ್ಣ ಚಿತ್ರ, ಲೆಫ್ಟ್ ಅನ್ ಸೆಡ್ , 55ನೇ ಐಎಫ್ಎಫ್ಐನಲ್ಲಿ ವಿಶ್ವದ ಪ್ರಥಮ ಪ್ರದರ್ಶನವನ್ನು ಮಾಡಿತು

Follow us on:

ಚಲನಚಿತ್ರ ನಿರ್ಮಾಪಕ ರಿಕಾರ್ಡೊ ವಲೆನ್ಜುಯೆಲಾ ಪಿನಿಲ್ಲಾ ಅವರ ಹೃದಯಸ್ಪರ್ಶಿ ಪೋರ್ಚುಗೀಸ್ ಚಿತ್ರ ‘ಲೆಫ್ಟ್ ಅನ್ ಸೆಡ್’ (ಲೋ ಕ್ವೆ ನೋ ಸೆ ಡಿಜೊ) 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ವಿಶ್ವದ ಪ್ರಥಮ ಪ್ರದರ್ಶನ ಕಂಡಿತು. “ಸಿನೆಮಾ ಆಫ್ ದಿ ವರ್ಲ್ಡ್” ವಿಭಾಗದಲ್ಲಿ ಪ್ರದರ್ಶಿಸಲಾದ ಈ ಚಿತ್ರವು ಮೊಬೈಲ್ ತಂತ್ರಜ್ಞಾನದ ಆಗಮನದ ನಡುವೆ ಪರಸ್ಪರ ಸಂವಹನದ ಸಂಕೀರ್ಣತೆಗಳನ್ನು ವಿವೇಚಿಸುತ್ತದೆ. ಐಎಫ್ಎಫ್ಐನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರಿಕಾರ್ಡೊ ವಲೆನ್ಜುಯೆಲಾ ಪಿನಿಲ್ಲಾ ತಮ್ಮ ಚೊಚ್ಚಲ ಚಲನಚಿತ್ರದ ಬಗ್ಗೆ ವಿವರಿಸಿದರು.

1994ರಲ್ಲಿ ದಕ್ಷಿಣ ಚಿಲಿಯಲ್ಲಿ ಚಿತ್ರೀಕರಿಸಲಾದ ‘ಲೆಫ್ಟ್ ಅನ್ ಸೆಡ್’ ಮೊಬೈಲ್ ಫೋನ್ ಮಾರಾಟಗಾರನಾಗಿ ತನ್ನ ವೃತ್ತಿಜೀವನವನ್ನು ನಿರ್ವಹಿಸುವ ಒಂಟಿ ತಾಯಿ ಮಾರ್ಗರಿಟಾ ಅವರ ಹೃದಯಸ್ಪರ್ಶಿ ಕಥೆಯನ್ನು ಮತ್ತು ಅವರ ವೈಯಕ್ತಿಕ ಜೀವನದಲ್ಲಿ ಅವರ ಹದಗೆಟ್ಟ ಸಂಬಂಧಗಳ ಹೋರಾಟಗಳನ್ನು ಹೇಳುತ್ತದೆ. ಆಕೆಯ ವೃತ್ತಿಯ ಹೋಲಿಕೆ, ಸಂಪರ್ಕದ ಮಾಧ್ಯಮಗಳನ್ನು ಒದಗಿಸುವುದು ಮತ್ತು ತನ್ನ ತಾಯಿಯೊಂದಿಗೆ ಸಂಪರ್ಕ ಸಾಧಿಸಲು ಅವಳ ಸ್ವಂತ ಅಸಮರ್ಥತೆ ಚಿತ್ರದ ಭಾವನಾತ್ಮಕ ತಿರುಳನ್ನು ರೂಪಿಸುತ್ತದೆ.

“ಈ ಕಥೆ ನನ್ನ ಸ್ವಂತ ಜೀವನದಿಂದ ಬಂದಿದೆ” ಎಂದು ನಿರ್ದೇಶಕರು ಹಂಚಿಕೊಂಡರು. “ಮುಖ್ಯ ಪಾತ್ರವು 1990 ರ ದಶಕದಲ್ಲಿ ಅದೇ ಕೆಲಸವನ್ನು ಹೊಂದಿದ್ದ ನನ್ನ ತಾಯಿಯಿಂದ ಸ್ಫೂರ್ತಿ ಪಡೆದಿದೆ, ಅವರು ಮೊಬೈಲ್ ತಂತ್ರಜ್ಞಾನವನ್ನು ಜನರಿಗೆ ಪರಿಚಯಿಸಲು ಗ್ರಾಮೀಣ ಪ್ರದೇಶಗಳಿಗೆ ಪ್ರಯಾಣಿಸುತ್ತಿದ್ದರು. ಸಾಂಪ್ರದಾಯಿಕ ಸಂವಹನ ವಿಧಾನಗಳನ್ನು ತ್ಯಜಿಸುವ ಆಲೋಚನೆಯನ್ನು ಜನರು ವಿರೋಧಿಸುತ್ತಿದ್ದಾಗಿನ ಆ ಕಾಲಘಟ್ಟ  ಸವಾಲಿನ ಸಮಯವಾಗಿತ್ತು ಎಂದವರು ನೆನಪಿಸಿಕೊಂಡರು.

‘ಲೆಫ್ಟ್ ಅನ್ ಸೆಡ್’ 90 ರ ದಶಕದ ಸಾರವನ್ನು ವಿವರಗಳಿಗೆ ನಿಖರವಾದ ಗಮನ ನೀಡುವಿಕೆಯಿಂದಾಗಿ ಸೆರೆಹಿಡಿಯುತ್ತದೆ; “ಆ ಕಾಲಘಟ್ಟದ ಅವಧಿಯನ್ನು ಮರುನಿರ್ಮಾಣ ಮಾಡಲು ನಮ್ಮಲ್ಲಿ ಆಧುನಿಕ ತಂತ್ರಜ್ಞಾನ ಇಲ್ಲ. ಆದರೆ ಕಲಾ ವಿಭಾಗ ಗಮನಾರ್ಹ ಕೆಲಸ ಮಾಡಿದೆ. ಅಂದಿನ ಮತ್ತು ಇಂದಿನ ಗ್ರಾಮೀಣ ಚಿಲಿಯ ನಡುವೆ ಈಗಲೂ ಹೆಚ್ಚಿನ ವ್ಯತ್ಯಾಸವಿಲ್ಲ, ಇದು ಅಧಿಕೃತತೆಯನ್ನು  ಮೂಡಿಸಲು ಸಹಾಯ ಮಾಡಿತು ಎಂದು ನಿರ್ದೇಶಕರು ಹೇಳಿದರು.

“ನಾವು ಸಣ್ಣ ಸಿಬ್ಬಂದಿ ಮತ್ತು ಪಾತ್ರವರ್ಗದೊಂದಿಗೆ ಕೆಲಸ ಮಾಡಿದ್ದೇವೆ, ಅನೇಕರು ವೃತ್ತಿಪರರಲ್ಲದ ನಟರು, ಅವರಲ್ಲಿ ಹೆಚ್ಚಿನವರು ಸ್ಥಳೀಯರು” ಎಂದು ಪಿನಿಲ್ಲಾ ಹೇಳಿದರು. “ಇದು ಕಷ್ಟಕರ ಆದರೆ ಪ್ರತಿಫಲದಾಯಕ ಪ್ರಕ್ರಿಯೆಯಾಗಿತ್ತು. ಬಜೆಟ್ ನಿರ್ಬಂಧಗಳ ಹೊರತಾಗಿಯೂ ಇದು ದೊಡ್ಡ ಹೃದಯದ ಸಣ್ಣ ಚಿತ್ರ” ಎಂದು ಅವರು ಹೇಳಿದರು.

ಚಿತ್ರದ ಬರಹಗಾರ ಮತ್ತು ಸಂಗೀತ ಸಂಯೋಜಕರೂ ಆಗಿರುವ ಪಿನಿಲ್ಲಾ, ಚಿತ್ರದ ಮೂಲ ಸಂದೇಶವನ್ನು ಒತ್ತಿಹೇಳಿದರು: ಆಧುನಿಕ ಸಂವಹನದ ಕಲ್ಪನೆಯ ವಿರೋಧಾಭಾಸ. “ಸ್ಮಾರ್ಟ್ಫೋನ್ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ನಾವು ಹಿಂದೆಂದಿಗಿಂತಲೂ ಹೆಚ್ಚು ಸಂಪರ್ಕದಲ್ಲಿದ್ದೇವೆ, ಆದರೂ ನಮ್ಮ ಪರಸ್ಪರ ಸಂಬಂಧಗಳು ಹದಗೆಟ್ಟಿವೆ” ಎಂದು ಅವರು ಹೇಳಿದರು.

2013ರಲ್ಲಿ ಸ್ಥಾಪನೆಯಾದ ಡೆಲವಿಡಾ ಫಿಲ್ಮ್ಸ್ನ ಸ್ಥಾಪಕರಾಗಿ, ಪಿನಿಲ್ಲಾ ಸ್ವತಂತ್ರ ಲ್ಯಾಟಿನ್ ಅಮೇರಿಕನ್ ಸಿನೆಮಾವನ್ನು ಉನ್ನತೀಕರಿಸುವ ಬಗ್ಗೆ ಉತ್ಸುಕರಾಗಿದ್ದಾರೆ. “ನಾವು ನಮ್ಮ ದೇಶದಲ್ಲಿ ಸ್ಥಾಪಿತ ಚಲನಚಿತ್ರ ಉದ್ಯಮವನ್ನು ಹೊಂದಿಲ್ಲ, ಆದರೆ ಸಹಯೋಗದ ಮೂಲಕ, ಕೊಲಂಬಿಯಾದೊಂದಿಗಿನ ನಮ್ಮ ಸಹ-ನಿರ್ಮಾಣವನ್ನು ಅವಲಂಬಿಸಿ, ನಾವು ಬೆಳೆಯುತ್ತಿದ್ದೇವೆ. ಐಎಫ್ಎಫ್ಐನಲ್ಲಿ ಭಾಗಿಯಾಗಿರುವುದು ಒಂದು ಮಹತ್ವದ ಮೈಲಿಗಲ್ಲು. ಲ್ಯಾಟಿನ್ ಅಮೆರಿಕ ಮತ್ತು ನನ್ನ ಪ್ರದೇಶದ ಕಥೆಗಳನ್ನು ಪ್ರತಿನಿಧಿಸಲು ನನಗೆ ಹೆಮ್ಮೆ ಇದೆ” ಎಂದವರು ನುಡಿದರು.

“ಲೆಫ್ಟ್ ಅನ್ ಸೆಡ್” (ಹೇಳದೆ ಉಳಿದದ್ದು)  ಸಂಪರ್ಕದ ಸವಾಲುಗಳ ಬಗೆಗಿನ ಕಾಲಾತೀತ ಪ್ರತಿಬಿಂಬವಾಗಿದೆ. “1994 ಅಥವಾ 2024ರಲ್ಲೆ ಆಗಲಿ  ಆಂತರಿಕ ಹೋರಾಟಗಳು ಒಂದೇ ಆಗಿರುತ್ತವೆ. ತಂತ್ರಜ್ಞಾನವು ವಿಕಸನಗೊಂಡಿರಬಹುದು, ಆದರೆ ನಿಜವಾದ ಸಂಪರ್ಕಕ್ಕಾಗಿ ಮಾನವ ಬಯಕೆ ಇನ್ನೂ ಹಾಗೆಯೇ ಉಳಿದಿದೆ” ಎಂದು ಪಿನಿಲ್ಲಾ ಅಭಿಪ್ರಾಯಪಟ್ಟರು.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ઇન્સ્ટિટ્યૂટ ઓફ એરોસ્પેસ મેડિસિન ઇન્ડિયન સોસાયટી ઓફ એરોસ્પેસ મેડિસિન (આઇએસએએમ)ની 63મી વાર્ષિક પરિષદનું આયોજન કરશે

ઇન્ડિયન સોસાયટી ઓફ એરોસ્પેસ મેડિસિન (આઇએસએએમ) 05થી 07 ડિસેમ્બર 2024 દરમિયાન ઇન્સ્ટિટ્યૂટ ઓફ એરોસ્પેસ મેડિસિન (આઇએએમ), …