बुधवार, अक्तूबर 30 2024 | 01:02:41 PM
Breaking News
Home / Choose Language / kannada / ಐಟಿಬಿಪಿ ರೈಸಿಂಗ್ ಡೇ ಸಂದರ್ಭದಲ್ಲಿ ಐಟಿಬಿಪಿ ಹಿಮ್‌ವೀರ್ಸ್‌ಗೆ ಪ್ರಧಾನಮಂತ್ರಿ ಅವರಿಂದ ಶುಭಾಶಯ

ಐಟಿಬಿಪಿ ರೈಸಿಂಗ್ ಡೇ ಸಂದರ್ಭದಲ್ಲಿ ಐಟಿಬಿಪಿ ಹಿಮ್‌ವೀರ್ಸ್‌ಗೆ ಪ್ರಧಾನಮಂತ್ರಿ ಅವರಿಂದ ಶುಭಾಶಯ

Follow us on:

ಇಂಡೊ-ಟಿಬೆಟ್ ಗಡಿ ಪೊಲೀಸ್(ITBP)ರೈಸಿಂಗ್ ದಿನದ ಸಂದರ್ಭದಲ್ಲಿ ಐಟಿಬಿಪಿ ಹಿಮವೀರರು ಮತ್ತು ಅವರ ಕುಟುಂಬಸ್ಥರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ, ಇಂಡೊ-ಟಿಬೆಟ್ ಗಡಿ ಪೊಲೀಸರು ಶೌರ್ಯ ಮತ್ತು ಸಮರ್ಪಣೆಯ ಸಂಕೇತ ಎಂದು ಬಣ್ಣಿಸಿದ್ದಾರೆ. ನೈಸರ್ಗಿಕ ವಿಕೋಪಗಳು ಮತ್ತು ರಕ್ಷಣಾ ಕಾರ್ಯಾಚರಣೆ ಸಮಯದಲ್ಲಿ ಅವರ ಪ್ರಯತ್ನಗಳು ಶ್ಲಾಘನೀಯವಾಗಿದ್ದು, ಜನರಲ್ಲಿ ಅಪಾರ ಹೆಮ್ಮೆಯನ್ನು ತರುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನ ಮಂತ್ರಿಗಳು:

“ಐಟಿಬಿಪಿ ಹಿಮವೀರರು ಮತ್ತು ಅವರ ಕುಟುಂಬಗಳಿಗೆ ರೈಸಿಂಗ್ ಡೇ ಪ್ರಯುಕ್ತ ಶುಭಾಶಯಗಳು. ಈ ಪಡೆ ಶೌರ್ಯ ಮತ್ತು ಸಮರ್ಪಣೆಯ ಸಂಕೇತವಾಗಿ ಎತ್ತರದ ಸ್ಥಾನದಲ್ಲಿದೆ. ಕೆಲವು ಅತ್ಯಂತ ಸವಾಲಿನ ಭೂಪ್ರದೇಶಗಳು ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳನ್ನು ಒಳಗೊಂಡಂತೆ ಅವರು ನಾಗರಿಕರನ್ನು ರಕ್ಷಿಸುತ್ತಾರೆ. ನೈಸರ್ಗಿಕ ವಿಪತ್ತುಗಳು ಮತ್ತು ರಕ್ಷಣಾ ಕಾರ್ಯಾಚರಣೆಗಳ ಸಮಯದಲ್ಲಿ ಅವರ ಪ್ರಯತ್ನಗಳು ಜನರಲ್ಲಿ ಅಪಾರ ಹೆಮ್ಮೆಯನ್ನು ಉಂಟುಮಾಡುತ್ತವೆ” ಎಂದು ಬರೆದಿದ್ದಾರೆ.

@ITBP_official”

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಕಿತ್ತೂರು ರಾಣಿ ಚೆನ್ಮಮ್ಮ ಭಾರತದ ಆಸ್ತಿ, ನಾರಿ ಶಕ್ತಿಯ ಪ್ರೇರಣೆ – ವಿ.ಸೋಮಣ್ಣ, ಕೇಂದ್ರ ಸಚಿವರು

ಇಂದು ವೀರ ಮಹಿಳೆ ಕಿತ್ತೂರು ರಾಣಿ ಚೆನ್ಮಮ್ಮನವರ 246ನೇ ಜನ್ಮದಿನೋತ್ಸವ ಮತ್ತು ಬ್ರಿಟಿಷರ ವಿರುದ್ದ ಜಯಗಳಿಸಿದ 200 ವರ್ಷದ ವಿಜಯೋತ್ಸವವನ್ನು ನವದೆಹಲಿಯ …